Yuvavahini

ವಿದ್ಯೆ

ಮೂಲ್ಕಿ ಯುವವಾಹಿನಿಯಿಂದ ಶಿಕ್ಷಕರ ದಿನಾಚರಣೆ

ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆ ಮುಲ್ಕಿ ಹಾಗೂ ಯುವವಾಹಿನಿ (ರಿ) ಮೂಲ್ಕಿ ಘಟಕ ಇವರ ಜಂಟಿ ಸಹಭಾಗಿತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರಗಿತು. ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ  ನಾರಾಯಣಗುರು ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕರಾದ ಹೇಮರಾಜ್ ಹಾಗೂ ಶ್ರೀಮತಿ ಜಯಶ್ರೀ  ಇವರನ್ನು ಶಿಕ್ಷಕ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು. ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾರಾಯಣ ಗುರು ವಿದ್ಯಾಸಂಸ್ಥೆಯ ಸಂಚಾಲಕ […]

Read More

ವೃತ್ತಿ ಮಾರ್ಗದರ್ಶನ ಶಿಬಿರ, ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಭಾಷಣ ಸ್ಪರ್ಧೆ

ದಿನಾಂಕ 27-8-2016ರಂದು ವೇಣೂರಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರವು ಘಟಕದ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಅಧ್ಯಕ್ಷತೆಯಲ್ಲಿ ಜರಗಿತು. ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಳದಂಗಡಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಶಾಂತ್ ಕುಮಾರ್‌ರವರು ಶಿಬಿರವನ್ನು ನಡೆಸಿಕೊಟ್ಟರು. ಮಹಾಮಾನವತವಾದಿ ನಾರಾ ಯಣ ಗುರುಗಳು ಎಂಬ ವಿಷಯದ ಬಗ್ಗೆ ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ರಕ್ಷಾ ಪ್ರಥಮ ಸ್ಥಾನವನ್ನು ಪಡೆದರು. ಅಂದಿನ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ನಿಶಾ, ನೀರಿಕ್ಷಾ ಎನ್. ನಾವರ, ಆಕೃತಿ […]

Read More

ನಾಯಕತ್ವ ತರಬೇತಿ ಶಿಬಿರ

ಮಂಗಳೂರು ಘಟಕದ ವತಿಯಿಂದ ದಿನಾಂಕ 27-08-2016 ರಂದು ಗೋಕರ್ಣನಾಥ ಕಾಲೇಜ್‌ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ಯರಿಗೆ ನಾಯಕತ್ವ ತರಬೇತಿ ಶಿಬಿರ ನಡೆಯಿತು. 27 ಈ ತರಬೇತಿ ಶಿಬಿರದಲ್ಲಿ ಸುಮಾರು 10 ಕಾಲೇಜುಗಳಿಂದ 48 ವಿದ್ಯಾರ್ಥಿಗಳು ಭಾಗವಹಿಸಿರುವರು. ಶಿಬಿರದ ಉದ್ಘಾಟನೆಯನ್ನು ಬಿ.ಜಿ.ಎಸ್. ಕಾಲೇಜಿನ ಪ್ರಾಧ್ಯಾಪಕ ಕೇಶವ ಕಟೀಲು ನೆರವೇರಿಸಿದರು. ಅಡ್ಯಾರು ಸಹ್ಯಾದ್ರಿ ಎಂ.ಬಿ.ಎ. ಕಾಲೇಜಿನ ಪ್ರಾಧ್ಯಾಪಕ ಪದ್ಮನಾಭರವರು ತರಬೇತಿಯನ್ನು ನಡೆಸಿಕೊಟ್ಟರು. ವಕೀಲರಾದ ನವನೀತ್ ಡಿ. ಹಿಂಗಾಣಿಯವರು ಬಿಲ್ಲವ ಸಂಘಟನೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ನರೇಶ್ ಸಸಿಹಿತ್ಲು ಯುವವಾಹಿನಿ […]

Read More

ಉಡುಪಿ ಘಟಕದ ವತಿಯಿಂದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ

ಯುವವಾಹಿನಿ (ರಿ) ಉಡುಪಿ ಘಟಕದ ಇದರ ನೇತೃತ್ವದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ತಾ. 17-7-2016 ರಂದು ಶ್ರೀ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಉಡುಪಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಯುವವಾಹಿನಿ(ರಿ) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್, ಯುವ ಉದ್ಯಮಿಗಳಾದ ಜಗನ್ನಾಥ ಪೂಜಾರಿ ಮತ್ತು ಲ|ಶಾಲಿನಿ ಡಿ.ಬಂಗೇರ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 19 ಮಕ್ಕಳಿಗೆ ರೂ. 65000 ದಷ್ಟು ವಿದ್ಯಾನಿಧಿಯನ್ನು ವಿತರಿಸಲಾಯಿತು. ವಿದ್ಯಾನಿಧಿ ಸಂಚಾಲಕರಾದ ರಘುನಾಥ್ […]

Read More

ಯುವವಾಹಿನಿ(ರಿ) ಹಳೆಯಂಗಡಿ ಘಟಕದಿಂದ ಉಚಿತ ಪುಸ್ತಕ ವಿತರಣೆ

ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ: 12-6-2016 ರಂದು ಹಳೆಯಂಗಡಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಕೊಲ್ನಾಡು ದಿ! ಕಮಲ ಬೂಬ ಅಮೀನ್‌ರವರ ಸ್ಮರಣಾರ್ಥ ಅವರ ಮಕ್ಕಳಿಂದ (ಪೂಜಾ ಎರೇಂಜರ್‍ಸ್ & ಕೆಟರರ್‍ಸ್) ಇವರ ಪ್ರಾಯೋಜಕತ್ವದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ.ಗಣೇಶ್ ಜಿ. ಬಂಗೇರ ವಹಿಸಿದರು. ಶ್ರೀ ಜೈಕೃಷ್ಣ ಬಿ. ಕೋಟ್ಯಾನ್, ಮಾಲಕರು ಪೂಜಾ ಎರೇಂಜರ್‍ಸ್ & ಕೆಟರರ್‍ಸ್ ಹಳೆಯಂಗಡಿ ಇವರು ಹಳೆಯಂಗಡಿ ಸುತ್ತಮುತ್ತಲ್ಲಿನ 41 ಅರ್ಹ ಶಾಳಾ ಮತ್ತು ಕಾಲೇಜು […]

Read More

ಯುವವಾಹಿನಿ ವಿದ್ಯಾನಿಧಿ ವರದಿ -2014

ಜಗತ್ತಿನ ಸಕಲ ಜೀವಚರಗಳಿಗಿಂತ ಮನುಷ್ಯ ಹೆಚ್ಚು ಬುದ್ದಿವಂತ ಎಣಿಸಿಕೊಳ್ಳುತ್ತಾನೆ ಎಂದರೆ ಅದಕ್ಕೆ ಮುಖ್ಯ ಕಾರಣ ಆತ ವಿದ್ಯಾವಂತ ಜ್ಞಾನದ ಮೂಲಕ ಮನಸ್ಸು ಪರಿವರ್ತನೆಗೊಳಿಸಿ ಆ ಮೂಲಕ ಪ್ರಗತಿಯನ್ನು ಕಾಣುವ ಕಾರಣದಿಂದಲೇ ಮನುಷ್ಯ ಭಿನ್ನ ಎಣಿಸಿಕೊಳ್ಳುತ್ತಾನೆ. ಶೀಲ ಮತ್ತು ಸಚ್ಚಾರಿತ್ರ್ಯವನ್ನು ಹುಟ್ಟುಹಾಕದ ಶಿಕ್ಷಣ ಶಿಕ್ಷಣವೇ ಅಲ್ಲ ಎನ್ನುತ್ತಾರೆ ಜಗತ್ತಿನ ತತ್ವಜ್ಞಾನಿಗಳು. ಅದೇ ಮಾತನ್ನು ಬ್ರಹ್ಮಶ್ರೀ ನಾರಾಯಣ ಗುರುಗಳೂ “ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿರಿ” ಎನ್ನುವ ಮಾತುಗಳಿಂದ ಪುನರುಚ್ಚರಿಸಿದ್ದಾರೆ. ವಿದ್ಯೆ ನಮ್ಮನ್ನು ಸ್ವತಂತ್ರರನ್ನಾಗಿಸಬೇಕು ಯಾರ ಮತ್ತು ಯಾವುದರ ಹಂಗೂ ಇಲ್ಲದೆ […]

Read More

ಯುವವಾಹಿನಿ ವಿದ್ಯಾನಿಧಿ -2013

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಉಪಸಮಿತಿ “ವಿದ್ಯಾನಿಧಿ” ಸಮಿತಿಯು ಮೂಲಧ್ಯೇಯಕ್ಕೆ ಅನುಗುಣವಾಗಿ, ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆರ್ಥಿಕ ಸಹಾಯವನ್ನು ನೀಡುವುದರ ಜೊತೆಗೆ ಅವರ ವ್ಯಕ್ತಿತ್ವ ವಿಕಸನ, ಶೈಕ್ಷಣಿಕ ಮಾಹಿತಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದಲ್ಲದೆ ಈ ವಿದ್ಯಾರ್ಥಿಗಳ ಪೋಷಕರಿಗೂ ಉಪಯುಕ್ತವಾದ ಮಾಹಿತಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯೊಂದಿಗೆ ಯುವವಾಹಿನಿ (ರಿ) ವಿದ್ಯಾನಿಧಿ ಉಪಸಮಿತಿಯ 2012-13ನೇ ಸಾಲಿನ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ ಈ […]

Read More

ಯುವವಾಹಿನಿ ವಿದ್ಯಾನಿಧಿ ವರದಿ -2012

ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಹೀಗೆನ್ನುತ್ತಾರೆ ಬಲ್ಲವರು, ವಿದ್ಯೆ ಪಡೆದು ಸ್ವತಂತ್ರರಾದಾಗ ನಮ್ಮ ಬದುಕಿನ ನಡೆ ಜ್ಞಾನದ ಹಾದಿಯಾಗುತ್ತದೆ ಎಂದಿದ್ದಾರೆ ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ಬಡತನದ ಬೇಗುದಿಯಲ್ಲಿ ಬೆಂದವರಿಗೆ ಅನ್ನ ನೀರು, ವಸ್ತ್ರ ವಸತಿ ಏನನ್ನು ನೀಡಿದರೂ ಅವೆಲ್ಲ ಕ್ಷಣಿಕ ಮಾತ್ರ ಮತ್ತೆ ನಾಳೆ ಹೊಸತಿಗೆ ಅವರು ಕೈ ಚಾಚುತ್ತಾರೆ ಆದರೆ ವಿದ್ಯೆ ಹಾಗಲ್ಲ ಅದು ಬತ್ತದ ಒಸರು. ವಿದ್ಯೆಯನ್ನು ಒಮ್ಮೆ ದಾನ ಮಾಡಿದರೆ ಅದು ಜೀವನ ಪರ್ಯಂತ ನಮ್ಮ ಜೊತೆಗಿರುತ್ತದೆ ಎನ್ನುವುದನ್ನು ಮನಗಂಡಿರುವ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!