18-12-2018, 4:46 PM
ಬೆಳ್ತಂಗಡಿ : ಮೂಂಡೂರು ಗ್ರಾಮದ ಪರನೀರು ಯೋಗೀಶ್ ಯಾನೆ ಗೋಪಾಲ್ ಇವರು ಬಸ್ ಅಪಘಾತಕ್ಕಿಡಾಗಿ ಬಲ ಕಾಲನ್ನು ಕಳೆದುಕೊಂಡಿದ್ದು ಇವರ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಯುವವಾಹಿನಿ(ರಿ) ಬೆಳ್ತಂಗಡಿ ಘಟಕ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಅತಿಥಿಗಳು ಹಾಗೂ ಪಂದ್ಯಾಟದಲ್ಲಿ ಉಳಿಕೆಯಾದ ಮೊತ್ತ ಮತ್ತು ಮಾಜಿ ಶಾಸಕರಾದ ಕೆ ವಸಂತ ಬಂಗೇರರು ನೀಡಿದ 10000.00 ಮೊತ್ತವನ್ನು ಒಟ್ಟು ಸೇರಿಸಿ 50000.00 ರೂಪಾಯಿ ಸ್ವಾಂತ್ವನ ನಿಧಿಯನ್ನು ದಿನಾಂಕ 18.12.2018 ರಂದು ಮಾಜಿ ಶಾಸಕರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರು ಯುವವಾಹಿನಿ ಸಂಘಟನೆಯು […]
Read More
16-12-2018, 4:19 PM
ಬೆಳ್ತಂಗಡಿ : ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ಅಶಕ್ತರಿಗೆ ಸಂಜೀವಿನಿಯಾಗಿ.ಇಂತಹ ಕ್ರೀಡಾಕೂಟದ ಮೂಲಕ ನೊಂದವರಿಗೆ ನೆರವನ್ನು ನೀಡುತ್ತಾ ನುಡಿದಂತೆ ನಡೆಯುತ್ತಿರುವ ಸಂಘಟನೆ ಅದು ಯುವವಾಹಿನಿ ಬೆಳ್ತಂಗಡಿ ಘಟಕ ಎಂದು ಶ್ರೀ ಗುರುನಾರಯಣ ಸ್ವಾಮಿ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಭಗೀರಥ ಜಿ ಹೇಳಿದರು. ಅವರು ದಿನಾಂಕ 16.12.2018 ರಂದು ಬೆಳ್ತಂಗಡಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದಿಂದ ನಡೆದ ಸಾಂತ್ವನ ನಿಧಿಯ ಸಹಾಯಾರ್ಥ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ […]
Read More
13-12-2018, 3:58 PM
ಎಕ್ಕಾರು ಪೆರ್ಮುದೆ : ಮನನೊಂದ ಅಶಕ್ತ ಸಮಾಜ ಬಾಂಧವರ ಸಹಾಯಕ್ಕೆ ಸದಾ ಸಿದ್ದ ಎನ್ನುವ ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ ಘಟಕವು ತನ್ನ ಧ್ಯೇಯ ವಾಕ್ಯದಂತೆ ಮತ್ತೊಂದು ನೊಂದ ಬಡ ಮನಸ್ಸಿಗೆ ತನ್ನ ಸಹಾಯ ಹಸ್ತವನ್ನು ನೀಡಿರುತ್ತದೆ ಮೂಡಿಗೆರೆಯ ಸುರೇಶ್ ಇವರು ಕಳೆದ ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮೂಲತಃ ಬಡ ಕುಟುಂಬದವರಾಗಿದ್ದು, ಅವಿವಾಹಿತರಾಗಿದ್ದು ತನ್ನ ತಂದೆಯನ್ನೂ ಕಳೆದುಕೊಂಡಿರುತ್ತಾರೆ. ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಸಹೋದರಿ ಸುಮ ಇವರು ಕಷ್ಟ […]
Read More
11-12-2018, 3:35 PM
ಬೆಳ್ತಂಗಡಿ: ಯುವವಾಹಿನಿ(ರಿ) ಬೆಳ್ತಂಗಡಿ ಘಟಕ ಮತ್ತು ಯುವವಾಹಿನಿ ಸಂಚಾಲನ ಸಮಿತಿ ಓಡಿಲ್ನಾಳ ಇದರ ವತಿಯಿಂದ ಬೈನ್ ಹ್ಯಾಮರೇಜ್‍ಗೆ ತುತ್ತಾಗಿ ಕೋಮಾ ಸ್ಥಿತಿಯಲ್ಲಿ ಕೆಎಂಸಿ ಹಾಸ್ಪಿಟಲ್‍ನಲ್ಲಿ ಕಳೆದ 25 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತಿರುವ ಚಂದ್ರಶೇಖರ ಪೂಜಾರಿ ಸುದೆಬೈಲು ಓಡಿಲ್ನಾಳ ಇವರಿಗೆ ರೂಪಾಯಿ 15,750.00 ಸ್ವಾಂತ್ವನ ನಿಧಿಯನ್ನು ಚಂದ್ರಶೇಖರ್ ಪೂಜಾರಿ ಇವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ, ಸಂಚಾಲನ ಸಮಿತಿಯ ಕಾರ್ಯದರ್ಶಿ ನಾಗೇಶ್ ಓಡಿಲ್ನಾಳ, ಘಟಕದ ಸಲಹೆಗಾರರದ ರಮಾನಂದ ಸಾಲಿಯಾನ್ […]
Read More
07-12-2018, 4:04 PM
ಯಡ್ತಾಡಿ : ಬದುಕು ಒಂದೊಮ್ಮೆ ತೀರಾ ಸಂಕಷ್ಟಕ್ಕೆ ತುತ್ತಾಗುತ್ತದೆ. ಕಷ್ಟ ಬಂದವರಿಗೆ ಮರಳಿ ಮರಳಿ ನೋವು ಬರುತ್ತೆ. ಯಡ್ತಾಡಿ ಗ್ರಾಮದಲ್ಲಿ ವಾಸವಾಗಿರುವ ಸ.ಹಿ.ಪ್ರಾ. ಶಾಲೆ ಯಡ್ತಾಡಿಯ 7ನೇ ತರಗತಿ ವಿದ್ಯಾರ್ಥಿ ರಾಜೇಂದ್ರ ಎಂಬ ಹುಡುಗನ ಕರುಣಾಜನಕ ಕಥೆ ಇದು. ಕಡು ಬಡತನದಲ್ಲಿ ಹುಟ್ಟಿದ ಈ ಹುಡುಗನಿಗೆ ಹುಟ್ಟಿನಿಂದಲೇ ಒಂದು ಕಿಡ್ನಿಯಲ್ಲಿ ಸಮಸ್ಯೆ ಇತ್ತು. ಆದರೂ ಚಿಕಿತ್ಸೆಯ ಮೂಲಕ ಒಂದೇ ಕಿಡ್ನಿಯಲ್ಲಿ ಲವ ಲವಿಕೆಯ ಜೀವನ ಸಾಗಿಸುತ್ತಿದ್ದ. ಆದರೆ ಇತ್ತೀಚಿಗೆ ಇನ್ನೊಂದು ಕಿಡ್ನಿಯಲ್ಲೂ ಸಮಸ್ಯೆ ಕಾಣಿಸಿ ಹಲವಾರು ದಿನಗಳಿಂದ […]
Read More
04-12-2018, 2:57 AM
ವೇಣೂರು : ಯುವವಾಹಿನಿ(ರಿ.) ವೇಣೂರು ಘಟಕದ ಸೇವಾಯೋಜನೆ ‘ಆಸರೆ’ಯ 4ನೇ ಕಂತನ್ನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪೆರಾಡಿ ಗ್ರಾಮದ ಜಯ ಪೂಜಾರಿಯವರಿಗೆ ಘಟಕದ ಅಧ್ಯಕ್ಷರಾದ ನಿತೀಶ್. ಎಚ್ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್ ಮೂಡುಕೋಡಿ, ಘಟಕದ ಉಪಾಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ, ಕಾರ್ಯದರ್ಶಿಗಳಾದ ಸತೀಶ್ ಪಿ.ಎನ್, ಪದಾಧಿಕಾರಿಗಲಾದ ಕರುಣಾಕರ ಪೂಜಾರಿ ಮರೋಡಿ, ಸದಾನಂದ ಪೂಜಾರಿ, ಹರೀಶ್ ಪಿ.ಎಸ್, ಶಿವಪ್ರಕಾಶ್ ಅಂಬಲ, ಸುದೀಪ್ ಕಾಶಿಪಟ್ಣ ಉಪಸ್ಥಿತರಿದ್ದರು
Read More
02-12-2018, 3:30 PM
ಬೆಂಗಳೂರು : ಯುವವಾಹಿನಿ (ರಿ.) ಬೆಂಗಳೂರು ಘಟಕದ ಅಥಿತ್ಯದಲ್ಲಿ ತಾ: 02-12-2018 ರಂದು ಸ್ಪರ್ಶ ಟ್ರಸ್ಟ್ ನ ನಿಸರ್ಗ ಗ್ರಾಮದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಟ್ರಸ್ಟಿನ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಪೂಜಾರಿಯವರು ವಹಿಸಿಕೊಂಡಿದ್ದರು, ಸ್ಪರ್ಶ ಟ್ರಸ್ಟ್ ನ ಅಡ್ಮಿನ್ ಉಸ್ತುವಾರಿ ಆಗಿರುವ ರಾಜು ಹಾಗೂ ಶಶಧರ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಘಟಕದ ಸದಸ್ಯರಾದ ಕಿಶನ್ […]
Read More
01-12-2018, 4:41 PM
ಪಡುಬಿದ್ರಿ : ಯುವವಾಹಿನಿ (ರಿ) ಪಡುಬಿದ್ರಿ ಘಟಕದ ವತಿಯಿಂದ 01.12.2018 ರಂದು ಮಾನಸಿಕ ಅಸಮರ್ಥತೆಯಿಂದ ಬಳಲುವ ಮಕ್ಕಳನ್ನು ಹೊಂದಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಜಮಾಡಿ ಬಳಿಯ ನಿವಾಸಿ ಜಯಂತಿಯವರಿಗೆ ಘಟಕದಿಂದ ರೂ 6,000 (ಆರುಸಾವಿರ) ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ದೀಪಕ್ ಕೆ. ಬೀರ, ಉಪಾಧ್ಯಕ್ಷರಾದ ಯೋಗೀಶ್ ಪಾದೆಬೆಟ್ಟು, ಕಾರ್ಯದರ್ಶಿ ಶೈಲಜ, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅಕ್ಷಯ್ ನಂದಿಕೂರು, ಸುಶಾಂತ್ ಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್, ದಯಾನಂದ ,ಪ್ರಕಾಶ್ ಉಪಸ್ಥಿತರಿದ್ದರು.
Read More
18-11-2018, 5:20 PM
ಅಡ್ವೆ: ಯುವವಾಹಿನಿ (ರಿ) ಅಡ್ವೆ ಘಟಕದಿಂದ ಅಂತರ್ಜಲ ಮಟ್ಟ ಏರಿಕೆಗೆ ಕಿಂಡಿ ಅಣೆಕಟ್ಟು ಮುಚ್ಚುವ ಕಾರ್ಯಕ್ರಮ ದಿನಾಂಕ 18-11-2018 ಹಾಗೂ 25-11-2018 ರಂದು ಘಟಕದ ಸಂಘಟನಾ ಕಾರ್ಯದರ್ಶಿ ಅರುಣಾನಂದ ಕಿಶೋರ್ ಇವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯದಲ್ಲಿ ಘಟಕದ ಅಧ್ಯಕ್ಷರಾದ ಜಿತೇಶ್ ಜೆ. ಕರ್ಕೇರ, ಉಪಾಧ್ಯಕ್ಷರಾದ ಶ್ರೀಧರ್ ಟಿ. ಪೂಜಾರಿ, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿದಂತೆ ಘಟಕದ ಮಾಜಿ ಅಧ್ಯಕ್ಷರುಗಳು, ಹೆಚ್ಚಿನ ಸದಸ್ಯರುಗಳು ಭಾಗವಹಿಸಿದ್ದರು. ಈ ಅಣೆಕಟ್ಟನ್ನು ಮುಚ್ಚಿದ ಪರಿಣಾಮ ಪರಿಸರದ ಸುಮಾರು 60 ಮನೆಗಳ ಬಾವಿಗಳ […]
Read More
16-11-2018, 2:22 PM
ಕಂಕನಾಡಿ : ಯುವವಾಹಿನಿ (ರಿ) ಕಂಕನಾಡಿ ಘಟಕವು ಮಕ್ಕಳ ದಿನಾಚರಣೆ ಪ್ರಯುಕ್ತ ದಿನಾಂಕ 16-11-2018ರಂದು ಮಂಗಳೂರಿನ ಗೋರಿಗುಡ್ಡ ಕಿಟ್ಟೆಲ್ ಮೆಮೋರಿಯಲ್ ಶಾಲಾ ಬಡ ವಿದ್ಯಾರ್ಥಿಗಳ ಸಮವಸ್ತ್ರಕ್ಕಾಗಿ ಕಂಕನಾಡಿ ಘಟಕದ ಸದಸ್ಯರು ಹಾಗೂ ಅದೇ ಶಾಲೆಯ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಹತ್ತು ಸಾವಿರ ರೂಪಾಯಿ ಶೈಕ್ಷಣಿಕ ನೆರವು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್, ಕಾರ್ಯದರ್ಶಿ ಸುಮಾ ವಸಂತ್, ಸದಸ್ಯೆ ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.
Read More