17-09-2017, 3:27 PM
ಯುವವಾಹಿನಿ (ರಿ) ಕೊಲ್ಯ ಘಟಕದ ಕುಟುಂಬ ಸದಸ್ಯರ ಪುಣ್ಯ ಕ್ಷೇತ್ರಗಳ ಒಂದು ದಿನದ ಪ್ರವಾಸ ದಿನಾಂಕ 17.09.2017 ರಂದು ಜರುಗಿತು. 58 ಸದಸ್ಯರ ಯುವವಾಹಿನಿ ಕೊಲ್ಯ ಘಟಕದ ಕುಟುಂಬ ಸದಸ್ಯರು ಬಪ್ಪನಾಡು ಕ್ಷೇತ್ರ, ಹಲವು ಮಕ್ಕಳ ತಾಯಿ ದೇವಸ್ಥಾನ, ಹಟ್ಟಿಯಂಡಿ ಗಣಪತಿ, ಕೊಲ್ಲೂರು ಮೂಕಾಂಬಿಕಾ, ಮುರುಡೇಶ್ವರ ಮುಂತಾದ ಪ್ರಸಿದ್ಧ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡರು. ಈ ಪ್ರವಾಸದ ಕ್ಷಣ ಕ್ಷಣದ ಸವಿನೆನಪು ಎಲ್ಲರಲ್ಲೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.
Read More
26-02-2017, 10:48 AM
ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ 24ನೇ ನೂತನ ಘಟಕ ಯುವವಾಹಿನಿ(ರಿ) ಕೊಲ್ಯ ಘಟಕವು 26 ಫೆಬ್ರವರಿ 2017ನೇ ಆದಿತ್ಯವಾರ ಮಂಗಳೂರಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕೊಲ್ಯ ಸೋಮೇಶ್ವರದಲ್ಲಿ ಉದ್ಘಾಟನೆಗೊಂಡಿತು. ಕೊಲ್ಯ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾದ್ಯಕ್ಷ ಡಾ.ಪಿ ರಾಮಾನುಜಂ ದೀಪ ಬೆಳಗುವುದರ ಮೂಲಕ ಕೊಲ್ಯ ಘಟಕವನ್ನು ಉದ್ಗಾಟಿಸಿ ಶುಭ ಹಾರೈಸಿದರು. ನಮ್ರತಾಭಾವ ಉನ್ನತಿಗೆ ಕಾರಣವಾಗುತ್ತದೆ. ಅಹಂಭಾವ ತೊರೆದು ಹಿರಿಯರಿಗೆ ಸಮಾಜಕ್ಕೆ ತಗ್ಗಿ ಬಗ್ಗಿ ನಡೆಯುವ ಸುಸಂಸ್ಕೃತ ಗುಣ ಹೊಂದಿರುವ ಸ್ವಾರ್ಥರಹಿತ ನಿಷ್ಪಕ್ಷಪಾತ ಶಿಸ್ತುಬದ್ದ ಯುವಕರ […]
Read More
26-02-2017, 7:24 AM
ಯುವವಾಹಿನಿ 24ನೇ ಘಟಕವಾಗಿ ಅಸ್ತಿತ್ವಕ್ಕೆ ಬಂದ ಕೊಲ್ಯ ಘಟಕದ ಪದಗ್ರಹಣ ಸಮಾರಂಭವು ಫೆಬ್ರವರಿ 26 ರಂದು ಕೊಲ್ಯ ಶ್ರೀ ನಾರಾಯಣಗುರು ಮಂದಿರದಲ್ಲಿ ಜರಗಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ಮಾಡಿದರು. ಸುರೇಶ್ ಬಿ. ನೇತೃತ್ವದ 12 ಸದಸ್ಯರ ಕ್ರಿಯಾಶೀಲ ಯುವಕರ ತಂಡವು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ ಅದ್ಯಕ್ಷರು : ಸುರೇಶ್ ಬಿ ಉಪಾಧ್ಯಕ್ಷರು : ರವಿ ಕೊಂಡಾಣ ಕಾರ್ಯದರ್ಶಿ : ಲತೀಶ್ ಎಂ ಸಂಕೊಳಿಗೆ […]
Read More