Yuvavahini

ಇತರೆ

ಯುವಕರನ್ನು ಒಗ್ಗೂಡಿಸುವ ಕಾರ್ಯ ಯುವವಾಹಿನಿಯಿಂದ ಮಾತ್ರ ಸಾಧ್ಯ :- ಸುಧೀರ್ ಕುಮಾರ್

ಕ್ರ್ರೀಯಾಶೀಲ ಯುವಕರ ತಂಡ ಪಡುಬಿದ್ರೆ ಯುವವಾಹಿನಿಯು ಈ ಪರಿಸರದಲ್ಲಿ ನಿರಂತರ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಯುವಕರನ್ನು ಒಗ್ಗೂಡಿಸುವ ಕಾರ್ಯ ಅದು ಯುವವಾಹಿನಿಯಿಂದ ಮಾತ್ರ ಸಾಧ್ಯ ಎಂದು ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ತಿಳಿಸಿದರು. ಅವರು ದಿನಾಂಕ 18.06.2017 ರಂದು ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಯುವವಾಹಿನಿ (ರಿ) ಪಡುಬಿದ್ರೆ ಘಟಕದ 2017-18 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಪಡುಬಿದ್ರೆ ಘಟಕದ ಮಾಜಿ […]

Read More

ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ದಿನಾಂಕ 18.06.2017 ರಂದು ಅಮ್ರತಾನಂದಮಯಿ ಟ್ರಸ್ಟ್ ಇದರ ಸಹಯೋಗದೊಂದಿಗೆ ಮಂಗಳೂರಿನ ಉರ್ವಾಸ್ಟೊರ್, ಕೊಟ್ಟಾರ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸುಪ್ರೀತಾ ಪೂಜಾರಿ,ಕಾರ್ಯದರ್ಶಿ ಸುನೀತಾ,ಉಪಾಧ್ಯಕ್ಷರಾದ ರಶ್ಮಿ ಚಂದ್ರಶೇಖರ್,, ವಸಂತಿ, ಶರ್ಮಿಳಾ, ಕುಶಲಾ ಯಶವಂತ್, ಸುರೇಖಾ,ಶುಭಾ ರಾಜೇಂದ್ರ, ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ಉಮಾಶ್ರೀಕಾಂತ್ ಮತ್ತಿತರರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು

Read More

ಜೀವನವನ್ನು ಯಶಸ್ವೀಗೊಳಿಸಲು ಕಲಿಸುವುದೇ ನಿಜವಾದ ಶಿಕ್ಷಣ :: ಕೇಶವ ಬಂಗೇರ

“ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಟಾಪರ್ಸ್ ಎಲ್ಲಿದ್ದಾರೆ? ಜೀವನದಲ್ಲಿ ಯಶಸ್ವಿಗೊಂಡರೇ.? ಟಾಪರ್ಸ್ ಎನಿಸಿಕೊಂಡಿರುವ ಕರಾವಳಿಯ ವಿದ್ಯಾರ್ಥಿಗಳು ನಮ್ಮ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಐಎಎಸ್, ಐಪಿಎಸ್, ಇನ್ನಿತರ ಸಮಾಜದ ಉನ್ನತ ವiಟ್ಟದ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಯೋಚಿಸುವ ಅಗತ್ಯವಿದೆ” ಎಂದು ನಗರದ ಶ್ರೀ ನಾರಾಯಣಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಬಂಗೇರರವರು ಅಭಿಪ್ರಾಯ ವ್ಯಕ್ತ ಪಡೆಸಿದರು. ಅವರು ದಿನಾಂಕ ಮಂಗಳೂರು ಉಜ್ಜೋಡಿಯ ಶ್ರೀ ಮಹಾಂಕಾಳಿ ದೈವಸ್ಥಾನ ವಠಾರದಲ್ಲಿ ಯುವವಾಹಿನಿ ಕಂಕನಾಡಿ ಘಟಕದ ಆಶ್ರಯದಲ್ಲಿ […]

Read More

ಸಂಸ್ಕ್ರತಿ ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ಯುವವಾಹಿನಿ ಮಹತ್ತರ ಪಾತ್ರ ವಹಿಸಿದೆ : ಶೈಲು ಬಿರ್ವ

ಬಿಲ್ಲವರು ತಮ್ಮದೇ ಆದ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಈ ತುಳುನಾಡಿನ ಮೂಲ ಜನಾಂಗಗಳಲ್ಲಿ ಒಬ್ಬರಾಗಿ ಸಂಪ್ರದಾಯಗಳನ್ನು ಉಳಿಸಿಕೊಂಡು ಬರುತ್ತಿದ್ದಾರೆ”. ಈ ಸಂಸ್ಕೃತಿಯನ್ನು ಉಳಿಸುವಲ್ಲಿ ಯುವವಾಹಿನಿಯೂ ಸಹ ಅವಿರತವಾಗಿ 30 ವರ್ಷಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದು ಶೈಲು ಬಿರ್ವ ಅಗತ್ತಾಡಿ ತಿಳಿಸಿದರು. ಅವರು ದಿನಾಂಕ 11.06.2017 ರಂದು ಅಡ್ವೆ ಆನಂದಿ ಸಭಾ ಭವನದಲ್ಲಿ ಜರುಗಿದ ಯುವವಾಹಿನಿ ಅಡ್ವೆ ಘಟಕದ ಪದಗ್ರಹಣದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷರಾದ […]

Read More

ಮಂಗಳೂರು ಮಹಿಳಾ ಘಟಕದಿಂದ ಕ್ಷೇತ್ರ ದರ್ಶನ

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದಿಂದ ದಿನಾಂಕ 11.06.2017ರಂದು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲಾಯಿತು.ಮಂದಾರ್ತಿ ದುರ್ಗಾಪರಮೇಶ್ವರಿ, ಗುಡ್ಡೇಟ್ಟು ಗುಹಾಲಯ,ಉದ್ಭವ ಮಹಾಗಣಪತಿ ದೇವಸ್ಥಾನ, ಕಮಲಶಿಲೆಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂತಾದ ದೇವಸ್ಥಾನಗಳಿಗೆ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ಬೇಟಿನೀಡಿದರು. ಸಂಪರ್ಕದ ನೆಲೆಯಲ್ಲಿ ಈ ಪ್ರವಾಸ ಯಶಸ್ವಿಯಾಗಿದೆ ಎಂದು ಕ್ಷೇತ್ರ ದರ್ಶನ ಕಾರ್ಯಕ್ರಮದ ಸಂಚಾಲಕರಾದ ಶ್ರೀಮತಿ ವಸಂತಿ ಬಿ ಹಾಗೂ ಶಶಿಕಲಾ ಅರ್ ತಿಳಿಸಿದ್ದಾರೆ.

Read More

ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಮಾಹಿತಿ ಕಾರ್ಯಾಗಾರ

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಮಾಹಿತಿ ಕಾರ್ಯಾಗಾರ ದಿನಾಂಕ 10.06.2017 ರಂದು ಮಂಗಳೂರಿನ ಉರ್ವಾಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು ಸಂಚಾರಿ ನಿಯಂತ್ರಣ ಮತ್ತು ನಿಯಮಗಳ ಬಗ್ಗೆ ಮಂಗಳೂರು ಉತ್ತರ ವಲಯದ ಪೋಲಿಸ್ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀ ಮಂಜುನಾಥ್ ಅವರು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ಆರ್ಥಿಕ ವಾಗಿ ಹಿಂದುಳಿದ ಮೂರು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು.ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸಲಹೆಗಾರರಾದ ಟಿ.ಶಂಕರ ಸುವರ್ಣ, […]

Read More

ನೊಂದ ಎಳೆ ಮನಸ್ಸುಗಳಿಗೆ ಯುವವಾಹಿನಿ ಮಾತೆಯರ ಸಾಂತ್ವನ

ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಎಚ್ ಐ ವಿ ಜತೆ ಬದುಕುವ ಮಕ್ಕಳ ಆಶ್ರಯ ತಾಣ ಸಂವೇದನಾಗೆ 03.06.2017 ರಂದು ಭೇಟಿ ನೀಡಿದರು ಆಶ್ರಯತಾಣದ ಮಕ್ಕಳೊಂದಿಗೆ ಬೆರೆತು ಅವರ ಯೋಗ ಕ್ಷೇಮ ವಿಚಾರಿಸಿದರು. ಮಕ್ಕಳಿಗೆ ಉಪಹಾರ,ಸಿಹಿತಿಂಡಿ, ದಿನಸಿ ಸಾಮಗ್ರಿ ಹಾಗೂ ರೂ.2500/- ಮಹಿಳಾ ಘಟಕದ ವತಿಯಿಂದ ನೀಡಲಾಯಿತು. ಯುವವಾಹಿನಿ ಮಂಗಳೂರು ಮ ಹಿಳಾ ಘಟಕದ ಅಧ್ಯಕ್ಷೆ ಸುಪ್ರೀತ ಪೂಜಾರಿ, ಕಾರ್ಯದರ್ಶಿ ಸುನೀತಾ, ಉಪಾದ್ಯಕ್ಷೆ ರಶ್ಮಿ ಚಂದ್ರಶೇಖರ್ , ವಸಂತಿ ಬಿ,ಶುಭ ರಾಜೇಂದ್ರ, ಸುರೇಖ,ಕುಶಲಾಕ್ಷಿ ಯಶವಂತ್, ಶರ್ಮಿಳ […]

Read More

ಯುವವಾಹಿನಿ ಸಭಾಂಗಣ ಉದ್ಘಾಟನೆ

ಯುವವಾಹಿನಿಯು ಶಿಸ್ತುಬದ್ದ ಸಂಘಟನೆಯಾಗಿ ಕಳೆದ 30 ವರ್ಷಗಳಲ್ಲಿ ಸಮಾಜಮುಖಿ ಕಾರ್ಯಗಳ ಮೂಲಕ ಬಿಲ್ಲವ ಸಮಾಜದ ಪ್ರಬುದ್ಧ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಕರ್ನಾಟಕ  ಹೈಕೋರ್ಟು ಸರಕಾರಿ ವಕೀಲರಾದ ಇರುವೈಲ್ ತಾರನಾಥ ಪೂಜಾರಿ ತಿಳಿಸಿದರು ಅವರು ಮಂಗಳೂರು ನಗರದ ಹೃದಯ ಭಾಗವಾದ ಉರ್ವಸ್ಟೋರ್ ರಘು ಬಿಲ್ಡಿಂಗ್ ನಲ್ಲಿ ದಿನಾಂಕ 28.05.2017 ರಂದು ಅತ್ಯಂತ ಸುಸಜ್ಜಿತವಾದ ಹಾಗೂ ವಿಶಾಲವಾದ ಯುವವಾಹಿನಿ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೇರಳ ವರ್ಕಳದ ಶಿವಗಿರಿ ಮಠದ ಪರಮಪೂಜ್ಯ ಶ್ರೀ ಶ್ರೀ […]

Read More

ಯುವಕಲೋತ್ಸವದಲ್ಲಿ ಸಸಿಹಿತ್ಲು ಯುವವಾಹಿನಿ ತೃತೀಯ ಬಹುಮಾನ

ಮಂಗಳೂರು ತಾಲೂಕು ವ್ಯಾಪ್ತಿಯ ಯುವವಾಹಿನಿ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ ಯುವ ಕಲೋತ್ಸವ ದಿನಾಂಕ 28.05.2017 ನೇ ಆದಿತ್ಯವಾರ ಮಂಗಳೂರು ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. ಯುವವಾಹಿನಿಯ ನೂತನ ಸಭಾಂಗಣ ಹಾಗೂ ಕಛೇರಿಯ ಉದ್ಘಾಟನೆಯ ಸವಿನೆನಪಿಗಾಗಿ ಯುವ ಕಲೋತ್ಸವ ಸಾಂಸ್ಕೃತಿಕ  ಸ್ಪರ್ಧೆ ನಡೆಸಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ   ಒಟ್ಟು 8 ಯುವವಾಹಿನಿ ಘಟಕಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ರಮೇಶ್ ಕಲ್ಮಾಡಿ,ಜಗನ್ ಪವಾರ್ ಬೇಕಲ್,ಶ್ರೀಮತಿ ರತ್ನಾವತಿ ಬೈಕಾಡಿ,ಶ್ರೀಮತಿ ಮಲ್ಲಿಕಾ ಸಿದ್ದಕಟ್ಟೆ ತೀರ್ಪುಗಾರರಾಗಿ ಸಹಕಾರ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!