ಸಮಾಜ ಸೇವೆ

ವಿದ್ಯಾರ್ಥಿಗಳಿಗೆ ರೂ 60,000/- ಮೊತ್ತದ ಪುಸ್ತಕ ವಿತರಣೆ

ಕೂಳೂರು : ಯುವವಾಹಿನಿ ಕೂಳೂರು ಘಟಕದ ವತಿಯಿಂದ ಕಿಟ್ಟೆಲ್ ಪ್ರೌಢಶಾಲೆ ಗೋರಿಗುಡ್ಡೆ ಇಲ್ಲಿಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ದಿನಾಂಕ 13.06.19 ರಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಶಾಲೆಯಲ್ಲಿ ನಡೆಯಿತು. ಶಾಲಾ ಪ್ರಾಂಶುಪಾಲರು ವಿಠ್ಠಲ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ ಯುವವಾಹಿನಿ ಎಂಬುದು ಅತ್ಯುತ್ತಮ ಸಂಘಟನೆಯಾಗಿದ್ದು, ಅತ್ಯುತ್ತಮ ಸಮಾಜಮುಖಿ ಕಾರ್ಯಗಳ ಮೂಲಕ ಯುವಜನತೆಯಲ್ಲಿ ಸ್ಪೂರ್ತಿ ನೀಡಿದೆ. ಹಾಗೂ ಶಾಲಾ ಮಕ್ಕಳಿಗೆ ಮಾದರಿಯಾಗಿದೆ ಎಂದರು.ಮುಂದಿನ ದಿನಗಳಲ್ಲಿ ಯುವವಾಹಿನಿ ಕೂಳೂರು ಘಟಕವು ಸಾಧನೆಯ […]

Read More

ರೂ.35 ಸಾವಿರ ಮೊತ್ತದ ಪುಸ್ತಕ ವಿತರಣೆ

ಹಳೆಯಂಗಡಿ : ಯುವವಾಹಿನಿ ಹಳೆಯಂಗಡಿ ಘಟಕದ ವತಿಯಿಂದ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ದಿ.ಕಮಲ ಬೂಬ ಅಮೀನ್ ಸ್ಮರಣಾರ್ಥ ಅವರ ಮಕ್ಕಳ ಪ್ರಾಯೋಜಕತ್ವದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ದಿನಾಂಕ 09.06.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಹಳೆಯಂಗಡಿಯ ಹರಿ ಓಂ ಸಭಾಗ್ರಹದಲ್ಲಿ ಜರಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬ್ಬೆಲ್ ರವರು ತನ್ನ ಬಾಲ್ಯದ ಜೀವನವನ್ನು ಮೆಲುಕು ಹಾಕುತ್ತಾ, ವಿದ್ಯಾರ್ಥಿಗಳಿಗೆ ಈ ಪುಸ್ತಕ ವಿತರಣಾ ಕಾರ್ಯಕ್ರಮದ […]

Read More

ರುದ್ರಭೂಮಿಯಲ್ಲಿ ಸ್ವಚ್ಛತಾ ಅಭಿಯಾನ

ಕೂಳೂರು ; ಯುವವಾಹಿನಿ ಕೂಳೂರು ಘಟಕದ ವತಿಯಿಂದ 11ನೇ ಸ್ವಚ್ಛತಾ ಅಭಿಯಾನ ದಿನಾಂಕ 09.06.2019 ರಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಕೂಳೂರು ರುದ್ರಭೂಮಿಯಲ್ಲಿ ನಡೆಯಿತು. ಘಟಕದ ಮಾರ್ಗದರ್ಶಕರಾದ ಗಿರಿಧರ್ ಸನಿಲ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 20 ಸದಸ್ಯರನ್ನು ಒಳಗೊಂಡ ತಂಡವು ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯ ತನಕ ಸ್ವಚ್ಛತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಅಭಿಯಾನದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಅಮೀನ್, […]

Read More

ಯುವವಾಹಿನಿ (ರಿ) ಕೂಳೂರು ಘಟಕದ ಸ್ವಚ್ಛತಾ ಅಭಿಯಾನ

ಕೂಳೂರು : ಯುವವಾಹಿನಿ (ರಿ) ಕೂಳೂರು ಘಟಕದ ಸ್ವಚ್ಛತಾ ಅಭಿಯಾನದ 10ನೇ ಕಾರ್ಯಕ್ರಮವು ದಿನಾಂಕ 12.05.2019 ರಂದು ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಪಂಜಿಮೊಗರಿನಿಂದ ಉರುಂದಾಡಿ ಸಂಪರ್ಕಿಸುವ ರಸ್ತೆಯಿಂದ ಪ್ರಾರಂಭಗೊಂಡು ಗೋಪಾಲಕೃಷ್ಣ ಭಜನಾ ಮಂದಿರದ ವರೆಗೆ ನಡೆಯಿತು. ಘಟಕದ ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಅಭಿಯಾನದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಯು. ಅಮೀನ್, ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ನಿಶಿತ್ ಹಾಗೂ ಘಟಕದ […]

Read More

ಯುವವಾಹಿನಿ (ರಿ) ವೇಣೂರು ಘಟಕದಿಂದ ಸಾಂತ್ವನ ನಿಧಿ

ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ ಅಂಡಿಂಜೆ ಗ್ರಾಮಸಂಚಾಲನ ಸಮಿತಿಯ ವತಿಯಿಂದ ಮರಕಡಿಯುವ ಮೆಷಿನ್ ತಾಗಿ ಗಾಯಗೊಂಡು ‍ಆರ್ಥಿಕ ಸಂಕಷ್ಟದಲ್ಲಿರುವ ಅಂಡಿಂಜೆ ಗ್ರಾಮದ ಕಾನ ಮನೆಯ ಪ್ರವೀಣ್ ಪೂಜಾರಿಯವರಿಗೆ 10,000/ ರೂಪಾಯಿ ಸಾಂತ್ವನ ನಿಧಿಯನ್ನು ಹಸ್ತಾಂತರ ಮಾಡಲಾಯಿತು ,ಈ ಸಂದರ್ಭದಲ್ಲಿ ಸಂಚಾಲನ ಸಮಿತಿಯ ಅಧ್ಯಕ್ಷರಾದ ರಾಕೇಶ್ ಪೂಜಾರಿ ,ಕಾರ್ಯದರ್ಶಿ ರಕ್ಷಿತ್ ಹಲಕ್ಕಿ,ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯರಾದ ನಿತೀನ್ ಮುಂಡೇವು, ಯುವವಾಹಿನಿ ವೇಣೂರು ಘಟಕದ ನಿರ್ದೇಶಕರಾದ ಪ್ರಶಾಂತ್ ನವಜ್ಯೋತಿ ,ಉಮೇಶ್ಚಂದ್ರ ಅಂಬಲ,ಸತೀಶ್ ಪಿ ಎನ್,ಶುಭಕರ ರಾಗಿಮೇರು , […]

Read More

ಕೆಸರುಗದ್ದೆಯಲ್ಲಿ ಆಟವನ್ನು ಆಡಿದರು ಕೃಷಿಯನ್ನು ಮಾಡಿದರು

ಮಾಣಿ : ಅದು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲಗುತ್ತು ಮನೆತನದ ಕಂಬಳಗದ್ದೆ . ಯುವವಾಹಿನಿಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ಒಂದು ಯಶಸ್ಸಿನ ಚಟುವಟಿಕೆಯ ಸಾಕ್ಷಾತ್ಕಾರಕ್ಕೆ ಆ ಕಂಬಳ ಗದ್ದೆ ಸಾಕ್ಷಿಯಾಗಿತ್ತು. 2018 ರ ಡಿಸೆಂಬರ್ ತಿಂಗಳ 23 ರಂದು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಕೇಂದ್ರ ಸಮಿತಿ ಹಾಗೂ ಮಾಣಿ ಘಟಕದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಗುರು ಸೇವಾ ಸಂಘ(ರಿ) ಮಾಣಿ ಇದರ ಸಹಕಾರದೊಂದಿಗೆ ಅಂತರ್ ಘಟಕ ಒಡಗೂಡುವಿಕೆಯ ಕೋಟಿ ಚೆನ್ನಯ ಕೆಸರುಗದ್ದೆ […]

Read More

ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಆರೋಗ್ಯ ನಿಧಿ

ಕೂಳೂರು : ದಿನಾಂಕ 22/04/2019 ಸೋಮವಾರ ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ(ರಿ) ಮೂಡಬಿದ್ರಿ ಘಟಕದ ಸದಸ್ಯರಾದ ಅಶ್ವಿನಿ ಇವರ ಪತಿ ರಾಜೇಶ್ ಪೂಜಾರಿ ಇವರ 2 ಕಿಡ್ನಿಗಳು ವಿಫಲವಾಗಿ ಚಿಕಿತ್ಸೆಗಾಗಿ ನೆರವು ಕೋರಿದ್ದ ಸಲುವಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಸದಸ್ಯರು ವೈಯಕ್ತಿವಾಗಿ 15 ಸಾವಿರ ರೂಪಾಯಿ ಮೊತ್ತ ಹಾಗೂ ಕೂಳೂರು ನಾರಾಯಣ ಗುರು ಮoದಿರದ ಸದಸ್ಯರೆಲ್ಲರು ಸೇರಿ ಒಟ್ಟಾಗಿ 40 ಸಾವಿರ ರೂಪಾಯಿಯನ್ನು ಅವರ ತಾಯಿ ಉಮಾವತಿ ಇವರಿಗೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಕೂಳೂರು ಘಟಕದ […]

Read More

ಉಪ್ಪಿನಂಗಡಿ ಯುವವಾಹಿನಿ ಘಟಕದಿಂದ ಆರ್ಥಿಕ ನೆರವು

ಉಪ್ಪಿನಂಗಡಿ : ಉಪ್ಪಿನಂಗಡಿ ಯುವವಾಹಿನಿ ಘಟಕ ಆರಂಭವಾದ ದಿನಗಳಲ್ಲಿ ಘಟಕದ ಬೆಳವಣಿಗೆಗೆ ಶ್ರಮಿಸಿದ ನೆಲ್ಯಾಡಿಯ ರಾಘವ ಪೂಜಾರಿ ಇವರ ಆರೋಗ್ಯ ಚಿಂತಾಜನಕವಾಗಿದ್ದು ತಿಂಗಳಿಗೆ ಸುಮಾರು 75000 ಗಳಷ್ಟು ಖರ್ಚು ಆಗುವುದರಿಂದ ಆರ್ಥಿಕವಾಗಿ ನಿಭಾಯಿಸುವುದು ಕಷ್ಟಕರವಾಗಿರುತ್ತದೆ.ಆದುದರಿಂದ ದಿನಾಂಕ ೧೬. ೦೪. ೨೦೧೯ ರಂದು ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ 12000 ರೂಪಾಯಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. .ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ.ರಾಜಾರಾಮ ಕೆ.ಬಿ, ಸಲಹೆಗಾರರಾದ ಡಾ.ಸದಾನಂದ ಕುಂದರ್,ಮಾಜಿ ಅಧ್ಯಕ್ಷರಾದ ಶೇಖರ ಗೌಂಡತ್ತಿಗೆ , ಅಧ್ಯಕ್ಷರಾದ ಅಜಿತ್ […]

Read More

ಅನಾಥ ಮಗುವಿಗೆ ಆಸರೆಯಾದ ಯುವವಾಹಿನಿ ಕೂಳೂರು ಘಟಕ

ಕೂಳೂರು : ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಲಕ್ಷ್ಮಿ ಎಂಬ ವಿದ್ಯಾರ್ಥಿನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ಮೊತ್ತವನ್ನು ನೀಡಲು ಅಸಾಧ್ಯವಾಗಿರುವುದರಿಂದ ಯುವವಾಹಿನಿ ಕೂಳೂರು ಘಟಕದ ವತಿಯಿಂದ ವಿದ್ಯಾರ್ಥಿನಿಗೆ ಆಸ್ಪತ್ರೆ ಶುಲ್ಕ ಭರಿಸಲು 20,000 /- ರೂಪಾಯಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್

Read More

ಯುವವಾಹಿನಿ ಸೇವಾ ಸಂಜೀವಿನಿ ಲೋಕಾರ್ಪಣೆ

ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ದಿನಾಂಕ 03-03-2019 ಆದಿತ್ಯವಾರ ಗಾಯತ್ರಿ ಮಿನಿ ಹಾಲ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಅತ್ಯಮೂಲ್ಯವಾದ ಯೋಜನೆ ಯುವವಾಹಿನಿ ಸೇವಾ ಸಂಜೀವಿನಿ ಯ ಲೋಕಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ಅವರು ವಹಿಸಿದ್ದರು. ಪ್ರೀತಿ ಎಂಬ ಎಣ್ಣೆಯನ್ನು ಸುರಿದು,ನಂಬಿಕೆ ಎನ್ನುವ ಬತ್ತಿಯನ್ನು ಇಟ್ಟು,ಆತ್ಮವಿಶ್ವಾಸ ಎನ್ನುವ ದೀಪದಡಿಯಲ್ಲಿ ಅಶಕ್ತರ ಪಾಲಿಗೆ ಬೆಳಕಾಗಾಗಬೇಕೆಂಬ ಅಭಿಲಾಷೆಯೊಂದಿಗೆ, ಯುವವಾಹಿನಿ ಸೇವಾ ಸಂಜೀವಿನಿ’ ಯುವವಾಹಿನಿ ಬೆಂಗಳೂರು ಘಟಕದ ಬಹುದಿನಗಳ ಕನಸಿನ ಯೋಜನೆಯನ್ನು ಬೆಂಗಳೂರು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!