22-06-2026, 5:00 PM
ಯುವವಾಹಿನಿ ಕುಟುಂಬದ ಅತ್ಮೀಯ ಸದಸ್ಯರೆ, ‘ಯುವಸಿಂಚನ’ದ ಚೊಚ್ಚಲ ಸಂಚಿಕೆಗೆ ನೀವು ತೋರಿದ ಅತೀವ ಪ್ರೀತಿ, ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿವೆ. ಅದೇ ಲವಲವಿಕೆ ಮತ್ತು ಆತ್ಮವಿಶ್ವಾಸದೊಂದಿಗೆ, ಮಲೆನಾಡ ಮಳೆಯ ಸಿಂಚನದಂತೆ ಹಿತ ನೀಡುವ ಈ ದ್ವಿತೀಯ ಸಂಚಿಕೆಯನ್ನು ನಿಮ್ಮ ಕೈಗಿಡಲು ಹೆಮ್ಮೆ ಎನಿಸುತ್ತಿದೆ. ಯುವವಾಹಿನಿಯ ಪಯಣವು ಕೇವಲ ಕಾರ್ಯಕ್ರಮಗಳ ಸರಮಾಲೆಯಲ್ಲ; ಅದು ವ್ಯಕ್ತಿತ್ವವನ್ನು ಪಳಗಿಸುವ, ಸಮಾಜವನ್ನು ಭಾವನಾತ್ಮಕವಾಗಿ ಬೆಸೆಯುವ ಮತ್ತು ಹೊಸ ಭರವಸೆಯ ಹಾದಿಗಳನ್ನು ಸೃಷ್ಟಿಸುವ ಒಂದು ನಿರಂತರ ಜ್ಞಾನಯಜ್ಞ. ಬಂಟ್ವಾಳ […]
Read More
22-06-2026, 5:00 PM
ನಮಸ್ಕಾರ……ಮಳೆಗಾಲದ ಆಗಮನದೊಂದಿಗೆ ಪ್ರಕೃತಿ ಹೇಗೆ ಮೈದುಂಬಿ ಹಸಿರಾಗುತ್ತದೆಯೋ, ಹಾಗೆಯೇ ‘ಯುವಸಿಂಚನ’ ಪತ್ರಿಕೆಯ ಎರಡನೇ ಸಂಚಿಕೆಯೂ ನವಚೈತನ್ಯದೊಂದಿಗೆ ನಿಮ್ಮ ಕೈ ಸೇರುತ್ತಿದೆ. ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಆಶೀರ್ವದಿಸಿದ ಓದುಗ ಪ್ರಭುಗಳಿಗೆ ಹಾಗೂ ಶ್ರಮಿಸಿದ ಎಲ್ಲಾ ಘಟಕಗಳಿಗೆ ನನ್ನ ಅನಂತ ವಂದನೆಗಳು. ಅಕ್ಷರ ಎಂಬುದು ಕೇವಲ ಕಪ್ಪು ಇಂಕಿನ ಗುರುತಲ್ಲ; ಅದು ಬದಲಾವಣೆಯ ಬೀಜ. ಬಿತ್ತಿದ ಪ್ರತಿ ಅಕ್ಷರವೂ ಯುವ ಮನಸ್ಸುಗಳಲ್ಲಿ ವಿಚಾರದ ಮೊಳಕೆಯೊಡೆಯಬೇಕು ಎಂಬುದು ನಮ್ಮ ಆಶಯ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೈಗಳಿಗೆ ಅಕ್ಷರಗಳೇ ಆಯುಧ. ಈ ನಿಟ್ಟಿನಲ್ಲಿ […]
Read More
21-06-2026, 11:00 PM
ಹೆಜಮಾಡಿ, ಜೂನ್ 21 : ಹಿರಿಯ ಸಾಹಿತಿ, ನಾಟಕಕಾರ, ಗೀತಾ ಸಾಹಿತ್ಯ ರಚನಾಕಾರ ಹಾಗೂ ಪತ್ರಕರ್ತರಾದ ಪರಮಾನಂದ ವಿ. ಸಾಲ್ಯಾನ್ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಯುವವಾಹಿನಿ (ರಿ.) ಹೆಜಮಾಡಿ ಘಟಕವು ಮಾನವೀಯ ಕಾಳಜಿಯಿಂದ ನೆರವಿನ ಹಸ್ತ ಚಾಚಿದೆ. ಮೂಲತಃ ಹೆಜಮಾಡಿ ಗ್ರಾಮದವರಾದ ಪರಮಾನಂದ ವಿ. ಸಾಲ್ಯಾನ್ ಅವರು ಹೆಜಮಾಡಿ ಬಿಲ್ಲವರ ಸಂಘ ಹಾಗೂ ಯುವವಾಹಿನಿಯ ವಿವಿಧ ಚಟುವಟಿಕೆಗಳಿಗೆ ಹಲವು ವರ್ಷಗಳಿಂದ ಅಮೂಲ್ಯ […]
Read More
21-06-2026, 9:00 PM
ಸುಳ್ಯ, ಜೂನ್ 21 : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ 5ನೇ ಗುರು ಸ್ಪೂರ್ತಿ ಕಾರ್ಯಕ್ರಮವು ಸುಳ್ಯದ ಅಶ್ವಿನಿ ಲೋಕೇಶ್ ಅವರ ನಿವಾಸದಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಯುವವಾಹಿನಿ ಸದಸ್ಯರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಯಿತು. ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಸ್ಮರಿಸುತ್ತಾ ನಡೆದ ಭಜನಾ ಕಾರ್ಯಕ್ರಮದಲ್ಲಿ ಸದಸ್ಯರು ಭಕ್ತಿಭಾವದಿಂದ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ, ನಾರಾಯಣಗುರು ತತ್ವ ನಿರ್ದೇಶಕ ರೋಹಿತ್ ರೆಂಜಾಳ, ಸುಳ್ಯ ಘಟಕದ ಸ್ಥಾಪಕ […]
Read More
21-06-2026, 8:00 PM
ಶಕ್ತಿನಗರ ಜೂನ್ 21 : ಯುವವಾಹಿನಿ (ರಿ.) ಶಕ್ತಿನಗರ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಶಕ್ತಿನಗರ ಕುಂಟಲ್ಪಾಡಿ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಅಂತರಾಷ್ಟ್ರೀಯ 12ನೇ ವಿಶ್ವ ಯೋಗ ದಿನಾಚರಣೆಯನ್ನು ಜೂನ್ 21ರಂದು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಕುಂಟಲ್ಪಾಡಿ ಇಲ್ಲಿ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನಾಚರಣೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಸಾರುವ ದಿನವಾಗಿದ್ದು, ಯೋಗದ ಮೂಲಕ ಆರೋಗ್ಯಕರ ಜೀವನ ಹಾಗೂ ಯೋಗಕ್ಷೇಮವನ್ನು ಕಾಪಾಡಿಕೊಳ್ಳುವ […]
Read More
21-06-2026, 6:00 PM
ಕಾಪು, ಜೂನ್ 21: ನಮ್ಮ ಶಾರೀರಿಕ ಆರೋಗ್ಯವನ್ನು ವೃದ್ಧಿಸುವ ಅಂತರಾಷ್ಟ್ರೀಯ ಯೋಗ ದಿನ ಹಾಗೂ ಭೂಮಿಯ ಆರೋಗ್ಯವನ್ನು ರಕ್ಷಿಸುವ ವಿಶ್ವ ಪರಿಸರ ದಿನದ ಅಂಗವಾಗಿ ಯುವವಾಹಿನಿ (ರಿ.) ಕಾಪು ಘಟಕ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕಾಪು ಘಟಕದ ಸಹಯೋಗದಲ್ಲಿ “ಹಸಿರು ಪ್ರಕೃತಿ – ಯೋಗ ಸಂಸ್ಕೃತಿ” ಕಾರ್ಯಕ್ರಮವು ಜೂನ್ 21ರಂದು ಸಂಜೆ 5 ಗಂಟೆಗೆ ಕಾಪು ಬಿಲ್ಲವ ಸಹಾಯಕ ಸಂಘದ ಸಭಾಭವನದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಶ್ರೀ ಪತಂಜಲಿ ಯೋಗ […]
Read More
21-06-2026, 6:00 PM
ಕೂಳೂರು, ಜೂನ್ 21 : ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಬೆಳಿಗ್ಗೆ 6 ಗಂಟೆಗೆ ಕೂಳೂರಿನ ಫಲ್ಗುಣಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ನಾರಾಯಣಗುರು ದೇವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಪತಂಜಲಿ ಯೋಗ ಪ್ರತಿಷ್ಠಾನದ ಖ್ಯಾತ ಯೋಗ ಶಿಕ್ಷಕರಾದ ವಿಶು ಕುಮಾರ್ ಹಾಗೂ ರೇಖಾ ಸಂದೀಪ್ ಅವರು ಘಟಕದ ಸದಸ್ಯರಿಗೆ ಯೋಗಾಸನ ಮತ್ತು ಪ್ರಾಣಾಯಾಮದ ತರಬೇತಿಯನ್ನು ನೀಡಿದರು. ಯೋಗಾಭ್ಯಾಸದ ಮಹತ್ವ, ದೈಹಿಕ ಮತ್ತು […]
Read More
21-06-2026, 6:00 PM
ಬಜಪೆ, ಜೂನ್ 21 : ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಜೂನ್ 21ರಂದು ಸ್ವಾಮಿಲಪದವಿನ “ದೇಜಮ್ಮ” ನಿವಾಸದಲ್ಲಿ ಆಯೋಜಿಸಲಾಯಿತು. ಯುವವಾಹಿನಿ ಬಜಪೆ ಘಟಕದ ಮಾರ್ಗದರ್ಶಕರಾಗಿರುವ ಹಿರಿಯ ಸಮಾಜಸೇವಕ ಹಾಗೂ ಪರಿಸರ ಪ್ರೇಮಿಯಾದ ಸುಕುಮಾರ್ ಸಾಲ್ಯಾನ್ ಅವರ ನಿವಾಸದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸುಕುಮಾರ್ ಸಾಲ್ಯಾನ್ ಅವರು, […]
Read More
21-06-2026, 6:00 PM
ಕುಪ್ಪೆಪದವು: ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆ ಕಲ್ಲಾಡಿ ಕಿಲೆಂಜಾರು, ಕುಪ್ಪೆಪದವು ಇಲ್ಲಿ ಪರಿಸರ ಸ್ವಚ್ಛತಾ ಹಾಗೂ ವೃಕ್ಷಾರೋಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲಾ ವಠಾರದ ಸ್ವಚ್ಛತಾ ಕಾರ್ಯವನ್ನು ಕೈಗೊಂಡು, ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ವಿವಿಧ ಗಿಡಗಳನ್ನು ನೆಟ್ಟು ಶ್ರಮದಾನ ನಡೆಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕುಪ್ಪೆಪದವು-ಎಡಪದವು ಘಟಕದ ಅಧ್ಯಕ್ಷರಾದ ಶ್ರೀಧರ ಪೂಜಾರಿ, ಕಾರ್ಯದರ್ಶಿ ಅಕ್ಷತಾ, ಯುವವಾಹಿನಿ […]
Read More
21-06-2026, 5:00 PM
ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ, ಕಲೆ, ಸಾಹಿತ್ಯ, ಭಜನಾ ಹಾಗೂ ನೃತ್ಯ ತಂಡಗಳ ರಚನೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜೂನ್ 21ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ವಹಿಸಿ, ಕಲೆ, ಸಾಹಿತ್ಯ, ಭಜನಾ ಹಾಗೂ ನೃತ್ಯ ತಂಡಗಳ ರಚನೆಯ ಉದ್ದೇಶ, ಕಾರ್ಯಯೋಜನೆ ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆರ್.ಜೆ. ಹಾಗೂ ಸಾಹಿತಿ ವಿನೋದ್ ಕುಂಪಲ ಅವರು ಯುವ […]
Read More