19-03-2017, 4:04 AM
ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯ ಹಿಂದೆ ಕಲ್ಲು ಮುಳ್ಳುಗಳ ಹಾದಿಯ ಮೂಲಕ ಕಠಿಣವಾದ ಪರಿಶ್ರಮವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಿದ ಯುವವಾಹಿನಿ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ಪ್ರಥಮ ಪ್ರಜೆ ಶ್ರೀಮತಿ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ […]
Read More
15-03-2017, 12:13 PM
ಸಂಪಾದಕರ ಮಾತು ಪ್ರೀತಿಯ ವಾಚಕರೇ, ನಮ್ಮ ಸಂಸ್ಕೃತಿಯನ್ನು ಉಳಿಸಲು ನಾವು ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣವನ್ನು ನೀಡುತ್ತಿದ್ದೇವೆ. ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ವಿಮರ್ಷಿಸೋಣ. ಮೌಲ್ಯಾಧಾರಿತ, ಸ್ವಾವಲಂಬನೆಯ, ಸರ್ವತೋಮುಖ ಅಭಿವೃದ್ಧಿಯ ಸಾಮಾಜಿಕ, ಪ್ರಾಕೃತಿಕ ಹಾಗೂ ಜೀವನ ಶಿಕ್ಷಣಗಳನ್ನು ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣದಲ್ಲೇ ಕಲಿಯಬೇಕು. ಮಕ್ಕಳು ವಾಸಿಸುವ ಮನೆ, ಮೇಲೆ ಹೇಳಿರುವ ಶಿಕ್ಷಣಗಳನ್ನು ಮನೆಗಳಲ್ಲಿ ನೋಡಿ, ಕಲಿಯುವ ಮನೆಯಾಗಬೇಕು. ತಾಯಿ-ತಂದೆ, ಹಿರಿಯರು ಮಕ್ಕಳಿಗೆ ಮೇಲೆ ಹೇಳಿರುವ ವಿವಿಧ ರೀತಿಯ ಶಿಕ್ಷಣದ ವಿಚಾರಗಳ […]
Read More
15-03-2017, 7:22 AM
ಜನಪದ ವೀರರು ಅಥವಾ ಸಾಂಸ್ಕೃತಿಕ ಸ್ತ್ರೀ, ಪುರುಷರನ್ನು ಕಾರಣಿಕ ಶಕ್ತಿಗಳಾಗಿ ಪರಿಭಾವಿಸಲಾಗಿರುವುದು ತುಳುವ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ತಮ್ಮ ಕಾಲದ ವೀರರ ಧೈರ್ಯ ಸಾಹಸ ರೋಮಾಂಚಕ ಗಾಥೆಯನ್ನು ಅದರಿಂದ ರೋಮಾಂಚಿತರಾದ ಇಲ್ಲವೇ ಸ್ಫೂತಿ ಪಡೆದ ಜನಸಮುದಾಯ ಹಾಡುಕಟ್ಟಿ, ಕಥೆ ಪೋಣಿಸಿ, ಸಮಾಜದಲ್ಲಿ ಒಬ್ಬರಿಂದೊಬ್ಬರಿಗೆ, ತಿಳಿಸಿ ಅದು ತಲೆಮಾರಿನಿಂದ ತಲೆಮಾರಿಗೆ ಬಾಯ್ದೆರೆಯಾಗಿ ಹರಿದು ಬಂದ ಪರಂಪರೆ ನಮ್ಮ ಮುಂದಿದೆ. ಇಂತಹ ಪರಂಪರೆ ಭಾರತ ದೇಶದಲ್ಲಷ್ಟೇ ಅಲ್ಲದೆ ಮಧ್ಯ ಏಷಿಯಾ, ಚೈನಾ, ಆಫ್ರಿಕಾ, ಇಂಡೋನೇಶಿಯಾ, ಫಿನ್ಲೆಂಡ್ ಮತ್ತಿತರ ದೇಶಗಳಲ್ಲೂ ಕಂಡು ಬಂದಿದೆ. […]
Read More
15-03-2017, 7:19 AM
ಒಂದು ತುಂಡು ಉಪ್ಪಿನಕಾಯಿ ಇದ್ದರೂ ಸಾಕು ಮೃಷ್ಟಾನ್ನ ಎದುರಿಗೆದೆಯೆನ್ನುವಷ್ಟೇ ಖುಷಿಯಿಂದ ಗಂಜಿ ಅನ್ನವನ್ನುಂಡು ತಿಂದು ತೇಗುತ್ತಿದ್ದವರು ನಮ್ಮ ನಿಮ್ಮವರ ನಡುವೆ ಹಲವರಿರಬಹುದು. ಕಣಿವೆ, ಬೆಟ್ಟ ಗುಡ್ಡ, ನದಿ ಹಳ್ಳ, ಕಾಡುಬಯಲುಗಳೋ… ಆಯಾಸ ನೋವಿನರಿವಿಲ್ಲದೆ ಬರಿಗಾಲಿನ ನಡಿಗೆಯೋಡಾಟದಲ್ಲಿ ಕಲ್ಲು ಮುಳ್ಳುಗಳ ಗೊಡವೆ ಯಾರಿಗಾದರೂ ಇದ್ದಿತ್ತೆ?…..! ಎಡೆ ಬಿಡದ ದುಡಿಮೆಯಿದ್ದರೂ ನಿತ್ಯದ ಪಾಳಿಗೆ ಸಾಕಾಗದೆ, ಹೊಟೇಲು ಗೂಡಂಗಡಿ ದಿನಸಿ ಅಂಗಡಿಗಳಲ್ಲೆಲ್ಲಾ ಸಾಲ ಮಾಡದೆ ಇರುವವರು ಆ ದಿನಗಳಲ್ಲಿ ವಿರಳವೆನ್ನಬಹುದು. ಊರಿಗೂರೇ ಬದಲಾಗಿದೆ ಕಾಲ ಮಾತ್ರವಲ್ಲ ಊರಿಗೂರೇ ಬದಲಾಗಿದೆ. ಮೊದಲೆಲ್ಲಾ ಮುಂಬಯಿಂದ […]
Read More
15-03-2017, 7:10 AM
ಆತ್ಮೀಯರೇ, ಶ್ರೀಕ್ಷೇತ್ರ ಗೆಜ್ಜೆಗಿರಿ, ದೇಯಿ ಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಬಿಲ್ಲವರು ಒಮ್ಮತದಿಂದ ಒಟ್ಟು ಸೇರಿ ನಾವೆಲ್ಲರೂ ಒಂದೇ ಛತ್ರದಡಿಯಲ್ಲಿ ಇರಲು ಒಲವುಳ್ಳರಾಗಿದ್ದೇವೆ ಎಂಬುವುದನ್ನು ತೋರಿಸಿಕೊಟ್ಟಿದ್ದೇವೆ. ಇದರಿಂದ ಎಲ್ಲಾ ಬಿಲ್ಲವ ಸಂಘಗಳ ಮುಖಂಡರುಗಳು ಒಟ್ಟು ಸೇರಿ ಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ. ಹಿಂದೊಮ್ಮೆ ನಾವು ಈ ಉಭಯ ಜಿಲ್ಲೆಗಳಲ್ಲಿ ಪಡೆದಿದ್ದ ಪ್ರಾಬಲ್ಯವನ್ನು ಮರುಸ್ಥಾಪಿಸಬೇಕಾದ ಮಹತ್ತರವಾದ ಕೆಲಸ ನಮ್ಮೆಲ್ಲರ ಮುಂದಿದೆ. ಈ ದಿಸೆಯಲ್ಲಿ ನಾವೆಲ್ಲರೂ ಚಿಂತಿಸಿ ಸೂಕ್ತ ನಿರ್ಧಾರಗಳನ್ನು ತಳೆದು ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾದ […]
Read More
15-03-2017, 5:36 AM
ಕಾಂತಬಾರೆ ಬೂದಬಾರೆ ಜನ್ಮಕ್ಷೇತ್ರ ಕೊಲ್ಲೂರು ಇದರ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪ್ರಯುಕ್ತ ಒಂಬತ್ತು ಮಾಗಣೆಯ ಭಕ್ತಾಧಿಗಳಿಂದ ದಿನಾಂಕ 15-03-2017ರಂದು ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂಧರ್ಭದಲ್ಲಿ ಮೂಲ್ಕಿ ಯುವವಾಹಿನಿಯ ವತಿಯಿಂದ ಹೊರೆಕಾಣಿಕೆಯನ್ನು ಸಮರ್ಪಿಸಿ ಶ್ರೀ ಕ್ಷೇತ್ರದಲ್ಲಿ ಮೂಲ್ಕಿ ಯುವವಾಹಿನಿ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Read More
12-03-2017, 12:34 PM
ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿದ ಯುವವಾಹಿನಿ(ರಿ) ಮಂಗಳೂರು ಘಟಕದ 2017-18ನೇ ಪದಗ್ರಹಣ ಸಮಾರಂಭ ಜರುಗಿತು. 2017-18 ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ ಅದ್ಯಕ್ಷ : ರವೀಶ್ ಕುಮಾರ್ ಉಪಾಧ್ಯಕ್ಷ : ನವೀನ್ ಚಂದ್ರ ಕಾರ್ಯದರ್ಶಿ : ಪ್ರವೀಣ್ ಕುಮಾರ್ ಕಿರೋಡಿ ಜತೆ ಕಾರ್ಯದರ್ಶಿ : ಯತೀಶ್ ಬಳಂಜ ಕೋಶಾಧಿಕಾರಿ : ಸದಾನಂದ ಕುಳಾಯಿ ಸಂಘಟನಾ ಕಾರ್ಯದರ್ಶಿ : ಜೈ ಕುಮಾರ್ ನಿರ್ದೇಶಕರು ನಾರಾಯಣಗುರು ತತ್ವ ಪ್ರಚಾರ : […]
Read More
12-03-2017, 12:31 PM
ಮಂಗಳೂರು ಯುವವಾಹಿನಿಯ 2017-18 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಮೆ. ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿತು. ಈ ಶುಭ ಸಂದರ್ಭದಲ್ಲಿ ಮಂಗಳೂರು ಯುವವಾಹಿನಿ ಸದಸ್ಯರಾದ ಸಮಾಜ ಸೇವಕ ಸಂಘಟಕರು ದೇವೇಂದ್ರ ಕೋಟ್ಯಾನ್, ಉದ್ಯಮಿ ಸಂಘಟಕರು ಸಾಧಕ ಉಮಾನಾಥ, ನಿಸ್ವಾರ್ಥ ಸೇವಕ ಶ್ರೀಕಾಂತ್ ಇವರುಗಳ ಸಾಧನೆಯನ್ನು ಗುರುತಿಸಿ ಗೌರವಿಸಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಬಿಲ್ಲವರ ಸಹಾಯಕ ಸಂಘದ ಗೌರವ ಅದ್ಯಕ್ಷ ಪ್ರಭಾಕರ್ ಎಸ್. ಪೂಜಾರಿ, […]
Read More
12-03-2017, 12:28 PM
ಕಣ್ಣು ಸರಿಯಾಗಿದ್ದಲ್ಲಿ ಜಗತ್ತನ್ನು ಪ್ರೀತಿಸಬಹುದು, ಆದರೆ ನಾಲಿಗೆ ಸರಿಯಾಗಿದ್ದಲ್ಲಿ ಜಗತ್ತು ನಮ್ಮನ್ನು ಪ್ರೀತಿಸುತ್ತದೆ. ದುಶ್ಚಟಗಳನ್ನು ತೊರೆದು ಜ್ಞಾನದ ಮಾರ್ಗದಲ್ಲಿ ನಡೆದಾಗ ಮನೆ ಮನೆಯಲ್ಲೂ ದೇವಸ್ಥಾನದ ನಿರ್ಮಾಣ ಸಾಧ್ಯ. ಅವಮಾನಗಳ ಹಿಂದಿರುವ ನೋವಿನಿಂದ ನಮ್ಮ ಹಿರಿಯರು ಸಂಘಟನೆಗಳ ರಚನೆ ಮಾಡಿದರು. ಮನಸ್ಸು ಮನಸ್ಸುಗಳನ್ನು ಬೆಸೆಯುವ ಆದರ್ಶ, ಸಂವಿಧಾನ ಬದ್ದ ಸಂಘಟನೆ ಯುವವಾಹಿನಿ ಎಂದು ಮಂಗಳೂರು ಸಂತ ಎಲೋಶಿಯಸ್ ಕಾಲೇಜ್ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್ ತಿಳಿಸಿದರು. ಅವರು ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ […]
Read More
12-03-2017, 11:50 AM
ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಅಭಿವ್ಯಕ್ತಿ – ಅಭಿಪ್ರಾಯಗಳ ನಿರೂಪಣೆ ಕಾರ್ಯಕ್ರಮವು ದಿನಾಂಕ 12.03.2017 ನೇ ಆದಿತ್ಯವಾರ ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದಲ್ಲಿ ಜರುಗಿತು. ಅಭಿಪ್ರಾಯಗಳ ನಿರೂಪಣೆ ಮಾಡಿದ ಸಹನಾ ಕುಂದರ್ – ಈ ಜಗತ್ತು ಗಂಡು ಹೆಣ್ಣು ಇಬ್ಬರನ್ನೂ ಅವಲಂಬಿಸಿದೆ. ಟಿವಿ ಸೀರಿಯಲ್ಗಳ ಭ್ರಮೆಯಿಂದ ಮಹಿಳೆಯರು ಹೊರ ಬರಬೇಕು. ನಮ್ಮ ರಕ್ತದಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಗೆ ನಾವು ಬಲಿಯಾಗಿದ್ದೇವೆ. ಮಹಿಳೆಯರು ಸಂಸ್ಕೃತಿ ಸಂಸ್ಕಾರದ ಬಗ್ಗೆ ಜಾಗೃತರಾದಾಗ […]
Read More