ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಕೇರಳ ಹಾಗೂ ಕರ್ನಾಟಕದಲ್ಲಿ ಅಸ್ಪೃಶ್ಯತೆ, ಮೂಢನಂಬಿಕೆ, ಬಡತನ, ಅಜ್ಞಾನ ಹಾಗೂ ಜಾತೀಯತೆ ತಾಂಡವಾಡುತ್ತಿದ್ದು, ಸಂಪೂರ್ಣ ಕೇರಳವೇ ಒಂದು ಭ್ರಾಂತಾಲಯವೆಂದು ಸ್ವಾಮಿ ವಿವೇಕಾನಂದರಿಂದ ಕರೆಯಲ್ವಟ್ಟ ದಿನಗಳವು, ಬಿಡುಗಡೆ ಇಲ್ಲದ ಬೇಡಿಯಿಂದ ಶತಮಾನಗಳಿಂದಲು ಅಸ್ಪೃಶ್ಯರು ಮೇಲ್ವರ್ಗದವರೆಂದು ಗುರುತಿಸಲ್ಪಟ್ಟ ಜನರಿಂದ ತುಳಿತಕ್ಕೊಳಪಟ್ಟಿದ್ಟರು. ಜಾತಿಬೇಧದ ಬೇರುಗಳ ಜೊತೆ ದಾಸ್ಯದ ಭೀಕರತೆ ಜನಜೀವನದಲ್ಲಿ ಬಹಳ ಆಳಕ್ಕೆ ಇಳಿದಿತ್ತು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷ ರಾಜೀವ್ ಪೂಜಾರಿ ತಿಳಿಸಿದರು.
ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಸಹಯೋಗದೊಂದಿಗೆ ಯವವಾಹಿನಿ(ರಿ) ಮುಲ್ಕಿ ಘಟಕದ ಆತಿಥ್ಯದಲ್ಲಿ ದಿನಾಂಕ 26.06.2016 ನೇ ಆದಿತ್ಯವಾರದಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರು ತತ್ವ ಪ್ರಚಾರ ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ಕಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.
ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಂದೇಶದ ಕರಪತ್ರ ಹಾಗೂ ಬ್ಯಾನರ್ಗಳನ್ನು ಎಲ್ಲಾ ಸಂಘಟನೆಗಳಿಗೆ ವಿತರಿಸಲಾಯಿತು.
ನಾರಾಯಣಗುರುಗಳ ಸಂದೇಶದ ಬಗ್ಗೆ ಉಪನ್ಯಾಸ ನೀಡಿದ ರಾಜೀವ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಈ ಅಭಿಯಾನವು ಮುಲ್ಕಿ ಪರಿಸರದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಮಟ್ಟು ಇಲ್ಲಿ ಉದ್ಘಾಟನೆಗೊಂಡು ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ ತಾಳಿಪಾಡಿ ವಿಠೋಬ ಬಾಲಲೀಲಾ ಭಜನಾ ಮಂದಿರ ಚಿತ್ರಾಪು, ಶ್ರೀ ನಾರಾಯಣಗುರು ಸೇವಾ ಸಂಘ, ಕೆ.ಎಸ್ ರಾವ್ ನಗರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಉದಯ್ ಅಮೀನ್ ಮಟ್ಟು, ಯುವವಾಹಿನಿ (ರಿ) ಮುಲ್ಕಿ ಘಟಕದ ಅಧ್ಯಕ್ಷ ಚೇತನ್ ಕುಮಾರ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಮುಲ್ಕಿ ಘಟಕದ ನಿರ್ದೇಶಕ ಮಾಧವ ಕೋಟ್ಯಾನ್ ಹಾಗೂ ಘಟಕದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು