Yuvavahini

ಕೇಂದ್ರ ಸಮಿತಿ

ಯುವವಾಹಿನಿ ಬಿಲ್ಲವ ಸಮಾಜದ ಕಣ್ಣುಗಳು – ಡಾ. ರಾಜಶೇಖರ ಕೋಟ್ಯಾನ್

ಯುವವಾಹಿನಿಯು ಬಿಲ್ಲವ ಸಮಾಜದ ಕಣ್ಣುಗಳು,  ವಜ್ರದಂತೆ ಬಲಿಷ್ಠವಾಗಿರುವ   ಬಿಲ್ಲವ ಸಮಾಜವನ್ನು ಪರಸ್ಪರ ಪ್ರೀತಿ, ವಿಶ್ವಾಸ, ಸಂಪರ್ಕದ ಮೂಲಕ ಹೊಳಪು ನೀಡುವ ಕಾರ್ಯವನ್ನು ಯುವವಾಹಿನಿ ಮಾಡುತ್ತಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕ್ರತ ಚಲನಚಿತ್ರ ನಟ,ನಿರ್ಮಾಪಕ ರಾಜಶೇಖರ ಕೋಟ್ಯಾನ್ ತಿಳಿಸಿದರು. ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಯುವಕ್ರೀಡಾ ಸಂಗಮ 2017 […]

Read More

ಯುವವಾಹಿನಿಯ ಯುವಕ್ರೀಡಾ ಸಂಗಮ -2017 ಉದ್ಘಾಟನೆ

  ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ,ನೆಮ್ಮದಿಯನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು, ಈ ನಿಟ್ಟಿನಲ್ಲಿ ಯುವಕರನ್ನು ಕ್ರೀಡೆಯ ಮೂಲಕ ಸಂಘಟಿಸುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾದುದು ಎಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅದ್ಯಕ್ಷರಾದ ಶ್ರೀ ಅಶೋಕ್ ಎಂ.ಸುವರ್ಣ ತಿಳಿಸಿದರು. ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ […]

Read More

ಸಂವೇದನಾಶೀಲ ಕಾರ್ಯ ಸಾಧನಾಶೀಲ ಮಹಿಳೆಯರ ಸಂವಾದ

ಯಶಸ್ಸು ನಮ್ಮನ್ನು ಜಗತ್ತಿಗೆ ಪರಿಚಯಿಸುತ್ತದೆ ಆದರೆ ಸೋಲು ನಮಗೆ ಜಗತ್ತನ್ನು ಪರಿಚಯಿಸುತ್ತದೆ. ಎಂದು ಸುವರ್ಣ ನ್ಯೂಸ್ ವಾರ್ತಾ ವಾಚಕಿ ವೀಣಾ ಪೂಜಾರಿ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ಸಂವೇದನಾ ಶೀಲ ಕಾರ್ಯ ಸಾಧನಾಶೀಲ ಮಹಿಳೆಯರ – ಸಂವಾದ – ಆಂತರ್ಯ – ಮನದೊಳಗಿನ ಮಾತು ಕಾರ್ಯಕ್ರಮದಲ್ಲಿ ಸಂವಾದ ನಿರ್ವಹಿಸಿ ಮಾತನಾಡಿದರು. […]

Read More

ಸಂವೇದನಾಶೀಲ ಕಾರ್ಯ ಸಾಧನಾಶೀಲ ಮಹಿಳೆಯರ ಅಭಿನಂದನೆ

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಜರುಗಿತು. ಸೌಂದರ್ಯ ತಜ್ಞರ ವೇದಾ ಎಸ್.ಸುವರ್ಣ, ಚಲನಚಿತ್ರ ನಿರ್ದೇಶಕಿ ಅಶ್ವಿನೀ ಡಿ ಕೋಟ್ಯಾನ್, ಸುವರ್ಣ ನ್ಯೂಸ್ ವಾರ್ತಾ ವಾಚಕಿ ವೀಣಾ ಪೂಜಾರಿ, ಸಂಘಟಕಿ ಕೆ.ಎ.ರೋಹಿಣಿ,ಯುವ ಸಾಕ್ಸ್ ಫೋನ್ ವಾದಕಿ ಕುಮಾರಿ ಜ್ಯೋತಿ, ಯುವ ಉದ್ಯಮಿ ಕುಮಾರಿ ಉಷಾ, ಯುವ ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ ಇವರುಗಳ ಸಾಧನೆಯನ್ನು ಗುರುತಿಸಿ, ಗೌರವಿಸಿ […]

Read More

ಆಂತರ್ಯ – ಮನದೊಳಗಿನ ಮಾತು – ಸಮಾರೋಪ

ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾದಾಗ ಮಾತ್ರ ಅತ್ಯಾಚಾರ ಶೋಷಣೆ ಮುಂತಾದ ಅಪರಾಧಗಳು ಕಡಿಮೆಯಾಗಬಹುದು. ಗಂಡಿಗಿಂತ ಹೆಚ್ಚಾಗಿ ಹೆಣ್ಣಿಗೆ ನೋವು ಸಹಿಸುವ ಶಕ್ತಿ ಇದೆ. ಮಹಿಳೆಯರ ಸಂಕಷ್ಟಕ್ಕೆ ಮಹಿಳೆಯರೇ ಬೆಂಬಲಕ್ಕೆ ನಿಂತಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ. ಎಂದು ರೋಶನಿ ನಿಲಯದ ಪಿ.ಜಿ.ಸೆಂಟರ್ ಡೀನ್ ಡಾ.ರಮೀಳಾ ಶೇಖರ್ ತಿಳಿಸಿದರು. ಅವರು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಂತರ್ಯ […]

Read More

ಯುವವಾಹಿನಿ ವತಿಯಿಂದ ಮೇಯರ್ ಕವಿತಾ ಸನಿಲ್ ಇವರಿಗೆ ಅಭಿನಂದನೆ

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಜರುಗಿತು. ಮಂಗಳೂರು ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಹಾಗೂ ನೂತನ ಮೇಯರ್ ಶ್ರೀಮತಿ ಕವಿತಾ ಸನಿಲ್ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮುಂಬೈ ಹೈಕೋರ್ಟು ವಕೀಲರಾದ ಶ್ರೀಮತಿ ರೋಹಿಣಿ ಸಾಲ್ಯಾನ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅದ್ಯಕ್ಷ ಎಚ್. ಎಸ್. ಸಾಯಿರಾಂ, […]

Read More

ಆಂತರ್ಯ – ಮನದೊಳಗಿನ ಮಾತು ಉದ್ಘಾಟನೆ

ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯ ಹಿಂದೆ ಕಲ್ಲು ಮುಳ್ಳುಗಳ ಹಾದಿಯ ಮೂಲಕ ಕಠಿಣವಾದ ಪರಿಶ್ರಮವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಿದ ಯುವವಾಹಿನಿ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ಪ್ರಥಮ ಪ್ರಜೆ ಶ್ರೀಮತಿ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್­ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ […]

Read More

’ಡೆನ್ನನ ಡೆನ್ನನ’ ಯುವವಾಹಿನಿ ಅಂತರ್‌ಘಟಕ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

ನ. 20 ರಂದು ಬೆಳ್ತಂಗಡಿ ಆಶಾ ಸಾಲಿಯಾನ್ ಕಲ್ಯಾಣ ಮಂಟಪದ ದಿ| ಶ್ರೀಮತಿ ಮುತ್ತಕ್ಕೆ ಮತ್ತು ದಿ| ಕೋಟ್ಯಪ್ಪ ಪೂಜಾರಿ ವರ್ಪಾಳೆ ಸಭಾ ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿಯ ಅಂತರ್‌ಘಟಕ ಸಾಂಸ್ಕೃತಿಕ ವೈಭವ ’ಡೆನ್ನನ ಡೆನ್ನನ’ ಎಂಬ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ತೆಂಕುತಿಟ್ಟಿನ ಯುವ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉದ್ಘಾಟಿಸಿ ಮಾತನಾಡುತ್ತಾ, ಮನುಷ್ಯ ಜನ್ಮದಲ್ಲಿ ಹುಟ್ಟಿ ಹೇಗೆ ನಡೆಯಬೇಕು ಎಂಬ ಮಾರ್ಗದರ್ಶನ ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಹಾಗೂ […]

Read More

ಪಾದರಸದ ಓಟದ ಸರದಾರ ಮನೀಷ್ ಪೂಜಾರಿ

ಕ್ರೀಡಾ ಪಟುಗಳ ವಿಶ್ವದ ಅತ್ಯುನ್ನತ ವೇದಿಕೆ- ಒಲಿಂಪಿಕ್ಸ್ ಇದರಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯನ್ನು ಗಳಿಸುವುದೇ ಅತ್ಯಂತ ಕಷ್ಟಕರ ಪ್ರಯಾಸಕರ ಸವಾಲು. ಕ್ರೀಡೆಯ ತನ್ನ ಆಸಕ್ತಿಗಳನ್ನು ಮಾರ್ಗದರ್ಶಕರಾದ ಶ್ರೀಯುತ ಅಬ್ಬಾಸ್ ಹಾಗೂ ಲಚ್ಚೇಂದ್ರ ರಿಂದ ಪೋಷಿಸಿಕೊಂಡು ನಂಬಲಸಾಧ್ಯ ಸಾಧನೆ- ಒಲಿಂಪಿಕ್‌ಗೆ ಆಯ್ಕೆಯ ಕನಸನ್ನು ನೆನಸಾಗಿಸಿದ ಕರ್ನಾಟಕದ ಹೆಮ್ಮೆಯ ಶ್ರೀ ಮನೀಷ್ ಪೂಜಾರಿ ಒಬ್ಬ ಧ್ರುವತಾರೆ. ಕರ್ನಾಟಕದ ಉಸೈನ್ ಬೋಲ್ಟ್ ಎಂದು ಕರೆಯಲ್ಪಡಲು ಅರ್ಹ ರಾಷ್ಟ್ರೀಯ ದಾಖಲೆಯುತ್ತ ಸಾಗುವ ಪ್ರಥಮಹಂತ, ರಾಜ್ಯ ದಾಖಲೆಯ 100ಮೀ. ಓಟದಲ್ಲಿ 10.5 ಸೆಕೆಂಡುಗಳಲ್ಲಿ ಹಾಗೂ 21.5  ಸೆ.ನಲ್ಲಿ […]

Read More

SSLC ಯಲ್ಲಿ ಶ್ರೇಷ್ಠ ಸಾಧನೆಯ ಕು| ರಕ್ಷಾ ಡಿ. ಅಂಚನ್

ವಿದ್ಯಾರ್ಥಿಯೊಬ್ಬರ ಸತತ ಪರಿಶ್ರಮದ ಸಾಧನೆಯ ಮಾನದಂಡ ಆತ/ ಆಕೆ ಗಳಿಸುವ ಶೇಕಡಾವಾರು ಅಂಕ. ಈ ನಿಟ್ಟಿನಲ್ಲಿ ಈ ಬಾರಿ SSLC ಪರೀಕ್ಷೆಯಲ್ಲಿ 625 ಕ್ಕೆ 622 ಅಂಕಗಳಸಿ ಶೇ. 99.52 % ಸಾಧನೆ ಮಾಡಿದ ಕು| ರಕ್ಷಾ ಡಿ ಅಂಚನ್ ನೋಡುವವರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಶ್ರೀ ದೇವಿಪ್ರಸಾದ್ ಹಾಗೂ ಶ್ರೀಮತಿ ವಿನೋದಾ ದಂಪತಿಗಳ ಈ ಹೆಮ್ಮೆಯ ಕುವರಿ. ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದಾಳೆ. ಕನ್ನಡದಲ್ಲಿ 125 ಕ್ಕೆ 125, ಹಿಂದಿ, ಗಣಿತ ಹಾಗೂ ವಿಜ್ಞಾನದಲ್ಲಿ 100 ಕ್ಕೆ 100 […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026, ಮಾರ್ಚ್ 14
ಸ್ಥಳ : ಮಂಗಳೂರು ಪುರಭವನ

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, “ಸಖೀ ಸಂವಾದ”ಕಾರ್ಯಾಗಾರ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
error: Content is protected !!