18-11-2019, 2:22 PM
ದಿನಾಂಕ 17/11/2019 ರಂದು ಯುವವಾಹಿನಿ(ರಿ) ಎಕ್ಕಾರು-ಪೆರ್ಮುದೆ ಘಟಕದ ವತಿಯಿಂದ ಬಿಲ್ಲವ ಸಮಾಜ ಸೇವಾ ಸಂಘ ಎಕ್ಕಾರು-ಪೆರ್ಮುದೆ ಇದರ ವಠಾರದ ಸ್ವಚ್ಛತಾ ಕಾರ್ಯಕ್ರಮವು ನಡೆಯಿತು. ಅಧ್ಯಕ್ಷರಾದ ಸಂದೇಶ್ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಹಾಸ ಪೂಜಾರಿ, ಹಿರಿಯರಾದ ಪ್ರದೀಪ್ ಕುಮಾರ್ ಸುವರ್ಣ, ವಿನೋದ್ ಸಾಲ್ಯಾನ್ ಸೇರಿದಂತೆ ಒಟ್ಟು 12 ಸದಸ್ಯರು ಹಾಜರಿದ್ದರು.
Read More
15-11-2019, 3:36 PM
ಯುವವಾಹಿನಿಯೆಂಬ ಕೂಡುಕುಟುಂಬದ ಸದಸ್ಯರೊಬ್ಬರ ಮದುವೆಯಲ್ಲಿ “””ಮದ್ಯಮುಕ್ತ ಮದರಂಗಿ“”” ಪ್ರತಿಜ್ಞಾ ವಿಧಿ ಸಂಕಲ್ಪ ದೊಂದಿಗೆ ನೆರವೇರಿಸಿ ನಾರಾಯಣ ಗುರುಗಳ ಸಂದೇಶವನ್ನು ಸಮಾಜಕ್ಕೆ ಸಾರಿದ ಅಭೂತಪೂರ್ವ ಕ್ಷಣ ನಮ್ಮ ಘಟಕದ ಸದಸ್ಯರಾದ ಚಿ.ರಕ್ಷಿತ್ ಕೃಷ್ಣ ಸನಿಲ್ ರವರ ಮದುವೆಯ ಮದರಂಗಿ ಕಾರ್ಯಕ್ರಮ ವು ತಾರೀಕು 13-11-2019 ನೇ ಬುಧವಾರದಂದು ಸಾಯಂಕಾಲ ಮದುಮಗನ ನಿವಾಸ ಕೊಲ್ಯ ಕನೀರುಬೀಡುವಿನಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಸಂತ ಸೆಬಾಸ್ಟಿಯನ್ ಕಾಲೇಜು ಪೆರ್ಮನ್ನೂರು ತೊಕ್ಕೋಟು ಇಲ್ಲಿಯ ಉಪನ್ಯಾಸಕರಾದ ಸಾಹಿತಿ ಅರುಣ್ ಉಳ್ಳಾಲ್ ರವರ ಆಶಯ ಭಾಷಣದಲ್ಲಿ ತಿಳಿಯಪಡಿಸಿದ ವಿಚಾರ […]
Read More
14-11-2019, 4:04 PM
ಇತ್ತೀಚೆಗೆ ಯುವಜನಾಂಗವು ಮದರಂಗಿ ಕಾರ್ಯಕ್ರಮದಲ್ಲಿ ಮಧ್ಯಪಾನಕ್ಕಾಗಿಯೇ ಆಸಕ್ತಿಯಿಂದ ಭಾಗವಹಿಸಿ, ಅನೇಕ ಅನಾಹುತವನ್ನು ಸೃಷ್ಟಿಸುತ್ತೀವೆ.ಆದರೆ ನಮ್ಮ ಘಟಕದ ಸಕ್ರಿಯೆ ಸದಸ್ಯೆಯಾಗಿರುವ ಕುಮಾರಿ ಹರ್ಷಿತರವರ ಮದರಂಗಿ ಶಾಸ್ತ್ರವು ಬಹಳ ವಿಭಿನ್ನತೆಗೆ ಸಾಕ್ಷಿಯಾಯಿತು. ದಿನಾಂಕ 13/11/2019ರಂದು ಅವಳ ಸ್ವಗೃಹವಾದ ಕುರಿಯಾಳದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಸತ್ಯನಾರಾಯಣ ಪೂಜೆ,ನಂತರ ಓಂಕಾರೇಶ್ವರ ಭಜನಾಮಂಡಳಿಯವರಿಂದ ಭಜನೆ ಕುಣಿತ ಅರಳುವ ಪ್ರತಿಭೆಗಳಿಂದ ಮಕ್ಕಳ ಮತ್ತು ಯುವಕರ ಸಾಂಸ್ಕೃತಿಕ ಕಾರ್ಯಕ್ರಮ,ಹಲವು ರೀತಿಯ ಮೋಜಿನ ಆಟಗಳು ಪ್ರೇಕ್ಷಕರನ್ನು ಮನರಂಜಿಸಿದವು. ಈ ರೀತಿಯಾಗಿ ಮಧ್ಯಪಾನವು ಸಮಾಜದ ಸ್ವಾಸ್ಥ್ಯದ ವಿನಾಶಕ್ಕೆ ಕಾರಣವಾಗುತ್ತಿದ್ದು , […]
Read More
14-11-2019, 3:45 PM
ದಿನಾಂಕ 14.11.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಸಂವೇದನಾ ಮಕ್ಕಳ ಆಶ್ರಮ ನಂತೂರು, ತಾರೆತೋಟ ಇಲ್ಲಿ ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ನಮ್ಮ ಘಟಕದ ವತಿಯಿಂದ ಎಲ್ಲಾ ಮಕ್ಕಳಿಗೂ 10,600 ರೂ ಪಾದರಕ್ಷೆಗಳನ್ನು ವಿತರಿಸಲಾಯಿತು. […]
Read More
14-11-2019, 3:03 AM
ಯುವವಾಹಿನಿ (ರಿ) ವೇಣೂರು ಘಟಕ ಇದರ ವತಿಯಿಂದ ಸ್ಪೂರ್ತಿ ಭಿನ್ನಚೇತನಾ ಶಾಲೆ ಮೂಡಬಿದಿರೆಯಲ್ಲಿ ಇಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ ವಹಿಸದ್ದರು .ಮಕ್ಕಳಿ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು .ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿತೀಶ್ ಎಚ್, ಘಟಕದ ಸಲಹೆಗಾರರಾದ ಹರೀಶ್ ಪೋಕ್ಕಿ, ಘಟಕದ ಕೋಶಧಿಕಾರಿ ಹರೀಶ್ ಪಿ […]
Read More
11-11-2019, 11:14 AM
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್‌ನಿಂದ ಶೈಕ್ಷಣಿಕ ದತ್ತು ಸ್ವೀಕಾರ – ಪ್ರತಿಭಾ ಪುರಸ್ಕಾರ ‘ಪ್ರೇರಣಾ -2019’ ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶೈಕ್ಷಣಿಕ ದತ್ತು ಸ್ವೀಕಾರ ವಿದ್ಯಾರ್ಥಿ ವೇತನ ವಿತರಣೆ ಅಕ್ಷರ ಪುರಸ್ಕಾರ ಮತ್ತು ಪ್ರತಿಭಾ ಪುರಸ್ಕಾರ – ಪ್ರೇರಣಾ -2019 ಕಾರ್ಯಕ್ರಮವು ನ.11 ರಂದು ನಡೆಯಿತು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಲಹೆಗಾರರಾದ ಲೋಕಯ್ಯ ಪೂಜಾರಿಯವರು ಕಾರ್‍ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು, ವಿದ್ಯಾನಿದಿ ಟ್ರಸ್ಟ್ […]
Read More
09-11-2019, 2:49 AM
ಮದ್ಯ ಮುಕ್ತ ಮದರಂಗಿಗೆ ಸಾಕ್ಷಿಯಾಯಿತು ಯುವವಾಹಿನಿ (ರಿ) ವೇಣೂರು ಘಟಕ ವೇಣೂರು ನ. 8 : ಮದ್ಯಪಾನವು ಸಾಮಾಜದ ಸ್ವಾಸ್ಥ್ಯ ದ ವಿನಾಶಕ್ಕೆ ಕಾರಣವಾಗುತ್ತಿದ್ದು,ಇತ್ತೀಜೆಗೆ ಮದುವೆಯ ಮದರಂಗಿಯು ನವಕುಡುಕರನ್ನು ಸೃಷ್ಟಿಸುವ ಸಮಾರಂಭವಾಗಿ ಪರಿವರ್ತನೆಗೊಂಡಿದೆ. ಇದು ಬದಲಾಗಿ ಎಲ್ಲಾ ಕಡೆ ಮದ್ಯಮುಕ್ತ ಮದರಂಗಿ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗದ ಡಾ। ಯೋಗೀಶ್ ಕೈರೋಡಿ ಹೇಳಿದರು. ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ ಬಜಿರೆಗ್ರಾಮದ ಹೊಸಮನೆ ಮನೋಜ್ ಪೂಜಾರಿಯವರ ಮನೆಯಲ್ಲಿ ನಡೆದ ಮದ್ಯ ಮುಕ್ತ ಮದರಂಗಿ ಕಾರ್ಯಕ್ರಮದಲ್ಲಿ […]
Read More
03-11-2019, 4:31 PM
ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಸ್ಪಂದನ ಸೇವಾ ಯೋಜನೆಯಿಂದ ಎರಡು ಕಿಡ್ನಿ ವೈಪಲ್ಯಗೊಂಡಿರುವ ಮತ್ತು ಶ್ರವಣ ಮತ್ತು ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡಿರುವ ಗುರುವಾಯನಕೆರೆ ನಿವಾಸಿ ಜಯರಾಮ್ ಶೆಟ್ಟಿ ಯವರಿಗೆ ರೂಪಾಯಿ 10000.00 ಸಾಂತ್ವನ ನಿಧಿಯನ್ನು ಘಟಕದ ಅಧ್ಯಕ್ಷರಾದ ಹರೀಶ್ ಸುವರ್ಣ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮೂಂಡೂರು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ನಿರ್ದೇಶಕರಾದ ಪ್ರಶಾಂತ್ ಮಚ್ಚಿನ ಗೆಳೆಯರ ಬಳಗ(ರಿ.)ಗುರುವಾಯನಕೆರೆಯ ಕಾರ್ಯದರ್ಶಿ ಮಂಜುನಾಥ್, ಚಿದಾನಂದ ಬಂಗೇರ ಗುರುವಾಯನಕೆರೆ ಉಪಸ್ಥಿತರಿದ್ದರು.
Read More
01-11-2019, 4:29 PM
ದಿನಾಂಕ 1/11/2019ರ ಶುಕ್ರವಾರ ಸಂಜೆ ಘಟಕದ ಆಶ್ರಯದಲ್ಲಿ ಕುಣಿತ ಭಜನಾ ತರಗತಿಯನ್ನು ಘಟಕದ ಸಲಹೆಗಾರರು ರಘುನಾಥ ಶಾಂತಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಹರೀಶ್ ಸುವರ್ಣ ವಹಿಸಿದರು. ಘಟಕದ ಕಾರ್ಯದರ್ಶಿ ವಿಜಯ್ ಕುಮಾರ್ , ಯುವವಾಹಿನಿ ಮಹಿಳಾ ಸಂಚಲನ ಸಮಿತಿಯ ಸಂಚಾಲಕಿ ಶ್ರೀಮತಿ ಸುಜಾತ ಅಣ್ಣಿ ಪೂಜಾರಿ,ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಜೀತೆಶ್ ಬೆಳ್ತಂಗಡಿ, ತರಬೇತುದಾರ ವಾಸು ಮುಂಡಾಜೆ ಉಪಸ್ಥಿತರಿದ್ದರು. ಗುರುರಾಜ ಗುರಿಪಳ್ಳ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಮಚ್ಚಿನ ನಿರೂಪಿಸಿ ,ವಂದಿಸಿದರು.
Read More
31-10-2019, 4:05 PM
ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ನೆರವೇರಿದ ವಿಶಿಷ್ಟ ಕಾರ್ಯಕ್ರಮ.. ಲೋಕ ಶಾಂತಿಯ ಹರಿಕಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಪಾಲಿಸಲು ಪಣತೊಟ್ಟು,, ಕಠಿಬದ್ಧರಾಗುವುದರೊಂದಿಗೆ ಮದುವೆಯ ಮುಂಚಿತವಾಗಿ ಜರಗುವ ಶುಭಕಾರ್ಯವನ್ನು ಪಾವಿತ್ರ್ಯತೆಯೆಡೆಗೊಯ್ದ “ಮದ್ಯಮುಕ್ತ ಮದರಂಗಿ” ಯುವವಾಹಿನಿ(ರಿ.) ಬಂಟ್ವಾಳ ಘಟಕದ ಸಕ್ರಿಯ ಸದಸ್ಯರಾದ ಹರೀಶ್ ಸಾಲ್ಯಾನ್ ಅಜಕಲ ರವರ ಮದುವೆಯ ಮದರಂಗಿಯ ಕಾರ್ಯಕ್ರಮವು ವಿಭಿನ್ನತೆಯಿಂದ ನೆರವೇರಿದ್ದು,ಸಮಾಜದಿಂದಲೇ ಸಮಾಜವನ್ನು ತಿದ್ದಿ ಸರಿದಾರಿಗೊಯ್ಯುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದ ಯುವವಾಹಿನಿ (ರಿ.)ಬಂಟ್ವಾಳ ಘಟಕ ದ ಸದಸ್ಯರ ವಿಶಾಲವಾದ […]
Read More