
ಯುವಕಲೋತ್ಸವದಲ್ಲಿ ಸಸಿಹಿತ್ಲು ಯುವವಾಹಿನಿ ತೃತೀಯ ಬಹುಮಾನ
28-05-2017, 12:19 PM
ಮಂಗಳೂರು ತಾಲೂಕು ವ್ಯಾಪ್ತಿಯ ಯುವವಾಹಿನಿ ಘಟಕಗಳ ಸಾಂಸ್ಕೃತಿಕ ಸ್ಪರ್ಧೆ ಯುವ ಕಲೋತ್ಸವ ದಿನಾಂಕ 28.05.2017 ನೇ ಆದಿತ್ಯವಾರ ಮಂಗಳೂರು ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. ಯುವವಾಹಿನಿಯ ನೂತನ ಸಭಾಂಗಣ ಹಾಗೂ ಕಛೇರಿಯ ಉದ್ಘಾಟನೆಯ ಸವಿನೆನಪಿಗಾಗಿ ಯುವ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆ ನಡೆಸಲಾಯಿತು. ಮಂಗಳೂರು ತಾಲೂಕು ವ್ಯಾಪ್ತಿಯ ಒಟ್ಟು 8 ಯುವವಾಹಿನಿ ಘಟಕಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಕಲಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ರಮೇಶ್ ಕಲ್ಮಾಡಿ,ಜಗನ್ ಪವಾರ್ ಬೇಕಲ್,ಶ್ರೀಮತಿ ರತ್ನಾವತಿ ಬೈಕಾಡಿ,ಶ್ರೀಮತಿ ಮಲ್ಲಿಕಾ ಸಿದ್ದಕಟ್ಟೆ ತೀರ್ಪುಗಾರರಾಗಿ ಸಹಕಾರ […]