08-12-2025, 4:00 AM
ಪಣಂಬೂರು–ಕುಳಾಯಿ: ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು: ಸುನೀಲ್ ಸಾಲ್ಯಾನ್ ಪ್ರಥಮ ಉಪಾಧ್ಯಕ್ಷರು: ಹರಿಣಿ ಜಗದೀಶ್ ದ್ವಿತೀಯ ಉಪಾಧ್ಯಕ್ಷರು: ಯಶವಂತ್ ಕುಮಾರ್ ಕಾರ್ಯದರ್ಶಿ: ಸಂದೀಪ್ ಕೋಟ್ಯಾನ್ ಜೊತೆ ಕಾರ್ಯದರ್ಶಿ: ರೇಣುಕಾ ರವಿ ಕೋಶಾಧಿಕಾರಿ: ಯಶಸ್ವಿನಿ ವ್ಯಕ್ತಿತ್ವ ವಿಕಸನ ನಿರ್ದೇಶಕರು: ಕವಿತಾ ತುಕಾರಾಮ್ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು: ದೀಪಕ್ ಕ್ರೀಡಾ ನಿರ್ದೇಶಕರು: ಸುದೇಶ್ ಕುಮಾರ್ ಆರೋಗ್ಯ […]
Read More
04-12-2025, 6:01 PM
ದಿನಾಂಕ 04-09-2025ರಂದು ನಾರಾಯಣ ಗುರು ವಿದ್ಯಾ ಸಂಸ್ಥೆ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ವಿನಯ್ ಕುಮಾರ್ ಮಟ್ಟು ವಹಿಸಿದ್ದರು. ಶಾಲಾ ಸಂಚಾಲಕರಾದ ಹರೀoದ್ರ ಸುವರ್ಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಳವೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಸಂಸ್ಕಾರಯುತರನ್ನಾಗಿ ಮಾಡುವ ಕಾರ್ಯ ಅಭಿನಂದನೀಯ ಎಂದರು. ಮುಖ್ಯ ಅತಿಥಿಗಳಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರು ಲೋಕೇಶ್ ಕೋಟ್ಯಾನ್, ಶಾಲಾ ಕಾರ್ಯದರ್ಶಿ, ಬಾಲಚಂದ್ರ ಸನಿಲ್, ಮಂಜುಳ ಕೆ. ವಿ., ಯತೀಶ್ […]
Read More
04-12-2025, 5:56 PM
ತಾರೀಕು 25-09-2025 ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಹಾ ನವಮಿ ಪ್ರಯುಕ್ತ ನಡೆಯುವ ಅನ್ನ ಪ್ರಸಾದ ವಿತರಣೆ ಯಲ್ಲಿ ಘಟಕದ ಅಧ್ಯಕ್ಷರು ಮತ್ತು ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
Read More
04-12-2025, 5:51 PM
ಶ್ರೀ ಕ್ಷೇತ್ರ ಕುದ್ರೋಳಿ ಯ ಮಂಗಳೂರು ದಸರಾದ ಪ್ರಯುಕ್ತ ಯುವವಾಹಿನಿಯ ಮುಖೇನ ನಡೆಯುವ ಒಂದು ದಿನದ ಅನ್ನ ದಾನಕ್ಕೆ ನಮ್ಮ ಘಟಕದ ಸದಸ್ಯರ ಸಹಕಾರದಿಂದ ದೇಣಿಗೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ನೀಡಲಾಯ್ತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ರು , ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ತಾರೀಕು 01-10-2025
Read More
04-12-2025, 5:42 PM
ಕತ್ತಲೆಯನ್ನು ಹೋಗಲಾಡಿಸುವ ದೀಪಾವಳಿ ಪರ್ವ ಕಾಲದಲ್ಲಿ ಯುವ ಜನತೆ ಹಿಂದಿನ ಕಾಲದ ಸಂಸ್ಕಾರ ಹಾಗೂ ಸಂಸ್ಕೃತಿ ಯನ್ನು ಜೀವನದಲ್ಲಿ ಅಳವಡಿಸಿ ಕೊಂಡು ಜೀವನ ಸಾಗಿಸಬೇಕು ಎಂದು ಯುವವಾಹಿನಿ ಕೇಂದ್ರ ಸಮಿತಿ ಯ ಗೌರವ ಸಲಹೆಗಾರರಾದ ಶ್ರೀ ಎನ್ ಟಿ ಅಂಚನ್ ಹೇಳಿದರು. ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಘಟಕದ 23 ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಉಡುಪಿಯ ನ್ಯಾಯವಾದಿ ಹಮ್ಜತ್ ರವರು ಮಾತನಾಡಿ ನಮ್ಮ ಹಿರಿಯರ ಆಚಾರ […]
Read More
04-12-2025, 5:38 PM
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಭೂಮಿ ಕೇರಳದ ಶಿವಗಿರಿಗೆ ಯಾತ್ರೆಯನ್ನು ಅ. 11ರಿಂದ ಅ. 14ರವರೆಗೆ ಹಮ್ಮಿಕೊಳ್ಳಲಾಗಿತ್ತು. ಅ. 11ರಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ 49 ಭಕ್ತರನ್ನು ಒಳಗೊಂಡ ಯಾತ್ರಾರ್ಥಿಗಳ ತಂಡ ಹೊರಟು, ಮರುದಿನ ಬೆಳಗ್ಗೆ ಶಿವಗಿರಿ ತಲುಪಿ ಶಾರದಾ ಮಠ, ವೈದಿಕ ಮಠ ಮತ್ತು ಗುರು ಸಮಾಧಿಯನ್ನು ವೀಕ್ಷಿಸಿತು. ಬೆಳಗಿನ ಉಪಹಾರದ ನಂತರ ಚಂಬಲಂತಿಯಲ್ಲಿ ಗುರುಗಳ ಜನ್ಮಗ್ರಹ ದರ್ಶನ ಪಡೆದ ಯಾತ್ರಾರ್ಥಿಗಳು, ಬಳಿಕ ಗುರುಗಳು ಸ್ಥಾಪಿಸಿದ ಮೂರನೇ ದೇವಸ್ಥಾನವಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ […]
Read More
04-12-2025, 5:35 PM
ದಿನಾಂಕ 30-10-2025 ನೇ ಗುರುವಾರ ಘಟಕದ ವತಿಯಿಂದ ಘಟಕದ ಸದಸ್ಯರಾದ ತುಕಾರಾಮ ಎಸ್ ಪೂಜಾರಿ ಮತ್ತು ಅನಿತಾ ತುಕಾರಾಮ್ ದಂಪತಿಗಳ ಮನೆಯಲ್ಲಿ ಜರುಗಿದ ನಮ್ಮ ಮನೆ ಹಬ್ಬ ದೀಪಾವಳಿ, ಕತ್ತಲಿನಿಂದ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ತುಳುನಾಡಿನ ಹಿಂದಿನ ಆಚರಣೆಗಳ ವಿಶೇಷತೆ, ಮೂಲ ಅರ್ಥ, ನಮ್ಮ ಹಿರಿಯರು ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಿಕೊಂಡು ಬಂದಿದ್ದಾರೆ ಎಂಬುದರ ಬಗ್ಗೆ ವಿವರಿಸಿದರು. ತುಳುನಾಡಿನ ದೀಪಾವಳಿ ಎಂದರೆ ಅದು ಭೂಮಿ ತಾಯಿ, ಪ್ರಕೃತಿ ಸಂಬಂಧದ ಅರಿವು ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿತ್ತು […]
Read More
04-12-2025, 5:31 PM
ಯುವವಾಹಿನಿ ಸಂಸ್ಥೆಯ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದು, ಇದರ ಸದಸ್ಯರ ಶಿಸ್ತುಬದ್ದ ಸೇವಾ ಚಟುವಟಿಕೆ, ಬದ್ಧತೆಯಿಂದಾಗಿ ಯುವಕರು ಯುವವಾಹಿನಿಯತ್ತ ಒಲವು ತೋರಿಸುತ್ತಿದ್ದಾರೆ, ಅಲ್ಲದೆ ಇತರ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಪೆರ್ನೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಪೆರ್ನೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿ ತಿಳಿಸಿದರು. ಅವರು ಘಟಕದ ವತಿಯಿಂದ ಲೀಲಾವತಿ ಕೊರಗಪ್ಪ ಪೂಜಾರಿ ಹತ್ತು ಕಳಸೆ ಇವರ ಮನೆಯಲ್ಲಿ ನಡೆದ “ಯುವ ಭಾಂದವ್ಯ.. 2025” ಅಕ್ಟೋಬರ್ ತಿಂಗಳ […]
Read More
04-12-2025, 5:23 PM
ಯುವವಾಹಿನಿ(ರಿ)ಕೇಂದ್ರಸಮಿತಿಯ ಸಹಕಾರದೊಂದಿಗೆ ಯುವವಾಹಿನಿ ಅಶ್ರಯ ಯೋಜನೆಯಡಿಯಲ್ಲಿ ನಿರ್ಮಿಸಿದ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿಯವರಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ಹಾಗೂ ತುಳಸಿ ಪೂಜಾ ಆಚರಣೆ ದಿನಾಂಕ 12.11.2025 ಬುಧವಾರ . ಸಂಜೆ ಭಜನಾ ಕಾರ್ಯಕ್ರಮದ ಜೊತೆಗೆ ತುಳಸಿ ಪೂಜೆಯ ನಂತರ ಸಭಾ ಕಾರ್ಯಕ್ರಮವನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ) ಕುದ್ರೋಳಿ ಮಂಗಳೂರು ಇದರ ಅಧ್ಯಕ್ಷರಾದ ಶ್ರೀಯುತ ನವೀನ್ ಚಂದ್ರ ಡಿ ಸುವರ್ಣ ಇವರು ಉದ್ಘಾಟಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ […]
Read More
01-12-2025, 3:06 PM
ದಿನಾಂಕ 19-10-2025 ನೇ ಆದಿತ್ಯವಾರ ದಂದು ದೀಪಾವಳಿ ಹಬ್ಬದ ಪ್ರಯುಕ್ತ ಬಡ ಕುಟುಂಬಗಳಿಗೆ ದಿನಸಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಘಟಕದ ಅಧ್ಯಕ್ಷರಾದ ಲತೀಶ್ ಪೂಜಾರಿ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿಸಿ, ಪ್ರಾರ್ಥಿಸಿದರು. ನಂತರ ಸದಸ್ಯರ ಜೊತೆಗೆ ಸೇರಿಕೊಂಡು ದೀಪಾವಳಿ ಹಬ್ಬವನ್ನು ನಮ್ಮಂತೆಯೇ ಬಡ ಕುಟುಂಬದವರೂ ಆಚರಣೆ ಮಾಡಬೇಕು ಎಂಬ ಉದ್ದೇಶದಿಂದ 8 ಬಡ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾದಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಜಯಲಕ್ಷ್ಮಿ, […]
Read More