Yuvavahini

ಬೆಂಗಳೂರು

ಸೋಶಿಯಲ್ ಮೀಡಿಯಾವನ್ನು ಜವಾಬ್ದಾರಿಯುತವಾಗಿ ಬಳಸಿ: ಎಸಿಪಿ ರೀನಾ ಸುವರ್ಣ

ಬೆಂಗಳೂರು: “ಇಂದಿನ ಯುವ ಪೀಳಿಗೆ ಮತ್ತು ಮಹಿಳೆಯರು ಸೋಶಿಯಲ್ ಮೀಡಿಯಾವನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಳಸಬೇಕು. ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜನೆಗೆ ಸೀಮಿತವಾಗದೆ, ಜ್ಞಾನಾರ್ಜನೆ ಮತ್ತು ಸಮಾಜದ ಏಳಿಗೆಗೆ ಪೂರಕವಾಗಿರಲಿ,” ಎಂದು ಬೆಂಗಳೂರು ನಗರದ ಸಹಾಯಕ ಪೊಲೀಸ್ ಆಯುಕ್ತರಾದ (ACP) ರೀನಾ ಸುವರ್ಣ ಅವರು ಕಿವಿಮಾತು ಹೇಳಿದರು. ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ದಿನಾಂಕ 08.03.2026 ರಂದು ಇತ್ತೀಚೆಗೆ ನಗರದ ಕರ್ನಾಟಕ ಗವರ್ನ್ಮೆಂಟ್ ಸೆಕ್ರೆಟೇರಿಯಟ್ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ […]

Read More

ಯುವವಾಹಿನಿಯ ಕ್ರೀಡಾ ವೇದಿಕೆ ಯುವಕರಲ್ಲಿ ಶಿಸ್ತು ಏಕಾಗ್ರತೆ ಹಾಗೂ ಆತ್ಮವಿಶ್ವಾಸ ಬೆಳೆಸಿದೆ : ಸೂರ್ಯಕಾಂತ್ ಜಯ ಸುವರ್ಣ

ಬೆಂಗಳೂರು: ಯುವಕರು ಸಮಾಜವನ್ನು ಬಲಿಷ್ಠ ಮತ್ತು ಆರೋಗ್ಯಕರ ದಿಕ್ಕಿನಲ್ಲಿ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ; ಇಂತಹ ಕ್ರೀಡಾ ವೇದಿಕೆಗಳು ಅವರಲ್ಲಿ ಶಿಸ್ತು, ಏಕತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರು ಹಾಗೂ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಚೇರ್‌ಮೆನ್ ಸೂರ್ಯಕಾಂತ್ ಜೆ. ಸುವರ್ಣ ಅಭಿಪ್ರಾಯಪಟ್ಟರು.ಅವರು ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಚಿಕ್ಕಬಾಣಾವರ ಸಮೀಪದ ಗೋಲ್ಡನ್ ರೇ ಕ್ರೀಡಾಂಗಣದಲ್ಲಿ ಫೆಬ್ರವರಿ 8ರಂದು ಆಯೋಜಿಸಲಾದ “ಬ್ರಹ್ಮಶ್ರೀ ಕ್ರೀಡಾಕೂಟ 2026” ನ್ನು ಉದ್ಘಾಟಿಸಿ ಮಾತನಾಡಿ ಯುವಕರು ಸಮಾಜದ […]

Read More

ಆರ್ಯ ಈಡಿಗ ಮಹಿಳಾ ಸಂಘದ ರಾಷ್ಟ್ರೀಯ ಸಮ್ಮೇಳನ: ಯುವವಾಹಿನಿ ಬೆಂಗಳೂರು ಘಟಕದ ಸಾಧನೆ

ಬೆಂಗಳೂರು: ಆರ್ಯ ಈಡಿಗ ಮಹಿಳಾ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ, ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರು ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಶ್ರಮ ಮತ್ತು ಪರಿಶ್ರಮದಿಂದ ಸಾಧನೆಯ ಶಿಖರವೇರಬಹುದು ಎಂಬುದಕ್ಕೆ ಯುವವಾಹಿನಿ ಬೆಂಗಳೂರು ಘಟಕ ಕಣ್ಣಿಗೆ ಕಾಣುವ ಜೀವಂತ ಉದಾಹರಣೆಯಾಗಿ ಹೊರಹೊಮ್ಮಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ನಿರ್ಧಾರ ಕೈಗೊಂಡ ಬಳಿಕ, ಸದಸ್ಯರು ಸಿಕ್ಕ ಬಿಡುವಿನ ಸಮಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು, ಹಗಲು-ರಾತ್ರಿ ಎನ್ನದೇ ನಿರಂತರ ಅಭ್ಯಾಸ ನಡೆಸಿದ ಫಲವಾಗಿ ಈ ಯಶಸ್ಸು […]

Read More

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್ ಆಯ್ಕೆ

ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು. ಸಾಮಾಜಿಕ, ಸಂಘಟನಾ ಹಾಗೂ ವೃತ್ತಿಪರ ಕ್ಷೇತ್ರಗಳಲ್ಲಿ ತೋರಿದ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ. ಈ ಪುರಸ್ಕಾರ ಯುವವಾಹಿನಿಗೆ ಹೆಮ್ಮೆಯ ವಿಷಯವಾಗಿದ್ದು, ಸಂಘಟನೆಯ ಮಹಿಳಾ ಶಕ್ತಿಗೆ ಸ್ಫೂರ್ತಿಯಾಗಿದೆ. ಯುವವಾಹಿನಿ (ರಿ.) ಕೇಂದ್ರ ಸಮಿತಿಯು […]

Read More

“ಜಾಯ್ ಆಫ್ ಲರ್ನಿಂಗ್ – 2025” ಯುವವಾಹಿನಿ ಸದಸ್ಯರ ಸ್ವಯಂಸೇವೆಯ ಮಹತ್ತರ ಕೊಡುಗೆ

ಬೆಂಗಳೂರು : ದೇವನಹಳ್ಳಿ ಮಕ್ಕಳಧಾಮ ಕ್ಯಾಂಪಸ್‌ನಲ್ಲಿ ಸ್ಪರ್ಶ ಟ್ರಸ್ಟ್ ಆಯೋಜಿಸಿದ್ದ “ಜಾಯ್ ಆಫ್ ಲರ್ನಿಂಗ್ – 2025” ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರು ನಿಸ್ವಾರ್ಥ ಸೇವೆಯ ಮೂಲಕ ಸಮಾಜಮುಖಿ ಬದ್ಧತೆಯನ್ನು ಮೆರೆದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವಕಾಶವಂಚಿತ ಮಕ್ಕಳಿಗೆ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಆತ್ಮವಿಶ್ವಾಸ, ಉತ್ಸಾಹ ಮತ್ತು ಬದುಕಿನ ಹೊಸ ಆಶಯ ತುಂಬುವ ಮಹತ್ವದ ಪ್ರಯತ್ನ ನಡೆಯಿತು. ಡಿಸೆಂಬರ್ 13ರಂದು ಕಬಡ್ಡಿ, ವಾಲಿಬಾಲ್, ತ್ರೋಬಾಲ್, ರಿಲೇ, ಲಾಂಗ್ ಜಂಪ್ ಸೇರಿದಂತೆ ವಿವಿಧ ಕ್ರೀಡಾ […]

Read More

ಕೋಟಿ ಚೆನ್ನಯ್ಯ ಟ್ರೋಫಿ-2025 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್-ಯುವವಾಹಿನಿ (ರಿ.) ಬೆಂಗಳೂರು ಘಟಕ

ಕೋಟಿ ಚೆನ್ನಯ್ಯ ಟ್ರೋಫಿ-2025″ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಭಾನುವಾರ, ಅಕ್ಟೋಬರ್ 12 ರಂದು ನಾಡಪ್ರಭು ಕೆಂಪೇಗೌಡ ಬ್ಯಾಡ್ಮಿಂಟನ್ ಕೋರ್ಟ್, ವಿಜಯನಗರ ದಲ್ಲಿ ನಡೆಯಿತು. ಪುರುಷರ ಸಿಂಗಲ್ಸ್, ಡಬಲ್ಸ್, ಮಹಿಳೆಯರ ಡಬಲ್ಸ್ , ಮಿಕ್ಸಡ್ ಡಬಲ್ಸ್ ಪಂದ್ಯಗಳು* ನಡೆದವು. ಮಧ್ಯಾಹ್ನ 3 ಗಂಟೆಯಿಂದ ಮಾಸಿಕ ಸಭೆ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಿತು. ಬ್ಯಾಡ್ಮಿಂಟನ್ ಕೋರ್ಟ್, ರೆಫರಿಗಳು, ಜಡ್ಜ್ ಹಾಗೂ ಇತರೆ ಸ್ಥಳೀಯ ವ್ಯವಸ್ಥೆಗಳನ್ನು ಕ್ರೀಡಾ ನಿರ್ದೇಶಕರು ಕಿಶನ್ ಪೂಜಾರಿ ಮತ್ತು ರಕ್ಷಾ ಪ್ರಾಯೋಜಿಸಿದ್ದರು. ಸುಂದರ ಟ್ರೋಫಿಗಳು ಮತ್ತು […]

Read More

ಮೊದಲ ಶಿವಗಿರಿ ತೀರ್ಥಯಾತ್ರೆ-ಯುವವಾಹಿನಿ (ರಿ.) ಬೆಂಗಳೂರು ಘಟಕ

ಯುವವಾಹಿನಿ (ರಿ.) ಬೆಂಗಳೂರು ಘಟಕದ 41 ಮಂದಿ ಸದಸ್ಯರು ತಮ್ಮ ಜೀವನದ ಮೊದಲ ಶಿವಗಿರಿ ತೀರ್ಥಯಾತ್ರೆಯನ್ನು 31 ಅಕ್ಟೋಬರ್ 2025 ರಂದು ಮೆಜಸ್ಟಿಕ್ ರೈಲು ನಿಲ್ದಾಣ ದಿಂದ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾದ ಸಂತೋಷ್ ಪಣಪಿಲ ಇವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಿದರು. ಗುರುಗಳ ಕೃಪೆಯಿಂದಲೇ ಈ ಯಾತ್ರೆ ಸಾಧ್ಯವಾಯಿತು ನವೆಂಬರ್ 1, ಶನಿವಾರದ ಬೆಳಿಗ್ಗೆ ತಂಡ ಶಿವಗಿರಿ ತಲುಪಿತು. ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ನಮ್ಮ ತಂಡಕ್ಕೆ ಆಶೀರ್ವಾದ ನೀಡಿ, ಎಲ್ಲ ವ್ಯವಸ್ಥೆಗಳನ್ನು ಸುಗಮವಾಗಿ ನಡೆಸಿಕೊಟ್ಟರು. ತಂಡವು […]

Read More

ಯುವ ಆರೋಗ್ಯ” ಕಾರ್ಯಕ್ರಮ-ಯುವವಾಹಿನಿ (ರಿ.) ಬೆಂಗಳೂರು ಘಟಕ

ದಿನಾಂಕ: 15 ಸೆಪ್ಟೆಂಬರ್ 2025, ಭಾನುವಾರ ಮಧ್ಯಾಹ್ನ ಸ್ಥಳ: ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಪದ್ಮನಾಭನಗರ ಕಾರ್ಯಕ್ರಮವು ಸದಸ್ಯರಿಗಾಗಿ ಫಿಟ್ನೆಸ್ ಆಟಗಳು (ಫ್ಲ್ಯಾಂಕ್ ಚಾಲೆಂಜ್ ಮುಂತಾದವು)ಗಳಿಂದ ಪ್ರಾರಂಭವಾಯಿತು. ಬಳಿಕ, ಸ್ಪರ್ಶ್ ಆಸ್ಪತ್ರೆಯ ಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಬಸವರಾಜ್ ಹಗರಗಿ ಅವರು ಹೃದಯದ ಆರೋಗ್ಯ ಕುರಿತಾದ ಪ್ರೇರಣಾದಾಯಕ ಹಾಗೂ ಜ್ಞಾನಮಯ ಉಪನ್ಯಾಸವನ್ನು ನೀಡಿದರು. ಡಾ ಬಸವರಾಜ್ ಹಗರಗಿಯವರ ಕೆಲವು ಮುಖ್ಯ ಸಂದೇಶಗಳು* : 1. ಹೃದಯವು ನಮ್ಮ ದೇಹದ ಎಂಜಿನ್‌ನಂತೆ ಕಾರ್ಯನಿರ್ವಹಿಸುತ್ತದೆ. 2. ಕೊಲೆಸ್ಟ್ರಾಲ್ ಜಮಾವಣೆಯಿಂದ ಹೃದಯದಲ್ಲಿ […]

Read More

ಗೃಹ ಭಜನಾ ಗುರು ನಮನ ,ಗುರು ಸಂಕೀರ್ತನ -ಯುವವಾಹಿನಿ (ರಿ.) ಬೆಂಗಳೂರು ಘಟಕ

ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೆಯ ಜನುಮ ಮಹೋತ್ಸವದ ಪ್ರಯುಕ್ತ ಈ ಸಾಲಿನ ಮೊದಲ ಗೃಹಭಜನೆ ಘಟಕದ ಆರೋಗ್ಯ ನಿರ್ದೇಶಕರಾದ ಶ್ರೀಮತಿ ಅನಿತಾ ಕಮಲಾಕ್ಷ ಅವರ ಮನೆಯಲ್ಲಿ ನೆರವೇರಿತು. ಘಟಕದ ಸದಸ್ಯರಾದ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಿತು. ಘಟಕದ ಸದಸ್ಯರಿಂದ ಭಜನೆ ಹಾಗೂ ಕುಣಿತ ಭಜನೆ ಕಾರ್ಯಕ್ರಮ ಮೂಡಿ ಬಂತು. ಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶ್ರೀಮತಿ ಅನಿತಾ ಕಮಲಾಕ್ಷ […]

Read More

ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025-ಯುವವಾಹಿನಿ (ರಿ.) ಬೆಂಗಳೂರು ಘಟಕ

ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಮತ್ತು ತುಳು ಸಿರಿ ಚಾವಡಿ – 2025 ಕಾರ್ಯಕ್ರಮವು ದೈವಜ್ಞ ಸಭಾಭವನ ಜಾಲಹಳ್ಳಿಯಲ್ಲಿ 24 ಆಗಸ್ಟ್ 2025ರ ಭಾನುವಾರ ನೆರವೇರಿತು. ಬೆಳಿಗ್ಗೆ 9.30ಕ್ಕೆ ಗುರುಭಜನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶ್ರೀ ನಾರಾಯಣಗುರುಗಳ ಪ್ರತಿಮೆಗೆ ಶ್ರೀ ಜಯಂತ್ ಸಾಲ್ಯಾನ್ ಅವರ ನೇತೃತ್ವದಲ್ಲಿ ವೈದಿಕ ರೀತಿಯಲ್ಲಿ ಪೂಜೆ ನೆರವೇರಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಸಲಾಯಿತು. ನಂತರ ಯುವವಾಹಿನಿಯ ನಾಲ್ಕು ತಂಡಗಳಾದ ಯುವ ಬಿರುವೆರ್, ಯುವ ತುಡರ್, ಯುವ ಚಾಲೆಂಜರ್ಸ್ ಮತ್ತು ಯುವ ಪವರ್ ತಂಡದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!