Yuvavahini

ಘಟಕಗಳು

ಕುಟುಂಬ ಕಲರವ

ಪಡುಬಿದ್ರಿ: ಯುವವಾಹಿನಿ ಯುವ ಮನಸ್ಸುಗಳ ಶಕ್ತಿಯಾಗಿದ್ದು ಇಲ್ಲಿ ಅಧಿಕಾರ, ಅವಧಿಗಳು ಮುಖ್ಯವಲ್ಲ. ನಮ್ಮವರು ಎಂಬ ಭಾವನೆಯ ಜೊತೆಗೆ ನಮ್ಮ ಸಂಸ್ಥೆ ಎನ್ನುವ ಅಭಿಮಾನವಿದೆ. ಸಮಾಜಕ್ಕಾಗಿ ದುಡಿಯುವ ಸಂಕಲ್ಪಿತ ಆಶಯವಿದೆ. ಕುಟುಂಬ ಕಲರವದಂತಹ ಕಾರ್ಯಕ್ರಮಗಳು ಪ್ರತಿ ಘಟಕಗಳಲ್ಲೂ ನಡೆಯಬೇಕಿದೆ ಎಂದು ಲಯನ್ಸ್ ಜಿಲ್ಲೆ 317ಡಿ, ಲಿಯೋ ಮಾಜಿ ಜಿಲ್ಲಾಧ್ಯಕ್ಷರಾದ ಕವನ್ ರಾಜ್ ಕುಬೆವೂರು ಹೇಳಿದರು. ಅವರು ಪಡುಬಿದ್ರಿ ಸುಜ್ಞಾನ್ ಕಾಲೋನಿಯ ಸಭಾಗೃಹದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ 02-06-2024 ರವಿವಾರದಂದು ಘಟಕದ ಸದಸ್ಯರಿಗಾಗಿ ಜರಗಿದ ಕುಟುಂಬ […]

Read More

ಟೆರೇಸಿ ಗಾರ್ಡನಿಂಗ್ ಉಚಿತ ಮಾಹಿತಿ ಕಾರ್ಯಾಗಾರ

ಮಂಗಳೂರು: 01-06-2024 ರಂದು ಘಟಕದ ಸಭಾಂಗಣದಲ್ಲಿ ನಡೆದ ಟೆರೇಸಿ ಗಾರ್ಡನಿಂಗ್ ಉಚಿತ ಮಾಹಿತಿ ಕಾರ್ಯಾಗಾರವನ್ನು ಮಂಗಳೂರು ಮಹಿಳಾ ಘಟಕದ ಸದಸ್ಯೆಯವರಾದ ಶ್ರೀಮತಿ ವಿದ್ಯಾ ರಾಕೇಶ್ ಮತ್ತು ಅವರ ತಂಡ ಬಹಳ ಮಹತ್ವಪೂರ್ಣವಾಗಿ ನಡೆಸಿಕೊಟ್ಟರು. ಸಸಿ ನೆಡುವ ಹಾಗೂ ಕಸಿ ಕಟ್ಟುವ ವಿಧಾನದ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಬಾಗವಹಿಸಿದ ಅರವತ್ತಕ್ಕೂ ಹೆಚ್ಚು ಮಂದಿಗೆ ಔಷದೀಯ ಗಿಡ, ಪಲಪುಷ್ಪದ ಗಿಡಗಳನ್ನು ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಕೇಂದ್ರ […]

Read More

ವಿದ್ಯಾರ್ಥಿ ಅಭಿನಂದನೆ ಕಾರ್ಯಕ್ರಮ

ಪುತ್ತೂರು: ಕರ್ನಾಟಕ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ 2023-24 ನೇ ಸಾಲಿನಲ್ಲಿ 625ಕ್ಕೆ 600ಕ್ಕಿಂತ ಅಧಿಕ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವು ದಿನಾಂಕ 30-05-2024 ರಂದು ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲುಸುವ ಮೂಲಕ ವಿಶಿಷ್ಟವಾಗಿ ನಡೆಯಿತು. ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಶ್ರೀ ಸತೀಶ್ ಪೂಜಾರಿ ಪರಕಮೆ ಹಾಗೂ ಶ್ರೀಮತಿ […]

Read More

ಕಿರು ಪ್ರವಾಸ

ಮಂಗಳೂರು: 26-05-2024 ಮುಂಜಾನೆ ಪ್ರಾರ್ಥನೆಯೊಂದಿಗೆ ನಾರಾಯಣ ಗುರು ಸ್ವಾಮಿಗಳಿಗೆ ನಮಿಸಿ, ಯುವವಾಹಿನಿ(ರಿ.) ಶಕ್ತಿನಗರ ಘಟಕದ ವತಿಯಿಂದ ಒಂದು ದಿನದ ಕಿರು ಪ್ರವಾಸವನ್ನು ಹಮ್ಮಿಕೊಂಡೆದ್ದರು. ಘಟಕದ ಅಧ್ಯಕ್ಷ ಗಣೇಶ್ ಕೆ ಮಹಾಕಾಳಿ, ಉಪಾಧ್ಯಕ್ಷರುಗಳಾದ ತುಕರಾಮ್, ಸುಜಾತಾ ನವೀನ್, ಕಾರ್ಯದರ್ಶಿ ಅಕ್ಷತಾ ಚರಣ್ ಹಾಗೂ ಮಾಜಿ ಅಧ್ಯಕ್ಷರಾದ ಭಾರತಿ ಗಣೇಶ್ ರವರು ಮುಂದಾಳತ್ವ ವಹಿಸಿಕೊಂಡರು. 30 ಜನರೊಂದಿಗೆ ಕ್ಷೇತ್ರ ದರ್ಶನವನ್ನು ಮಾಡಿದೆವು ಮೊದಲಿಗೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಟು, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಉಪಹಾರವನ್ನು ಮುಗಿಸಿ ನಂತರ ಕಡಿಯಾಳಿ ದುರ್ಗಾಪರಮೇಶ್ವರಿ […]

Read More

ಭಜನಾ ಮಂದಿರದಲ್ಲಿ ಶ್ರಮದಾನ ಸೇವೆ

ಪಡುಬಿದ್ರಿ: ಯುವವಾಹಿನಿ(ರಿ.) ಪಡುಬಿದ್ರಿ ಘಟಕದ ವತಿಯಿಂದ, ಕೆಮುಂಡೇಲು ಪಾಂಡುರಂಗ ಭಜನಾ ಮಂದಿರದಲ್ಲಿ ನಡೆಯುತ್ತಿದ್ದ ಹನ್ನೆರಡು ದಿನಗಳವರೆಗಿನ ಅಹೋರಾತ್ರಿ ಭಜನಾ ನಾಮ ಸಂಕೀರ್ತನೆಯಲ್ಲಿ ಒಂದು ದಿನದ ಶ್ರಮದಾನ ಸೇವೆಯನ್ನು ದಿನಾಂಕ 26-05-2024 ಆದಿತ್ಯವಾರದಂದು ನೆರವೇರಿಸಲಾಯಿತು. ಘಟಕದ ಸದಸ್ಯರು ಬೆಳಗ್ಗಿನಿಂದ ಸಂಜೆಯವರೆಗೆ ಭಕ್ತಾದಿಗಳಿಗೆ ಊಟೋಪಚಾರ ವಿತರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು ಹಾಗೂ ಘಟಕದ ವತಿಯಿಂದ ರೂ. 5000/- ಧನ ಸಹಾಯವನ್ನು ನೀಡಲಾಯಿತು. ಕ್ಷೇತ್ರದ ಅರ್ಚಕರು ಹಾಗೂ ಪದಾಧಿಕಾರಿಗಳು ಘಟಕದ ಸೇವೆಯನ್ನು ಮೆಚ್ಚಿ ದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ವಿತರಿಸಿದರು. ಈ ಸಂದರ್ಭದಲ್ಲಿ […]

Read More

ಸದಸ್ಯರ ಪ್ರವಾಸ

ಉಪ್ಪಿನಂಗಡಿ: ಯುವವಾಹಿನಿ(ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ಗೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 26-05-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರು ಗುಣಕರ ಅಗ್ನಾಡಿಯವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಸೋಮಸುಂದರ್, ಪ್ರವಾಸ ನಿರ್ದೇಶಕರಾದ ನಾಣ್ಯಪ್ಪ ಪೂಜಾರಿ ಮತ್ತು ಕಾರ್ಯದರ್ಶಿ ಅನಿತಾ ಸತೀಶ್ ಇವರುಗಳು ಮುಂದಾಳತ್ವ ವಹಿಸಿಕೊಂಡಿದ್ದರು. ಸದಸ್ಯರುಗಳು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 66 ಮಂದಿ ಪ್ರವಾಸಿಗರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಶುಭ ಲಕ್ಷ್ಮೀ ಹಾಲಿಡೇಸ್ ಲಕ್ಸುರಿ ಬಸ್ಸಿನಲ್ಲಿ ಹೊರಟು, ರೆಸಾರ್ಟ್ […]

Read More

ಮಂತ್ರಾಲಯ ಕ್ಷೇತ್ರ ದರ್ಶನ

ಮಂಗಳೂರು: ಕೆಂಜಾರು – ಕರಂಬಾರು ಘಟಕದ ವತಿಯಿಂದ 2 ದಿವಸದ ಮಂತ್ರಾಲಯ ಕ್ಷೇತ್ರ ದರ್ಶನ ರಾಯರ ಕೃಪೆಯಿಂದ ಯಶಸ್ವಿಯಾಗಿ ನೆರವೇರಿತು. ದಿನಾಂಕ 25-05-2024 ಶನಿವಾರ 3 ಗಂಟೆಗೆ ಬಸ್ ನಲ್ಲಿ ಹೊರಟ ತಂಡ 26-05-24 ಆದಿತ್ಯವಾರ ಬೆಳಿಗ್ಗೆ ಕ್ಷೇತ್ರ ತಲುಪಿತು. ಮೊದಲೇ ಕಾಯ್ದಿರಿಸಿದ ವಸತಿ ಗೃಹಗಳಲ್ಲಿ ಸ್ನಾನ, ಶೌಚಾದಿಗಳನ್ನು ಮುಗಿಸಿ ರಾಯರ ದರ್ಶನ ಪಡೆದು, ಮಂಚಾಲಮ್ಮನಿಗೆ ಕೈ ಮುಗಿದು ಬೆಳಿಗ್ಗೆನ ಉಪಹಾರ ಮುಗಿಸಿ 35 ಅಡಿ ಎತ್ತರದ ಅಭಯಾಂಜನೇಯ ದೇವರಿಗೆ ಕೈ ಮುಗಿದು, ಪಂಚಮುಖಿ ಆಂಜನೇಯನ ದರ್ಶನ ಪಡೆದು, […]

Read More

ಕುಟುಂಬ ಸಮ್ಮಿಲನ

ಮೂಡುಬಿದಿರೆ: ಯುವವಾಹಿನಿಯ ತತ್ವ, ಉದ್ದೇಶಗಳನ್ನು ಸರಿಯಾಗಿ ಅರಿತು ನಮ್ಮ ಘಟಕದಿಂದ ಶಿಕ್ಷಣ ಆರೋಗ್ಯ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಜನವರಿಯಿಂದ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ 13 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 83 ಹೊಸ ಸದಸ್ಯರು ಯುವವಾಹಿನಿಗೆ ಸೇರ್ಪಡೆಯಾಗಿದ್ಧಾರೆ ಎಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಮೂಡುಬಿದಿರೆ ಘಟಕದ ವತಿಯಿಂದ ಹಂಡೇಲು ದೇವಸ ಮನೆಯಲ್ಲಿ ತುಳುನಾಡ ಸಂಸ್ಕೃತಿಯ ಪುನಾರವಲೋಕನ ಧ್ಯೇಯದೊಂದಿಗೆ […]

Read More

ನೀರಾಟ, ಚೆಂಡಾಟ, ಹಗ್ಗ ಜಗ್ಗಾಟ, ಬಾಲ್ಯದಾಟವಾಡಿ ಕುಣಿದು ಕುಪ್ಪಳಿಸಿದ ಯುವವಾಹಿನಿ(ರಿ.) ಕೊಲ್ಯ ಘಟಕದ ಸದಸ್ಯ ಬಂಧುಗಳು

ಕೊಲ್ಯ: ಯುವವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಒಂದು ದಿನದ ಕುಟುಂಬ ಮಿಲನಕ್ಕೆ 68 ಸದಸ್ಯ ಬಂಧುಗಳ ತಂಡ, ದಿನಾಂಕ 19-05-2024ನೇ ರವಿವಾರದಂದು ಬೆಳಿಗ್ಗೆ 7.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದ ಮುಂದೆ ಪ್ರಾರ್ಥನೆಯನ್ನು ಸಲ್ಲಿಸಿ, ಹಿರಿಯರು, ಕಿರಿಯರು, ಮಕ್ಕಳೆಲ್ಲರ ಜೊತೆಗೆ ಬ್ರಹ್ಮಾವರದ ರಿಲ್ಯಾಕ್ಸ್ ಪಾರ್ಕ್ ಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು. ಘಟಕದ ಅಧ್ಯಕ್ಷರು ಪ್ರವಾಸಕ್ಕೆ ಬಂದಿದ್ದ ಸರ್ವ ಬಂಧುಗಳನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರವಾಸದ ತಾಣ ತಲುಪುವವರೆಗೂ ಬಸ್ಸಿನಲ್ಲಿ ಹಾಡು, ಅಂತ್ಯಾಕ್ಷರಿಗಳ ರಸದೌತಣವನ್ನು ಯುವವಾಹಿನಿ ಬಂಧುಗಳು ಉಣಬಡಿಸಿದರು. ಈ ಗುಂಗಿನಲ್ಲೇ […]

Read More

ಕ್ರಿಕೆಟ್ ಪಂದ್ಯಾಟ

ಮಂಗಳೂರು: ಯುವವಾಹಿನಿ(ರಿ.) ಕುಪ್ಪೆಪದವು ಘಟಕದ ವತಿಯಿಂದ 19-05-2024ನೇ ಆದಿತ್ಯವಾರ ಶ್ರೀ ದುರ್ಗಾ ಕ್ರಿಕೆಟರ್ಸ್ ಸಹಯೋಗದೊಂದಿಗೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಉದ್ಘಾಟನೆಯನ್ನು ಘಟಕದ ಅಧ್ಯಕ್ಷರಾದ ಅಕ್ಷಿತ್ ಕುಮಾರ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್, ಕ್ರೀಡಾ ನಿರ್ದೇಶಕರಾದ ನವೀನ್ ಚಂದ್ರ, ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್, ಮುತ್ತೂರ್ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ದುರ್ಗಾಕೋಡಿ, ಶ್ರೀ ದುರ್ಗಾ ಕ್ರಿಕೆಟರ್ಸ್ ನ ಅಧ್ಯಕ್ಷರಾದ ಹನೀಫ್ ನೆಲಚ್ಚೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 20 ತಂಡಗಳು ಭಾಗವಹಿಸಿದ್ದವು. 30 ಗಜಗಳ ಅಂಡರ್ ಆರ್ಮ್ ಶೈಲಿಯ, ಲೀಗ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!