27-01-2019, 3:59 PM
ವೇಣೂರು : ಸಂಘಟನೆಗಳು ಉದ್ಯೋಗ, ಶಿಕ್ಷಣದ ಜತೆಗೆ ಸಮು ದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಅದುವೇ ಮೂಲ ಉದ್ದೇಶವಾಗಬೇಕು. ಸಮುದಾಯದ ಅಭಿವೃದ್ಧಿಯ ವಿಷಯ ದಲ್ಲಿ ಹಸ್ತಕ್ಷೇಪ ಸಲ್ಲದು. ಸಾಮಾಜಿಕ ಸೇವೆಯಲ್ಲಿ ಯುವವಾಹಿನಿ ಯುವಕರ ಪ್ರೇರಕ ಶಕ್ತಿ ಆಗಿದೆ ಎಂದು ಹೇಳಿದರು.ಅಲ್ಲದೆ ಜಿಲ್ಲೆಯಲ್ಲಿ ಯುವವಾಹಿನಿ ಉತ್ತಮ ಕಾರ್ಯಸಾಧನೆ ಮಾಡಿದೆ. ಅದಕ್ಕಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗಳಿಸಿರುವುದು ನಮಗೆಲ್ಲ ಹೆಮ್ಮೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವ ಈ ಸಂಘಟನೆಗೆ ಎಲ್ಲರೂ ಬೆಂಬಲ ನೀಡಬೇಕಿದೆ.ಅವಿಭಜಿತ ಜಿಲ್ಲೆ ಯಲ್ಲಿ ಬಿಲ್ಲವರೇ ಬಹುಸಂಖ್ಯಾಕರಾಗಿ ದ್ದಾರೆ. ಆದರೆ ನಮ್ಮಲ್ಲಿ […]
Read More
27-01-2019, 3:15 PM
ಸುರತ್ಕಲ್ : ಯುವವಾಹಿನಿ(ರಿ) ಸುರತ್ಕಲ್ ಘಟಕವು ಅತ್ಯಂತ ಹಿರಿಯ ಘಟಕಗಳಲ್ಲಿ ಒಂದಾಗಿದ್ದು ಬಹಳಷ್ಟು ಸಮಾಜ ಮುಖಿಯಾಗಿ ಮಾಡುತ್ತಿರುವ ಸೇವೆಯನ್ನು ಖ್ಯಾತ ಉದ್ಯಮಿ ಮ್ಯಾನೇಜಿಂಗ್ ಡ್ಯೆರೆಕ್ಟರ್ ಫಾಟ್ಗೆ ಗ್ರೂಫ್ ಆಪ್ ಕಂಪೆನಿಯ ಅಧ್ಯಕ್ಷ ಶೇಖರ್ ಕೆ.ಕರ್ಕೇರ ತಿಳಿಸಿದರು. ಇವರು ದಿನಾಂಕ 27/01/2019 ಅದಿತ್ಯವಾರದಂದು ಸುರತ್ಕಲ್ ಲಲಿತ್ ಹೊಟೇಲ್ ಇಂಟರ್ ನ್ಯಾಶನಲ್ ನಲ್ಲಿ ಜರಗಿದ ಯುವವಾಹಿನಿ(ರಿ) ಸುರತ್ಕಲ್ ಘಟಕದ 2019-2020ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ – ಸಾರಥ್ಯ 2019 ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ(ರಿ) ಸುರತ್ಕಲ್ ಘಟಕದ ಅಧ್ಯಕ್ಷ […]
Read More
22-01-2019, 3:34 AM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದಿನಾಂಕ 22-1-2019 ರಂದು ಯುವವಾಹಿನಿ ಸಭಾಂಗಣ ಮಂಗಳೂರು ಇಲ್ಲಿ ಜರಗಿತು. ಕಾರ್ಯಕ್ರಮವನ್ನು ಶ್ರೀ ಜಾರಂದಾಯ ದೈವಸ್ಥಾನ ಬೋಳೂರು ಇಲ್ಲಿಯ ಆಂತರಿಕ ಲೆಕ್ಕಪರಿಶೋಧಕರಾದ ವೆಂಕಟೇಶ್ ದಾಸ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷ ನವೀನ ಚಂದ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸುನಿಲ್ ಪಾಲ್ದಡಿ, ಮಾಲಕರು ಶ್ರೀನಿಧಿ ಕನ್ ಸ್ಟ್ರಕ್ಷನ್ ಕೊಟ್ಟಾರ ಮತ್ತು ಕಿರಣ್ ಕುಮಾರ್ ಕೋಡಿಕಲ್ […]
Read More
20-01-2019, 3:47 PM
ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ ಸದಸ್ಯರ ಬಾಂಧವ್ಯಗಳ ಕೊಂಡಿ ಮತ್ತಷ್ಟು ಭದ್ರವಾಗಲಿ ಎಂಬ ಆಶಯದೊಂದಿಗೆ ಬಾಂಧವ್ಯ ಬೆಸುಗೆ-2019 ಯುವವಾಹಿನಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ದಿನಾಂಕ 20/01/2019 ರವಿವಾರದಂದು ಮುಂಜಾನೆಯಿಂದ ಮುಸ್ಸಂಜೆವರೆಗೆ ‘ಕೆರೆಬಿಯನ್ ರೆಸಾರ್ಟ್ ‘ಮೂಲ್ಕಿ ಇಲ್ಲಿ ನಡೆಯಿತು .ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು .ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ,ಸಂಚಾಲಕರಾದ ವಿಮಲಾ ರಾಜೇಶ್ , ಘಟಕದ ಮಾರ್ಗದರ್ಶಕರಾದ ಗಿರಿಧರ್ ಸನಿಲ್ ಉಪಸ್ಥಿತರಿದ್ದರು .ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು .ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ […]
Read More
17-01-2019, 3:15 PM
ವೇಣೂರು : ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಡೆದ 9ನೇ ವರ್ಷದ ಕೋಟಿ- ಚೆನ್ನಯ ಕ್ರೀಡಾಕೂಟದ ಪುರುಷರ ಮತ್ತು ಮಹಿಳೆಯರ ವಿಭಾಗ ದಲ್ಲಿ ಯುವವಾಹಿನಿ ವೇಣೂರು ಘಟಕವು ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ. ಮಹಿಳೆಯರ ವಿಭಾಗದ ಕಬಡ್ಡಿ ಮತ್ತು ಹಗ್ಗಜಗ್ಗಾಟದಲ್ಲಿ ಪ್ರಥಮ, ತ್ರೋಬಾಲ್ನಲ್ಲಿ ದ್ವಿತೀಯ, ಪುರುಷರ ವಿಭಾಗದಲ್ಲಿ ಕಬಡ್ಡಿ ಮತ್ತು ಹಗ್ಗಜಗ್ಗಾಟದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯುವ ಮೂಲಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ರೂ. 13,000 ನಗದು, ಪ್ರಶಸ್ತಿ ಪಡೆದು […]
Read More
14-01-2019, 3:31 PM
ಕಟಪಾಡಿ : ಯುವವಾಹಿನಿ(ರಿ) ಕಟಪಾಡಿ ಘಟಕ, ಜೇಸಿಐ ಕಟಪಾಡಿ, ವಜ್ರ ಜಿಮ್ ಕಟಪಾಡಿ ಮತ್ತು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಇವರ ಸಹಯೋಗದಲ್ಲಿ ದಿನಾಂಕ ಜ.13ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಬೃಹತ್ ರಕ್ತದಾನ ಶಿಬಿರವು ಜರಗಿತು. ಶ್ರೀ ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಸ್ಪತ್ರೆಯ ರಕ್ತದಾನ ವಿಭಾಗದ ಮುಖ್ಯಸ್ಥೆ ವೀಣಾ ಕುಮಾರಿ, ಯುವವಾಹಿನಿ ಕೇಂದ್ರ ಸಮಿತಿಯ ರಮೇಶ್ ಕೋಟ್ಯಾನ್, ಶ್ರೀ […]
Read More
13-01-2019, 4:07 PM
ಬಜ್ಪೆ : ಯುವ ಜನರಲ್ಲಿ ಸ್ವಸ್ಥ ಸಮಾಜದ ಬಗೆಗಿನ ಕಾಳಜಿ, ಸಂಸ್ಕೃತಿ, ಒಳ್ಳೆಯ ಆಚಾರ ವಿಚಾರಗಳು ಹಿರಿಯರಾದ ನಾವು ಅವರಲ್ಲಿ ಸದಾ ಮೇಳೈಸುವಂತೆ ಮಾಡಬೇಕು. ವಿರುದ್ಧ ದಿಕ್ಕಿಗೆ ಮುಖ ಮಾಡಿರುವ ಮನಸ್ಸುಗಳನ್ನು ಮುಖ್ಯವಾಹಿನಿಯತ್ತ ತಿರುಗಿಸಬೇಕು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಸಮಾಜದ ಯುವಕರ ಪಾತ್ರ ಇನ್ನಷ್ಟು ಹಿರಿದಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿಯಂತಹ ಘಟಕಗಳು ಮುಖ್ಯ ಪಾತ್ರವಹಿಸುತ್ತಿರುವುದು ಶ್ಲಾಘನೀಯ, ಇಂತಹ ಸ್ತುತ್ಯರ್ಹ ಕಾರ್ಯಗಳು ಇನ್ನೂ ಪರಿನಾಮಕಾರಿಯಾಗಲಿ ಎಂದು ನಳಿನಾದೇವಿ ಎಂ. ಆರ್. ಇವರು ದಿನಾಂಕ 13.01.2019ರಂದು ಬಜ್ಪೆ ಬ್ರಹ್ಮಶ್ರೀ […]
Read More
12-01-2019, 4:40 AM
ಮಾಣಿ : ಯುವವಾಹಿನಿಯು ವಿದ್ಯೆ,ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯ ವಾಕ್ಯದೊಂದಿಗೆ ಚಿರಪರಿಚಿತವಾಗಿದೆ. ಈ ನೆಲೆಯಲ್ಲಿ ಆಸಕ್ತರಿಗೆ ಸಹಾಯ ಮಾಡಲು ಯುವವಾಹಿನಿ(ರಿ) ಮಾಣಿ ಘಟಕದ ವತಿಯಿಂದ ಕಳೆದ ಬಾರಿ ರೂಪುಗೊಂಡ ಯೋಜನೆಯೇ ಸ್ಪಂದನ. ಬರಿಮಾರು ಗ್ರಾಮದ ಮುಳ್ಳಿಬೈಲು ಬೆಟ್ಟು ಮನೆಯಲ್ಲಿ ವಾಸವಾಗಿರುವ ಗಣೇಶ ಮತ್ತು ರೂಪ ದಂಪತಿಗಳ ಒಂದೂವರೆ ವರ್ಷದ ಮಾಸ್ಟರ್ ಜೀವಿತ್ ಎಂಬ ಮಗುವಿಗೆ ಮಾತನಾಡಲು ಆಗದೆ,ತಲೆ ಎತ್ತಲು ಆಗದೆ,ನಡೆದಾಡಲು ಆಗದೆ, ದ್ರಷ್ಟಿ ಮಂದ ವಾದ ಕಾರಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮಗುವಿನ ಮೆದುಳಿಗೆ […]
Read More
06-01-2019, 3:53 PM
ಕೆಂಜಾರು-ಕರಂಬಾರು : ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶದೊಂದಿಗೆ ಸಮಾಜ ಸಾಧಕರನ್ನು ಗುರುತಿಸುವ, ವಿದ್ಯಾರ್ಜನೆ ಹಾಗೂ ಅಶಕ್ತರಿಗೆ ನೆರವು ನೀಡುವ ಮೂಲಕ ಯುವವಾಹಿನಿ ಕೆಂಜಾರು-ಕರಂಬಾರು ಘಟಕ ಸಮಾಜ ಮುಖೀಯಾಗಿದೆ. ಕುಟುಂಬ ಹಾಗೂ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು. ಕೆಂಜಾರು-ಕರಂಬಾರಿನ ಶ್ರೀದೇವಿ ಭಜನ ಮಂದಿರದಲ್ಲಿ ದಿನಾಂಕ 06.01.2019 ರಂದು ನಡೆದ ಯುವ ವಾಹಿನಿ ಕೆಂಜಾರು-ಕರಂಬಾರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಬಿಲ್ಲವ ಸೇವಾ ಸಂಘ […]
Read More
25-12-2018, 5:03 PM
ಉಪ್ಪಿನಂಗಡಿ : ದಿನಾಂಕ 25-12-2018ನೇ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆ ಹಿರಿಯ ಪ್ರಾರ್ಥಮಿಕ ಶಾಲೆ ಆಲಂತಾಯದಲ್ಲಿ ಯುವವಾಹಿನಿ (ರಿ) ಉಪ್ಪಿನಂಗಡಿ ಘಟಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಅರೋಗ್ಯ ಶಿಬಿರ ನಡೆಯಿತು. ಇದರ ಪ್ರಯೋಜನವನ್ನು ಸುಮಾರು ನೂರೈವತ್ತಕ್ಕಿಂತಲೂ ಹೆಚ್ಚು ಜನ ಪಡೆದುಕೊಂಡರು. ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾರ್ಥಮಿಕ ಶಾಲೆ ಆಲಂತಾಯ ಇದರ ಮುಖ್ಯ ಗುರುಗಳಾದ ಶ್ರೀ ವೈ.ಸಾಂತಪ್ಪ ಇವರು […]
Read More