05-05-2017, 10:15 AM
ದಿನಾಂಕ 30.04.2017 ರಿಂದ 05.05.2017 ರವರಗೆ ಮೂಲ್ಕಿ ಬಪ್ಪನಾಡು ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರುಗಿದ ಶ್ರೀ ಶತಚಂಡಿಕಾದ್ವರದಲ್ಲಿ ಹೊರೆ ಕಾಣಿಕೆಯನ್ನು ಮೂಲ್ಕಿ ಯುವವಾಹಿನಿ ವತಿಯಿಂದ ಸಮರ್ಪಿಸಲಾಯಿತು. ಹಾಗೂ ಆರು ದಿನಗಳ ಕಾಲ ಜರುಗಿದ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಯುವವಾಹಿನಿ ಸದಸ್ಯರು ಸಹಕಾರ ನೀಡಿದರು ಮೂಲ್ಕಿ ಯುವವಾಹಿನಿ ಅದ್ಯಕ್ಷ ಚೇತನ್ ಕುಮಾರ್, ಪದಾದಿಕಾರಿಗಳು,ಮಾಜಿ ಅಧ್ಯಕ್ಷರುಗಳು ಸದಸ್ಯರು ಉಪಸ್ಥಿತರಿದ್ದರು
Read More
05-05-2017, 6:44 AM
ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ತೀರಾ ಬಡ ಕುಟುಂಬ ಪೋಂಕ್ರ ಪೂಜಾರಿ ಇವರಿಗೆ ಸುಮಾರು ರೂಪಾಯಿ ಮೂರುವರೆ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಯಿತು. ಹೆಜಮಾಡಿ ಯುವವಾಹಿನಿಯ ಯಶಸ್ವೀ ಸಮಾಜಮುಖಿ ಕಾರ್ಯ ಮನೆ ನಿರ್ಮಾಣ ಯೋಜನೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕೇವಲ ಮೂರು ತಿಂಗಳ ಅವಧಿಯಲ್ಲಿ ದಾನಿಗಳ ಸಹಾಯ ಹಾಗೂ ಹೆಜಮಾಡಿ ಯುವವಾಹಿನಿ ಸದಸ್ಯರ ಶ್ರಮದ ಫಲವಾಗಿ ನಮ್ಮ ಮನೆ ನಿರ್ಮಾಣ ಯೋಜನೆ ಯಶಸ್ವಿಯಾಗಿದೆ ಎಂದು ಹೆಜಮಾಡಿ ಯುವವಾಹಿನಿ ಅಧ್ಯಕ್ಷರಾದ ಲೋಕೇಶ್ ಅಮೀನ್ ತಿಳಿಸಿದರು. […]
Read More
23-04-2017, 6:11 AM
ತಲೆಗೊಂದು ಸೂರು – ಇದು ಯುವವಾಹಿನಿ (ರಿ) ಉಡುಪಿ ಘಟಕದ ಶಾಶ್ವತ ಯಶಸ್ವೀ ಯೋಜನೆ – ವರುಷಕ್ಕೊಂದು ತೀರಾ ಬಡ ಕುಟುಂಬವನ್ನು ಆಯ್ಕೆ ಮಾಡಿ ಅವರಿಗೆ ಮನೆ ನಿರ್ಮಾಣ ಮಾಡಿ ಕೊಡುವುದು ಉಡುಪಿ ಯುವವಾಹಿನಿಯ ಜನಪ್ರಿಯ ಸಮಾಜಮುಖಿ ಕಾರ್ಯಕ್ರಮ. ಈ ವರ್ಷದ ತಲೆಗೊಂದು ಸೂರು ಕಾರ್ಯಕ್ರಮದಲ್ಲಿ ದಿನಾಂಕ 23.04.2017ನೇ ಆದಿತ್ಯವಾರ ಶ್ರೀಮತಿ ಇಂದಿರಾ ಎಂಬ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಸಾಂಕೇತಿಕವಾಗಿ ಶ್ರೀಮತಿ ಇಂದಿರಾ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು. ಮಾಜಿ ಸಚಿವ […]
Read More
22-04-2017, 12:03 PM
ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ಸಹಯೋಗದೊಂದಿಗೆ ದಿನಾಂಕ 22.04.2017 ನೇ ಶನಿವಾರ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಸಭಾಭವನದಲ್ಲಿ ರಕ್ತದಾನ ಶಿಬಿರ ಜರುಗಿತು. ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದ ಅದ್ಯಕ್ಷರಾದ ಜಯಂತ ನಡುಬೈಲು ಶಿಬಿರ ಉದ್ಘಾಟಿಸಿ ಮಾತನಾಡಿ ಮನುಷ್ಯನ ಶರೀರದಲ್ಲಿ ಹರಿಯುವ ರಕ್ತ ಒಂದೇ, ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಸಂದೇಶ ಸಾರುತ್ತದೆ ಎಂದು ತಿಳಿಸಿದರು. ಯುವವಾಹಿನಿ […]
Read More
26-03-2017, 11:32 AM
ಮೂಲ್ಕಿ ಬಪ್ಪನಾಡು ದೇವಸ್ಥಾನದಿಂದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದವರೆಗೆ ವಿವಿಧ ಸಂಘ ಸಂಸ್ಥೆಗಳ ಜೊತೆ ಸೇರಿ ಯುವವಾಹಿನಿ ಮೂಲ್ಕಿ ಘಟಕವು ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗವಹಿಸಿತು. ದಿನಾಂಕ 26.03.2017 ರಂದು ಜರುಗಿದ ಈ ಸ್ವಚ್ಚತಾ ಅಭಿಯಾನದಲ್ಲಿ ಮೂಲ್ಕಿ ಯುವವಾಹಿನಿ ಅದ್ಯಕ್ಷರಾದ ಚೇತನ್ ಕುಮಾರ್, ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು,ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Read More
26-03-2017, 4:12 AM
ಯುವವಾಹಿನಿ (ರಿ) ಬಜಪೆ ಘಟಕದ ಆಶ್ರಯದಲ್ಲಿ ದಿನಾಂಕ 26-03-2017 ನೇ ಆದಿತ್ಯವಾರದಂದು ಬಜಪೆಯ ಸಮೀಪವಿರುವ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬಜಪೆ ಘಟಕದ ಸುಮಾರು 20 ಕ್ಕೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಜಯರಾಮ ಶೆಟ್ಟಿ, ಇವರು ಬಜಪೆ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಜಪೆ ಯುವವಾಹಿನಿ ಪದಾಧಿಕಾರಿಗಳಾದ ಚಂದ್ರಶೇಖರ ಎಸ್ ಪೂಜಾರಿ ದೇವರಾಜ್ […]
Read More
15-03-2017, 5:36 AM
ಕಾಂತಬಾರೆ ಬೂದಬಾರೆ ಜನ್ಮಕ್ಷೇತ್ರ ಕೊಲ್ಲೂರು ಇದರ ಚತುಷ್ಪವಿತ್ರ ನಾಗಬ್ರಹ್ಮಮಂಡಲ ಸೇವೆಯ ಪ್ರಯುಕ್ತ ಒಂಬತ್ತು ಮಾಗಣೆಯ ಭಕ್ತಾಧಿಗಳಿಂದ ದಿನಾಂಕ 15-03-2017ರಂದು ಹೊರೆಕಾಣಿಕೆ ಸಮರ್ಪಿಸಲಾಯಿತು. ಈ ಸಂಧರ್ಭದಲ್ಲಿ ಮೂಲ್ಕಿ ಯುವವಾಹಿನಿಯ ವತಿಯಿಂದ ಹೊರೆಕಾಣಿಕೆಯನ್ನು ಸಮರ್ಪಿಸಿ ಶ್ರೀ ಕ್ಷೇತ್ರದಲ್ಲಿ ಮೂಲ್ಕಿ ಯುವವಾಹಿನಿ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
Read More
02-03-2017, 9:09 AM
ಉಪ್ಪಿನಂಗಡಿ ಗ್ರಾಮದ ಬಡ ಕುಟುಂಬದ ನಾರಾಯಣ ಪೂಜಾರಿಯವರ ಮನೆ ನಿರ್ಮಾಣದ ಉದ್ದೇಶಕ್ಕಾಗಿ ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ವತಿಯಿಂದ ರೂ 10,000/- ಆರ್ಥಿಕ ನೆರವು ನೀಡಲಾಯಿತು. ನೆಕ್ಕಿಲಾಡಿ ಮಾಂಡೊವಿ ಮೋಟಾರ್ಸ್ ಇದರ ಸರ್ವಿಸ್ ಮೇನೇಜರ್ ಚಂದ್ರಶೇಖರ್ ಧನ ಸಹಾಯ ವಿತರಿಸಿದರು ಮತ್ತು ಉಪ್ಪಿನಂಗಡಿ ಯುವವಾಹಿನಿಯ ಸಮಾಜಮುಖಿ ಕಾರ್ಯ ಶ್ಲಾಘನೀಯ ಹಾಗೂ ಮನೆ ನಿರ್ಮಾಣವು ಶೀಘ್ರವಾಗಿ ನೆರವೇರುವಂತಾಗಲಿ ಎಂದು ಶುಭ ಹಾರೈಸಿದರು ಈ ಸಂದರ್ಭದಲ್ಲಿ ಉಪ್ಪಿನಂಗಡಿ ಯುವವಾಹಿನಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಕಾರ್ಯದರ್ಶಿ ಮನೋಜ್ ಸಾಲ್ಯಾನ್ ಸುಣ್ಣಾಜೆ, ಗೌರವ […]
Read More
22-01-2017, 11:38 AM
ದಿನಾಂಕ 22-01-2017 ರಂದು ಯುವವಾಹಿನಿ(ರಿ) ಉಡುಪಿ ಘಟಕದ ನೇತೃತ್ವದಲ್ಲಿ ಮಹಿಳಾ ಸೌಂದರ್ಯವೃದ್ಧಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ ಎಂಬ ಮಹಿಳಾ ಕಾರ್ಯಕ್ರಮ ಶ್ರೀ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಮಲ್ಪೆ ಬಿಲ್ಲವ ಮಹಿಳಾ ಸಂಘ ಅಧ್ಯಕ್ಷೆ ಶ್ರೀಮತಿ ವಿಜಯ ಬಂಗೇರರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಸೌಂದರ್ಯ ತಜ್ಞೆಯಾದ ವೇದಾವತಿ ಸುವರ್ಣರವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟು ಉತ್ತಮ ಮಾಹಿತಿಯನ್ನು ನೀಡಿದರು. ಯುವವಾಹಿನಿ (ರಿ) ಮಂಗಳೂರು ಕೇಂದ್ರ ಸಮಿತಿಯ ಮಹಿಳಾ ಸಂಚಾಲಕಿ ಶ್ರೀಮತಿ ಗುಣವತಿ ರಮೇಶ್ ಅತಿಥಿಗಳಾಗಿ ಭಾಗವಹಿಸಿದರು. ಯುವವಾಹಿನಿ(ರಿ) ಉಡುಪಿ […]
Read More
14-01-2017, 11:21 AM
ಯುವವಾಹಿನಿ (ರಿ) ಉಡುಪಿ ಘಟಕದ ನೇತೃತ್ವದಲ್ಲಿ ತಾ. 14-01-2017 ರಂದು ಉದ್ಯಾವರದ ಈಂದ್ ಬೈಲಿನ ಶ್ರೀಮತಿ ಗಿರಿಜಾ ಇವರಿಗೆ, ಯುವವಾಹಿನಿಯ ಮಹತ್ವಾಕಾಂಕ್ಷೆಯ ತಲೆಗೊಂದು ಸೂರು ಕಾರ್ಯಕ್ರಮದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು. ಮಾನ್ಯ ಶಾಸಕರುಗಳಾದ ವಿನಯ ಕುಮಾರ್ ಸೊರಕೆ ಹಾಗೂ ಕೋಟ ಶ್ರೀನಿವಾಸ್ ಪೂಜಾರಿಯವರು ಶಿಲಾನ್ಯಾಸದ ಕಾರ್ಯವನ್ನು ನೆರವೇರಿಸಿದರು. ಯುವವಾಹಿನಿಯ ಸದಸ್ಯರು, ಊರ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸಾಂಗವಾಗಿ ನೆರೆವೇರಿತು. ಸುಮಾರು 3 ರಿಂದ 5 ಲಕ್ಷದ ಖರ್ಚಿನಲ್ಲಿ ಈ ಮನೆಯ ನಿರ್ಮಾಣ ಮಾಡಲಾಗುವುದು ಎಂದು ಉಡುಪಿ ಘಟಕದ ಅಧ್ಯಕ್ಷ […]
Read More