08-05-2019, 4:22 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಸಮ ಸಮಾಜದ ಸರ್ವ ಸಮಾನತೆಯ ಜ್ಞಾನ ಜ್ಯೋತಿ ಬಸವಣ್ಣ ಜಯಂತಿ ಯುವವಾಹಿನಿಯ ಸಭಾಂಗಣ ದಲ್ಲಿ ಆಚರಿಸಲಾಯಿತು. ಸಾಹಿತಿ ಚಿಂತಕಿ ಶ್ರೀಮತಿ ಜ್ಯೋತಿ ಇರ್ವತ್ತೂರು ಇವರು ಬಸವಣ್ಣ ಜಯಂತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಯುವವಾಹಿನಿಯಂತಹ ಬಿಲ್ಲವ ಸಂಘಟನೆ ಯೊಂದು ಬಸವಣ್ಣ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಸಮ ಸಮಾಜದ ಸಮಾನತೆಯ ತಳಹದಿಯಲ್ಲಿ ಕೆಲಸಮಾಡಿದ ನಾರಾಯಣ ಗುರು, ಬಸವಣ್ಣ, ಪೆರಿಯಾರ್, ಕಾರ್ಲ್ ಮಾರ್ಕ್ಸ್ ಮುಂತಾದವರು ನಮಗೆಲ್ಲ ಆದರ್ಶ ಎಂದರು. […]
Read More
08-05-2019, 4:01 AM
ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ ಬೇಸಿಗೆ ಶಿಬಿರ, ‘ವಿಕಸನ-2019’ ರ ಅಂಗವಾಗಿ ನಾಲ್ಕನೇ ದಿನ ಮಕ್ಕಳಿಗೆ ‘ಅಗ್ನಿ ಸುರಕ್ಷತೆಯ’ ಬಗ್ಗೆ ಅರಿವು ಮೂಡಿಸಲಾಯಿತು. ಅಂಕಿ ಅಂಶಗಳ ಪ್ರಕಾರ ಹಲವಾರು ಬೆಂಕಿ ಅವಘಢಗಳು ಅರಿವಿನ ಕೊರತೆಯಿಂದ ಉಂಟಾಗುವಂತಹದು. ಬಿಸಿಲಿನ ಬೇಗೆಯ ಈ ದಿನಗಳಲ್ಲಿ ಅಗ್ನಿ ಅನಾಹುತಗಳ ಸಾಧ್ಯತೆ ಇನ್ನೂ ಹೆಚ್ಚು. ‘ಅರಿವಿನ ತಂಗಾಳಿ’ ಹೆಸರಿನಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಅಗ್ನಿ ಅನಾಹುತಗಳನ್ನು ಸರಿಯಾದ ಮಾಹಿತಿಯ ಮೂಲಕ ಆದಷ್ಟು ಕಡಿಮೆ ಮಾಡುವ ಮೂಲಕ ಉದ್ದೇಶದಿಂದ ‘ಅಗ್ನಿ ಸುರಕ್ಷತೆ […]
Read More
31-03-2019, 2:41 PM
ಉಡುಪಿ : ಉಡುಪಿ ಯುವವಾಹಿನಿ ಘಟಕದಲ್ಲಿ ದಿನಾಂಕ 31/03/2019 ರಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಸ್ವ ಉದ್ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಮಹಿಳೆಯರಿಗೆ – ಸಾಂಬಾರು ಪುಡಿ, ಸಾರಿನ ಪುಡಿ, ಪುಳಿಯೋಗರೆ ಮಿಕ್ಸ್, ಪೇಪರ್ ಬ್ಯಾಗ್ ತಯಾರಿಸುವ ವಿಧಾನ, ಮ್ಯಾಟ್ ತಯಾರಿಸುವ ಬಗ್ಗೆ ತರಬೇತಿ ನೀಡಿದರು. ಸುಮಾರು 20 ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡುರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮತಿ ಲಕ್ಷ್ಮೀಬಾಯಿ ಹಾಗೂ ಶ್ರೀಮತಿ ಸುಮಂಗಲಾ ರವರು ಭಾಗವಹಿಸಿದ್ದರು.ಶಕುಂತಳ ಎಸ್ […]
Read More
04-11-2018, 3:19 PM
ಬಂಟ್ವಾಳ : ದಿನನಿತ್ಯದ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ಪ್ರೇರೇಪಿಸುವ ಮನವೊಪ್ಪಿಸುವ ಅಥವಾ ಒತ್ತಾಯಿಸುವ ಸಂದರ್ಭಗಳು ಸಹಜ, ಇಂತಹ ಸಂದರ್ಭಗಳಲ್ಲಿ ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು , ಉದ್ದೇಶವನ್ನು ಸಾಧಿಸುವಂತೆ ಇರಬೇಕು. ಆದರೆ ಈ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ಇರುವುದಿಲ್ಲ ಉದಾಹರಣೆಗೆ ಜೀವನದಲ್ಲಿ ಯಾವ ಕೊರತೆ ಇಲ್ಲದಿದ್ದರೂ ಚೈತನ್ಯ ರಹಿತವಾದ ನಿರಾಶವಾದಿಗಳನ್ನು ನೋಡುತ್ತಿರುತ್ತೇವೆ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯವನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ ಕಿರಿಕಿರಿ […]
Read More
21-10-2018, 3:37 PM
ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಒಂದಿಷ್ಟು ಮನರಂಜನೆಗೆ, ಒಂದಿಷ್ಟು ಸಂಘಟನೆಗೆ ಎಂಬ ಉದ್ದೇಶವನ್ನು ಮುಂದಿರಿಸಿಕೊಂಡು ಯುವವಾಹಿನಿ (ರಿ) ಯಡ್ತಾಡಿ ಘಟಕ ಆರಂಭಿಸಿದ ನಮ್ಮ ನಡೆಯ ಎರಡನೇ ಕಾರ್ಯಕ್ರಮ ನಮ್ಮ ನಡೆ, ಕಂಬಳಕಟ್ಟು ಕಡೆ, ಅಧ್ಯಕ್ಷರಾದ ಸತೀಶ ಪೂಜಾರಿಯವರ ಮನೆಯಲ್ಲಿ ದಿನಾಂಕ 21-10-2018 ರಂದು ನಡೆಸಲಾಯಿತು. ಸ್ವಯಂ ಪ್ರೇರಣೆಯಿಂದ ಸದಸ್ಯರು ಭಾಗವಹಿಸದೇ ಇದ್ದರೆ ಯಾವುದೇ ಸಂಘಟನೆಯನ್ನು ಮುನ್ನಡೆಸುವುದು ಕಷ್ಟ ಸಾಧ್ಯ. ಅದೂ ಅಲ್ಲದೆ ಅದು ವ್ಯರ್ಥ ಕೂಡ. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಯುವವಾಹಿನಿ ಪ್ರಾರಂಭಿಸಿದ ಕಾರ್ಯಕ್ರಮ […]
Read More
30-09-2018, 4:12 PM
ಉಪ್ಪಿನಂಗಡಿ : ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಘಟಕದ ಸದಸ್ಯರಿಗೆ ಯುವದರ್ಪಣ ಮಾಹಿತಿ ಕಾರ್ಯಾಗಾರವು ರೋಟರಿ ಭವನ ರಾಮನಗರ ಉಪ್ಪಿನಂಗಡಿ ಇಲ್ಲಿ ದಿನಾಂಕ :30/09/18 ರಂದು ಆದಿತ್ಯವಾರ ನಡೆಯಿತು.ಯುವದರ್ಪಣ ಕಾರ್ಯಕ್ರಮದ ಮೂಲಕ ಹೊಸ ಮುಖಗಳನ್ನು ಪರಿಚಯಿಸುವ ಈ ಪ್ರಯತ್ನ ಶ್ಲಾಘನೀಯ ಎಂದು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ತಿಳಿಸಿದರು. ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಅದ್ಯಕ್ಷ ಅಜಿತ್ ಕುಮಾರ್ ಪಾಲೇರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ […]
Read More
29-07-2018, 3:32 AM
ಮಂಗಳೂರು : ಯುವವಾಹಿನಿಯ ಉಪನಿಬಂಧನೆಗ ಹಾಗೂ ಉಪನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಪುಸ್ತಕವನ್ನು ಯುವವಾಹಿನಿಯ ಸಲಹೆಗಾರರಾದ ಬಿ.ತಮ್ಮಯ ಬಿಡುಗಡೆಗೊಳಿಸಿದರು. ದಿನಾಂಕ 29.07.2018 ರಂದು ನಡೆದ ಯುವವಾಹಿನಿ ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷ ನರೆಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಮರೋಳಿ, ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ವಿಶ್ವನಾಥ್ ಕೆ. ಮತ್ತಿತರರು […]
Read More
02-07-2018, 4:19 PM
ಪಣಂಬೂರು : ಯುವವಾಹಿನಿ (ರಿ) ಪಣಂಬೂರು ಘಟಕದ ದಿನಾಂಕ 02-07-2018ನೇ ಸೋಮವಾರದಂದು ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ” ಎನ್ನುವ ವಿಚಾರ ಸಂಕಿರಣ ಕಾರ್ಯಕ್ರಮ ಜರುಗಿತು . “ಪ್ರಕೃತಿ ಸಂರಕ್ಷಣೆ ಮತ್ತು ಮಾದಕ ವ್ಯಸನ” ಎನ್ನುವ ವಿಚಾರದ ವಿಚಾರ ಸಂಕಿರಣ ಜರಗಿತು. ಶ್ರೀ ಯೋಗೀಶ್ ಮಲ್ಲಿಗೆಮಾಡು, ರೋಶನಿ ನಿಲಯ, ಮಂಗಳೂರು ಇವರು ಅತ್ಯುತ್ತಮವಾದ ವಿಚಾರಗಳನ್ನು ಮಂಡಿಸಿದರು. ಈ ಪ್ರಕೃತಿ ಅದರ ವೈಶಿಷ್ಟ್ಯ, ನಾವು ಹೇಗೆ ಪ್ರಕೃತಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ, ಯಾವ ರೀತಿಯಾಗಿ ನಾವು ಪ್ರಕೃತಿಯ ಕೊಡುಗೆಯನ್ನು […]
Read More
27-06-2018, 2:29 AM
ಕೂಳೂರು : ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರ ದಿನ ನಿತ್ಯದ ಕೆಲಸವೇ ಒಂದು ಯೋಗ ಆಗಿತ್ತು.ಬೆಳಿಗ್ಗೆ ಬೇಗ ಏಳುವುದು ಯೋಗ.ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಈ ರೀತಿ ಹೇಳಿದ್ದಾರೆ – ನಮ್ಮ ಪಂಚೇಂದ್ರಿಯಗಳು 5 ಕುದುರೆಗಳು ಇದ್ದಂತೆ ಅವುಗಳನ್ನು ಕಡಿವಾಣ ಹಾಕಿ ಹತೋಟಿಯಲ್ಲಿ ಇಟ್ಟು ಕೊಳ್ಳುವುದೇ ಯೋಗ ,ಮುಖ್ಯವಾಗಿ ನಾವು ತಿನ್ನುವ ಆಹಾರದಲ್ಲಿ ಸಮತೋಲನ ಇರಬೇಕು. ಆಗ ಆರೋಗ್ಯವಂತರಾಗಿ ಇರುತ್ತೇವೆ ಎಂದರು . ಮನಸ್ಸನ್ನು ಹತೋಟಿಯಲ್ಲಿ ಇಟ್ಟು ಕೊಳ್ಳುವುದು ಮುಖ್ಯ .ಯೋಗವೇ ಆರೋಗ್ಯ ಆದ್ದರಿಂದ ಎಲ್ಲರೂ ಯೋಗ ಮಾಡಿ […]
Read More
07-06-2018, 4:46 PM
ಕಂಕನಾಡಿ : ಸಂಸ್ಕೃತಿ ಉಳಿದರೆ ಪರಿಸರ ಉಳಿಯುತ್ತದೆ. ದೇಶದ ಅಭಿವೃದ್ಧಿ ಯಾಗಬೇಕಾದರೆ ಮಾನವರ ಅಭಿವೃದ್ಧಿಯಾಗಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳಿದ್ದರೆ ಮಾತ್ರ ಮಾನವರ ಅಭಿವೃದ್ಧಿ ಸಾಧ್ಯ ಎಂದು ರೋಶನಿ ನಿಲಯದ ಚೈಲ್ಡ್ ಲೈನ್ ನಗರ ಸಂಚಾಲಕರಾದ ಯೋಗಿಶ್ ಮಲ್ಲಿಗೆ ಮಾಡು ತಿಳಿಸಿದರು. ಅವರು ದಿನಾಂಕ 07-06-2018ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವಾರದ ಸಭೆಯಲ್ಲಿ “ತಂಬಾಕು ರಹಿತ ದಿನ” ಮತ್ತು “ವಿಶ್ವ ಪರಿಸರ ದಿನಾಚರಣೆ”ಯ ಪ್ರಯುಕ್ತ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನಗಳಲ್ಲಿ ತಂಬಾಕು ಕೂಡ ಒಂದು. […]
Read More