Yuvavahini

ಸಮಾಜ ಸೇವೆ

ಪುತ್ತೂರು ಯುವವಾಹಿನಿಯಿಂದ ಸಹಾಯ ಹಸ್ತ

ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಕೋಲಾಡಿ ಬಟನ್ಸ್ ಮಾಲಕ ಉದಯ ಕುಮಾರ್‌ರವರು ಕೊಡುಗೆಯಾಗಿ ನೀಡಿದ ಸುಮಾರು 18,000 ರೂ. ವೆಚ್ಚದ ಟೆಬಲ್‌ಗಳನ್ನು ಪುತ್ತೂರು ಬಿಲ್ಲವ ಸಂಘಕ್ಕೆ ಹಸ್ತಾಂತರಿಸಲಾಯಿತು.

Read More

ಕತ್ತಲಿನಿಂದ ಬೆಳಕಿಗೆ ಕೂಳೂರು ಘಟಕದ ವಿನೂತನ ಕಾರ್ಯಕ್ರಮ

ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು. ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು, ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀಗುರು ವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇದ್ದಾವೆ. ಅಂಥವರನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲಾ ಸಾಮಾಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]

Read More

ಕಂಕನಾಡಿ ಯುವವಾಹಿನಿಯಿಂದ ಸಹಾಯ ಹಸ್ತ

ದಿನಾಂಕ 22-10-2016 ರಂದು ಕಂಕನಾಡಿ ಘಟಕದ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಗು ರಿಶಿತ್ ಕುಮಾರ್ ಅವರಿಗೆ ಧಾನಿಗಳ ಸಹಕಾರದಿಂದ ಒಟ್ಟು ಮಾಡಿದ ರೂ. 17,000/-ದ ಚೆಕ್‌ನ್ನು ಘಟಕಾಧ್ಯಕ್ಷರು ವಿತರಿಸುತ್ತಿರುವುದು.

Read More

ಮಂಗಳೂರು ಮಹಿಳಾ ಘಟಕದ ವಿವಿಧ ಕಾರ್ಯಕ್ರಮಗಳು

ತಾ. 3-9-2016 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ಸದಸ್ಯರಿಗೆ ಫಿನಾಯಿಲ್ ಹಾಗೂ ಲಿಕ್ವಿಡ್ ಸೋಪ್ ತಯಾರಿಸುವುದರ ಬಗ್ಗೆ ಜರಗಿದ ಮಾಹಿತಿ ಶಿಬಿರ. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ಲೇಡಿಹಿಲ್ ವೃತ್ತದಿಂದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದವರೆಗೆ ಜರಗಿದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು. ತಾ. 16-9-2016 ರಂದು ಗುರುಜಯಂತಿ ಪ್ರಯುಕ್ತ ವೆನ್‌ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಹಾಯಕರಿಗೆ (ಮನೆಯವರಿಗೆ) ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಯುವವಾಹಿನಿ ಮಂಗಳೂರು ಮಹಿಳಾ ಘಟಕದಿಂದ ಏರ್ಪಡಿಸಲಾಗಿತ್ತು. […]

Read More

ಹಳೆಯಂಗಡಿ ಘಟಕದ ಸಮಾಜ ಸೇವೆ

ದಿ. 7-9-2016 ರಂದು ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವದ ಶೋಭಾ ಯಾತ್ರೆಯಲ್ಲಿ ನೆರೆದ ಭಕ್ತಾಭಿಮಾನಿಗಳಿಗೆ ಘಟಕದ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಇದರ ಮುಂಭಾಗದಲ್ಲಿ 1000 ಜನರಿಗೆ ರೂ. 16,000/- ಮೊತ್ತದ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಿ, ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವದ ಶೋಭಾ ಯಾತ್ರೆಯ ಯಶಸ್ಸಿಗೆ ಸಹಕಾರ ನೀಡಲಾಗಿರುತ್ತದೆ.

Read More

ಆಟಿಡೊಂಜಿ ದಿನ

ದಿನಾಂಕ 14-08-2016ರ ಆದಿತ್ಯವಾರ ಅಡ್ವೆ ಘಟಕದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮ ಉದ್ಘಾಟನೆಯನ್ನು ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಅಧ್ಯಕ್ಷ ಸುಂದರ ಯು. ಸುವರ್ಣರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್‌ಕುಮಾರ್, ಸಾಹಿತಿ ಉಗ್ಗಪ್ಪ ಪೂಜಾರಿ ಬೆದ್ರ, ಚಿತ್ರನಟ ಭೋಜರಾಜ ವಾಮಂಜೂರು, ಅಥನಿ ಕಂಪೆನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ, ನವೀನ್‌ಚಂದ್ರ ಸುವರ್ಣ, ಸುರೇಶ್ ಶೆಟ್ಟಿ ಮೂಡುಗುತ್ತು, ತ್ಯಾಂಪಣ್ಣ ಶೆಟ್ಟಿ ಮತ್ತು ಮನೋಜ್ ಕರ್ಕೇರ ಮೊದಲಾದವರು ಭಾಗವಹಿಸಿದ್ದರು. ಹಿರಿಯರಾದ ಸುಧಾಕರ ಡಿ. […]

Read More

ಕ್ಯಾನ್ಸರ್ ರೋಗಿಗೆ ಸಹಾಯ ಹಸ್ತ

ತೀರಾ ಅನಾರೋಗ್ಯದಿಂದ ಬಳಲುತ್ತಿರುವ ಆರಂಬೋಡಿ ಗ್ರಾಮದ ನೆಲ್ಲಿಗುಡ್ಡೆ ಮನೆ ಪದ್ಮ ಪೂಜಾರಿಯವರ ಮನೆಗೆ ದಿನಾಂಕ 12-8-2016ರಂದು ಘಟಕದ ಪದಾಧಿಕಾರಿಗಳು, ನಿರ್ದೇಶಕರು, ಸಲಹೆಗಾರರು ಭೇಟಿ ನೀಡಿ ಚಿಕಿತ್ಸಾ ವೆಚ್ಚಕ್ಕಾಗಿ ರೂ. 10,000/- ಮೊತ್ತದ ಸಹಾಯಧನವನ್ನು ನೀಡಿದರು.

Read More

ಆಶ್ರಮದ ಮಕ್ಕಳಿಗೆ ಕ್ಷೌರ ಸೇವೆ

ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 30-07-2016 ರಂದು ಬಲ್ಮಠದ ಶ್ರದ್ಧಾನಂದ ಆಶ್ರಮದ ಮಕ್ಕಳಿಗೆ ಕ್ಷೌರ ಸೇವೆಯನ್ನು (hair cutting) ಘಟಕದ ಕೆಲವು ಸೌಂದರ್ಯ ತಜ್ಞೆಯರಿಂದ ನಡೆಸಿಕೊಡಲಾಯಿತು. ಮಕ್ಕಳಿಗೆ ಸ್ವೀಟ್, ಬಿಸ್ಕೆಟ್, ಪೆನ್, ಪೆನ್ಸಿಲ್‌ಗಳನ್ನು ನೀಡಲಾಯಿತು. ಸುಮಾರು 35 ಮಕ್ಕಳು ಇವುಗಳ ಪ್ರಯೋಜನ ಪಡೆದರು.

Read More

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ವಿವಿಧ ಕಾರ್ಯಕ್ರಮಗಳು

ಘಟಕದ ವತಿಯಿಂದ ತಾ. 16-7-2016 ರಂದು ಕೋಡಿಕಲ್ ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಸಸಿ ವಿತರಣೆ ಹಾಗೂ ಶಾಲೆಯ 30 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿರುತ್ತದೆ. ಕಾರ್ಯಕ್ರಮವನ್ನು ಕೋಡಿಕಲ್ ಬಿಲ್ಲವ ಸಂಘ ಇದರ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ ದೇವೇಂದ್ರ ಕೋಟ್ಯಾನ್‌ರವರು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಯ ಜಯಪ್ಪ ಅದ್ಯಪಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ವೀಣಾ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ರಾಕೇಶ್, ಘಟಕದ ಸಲಹೆಗಾರರ ಸಾಧು ಪೂಜಾರಿ ಹಾಗೂ […]

Read More

ಯುವವಾಹಿನಿ(ರಿ) ಹಳೆಯಂಗಡಿ ಘಟಕದಿಂದ ಉಚಿತ ಪುಸ್ತಕ ವಿತರಣೆ

ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ: 12-6-2016 ರಂದು ಹಳೆಯಂಗಡಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಕೊಲ್ನಾಡು ದಿ! ಕಮಲ ಬೂಬ ಅಮೀನ್‌ರವರ ಸ್ಮರಣಾರ್ಥ ಅವರ ಮಕ್ಕಳಿಂದ (ಪೂಜಾ ಎರೇಂಜರ್‍ಸ್ & ಕೆಟರರ್‍ಸ್) ಇವರ ಪ್ರಾಯೋಜಕತ್ವದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ.ಗಣೇಶ್ ಜಿ. ಬಂಗೇರ ವಹಿಸಿದರು. ಶ್ರೀ ಜೈಕೃಷ್ಣ ಬಿ. ಕೋಟ್ಯಾನ್, ಮಾಲಕರು ಪೂಜಾ ಎರೇಂಜರ್‍ಸ್ & ಕೆಟರರ್‍ಸ್ ಹಳೆಯಂಗಡಿ ಇವರು ಹಳೆಯಂಗಡಿ ಸುತ್ತಮುತ್ತಲ್ಲಿನ 41 ಅರ್ಹ ಶಾಳಾ ಮತ್ತು ಕಾಲೇಜು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!