ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ-2014
24-02-2017, 11:50 AM
24-02-2017, 8:51 AM
ಒಂದೇ ಸಸಿಯನ್ನು ಬೇರೆ ಬೇರೆ ನೆಲದಲ್ಲಿ ನೆಟ್ಟಾಗ ಅದರ ಫಲದ ಉತ್ಪಾದನೆ ಮತ್ತು ಸಸಿಯ ಬೆಳವಣಿಗೆ ಬೇರೆ ಬೇರೆಯಾಗಿ ಇರುವುದನ್ನು ಕಾಣುತ್ತೇವೆ. ಅಲ್ಲದೆ ಕೃಷಿಕರು ಈ ಸಲ ಇಂತಹ ಬೆಳೆಗೆ ಯೋಗ್ಯವಾಗಿದೆ ಎನ್ನುತ್ತಾರೆ. ಕಾರಣ ಕೇಳಿದರೆ ಈ ಸಲ ಮರಳು ಮಿಶ್ರಿತ, ಕೆಂಪು ಬಣ್ಣದ್ದು ಕಪ್ಪು ಬಣ್ಣದ್ದು ಎಂದು ವಿವರಿಸುತ್ತಾರೆ. ಇದರಿಂದ ನಮಗೆ ಸ್ಪಷ್ಟವಾಗುವುದೆಂದರೆ ಈ ಭೂಮಿ ಈ ಪರಿಸರ ಕೂಡ ಸಸಿಯ ಬೆಳವಣಿಗೆಗೆ ಅಗತ್ಯವಾಗಿದೆ ಎನ್ನುವುದು ಈ ಮಾತನ್ನು ಮನುಷ್ಯರಿಗೂ ಅನ್ವಯಿಸಬಹುದಾಗಿದೆ. ದೇಶದಲ್ಲಿ ಬೇರೆ ಬೇರೆ […]
19-02-2017, 11:25 AM
ದೇಯಿ ಬೈದ್ಯೆತಿ ಕೋಟಿ ಚಿನ್ನಯ್ಯ ಮೂಲ ಸ್ಥಾನ ಗೆಜ್ಜೆಗಿರಿ ನನ್ನ ಬಿತ್ತಿಲ್‌ನಲ್ಲಿ 2017 ರ ಫೆಬ್ರವರಿ 19 ರಂದು ಶಿಲಾನ್ಯಾಸ ಕಾರ್ಯಕ್ರಮ ಪೂರ್ವಭಾವಿಯಾಗಿ ಅಂದು ಬೆಳಿಗ್ಗೆ ಪುತ್ತೂರಿನಿಂದ ಆರಂಭಗೊಂಡ ವಾಹನ ಜಾಥಾವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಉದ್ಘಾಟಿಸಿದರು. ಉಡುಪಿ, ದಕ್ಷಿಣ ಕನ್ನಡ, ಹಾಗೂ ಕಾಸರಗೋಡು ಭಾಗಗಳಿಂದ ಬಂದಿದ್ದ ವಾಹನ ಜಾಥಾ ಪುತ್ತೂರು ದರ್ಬೆ ಬೈಪಾಸ್ ಜಂಕ್ಷನ್ ಇಲ್ಲಿ ಸಮಾವೇಶಗೊಂಡಿತು. ಅಲ್ಲಿಂದ ಒಟ್ಟಾಗಿ ಗೆಜ್ಜೆಗಿರಿಗೆ ತೆರಳುವ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು. ಐದು ಶತಮಾನಗಳ ಇತಿಹಾಸದ […]
19-02-2017, 7:17 AM
ಸಮಾಜದಲ್ಲಿ ಅಧರ್ಮ ತುಂಬಿದ್ದ ಸಂದರ್ಭ ಶಸ್ತ್ರಬಲದ ಮೂಲಕ ಧರ್ಮ ಸ್ಥಾಪನೆ ಮಾಡಿದ ಕೋಟಿ ಚೆನ್ನಯರು ರಾಮ-ಲಕ್ಷ್ಮಣರಿಗೆ ಸಮಾನರು ’ವಸುಧೈವ ಕುಟುಂಬಕಂ’ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆಶಯದಂತೆ ಶಾಂತಿ ನೆಲೆಸಬೇಕಾದರೆ ಧರ್ಮ ಕ್ಷೇತ್ರಗಳ ಉನ್ನತಿಯಾಗಬೇಕು. ಕೋಟಿ-ಚೆನ್ನಯರು, ಮಾತೆ ದೇಯಿ ಬೈದ್ಯೆತಿಯ ಕ್ಷೇತ್ರ ಅಭಿವೃದ್ಧಿಗೆ ಕೈಂಕರ್ಯ ತೊಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನವಾಗಿರುವ […]
19-02-2017, 7:13 AM
ಫೆ. 19 ರಂದು ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಜರಗಿತು. ಕ್ಷೇತ್ರದ ಆದಿ ದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಗುರು ಸಾಯನ ಬೈದ್ಯರು-ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಕೋಟಿ-ಚೆನ್ನಯ ಮೂಲಸ್ಥಾನ ಗರಡಿ, ಮಾತೆ ದೇಯಿ ಬೈದ್ಯೆತಿ ಮಹಾಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಮೊದಲಾದ ಶ್ರದ್ಧಾ ಬಿಂದುಗಳ ಪುನರುತ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ […]
15-02-2017, 7:38 AM
ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ 15.02.2017 ರಂದು ಅಳದಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ತತ್ವ ಪ್ರಚಾರ ಕಾರ್ಯಕ್ರಮ ಜರುಗಿತು. ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಶತಮಾನಗಳ ಹಿಂದಿನ ಕಾಲಘಟ್ಟದಲ್ಲಿ ಮಾಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರು ಜನ್ಮತಾಳದಿದ್ದರೆ ಇಂದಿಗೂ ಅಸ್ಪೃಶ್ಯತೆ ಇರುತಿತ್ತು, ಗುರುವರ್ಯರ ಮುಖ್ಯ ಉದ್ದೇಶ ವಿದ್ಯೆ, ಉದ್ಯೋಗ, ಸಂಪರ್ಕ ಸಮಾಜದಲ್ಲಿ ಪಸರಿಸುತ್ತಿರುವ ಯುವವಾಹಿನಿ ಸಂಸ್ಥೆ ಬಿಲ್ಲವ ಸಮಾಜಕ್ಕೆ ಶಕ್ತಿ ತುಂಬಿದೆ, ಯುವಕರು ದುಶ್ಚಟಗಳಿಂದ ದೂರವಾಗಿ ಗುರುಗಳ ಸಂದೇಶ ಅನುಸರಿಸಬೇಕು ಎಂದು ಕೇರಳದ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ […]
15-02-2017, 5:30 AM
ಪ್ರೀತಿಯ ವಾಚಕರೇ, ಅನುಭವ ಮತ್ತು ಛಲ ಮನುಷ್ಯನ ಭವಿಷ್ಯವನ್ನು ರೂಪಿಸುತ್ತದೆ. ಇದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರವಲ್ಲ. ಸಿಬ್ಬಂದಿ ಇರುವ ಎಲ್ಲಾ ಸಂಸ್ಥೆಗಳಿಗೂ ಕೂಡ ಅನ್ವಯಿಸುತ್ತದೆ. ಯಾವ ಸಂಸ್ಥೆಯಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಸಿಬ್ಬಂದಿ ಇರುತ್ತದೋ ಅಂತಹ ಸಂಸ್ಥೆ ಯಶಸ್ವಿಯಾಗುತ್ತದೆ. ಯಾವ ಸಂಸ್ಥೆಯ ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಕಾರಾತ್ಮಕ ದುಡಿಮೆ ಇರುವುದಿಲ್ಲವೋ, ಕೇವಲ ಸಂಬಳಕ್ಕಾಗಿ ಮಾತ್ರ ಕಾದು ನೋಡುತ್ತಾರೋ ಅಂತಹ ಸಂಸ್ಥೆ ಹೇಳ ಹೆಸರಿಲ್ಲದೆ ನಿರ್ಣಾಮವಾಗಿ ಹೋಗುತ್ತದೆ. ಇದಕ್ಕೆ ಕಾರಣ ದುಡಿತದ ಹಿಂದಿರುವ ಜವಾಬ್ದಾರಿಯ ಕೊರತೆ. ನಮ್ಮ ಜನರಲ್ಲಿ […]
12-02-2017, 12:01 PM
ತಾ. 12-2-2017 ರಿಂದ 15-2-2017 ರವರೆಗೆ ಯುವವಾಹಿನಿ ಕೇಂದ್ರ ಸಮಿತಿಯ ಕಛೇರಿಯಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ವತಿಯಿಂದ ಭಾರತ ಸರಕಾರ ದತ್ತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಾದೇಶಿಕ ನಿರ್ದೇಶನಾಲಯ ಮಂಗಳೂರು ಇದರ ಸಹಯೋಗದೊಂದಿಗೆ 4 ದಿನಗಳ ಅಸಂಘಟಿತ ಕಾರ್ಮಿಕರ ಕಾರ್ಯಾಗಾರ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿಯ ಶಿಕ್ಷಣಾಧಿಕಾರಿ ಸತೀಶ್ ಕುಮಾರ್ ಹಾಗೂ ಕೇರ್ಸ್ ಮಂಗಳೂರು ಇದರ ನಿರ್ದೇಶಕರಾಗಿರುವ ಸತೀಶ್ ಮಾಬೆನ್ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ […]
04-02-2017, 6:25 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ದಿನಾಂಕ 04.02.2017 ರಂದು ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು.