29-09-2018, 4:06 PM
ಮಂಗಳೂರು : ವಿಶ್ವ ಹೃದ್ರೋಗ ದಿನಾಚರಣೆಯ ಅಂಗವಾಗಿ ಒಮೇಗಾ ಅಸ್ಪತ್ರೆ ಮಂಗಳೂರು, ಯುವವಾಹಿನಿ (ರಿ) ಮಂಗಳೂರು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ, ಅಶೋಕನಗರ ಲಯನ್ಸ್ ಕ್ಲಬ್, ಲಯನ್ಸ್ ಕ್ಲಬ್ ಕುಡ್ಲ. ಇವರ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ. ಕೆ.ಮುಕುಂದ್ ಇವರ ನೇತೃತ್ವದಲ್ಲಿ “ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ” ದಿನಾಂಕ 29.09.2018 ರಂದು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ಇಲ್ಲಿ ನಡೆಯಿತು. ಶಿಬಿರಾರ್ಥಿಗಳ ವೈದ್ಯಕೀಯ ತಪಾಸಣೆಯ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು […]
Read More
23-09-2018, 2:42 AM
ಕಂಕನಾಡಿ : ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ಮರ ಬಿದ್ದು ಗಾಯಗೊಂಡ ಸುರೇಖಾ ಕೋಟ್ಯಾನ್ ಆರೋಗ್ಯವನ್ನು ವಿಚಾರಿಸಿ ₹.10000/- ವೈದ್ಯಕೀಯ ನೆರವು ನೀಡಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್ ಕಾರ್ಯದರ್ಶಿ ಸುಮಾ ವಸಂತ್ , ಮಾಜಿ ಅಧ್ಯಕ್ಷ ಹರೀಶ್. ಕೆ. ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
Read More
22-09-2018, 4:23 PM
. ಪುತ್ತೂರು : ಯುವವಾಹಿನಿ (ರಿ.) ಪುತ್ತೂರು ಘಟಕ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇದರ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜ್ ಅಭಿವೃದ್ಧಿ ಸಮಿತಿ ಇದರ ಸಹಭಾಗಿತ್ವದಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ” ದಿನಾಂಕ 22/9/2018ನೇ ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ(ರಿ.)ಪುತ್ತೂರು ಘಟಕದ ಅಧ್ಯಕ್ಷರಾದ […]
Read More
16-09-2018, 2:38 AM
ಕಂಕನಾಡಿ : ಯುವವಾಹಿನಿ(ರಿ.) ಕಂಕನಾಡಿ ಘಟಕದ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿ ಮತ್ತು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಂಯುಕ್ತ ಸಹಯೋಗದೊಂದಿಗೆ ದಿನಾಂಕ 16-9-2018 ರಂದು ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಪ್ರಾಥಮಿಕ ಶಾಲೆಯಲ್ಲಿ ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಜರುಗಿತು. ಸುಮಾರು 100ಕ್ಕೂ ಅಧಿಕ ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು […]
Read More
15-09-2018, 2:33 AM
ಬಜಪೆ : ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಕಾಲೇಜು ಅಭಿವೃದ್ಧಿ ಸಮಿತಿ, ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಸುಂಕದಕಟ್ಟೆ ಬಜ್ಪೆ, ಶ್ರೀ ನಿರಂಜನ ಸ್ವಾಮಿ ಅನಿದಾನಿತ ತಾಂತ್ರಿಕ ವಿದ್ಯಾಲಯ ಸುಂಕದಕಟ್ಟೆ ಹಾಗೂ ರೋಟರಿ ಕ್ಲಬ್ ಬಜ್ಪೆ ಇವರೆಲ್ಲರ ಸಹಭಾಗಿತ್ವದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕ ಇವರ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ […]
Read More
13-09-2018, 1:47 PM
ಕುಪ್ಪೆಪದವು :ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ಇಲ್ಲಿನ ಸ್ಥಳೀಯ ನಿವಾಸಿ ಬಡ ಕುಟುಂಬದ ಶೇಖರ್ ಪೂಜಾರಿ ದುರ್ಗಕೊಡಿ ಇವರ ಮಗುವಿನ ಅನಾರೋಗ್ಯದ ನಿಮಿತ್ತ ದಿನಾಂಕ 13/09/2018 ರಂದು ವೈದ್ಯಕೀಯ ನೆರವು ನೀಡಲಾಯಿತು . ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ,ಉಪಾಧ್ಯಕ್ಷರಾದ ಅಜಯ್ ಅಮೀನ್.ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ ಹಾಗೂ ಘಟಕದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು
Read More
29-08-2018, 3:04 PM
ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 29/08/2018 ರಂದು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು ಸಂಪನ್ಮೂಲ ವ್ಯಕ್ತಿಯಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ನೇತ್ರ ತಜ್ಞರಾದ ಡಾ। ಸೌಮ್ಯಾ ಇವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು . ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಲಹೆಗಾರರಾದ ನೇಮಿರಾಜ್, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ , ಬ್ರಹ್ಮಶ್ರೀ ನಾರಾಯಣ ಗುರು […]
Read More
19-08-2018, 2:49 PM
ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕ ಹಾಗೂ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸಾಯನ್ಸ್ ಮುಕ್ಕ ಇವರ ಜಂಟಿ ಆಶ್ರಯದಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇದರ ಸಭಾಭವನದಲ್ಲಿ ದಿನಾಂಕ 19.08.2018 ರಂದು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶ್ರೀ ದೇವಿ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀಯುತ ಸೇಸಪ್ಪ ಅಮೀನ್ ರವರು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂದಿರದ ಗೌರವ ಅಧ್ಯಕ್ಷ ರಾದ ವಿಶ್ವಾನಂದ ಶೆಟ್ಟಿ,ಗೌರವ ಸಲಹೆಗಾರರಾದ ಜಗನ್ನಾಥ ಸಾಲ್ಯಾನ್ ,ಶ್ರೀನಿವಾಸ್ […]
Read More
13-08-2018, 4:25 PM
ಪಡುಬಿದ್ರಿ : ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಅನಾರೋಗ್ಯದಿಂದ ಬಳಲುತ್ತಿರುವ, ನಮ್ಮ ಘಟಕದ ಸದಸ್ಯರಾದ ನಂದಿಕೂರಿನ ಹೇಮಂತ್ ರವರ ತಾಯಿ ಜಯಂತಿಯವರಿಗೆ ಯುವವಾಹಿನಿ (ರಿ.) ಪಡುಬಿದ್ರಿ ಘಟಕದಿಂದದಿನಾಂಕ 13.08.2018 ರಂದು ರೂ.10,600 ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿಯ ಅಧ್ಯಕ್ಷರಾದ ದೀಪಕ್ ಕೆ. ಬೀರ, ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಎಸ್. ಪೂಜಾರಿ, ಮಾಜಿ ಅಧ್ಯಕ್ಷರಾದ ಅಶೋಕ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಪಡುಬಿದ್ರಿ ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಅರುಣ್ ನಂದಿಕೂರು ಉಪಸ್ಥಿತರಿದ್ದರು.
Read More
14-07-2018, 8:18 AM
ಬಜ್ಪೆ: ವಿದ್ಯೆ ಉದ್ಯೋಗ ಸಂಪರ್ಕವೆನ್ನುವ ಮಹತ್ತರವಾದ ಆಶಯವನ್ನಿರಿಸಿಕೊಂಡು, ಸಮಾಜಮುಖಿಯಾಗಿ ಕಾರ್ಯೋನ್ಮುಖವಾಗಿರುವ ಯುವವಾಹಿನಿ ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲೂ ತನ್ನನ್ನು ಬಹುವಾಗಿ ಅನ್ವಯಿತಗೊಳಿಸಿಕೊಂಡಿರುವ ಕಾರಣವಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮಡಿಗೇರಿಸಿಕೊಂಡಿರುವುದು ಕಡಿಮೆ ಸಾಧನೆಯೇನಲ್ಲ. ಯುವವಾಹಿನಿ ಕೇಂದ್ರ ಸಮಿತಿಯ ಪಡಿನೆಳಲಲ್ಲಿ ತನ್ನ ಪ್ರತಿಭೆಯನ್ನು ವಿಸ್ತಾರಗೊಳಿಸಿಕೊಂಡಿರುವ ಘಟಕಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಯುವವಾಹಿನಿ(ರಿ.) ಬಜ್ಪೆ ಘಟಕದ ಆಶ್ರಯದಲ್ಲಿ ದಿನಾಂಕ. 14.07.2018 ರಂದು ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ(SEZ) ಇದರ ಸಹಭಾಗಿತ್ವದಲ್ಲಿ, ಪ್ರಸಾದ್ ನೇತ್ರಾಲಯ […]
Read More