28-07-2024, 5:29 AM
ಮಂಗಳೂರು: ಯುವವಾಹಿನಿ(ರಿ) ಕೊಲ್ಯ ಘಟಕದ ವತಿಯಿಂದ ತಾ. 28-07-2024 ರ ಆದಿತ್ಯವಾರ ಬ್ರಹ್ಮ ಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ವಾರದ ಪೂಜೆಯನ್ನು ನೆರವೇರಿಸಲಾಯಿತು. ಘಟಕದ ಸದಸ್ಯರು ಮೊದಲು ಗುರು ಭಜನೆಯಲ್ಲಿ ಭಾಗವಹಿಸಿ ಗುರುವಿನ ಸ್ತುತಿ ಮಾಡಿದರು. ಭಜನೆ ನಂತರ ಮಂಗಳಾರತಿ ನೆರವೇರಿಸಿ ಘಟಕದ ಅಧ್ಯಕ್ಷರಾದ ಸುಧಾ ಸುರೇಶ್ ಘಟಕದ ಪರವಾಗಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ ಜಗಜೀವನ್ ಕೊಲ್ಯ, ಕೋಶಾಧಿಕಾರಿ ಲತೀಶ್ ಪಾಪುದಡಿ, ಸ್ಥಾಪಕ ಅಧ್ಯಕ್ಷರಾದ ಸುರೇಶ್ ಬಿ, ನಿಕಟಪೂರ್ವ ಅಧ್ಯಕ್ಷರಾದ ಲತೀಶ್ ಎಂ […]
Read More
07-07-2024, 4:59 PM
ಕೊಲ್ಯ: ಯುವವಾಹಿನಿಯಿಂದ ನಮಗೇನು ಸಿಗುತ್ತದೆ ಎನ್ನುವುದರ ಬದಲು ಯುವವಾಹಿನಿಗೆ ಸೇರಿ ನಾವು ಏನನ್ನು ಪಡೆಯಬಹುದು, ಹೇಗೆ ಬೆಳೆಯಬಹುದು, ಆ ಮೂಲಕ ಸಮಾಜಕ್ಕೆ ಯಾವ ರೀತಿಯ ಕೊಡುಗೆ ನೀಡಬಹುದು ಇಂತಹ ಮನೋಚಿಂತನೆಯನ್ನು ಸದಸ್ಯರಾಗಿ ಸೇರುವ ಯುವವಾಹಿನಿ ಬಂಧುಗಳು ಬೆಳೆಸಿಕೊಳ್ಳಬೇಕೆಂದು ಯುವವಾಹಿನಿ ( ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಶ್ರೀ ನರೇಶ್ ಸಸಿಹಿತ್ಲು ತಿಳಿಸಿದರು. 07-07-2024ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣ ಕೊಲ್ಯದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕಕ್ಕೆ ಹೊಸ ಸದಸ್ಯರಾಗಿ ಸೇರ್ಪಡೆಗೊಂಡವರಿಗೆ ಯುವವಾಹಿನಿ ಸಂಘಟನೆಯ ಬಗ್ಗೆ ಮಾಹಿತಿಯನ್ನು […]
Read More
30-06-2024, 4:55 PM
ಕೊಲ್ಯ: ಅಂದು ರವಿವಾರ, ಮೂಡಣದ ಆಗಸದ ತುಂಬಾ ಕರಿಮುಗಿಲು ಮುಸುಕಿತ್ತು. ಬಾನ ಭಾಸ್ಕರ ಮೋಡಗಳ ಮರೆಯಲ್ಲಿ ಎಲ್ಲೋ ಮರೆಯಾಗಿದ್ದ. ಧೋ….ಎಂದು ಸುರಿಯುತ್ತ ವರುಣ ದೇವ ವಸುಂಧರೆಯ ಮಡಿಲಿನಲ್ಲಿ ಜೋರಾಗಿ ಆರ್ಭಟಿಸುತ್ತಿದ್ದ. ಕೆಸರುಗದ್ದೆಯಲ್ಲಿ ಆಡಲು ಅಣಿಯಾಗಿದ್ದ ಯುವವಾಹಿನಿ ಸದಸ್ಯರು ಹಾಗೂ ಸದಸ್ಯರ ಮಕ್ಕಳಲ್ಲಿ ವರ್ಷಧಾರೆ ನಿಲ್ಲಬಹುದೆ ಎನ್ನುವ ಒಂದು ರೀತಿಯ ಆತಂಕ ಮನೆಮಾಡಿತ್ತು. ಕೊನೆಗೂ ಹತ್ತು ಗಂಟೆಯ ನಂತರ ವರುಣದೇವ ಶಾಂತನಾಗಿ ನಮ್ಮೆಲ್ಲರಲ್ಲೂ ಭರವಸೆಯ ಆಶಾಕಿರಣ ಮೂಡಿಸಿದ. ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ದಿನಾಂಕ 30/06/2024 ಭಾನುವಾರದಂದು […]
Read More
05-06-2024, 2:47 PM
ಕೊಲ್ಯ: ಈ ಭೂಮಿ ಮೇಲೆ ಪ್ರಕೃತಿ ನಮಗೆ ತಾಯಿ ಇದ್ದಂತೆ, ನಮ್ಮ ಮನೆಯಲ್ಲಿ ನಮ್ಮ ಅಮ್ಮನನ್ನು ಆರೈಕೆ ಮಾಡುವಂತೆ ನಾವು ಗಿಡ ಮರಗಳನ್ನು ಉಳಿಸಿ ಬೆಳೆಸಿ, ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಪರಿಸರವನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೋಡಲು ಸಾಧ್ಯ ಎಂದು ಪರಿಸರ ಪ್ರೇಮಿ, ವೃಕ್ಷ ತಪಸ್ವಿ ಮಾಧವ ಉಳ್ಳಾಲ್ ಅಭಿಪ್ರಾಯಪಟ್ಟರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಯುವವಾಹಿನಿ(ರಿ.) ಕೊಲ್ಯ ಘಟಕದ ಸಾಪ್ತಾಹಿಕ ಸಭೆಯಲ್ಲಿ, ಪರಿಸರ ಸಂರಕ್ಷಣೆಯಲ್ಲಿ ನಾಗರೀಕರ ಕರ್ತವ್ಯದ ಕುರಿತು, ಕಳೆದ […]
Read More
19-05-2024, 3:06 PM
ಕೊಲ್ಯ: ಯುವವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಒಂದು ದಿನದ ಕುಟುಂಬ ಮಿಲನಕ್ಕೆ 68 ಸದಸ್ಯ ಬಂಧುಗಳ ತಂಡ, ದಿನಾಂಕ 19-05-2024ನೇ ರವಿವಾರದಂದು ಬೆಳಿಗ್ಗೆ 7.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದ ಮುಂದೆ ಪ್ರಾರ್ಥನೆಯನ್ನು ಸಲ್ಲಿಸಿ, ಹಿರಿಯರು, ಕಿರಿಯರು, ಮಕ್ಕಳೆಲ್ಲರ ಜೊತೆಗೆ ಬ್ರಹ್ಮಾವರದ ರಿಲ್ಯಾಕ್ಸ್ ಪಾರ್ಕ್ ಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು. ಘಟಕದ ಅಧ್ಯಕ್ಷರು ಪ್ರವಾಸಕ್ಕೆ ಬಂದಿದ್ದ ಸರ್ವ ಬಂಧುಗಳನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರವಾಸದ ತಾಣ ತಲುಪುವವರೆಗೂ ಬಸ್ಸಿನಲ್ಲಿ ಹಾಡು, ಅಂತ್ಯಾಕ್ಷರಿಗಳ ರಸದೌತಣವನ್ನು ಯುವವಾಹಿನಿ ಬಂಧುಗಳು ಉಣಬಡಿಸಿದರು. ಈ ಗುಂಗಿನಲ್ಲೇ […]
Read More
15-05-2024, 1:45 PM
ಕೊಲ್ಯ: ಬೇಸಿಗೆ ಶಿಬಿರಗಳು ಮಕ್ಕಳ ಸೃಜನಾತ್ಮಕ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಮಕ್ಕಳು ಮೊಬೈಲ್, ಟಿವಿಯಿಂದ ಹೊರಗಡೆ ಬಂದು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಹವ್ಯಾಸ ಉತ್ತಮಪಡಿಸಲು ಸಹಕಾರಿಯಾಗಲಿದೆ ಎಂದು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ .ಕೆ. ಪೂಜಾರಿ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೊಲ್ಯ ಘಟಕದ ನೇತೃತ್ವದಲ್ಲಿ, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಕೊಲ್ಯ ಇವರ ಸಹಕಾರದಲ್ಲಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ 15-05-2014 ರಿಂದ 18-05-2024ರ ವರೆಗೆ ನಾಲ್ಕು ದಿನಗಳ ಕಾಲ […]
Read More
15-05-2024, 1:32 PM
ಕೊಲ್ಯ: ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ, ಇಂತಹ ಶಿಬಿರಗಳಿಂದ ಮಕ್ಕಳಿಗೆ ಹೊಸ ಚೈತನ್ಯ ಶಕ್ತಿ ದೊರಕುತ್ತದೆ. ಈ ನಿಟ್ಟಿನಲ್ಲಿ ಯುವವಾಹಿನಿ ಕೊಲ್ಯ ಘಟಕದ ಕಾರ್ಯಕ್ರಮ ಅಭಿನಂದನೆಗೆ ಅರ್ಹ ಎಂದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ಧಾರ್ಮಿಕ ಗುರುಗಳಾದ ಡಾ. ಅರುಣ್ ಉಳ್ಳಾಲ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೊಲ್ಯ ಘಟಕದ ನೇತೃತ್ವದಲ್ಲಿ, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಕೊಲ್ಯ ಇವರ ಸಹಯೋಗದಲ್ಲಿ, […]
Read More
13-03-2024, 5:02 PM
ಕೊಲ್ಯ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ 13-03-2024 ರಂದು ಯುವವಾಹಿನಿ(ರಿ.) ಕೊಲ್ಯ ಘಟಕದ ಸಾಪ್ತಾಹಿಕ ಸಭೆಯಂದು ಘಟಕದ ಮಹಿಳಾ ಸದಸ್ಯರಿಗೆ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಸದಸ್ಯರಿಗೆ ವಿವಿಧ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಸದಸ್ಯರಿಗೆ ಅಂತರ್ಜಾಲದಲ್ಲಿ ನಾರಿಯರಿಗೊಂದು ಸವಾಲು ರಸ ಪ್ರಶ್ನೆ ಸ್ಪರ್ಧೆ ನಡೆಸಲಾಗಿತ್ತು. ಕೊಲ್ಯ ಘಟಕದ ಕಾರ್ಯದರ್ಶಿ ಜೀವನ್ ಕೊಲ್ಯ ಮಹಿಳೆಯರಿಗೆ ಅಂತರ್ಜಾಲ ಸ್ಪರ್ಧೆ ನಡೆಸಿಕೊಟ್ಟರು. ಮಹಿಳಾ ಸಾಧಕರ ಕುರಿತಾಗಿ ಗಂಟೆಗೊಂದು ಪ್ರಶ್ನೆಗಳನ್ನು ಗುಂಪಿನಲ್ಲಿ ಹಾಕಿ ವೇಗವಾಗಿ ಸರಿಯಾದ ಉತ್ತರ ನೀಡಿದ […]
Read More
10-03-2024, 5:41 PM
ಕೊಲ್ಯ : “ಮೇಲಕ್ಕೆ ಎಸೆಯಲ್ಪಟ್ಟ ಮಗುವಿಗೆ ಅಮ್ಮ ಹಿಡಿಯುತ್ತಾಳೆಂಬ ಬಲವಾದ ನಂಬಿಕೆ ಇರುವಂತೆ ಮ್ಯೂಚುವಲ್ ಫಂಡ್ ಹಣ ಹೂಡಿಕೆಯಲ್ಲಿ ನಂಬಿಕೆಯೇ ಬಹು ದೊಡ್ಡ ಭದ್ರತೆ” ನಮಗೆ ಬರುವ ಆದಾಯದಲ್ಲಿ ಮೊದಲು ಒಂದಿಷ್ಟು ಉಳಿತಾಯ ಮಾಡಿ ನಂತರ ನಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಿದರೆ ಮುಂದೆ ಹಣಕಾಸು ನಿರ್ವಹಣೆ ಕ್ಷೇತ್ರದಲ್ಲಿ ಉತ್ತಮ ಹೂಡಿಕೆದಾರರಾಗಲು ಸಾಧ್ಯ ಎಂದು ಬೆಂಗಳೂರು ಮೂಲದ ಖ್ಯಾತ ಸಂಪನ್ಮೂಲ ವ್ಯಕ್ತಿ ಡಾ. ಬಾಲಾಜಿ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಹೂಡಿಕೆ ಕ್ಷೇತ್ರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಕಾಲದಲ್ಲಿ ಯಾವ […]
Read More
23-02-2024, 3:27 PM
ಯುವವಾಹಿನಿ(ರಿ.) ಕೊಲ್ಯ ಘಟಕದ ವತಿಯಿಂದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ದಿನಾಂಕ 23-02-2024ನೇ ಶುಕ್ರವಾರದಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಾನೂನು ಮತ್ತು ಶಿಸ್ತಿನ ಅರಿವು ಮುಗ್ದ ಮನಗಳೊಂದಿಗೆ ಒಲವಿನ ಸಂವಾದ ಎಂಬ ಕಾರ್ಯಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಪಟ್ಟು ಶಾಲಾ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಸುಸಂದರ್ಭದಲ್ಲಿ ಆನಂದಾಶ್ರಮ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗುರುಮೂರ್ತಿ ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳು ತಮ್ಮ ಜೀವನದಲ್ಲಿ ಬಹಳ ಅಗತ್ಯವಾಗಿ ಅಳವಡಿಸಿಕೊಳ್ಳಬಹುದಾದ ಮೌಲ್ಯಯುತವಾದ ಕಾರ್ಯಕ್ರಮವೆಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಡಿ. ಸುವರ್ಣ […]
Read More