ಸಿಂಚನ

ಅಧ್ಯಕ್ಷರ ಮಾತು:- ಪದ್ಮನಾಭ ಮರೋಳಿ

ಆತ್ಮೀಯರೇ, ಯುವವಾಹಿನಿಯ ಯುವಸಿಂಚನ ಓದುಗರಿಗೆ ನಮಿಸುತ್ತಾ, ಬಿಲ್ಲವ ಸಮಾಜದ ಯುವ ಸಂಘಟನೆಯಾದ ಯುವವಾಹಿನಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಘಳಿಗೆಯಲ್ಲಿ ನಾವಿದ್ದೇವೆ. ಇದೇ ಬರುವ ಅಗೋಸ್ಟ್ 6ರಂದು 30ನೇ ಸಮಾವೇಶಕ್ಕೆ ಉಪ್ಪಿನಂಗಡಿ ಘಟಕದ ಆತಿಥ್ಯದಲ್ಲಿ ತ್ರಿವೇಣಿ ಸಂಗಮವಾಗುವ ಪುಣ್ಯ ಭೂಮಿಯಾದ ಉಪ್ಪಿನಂಗಡಿಯಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿದೆ. ಈ ವರುಷದಲ್ಲಿ ಎಲ್ಲಾ ಘಟಕಗಳು ಕ್ರಿಯಾತ್ಮಕವಾದ ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಯುವವಾಹಿನಿಯು ನಿಂತ ನೀರಾಗದೆ ನಿರಂತರವಾಗಿ ಹರಿಯುತ್ತಾ ಸಮಾಜಮುಖಿ ಚಿಂತನೆಯೊಂದಿಗೆ ಕಾರ್ಯಚರಿಸುತ್ತಾ ಜನರ ಸಂಪರ್ಕದ ಕೊಂಡಿಯನ್ನು ವಿಶಾಲವಾಗಿ ವೃದ್ಧಿಸಿಕೊಂಡಿದೆ. […]

Read More

ಸಂಪಾದಕರ ಮಾತು:- ಗಂಗಾಧರ ಪೂಜಾರಿ

ಪ್ರೀಯ ಓದುಗರೇ, ಜಗತ್ತನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಯೊಬ್ಬರಲ್ಲೂ ನಮಗೆ ಕಾಣಸಿಗುವುದು ಆಸೆ ಮತ್ತು ಸ್ವಾರ್ಥದಿಂದ ಕೂಡಿದ ಜೀವನ. ಭೂಮಿಯ ಮೇಲೆ ಜೀವಿಸುವ ಪ್ರತಿಯೊಂದು ಜೀವಿಗೂ ಸ್ವಾರ್ಥ ಇರಲೇಬೇಕು. ಹಾಗಂತ ಅದು ಎಲ್ಲೆ ಮೀರಿರಬಾರದು. ನಾನು, ನಮ್ಮವರಷ್ಟೇ ಚೆನ್ನಾಗಿದ್ದರೆ ಸಾಕು ಎಂದು ಯೋಚಿಸಿ ಬೇರೆಯವರ ಹಿತಾಸಕ್ತಿಯನ್ನು ಬಲಿಕೊಡುವವರು ಅದೆಷ್ಟೋ ಜನ. ಇಂತಹ ಸ್ವಾರ್ಥವೆಂಬ ಬೆಂಕಿಯ ಬಳಿ ಶಾಂತಿ, ನೆಮ್ಮದಿ, ಸಹಬಾಳ್ವೆ ಎಂಬ ವಿಷಯವೇ ಇರುವುದಿಲ್ಲ. ಬದಲಾಗಿ ಅದು ನಮ್ಮನ್ನು ಸುಟ್ಟು ಭಸ್ಮ ಮಾಡುತ್ತದೆ. ನಾವು ನಮ್ಮವರು ಜೀವಿಸಲು […]

Read More

ತುಳುನಾಡ ನಂಬಿಕೆಯಲ್ಲಿ ಗೆಜ್ಜೆ ಕತ್ತಿಯ ಮಹತ್ವ:-ಶೈಲು ಬಿರ್ವ

ನವೀನತೆಯ ಯುಗದಲ್ಲಿ ನಾವು ಇಂದು ಗೆಜ್ಜೆಕತ್ತಿಯನ್ನು ಕೇವಲ ಮದುವೆಯ ಸಮಯದಲ್ಲಿ ಮ‌ಾತ್ರ ಮದುಮಗಳ ಕೈಯಲ್ಲಿ ಇರುವುದನ್ನು ಗಮನಿಸಿರಬಹುದು ಆದರೆ ಈ ಗೆಜ್ಜೆಕತ್ತಿಯ ಮಹತ್ವ ಇದರಿಂದಲು ಆಚೆಗಿದೆ. ಅದೊಂದು ಅಧಿಕಾರದ ಸಂಕೇತ ಅದೇ ರೀತಿ ರಕ್ಷಣೆಯ ಸಂಕೇತವು ಹೌದು. ಹಿಂದಿನ ಕಾಲದಲ್ಲಿ ಹೆಣ್ಣು ಪ್ರಾಯಕ್ಕೆ ಬಂದಾಗ ತಾಯಿಯಾದವಳು ಮಗಳ ಕೈಯಲ್ಲಿ ಯಾವತ್ತು ಇರುವಂತೆ ಸಣ್ಣ ಕತ್ತಿಯನ್ನು ನೀಡುತ್ತಿದ್ದಳು. ಸಣ್ಣ ಹಿಡಿಯಿರುವ ಇದು ತುದಿಯಲ್ಲಿ ಅರ್ಧ ಚಂದ್ರಾಕೃತಿಯ ರಚನೆಯಿದ್ದು ಹಿಡಿಯ ತುದಿಯಲ್ಲಿ ಅಲಂಕಾರಕ್ಕಾಗಿ ಸಣ್ಣ ಗೆಜ್ಜೆಗಳು ಇರುತ್ತದೆ. ಇದೊಂದು ಆತ್ಮ […]

Read More

ವಿಶುಕುಮಾರ್ ಹೀಗೊಂದು ನೆನಪು ….ಬರವಣಿಗೆಯ ದಾರಿಯಲ್ಲಿ …

ಶಾಂತಸ್ವಭಾವದ, ಸೂಕ್ಷ್ಮಮತಿಯಾದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗು ಹೋಗುಗಳ ಘಟನೆಗಳನ್ನು ಪರಿಶೀಲಿಸ ತೊಡಗಿದರು. ಇದು ಹೈಸ್ಕೂಲಿನಲ್ಲಿ ಓದುವಾಗಲೇ ಈ ಗುಣವನ್ನು ಬೆಳೆಸಿಕೊಂಡರು. ಬದುಕಿನ ನೈಜ ಚಿತ್ರಣವನ್ನು ಬರವಣಿಗೆ ಮೂಲಕ ಬಟ್ಟಿಳಿಸ ತೊಡಗಿದರು.  ಅವರು ಬರವಣಿಗೆಗೆ ಕಾಲಿಟ್ಟದುದೇ 1950 ರ ದಶಕದಲ್ಲಿ- ಆಗ ಅವರಿಗೆ 13-14 ರ ಪ್ರಾಯ. ಮೂಗಿನಡಿಯಲ್ಲಿ ಚಿಗುರೊಡೆಯುವ ಮೀಸೆ, ಕನಸುಗಳನ್ನು ಕಾಣುವ, ಆದರ್ಶಗಳು ಹುಟ್ಟಿಕೊಳ್ಳುವ ವಯಸ್ಸು. ಆ ಸಂದರ್ಭದಲ್ಲೇ ” ಚಂದಮಾಮ” ಮಾಸ ಪತ್ರಿಕೆಗೆ ” ದುಷ್ಟ ಶಾಸನ” ಕಥೆಯನ್ನು ಬರೆದು […]

Read More

ವಿಶುಕುಮಾರ್ ಹೀಗೊಂದು ನೆನಪು…..ಬಹುವ್ಯಕ್ತಿತ್ವದ ವಿಶು ತಂದೆಯ ಬಳುವಳಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಹತ್ತು ವರ್ಷ ಮೊದಲೇ ವಿಶುಕುಮಾರ್ ಹುಟ್ಟಿದ್ದು. ಆಗಿನ ಸಮಾಜದ ವ್ಯವಸ್ಥೆಯನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಾಲೀಕರು, ವರ್ಣದ್ವೇಷದ ಪ್ರಭಾವವಿದ್ದ ಕಾಲ. ದೇಶದ ಸ್ವತಂತ್ರಕ್ಕಾಗಿ ಇಂಗ್ಲೀಷರ ವಿರುದ್ಧ ಹೋರಾಟದ ದಿನಗಳು. ಆದರೆ ವಿಶುಕುಮಾರ್ ಮನೆತನ ಅಂಥ ಸಂದಿಗ್ಧತೆಗೆ ಒಳಪಟ್ಟಿರಲಿಲ್ಲ. ದೋಗ್ರ ಪೂಜಾರಿ ಅವರು ಯಕ್ಷಗಾನ ಕಲಾರಸಿಕರು. ಅವರ ಆಡಳಿತದಲ್ಲಿದ್ದುದು 10 ಮುಡಿ ಗೇಣಿ ಬರುವ ವರ್ಗದಾರರು. ಅವಳಿ ಜಿಲ್ಲೆ( ಉಡುಪಿ- ಮಂಗಳೂರು) ಗಳಲ್ಲಿ ಬಿಲ್ಲವ ಸಮಾಜದವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಕೈ ಬೆರಳೆಣಿಕೆಯಷ್ಟು […]

Read More

ವಿಶುಕುಮಾರ್ ಹೀಗೊಂದು ನೆನಪು ……ಬರವಣಿಗೆ ವಿವಾದಗಳ ಸುಳಿಯಲ್ಲಿ!

ವಿಶುಕುಮಾರ್ – ಯಾವುದೇ ಕೃತಿ ರಚಿಸಲಿ. ಅದು ಸಮಾಜವನ್ನು ಅಲ್ಲೋಲ ಕಲ್ಲೋಲವುಂಟು ಮಾಡುತ್ತದೆ; ಹಾಗೇ ವಿವಾದದ ಸುಳಿಯನ್ನು ಎಬ್ಬಿಸುತ್ತದೆ. ಅವರ ಬರವಣಿಗೆಯ ಶಕ್ತಿಯ ಜತೆಗೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ಒಂದು ಸೂಕ್ಷ್ಮದ ಎಳೆಯನ್ನು ಎತ್ತಿ, ಅದನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತ, ವಿವರಿಸುವ ಧಾಟಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಸುಮಾರು 16 ಕಾದಂಬರಿಗಳನ್ನು ರಚಿಸಿದ್ದಾರೆ. ಎಲ್ಲವೂ ಒಂದಕ್ಕೊಂದು ವಿಭಿನ್ನ. ನಮ್ಮ ಬದುಕಿನ ಸತ್ಯ ಘಟನೆಗಳೇ- “ ಕರಾವಳಿ” ,” ಮದರ್ ” , ” ಪ್ರಜೆಗಳು […]

Read More

ಬಿಲ್ಲವರು ಮತ್ತು ಜಾತಿಗಿರುವ ಉಪನಾಮಗಳು- ಶೈಲು ಬಿರ್ವ

ತುಳುನಾಡಿನ ಮೂಲ ಜನಾಂಗಗಳ ಬಗ್ಗೆ ಕೆದಕಲು ಹೊರಟಾಗ ಮೇಲ್ಪಂಕ್ತಿಯಲ್ಲಿ ನಿಲ್ಲುವವರು ಬಿಲ್ಲವ ಜನಾಂಗ. ಇದಕ್ಕೆ ಪೂರಕವಾಗಿ ದೈವಗಳ ಪಾರ್ದನದಲ್ಲಿ ಪೂರಕ ಮೌಖಿಕ ದಾಖಲೆ ಸಿಗುತ್ತವೆ. ಒಂದೊಮ್ಮೆ ತುಳುನಾಡಿನ ಹೆಚ್ಚಿನ ದೈವಗಳು ಬಿಲ್ಲವರ ಭಕ್ತಿಗೆ ಮತ್ತು ಮುಗ್ಧತೆಗೆ ಮೆಚ್ಚಿ ಬೆಂಬತ್ತಿ ಬಂದವುಗಳೇ ಆಗಿದೆ. ತುಳುನಾಡಿನ ಸಂಸ್ಕøತಿಗೆ ಬಿಲ್ಲವರ ಕೊಡುಗೆ ಅನಂತವಾಗಿರುವಂತದ್ದು. ಒಂದೊಮ್ಮೆ ಭವ್ಯತೆಯಿಂದ ಮೆರೆದವರು ಕಾಲನ ಕೈಗೆ ಮತ್ತು ಹೊರಗಿನವರ ದಾಳಿಗೆ ತುತ್ತಾಗಿ ತಮ್ಮ ಅಸ್ಥಿತ್ವವನ್ನೇ ಕಳಕೊಂಡು ಪರಕೀಯರಾದವರು. ಆದರೆ ಒಂದು ಕಾಲದಲ್ಲಿ ತಮ್ಮ ನ್ಯಾಯಪರತೆ, ಸತ್ಯಸಂಧತೆ ಮತ್ತು […]

Read More

ಸಂಪಾದಕರ ಮಾತು-ಗಂಗಾಧರ ಪೂಜಾರಿ

ಪ್ರೀತಿಯ ವಾಚಕರೇ, ಇತ್ತೀಚೆಗೆ ನನ್ನ ಬಾಲ್ಯ ಸ್ನೇಹಿತರೊಬ್ಬರನ್ನು ಭೇಟಿಯಾಗುವ ಸಂದರ್ಭ ಒದಗಿ ಬಂತು. ಇವರು ವೃತ್ತಿಯಲ್ಲಿ ದಂತ ವೈದ್ಯರು. ಬಾಲ್ಯ ಜೀವನವನ್ನು ನೆನಪಿಸುತ್ತಾ ಆ ದಿನಗಳ ಮೆಲುಕು ಹಾಕುತ್ತಿದ್ದೆವು. ಈ ಸಂದರ್ಭದಲ್ಲಿ ಯುವಕನೊಬ್ಬ ವೈದ್ಯರಲ್ಲಿಗೆ ಬಂದು ತನ್ನ ಹಲ್ಲು ನೋವಿನ ಸಮಸ್ಯೆಯನ್ನು ತೋಡಿಕೊಂಡರು. ಒಳಗಿನಿಂದಲೇ ವೈದ್ಯರು ಯುವಕನನ್ನು ಪರೀಕ್ಷಿಸಿ ಹೊರಬಂದು ಇನ್ನು ನೀವು ಗಟ್ಟಿ ವಸ್ತುಗಳನ್ನು ತಿನ್ನುವ ಹಾಗಿಲ್ಲ. ಮೆತ್ತಗಿನ ವಸ್ತುಗಳನ್ನು ಮಾತ್ರ ಜಗಿಯಬೇಕು ಎನ್ನುತ್ತಾ ಔಷಧಿ ಬರೆದು ಕಳುಹಿಸಿಕೊಟ್ಟರು. ವೈದ್ಯರು ನನ್ನ ಎದುರುಗಡೆ ಇದ್ದ ಅವರ […]

Read More

ಅಧ್ಯಕ್ಷರ ಮಾತು-ಪದ್ಮನಾಭ ಮರೋಳಿ

ಆತ್ಮೀಯರೇ, ಮಕ್ಕಳ ಪರೀಕ್ಷೆಯ ಸಮಯ ಕಳೆದು ನಾವೆಲ್ಲರೂ ಹಾಯಾಗಿ ಮಕ್ಕಳ ರಜೆಯ ಮಜಾ ಅನುಭವಿಸುತ್ತಿದ್ದೇವೆ. ಈ ಸಮಯದಲ್ಲಿ ಕುಟುಂಬದವರೆಲ್ಲರೂ ಒಟ್ಟುಗೂಡಿಕೊಂಡು ಯಾವುದಾದರೂ ಧಾರ್ಮಿಕ ಕ್ಷೇತ್ರಕ್ಕೆ ಹೋಗಿ, ಪರೀಕ್ಷೆ ಬರೆದ ಮಕ್ಕಳಿಗೆ ಒಳ್ಳೆಯ ಅಂಕ ದೊರೆಯುವಂತೆ ಹಾಗೂ ಎಲ್ಲರಿಗೂ ಒಳ್ಳೆಯದಾಗುವಂತೆ ಬೇಡುವುದರ ಜೊತೆಗೆ ನಮ್ಮ ಕೌಟುಂಬಿಕ ಸಂಬಂಧಗಳನ್ನು ಅಭಿವೃದ್ಧಿ ಪಡಿಸಿಕೊಂಡರೆ ಬಹಳ ಒಳ್ಳೆಯದು. ಪರೀಕ್ಷೆಯ ಫಲಿತಾಂಶ ಬಂದ ಮೇಲೆ ಒಳ್ಳೆಯ ಅಂಕ ಪಡೆದ ಮಕ್ಕಳನ್ನು ಸನ್ಮಾನಿಸುವ ಪರಿಪಾಠವನ್ನು ಇಟ್ಟುಕೊಳ್ಳೋಣ. ಅದೇ ರೀತಿ ಸ್ವಲ್ಪ ಕಡಿಮೆ ಅಂಕ ಪಡೆದ ಮಕ್ಕಳನ್ನು […]

Read More

ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ – ಶ್ರೀಮತಿ ನಿರ್ಮಲಾ ಸಂಜೀವ್, ಸುರತ್ಕಲ್

ಮನುಷ್ಯ ಜೀವನ ಶ್ರೇಷ್ಠ ಎಂಬ ಭಾವನೆಯಿಂದ ಬೀಗುತ್ತಿರುವ ನಾವು ನೀವೆಲ್ಲರೂ ಕೆಲವೊಂದು ಸಂದರ್ಭಗಳಲ್ಲಿ ಆಂತರಿಕ ಯಾ ಬಾಹ್ಯ ಒತ್ತಡಗಳಿಂದ ರೋಸಿ ಹೋಗಿ, ಯಾವುದಾದರೂ ಪ್ರಾಣಿಯೋ, ಪಕ್ಷಿಯೋ ಆಗಿ ಹುಟ್ಟುತ್ತಿದ್ದರೆ ಈ ಎಲ್ಲಾ ಸಮಸ್ಯೆಯೇ ಇರುತ್ತಿರಲಿಲ್ಲವೆಂದು ಬಾಲಿಶವಾಗಿ ಯೋಚಿಸೋದು ಸಹಜ ತಾನೇ? ಭೂಮಿಯು ಗುರುತ್ವಾಕರ್ಷಣೆಯ ಬಲದಿಂದ ಸೂರ್ಯನ ಸುತ್ತ ತಿರುಗುತ್ತಿದ್ದರೂ ನಮ್ಮ ಅರಿವಿಗೆ ಬಾರದೆ ಒಂದು ರೀತಿಯಲ್ಲಿ ಯಾವ ದೈಹಿಕ ತಾಪತ್ರಯವೂ ಇರದೆ ಬದುಕುವ ಸೌಭಾಗ್ಯವುಳ್ಳವರು ನಾವು. ಅದೇ ರೀತಿ ನಮ್ಮ ಮನಸ್ಸೆಂಬ ಗುರುತ್ವಾಕರ್ಷಣೆಯ ಬಲ ಸ್ಥಿಮಿತದಲ್ಲಿದ್ದರೆ ಮಾತ್ರ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!