ಸಿಂಚನ

ದೇಯಿ ಬೈದ್ಯೆತಿ

ಪಾಡ್ದನದಲ್ಲಿ ಸರಿಸಾಟಿಯಿಲ್ಲದ ಬಂಟರೆಂದು ಕರೆಯಲ್ಪಟ್ಟಿರುವ ಬೈದರ್ಕಳರೆಂದು ಆರಾಧಿಸಲ್ಪಡುತ್ತಿರುವ ಅವಳಿ ವೀರ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯತಿ. ತುಳುನಾಡಿನ ಪಾರಂಪರಿಕ ನಾಟಿವೈದ್ಯ ಪದ್ಧತಿಯ ಮೂಲ ಪುರುಷೆಯಾಗಿ ಇತಿಹಾಸದಲ್ಲಿ ಮಹತ್ತರ ಗೌರವದ ಸ್ಥಾನ ಪಡೆದುಕೊಂಡಿದ್ದಾಳೆ. ತುಳು ಮೌಖಿಕ ಸಾಹಿತ್ಯವಾದ ಪಾಡ್ದನದ ಕಥೆಯಲ್ಲಿ ದೇಯಿಯು ದೇವರ ಅನುಗ್ರಹದಿಂದ ಕೇಂಜವ ಹಕ್ಕಿಗಳ ಮೊಟ್ಟೆಯಿಂದ ಹುಟ್ಟಿಕೊಂಡವಳೆಂದು ಹೇಳಿದೆ. ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪಡುಮಲೆಯ ಪೆಜನಾರ ದಂಪತಿಗಳು (ದೇಯಿಯು ಹುಟ್ಟಿದ ಪೆಜನಾರರ ಕೂವೆ ತೋಟಮನೆಯು ಈಗಲೂ ಇದೆ. ಇವರು ಕರಾಡ ಬ್ರಾಹ್ಮಣರಾಗಿರುವರು. ಕರಾಡ ಬ್ರಾಹ್ಮಣರು […]

Read More

ಆ ನಾಲ್ಕು ಜನ ಯಾರು?

ಅಮ್ಮ ನನಗೆ ಕೈತುತ್ತು ಕೊಡುವುದನ್ನು ಬಿಟ್ಟಾಗಿನಿಂದ ನಾನು ಇವರನ್ನು ಹುಡುಕುತ್ತಿದ್ದೇನೆ. ಆದರೆ ಅವರಿನ್ನೂ ನನಗೆ ಸಿಗಲೇ ಇಲ್ಲ!. ಅವರು ನನ್ನ ಹಿಂದೆ ಮುಂದೆ ಎಲ್ಲೋ ಸುತ್ತಾಡುತ್ತಿದ್ದಾರೆ. ಗಬಕ್ಕೆನೇ ಹಿಡಿಯೋಣ ಎಂದರೆ ಆ ನಾಲ್ಕು ಜನ ನನ್ನ ಕಣ್ಣಿಗೆ ಕಾಣಲ್ಲ, ಆ ನಾಲ್ಕು ಜನ ನನ್ನ ಭ್ರಮೆ ಎಂದುಕೊಳ್ಳುತ್ತೇನೆ, ಆದರೆ ಎಲ್ಲರೂ ಆ ನಾಲ್ಕು ಜನರ ಬಗ್ಗೆ ಮಾತಾಡುತ್ತನೇ ಇರುತ್ತಾರೆ. ಸಮಾಜದ ಒಟ್ಟು ಜನ ಸಂಖ್ಯೆಯ 1ರಷ್ಟು ಜನವಾದರೂ ಈ ನಾಲ್ಕು ಜನರ ಬಗ್ಗೆ ದಿನದಲ್ಲಿ ಒಮ್ಮೆಯಾದರೂ ಪ್ರಸ್ತಾಪಿಸುತ್ತಾರೆ. […]

Read More

ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಉಲ್ಲಾಸ

ಗ್ರಾಮೀಣ ಬದುಕು ಎಂದಾಗ ನೆನಪಿಗೆ ಬರುವುದು ಅಲ್ಲಿಯ ಜನರ ಕಸುಬು, ಆಚರಣೆ, ಪ್ರಾಥಮಿಕ ಸಂಬಂಧ, ಆಡಂಬರವಿಲ್ಲದ ಬದುಕು, ಅಲ್ಪತೃಪ್ತ ಸ್ವಾವಲಂಬಿ ಜೀವನ, ವಸ್ತು ವಿನಿಮಯ ಪದ್ಧತಿಯ ಸ್ವಲ್ಪ ಇರುವಿಕೆ, ಸಾಕುಪ್ರಾಣಿಗಳ ಒಡನಾಟ ಹೀಗೆ ಹತ್ತಾರು ದೃಷ್ಟಾಂತಗಳು. ಆರ್ಥಿಕ ಅಭಿವೃದ್ಧಿಯ ವೇಗ ವರ್ಧನೆಯ ಗುರಿ ಹಿಂದೆ ಬಿದ್ದಿರುವ ನಾವು ನಿಜವಾದ ಬದುಕಿನ ಉಲ್ಲಾಸವನ್ನೇ ಕಳೆದುಕೊಳ್ಳುತ್ತಿದ್ಧೇವೆ. ಬದುಕಿನ ಮೂಲ ಸೆಲೆಯನ್ನೇ ಮುರಿದು ಕೃತಕ ಬದುಕನ್ನು ಕಟ್ಟಿಕೊಂಡಿದ್ದೇವೆ. ಕೇವಲ ಕೈಗಾರಿಕಾಭಿವೃದ್ಧಿ, ಆಧುನಿಕ ಕೃಷಿ ಅಭಿವೃದ್ಧಿ, ವಿದ್ಯುತ್‍ಶಕ್ತಿ ಉತ್ಪಾದನಾ ಉದ್ದೇಶವನ್ನೇ ಮುಂದಿಟ್ಟುಕೊಂಡು ಮಳೆಗಾಲವನ್ನು […]

Read More

ಹೆಜ್ಜೆ ಇಡುತ್ತಾ ಬನ್ನಿ ಗೆಜ್ಜೆಗಿರಿಗೆ

ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ಅನೀತಿ ತಾಂಡವವಾಡುತ್ತಿದ್ದಾಗ. ಸತ್ಯಧರ್ಮರಕ್ಷಣೆಗಾಗಿ ಬ್ರಹ್ಮ ಸಂಕಲ್ಪದಂತೆ ಬಿಲ್ಲವ ಕುಲದಲ್ಲಿ ಅವತಾರ ಪಡೆದವರು ಕೋಟಿ ಚೆನ್ನಯರು. ಆಗಿನ ಕಾಲದ ಪಾಳೇಗಾರರಾಗಿದ್ದ ಬಂಟ ಬಲ್ಲಾಳರ ದರ್ಪ ದೌರ್ಜನ್ಯದ ಅಧರ್ಮದ ಆಡಳಿತ ನೀತಿಗೆ ವಿರುದ್ಧವಾಗಿ ಹೋರಾಡಿ ವೀರ ಮರಣವನ್ನಪ್ಪಿದ ದೈವತ್ವಕ್ಕೇರಿ ಬ್ರಹ್ಮದೇವರ ಎಡಬಲಗಳಲ್ಲಿ ನಿಂತು ಬ್ರಹ್ಮಬೈದ್ಯರಾಗಿ ತುಳುನಾಡಿನ ಭಕ್ತ ಜನಕೋಟಿಗಳಿಂದ ಇಂದು ಆರಾಧಿಸಲ್ಪಡುತ್ತಿ ದ್ದಾರೆ. ಸುಮಾರು ಇನ್ನೂರೈವತ್ತಕ್ಕಿಂತಲೂ ಅಧಿಕ ಸ್ಥಳಗಳಲ್ಲಿ ತಮ್ಮ ಕಲೆಕಾರ್ಣಿಕಗಳನ್ನು ತೋರಿಸಿ ಆರಾಧನೆ ಪಡಕೊಂಡ ಕೋಟಿ ಚೆನ್ನಯರಿಗೆ ಅವರು ತಮ್ಮ ಜೀವಿತಾವಧಿಯ ಮುಕ್ಕಾಲಂಶ […]

Read More

ಸುಖ ಎಲ್ಲಿದೆ?

ನಾವೆಲ್ಲರೂ ಇಂದು ಅನೇಕ ಆಸೆಗಳನ್ನು ಇಟ್ಟುಕೊಂಡು ಬದುಕುತ್ತಿದ್ದೇವೆ. ಅದರಿಂದ ಸುಖವಿದೆ, ಇದರಿಂದ ಸುಖವಿದೆ ಎನ್ನುತ್ತಾ ಅನೇಕ ಕನಸುಗಳನ್ನು ಕಾಣುತ್ತೇವೆ. ಈ ಕನಸುಗಳೆಲ್ಲವೂ ನಾವು ಸುಖವಾಗಿ ಬಾಳಬೇಕು, ಸುಖವಾಗಿ ಇರಬೇಕು; ಸುಖವನ್ನಲ್ಲದೆ ಕಷ್ಟವನ್ನು ಅನುಭವಿಸಬಾರದು. ಇದು ಎಲ್ಲರ ಆಸೆ. ಆದರೆ ಮನುಷ್ಯರಾದವರು ಈ ಆಸೆಗಳನ್ನು ಪಡುವುದು ತಪ್ಪೆಂದಲ್ಲ. ಇದು ಮಾನವನ ಸಹಜ ಗುಣ. ಆದರೂ ಏನು ಮಾಡೋಣ? “ತಾನೊಂದು ನೆನೆದರೆ ಮಾನವ, ಬೇರೊಂದು ಬಗೆವುದು ದೈವ” ಎಂಬಂತೆ ಎಲ್ಲರ ಆಸೆಗಳು, ಎಲ್ಲರ ಕನಸುಗಳು ಎಣಿಸಿದಂತೆ ಆಗುವುದೇ ಇಲ್ಲ. ನಾವೆಷ್ಟು […]

Read More

ನಮ್ಮ ಪಯಣ ಸ್ವಾವಲಂಬನೆಯತ್ತವೊ? ಅಥವಾ ಪುನಃ ದಾಸ್ಯದತ್ತವೊ?

ಸ್ವಾಂತಂತ್ರ್ಯ ಪಡೆದು 70 ವರ್ಷಗಳು ಸಂದರೂ ಭಾರತ ಸ್ವಾವಲಂಬಿ ರಾಷ್ಟ್ರವೆಂಬ ಹೆಸರು ಪಡೆದಿಲ್ಲ. ಎಲ್ಲದಕ್ಕೂ ಪರ ರಾಷ್ಟ್ರದ ಮೆಲೆ ನಾವು ಅವಲಂಬಿತರಾಗಿದ್ದೇವೆ. ಭಾರತವನ್ನು ನೂರಾರು ವರ್ಷ ಆಳಿದ ಮೊಗಲರು, ಬ್ರಿಟಿಷರು ಇಲ್ಲಿನ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದು ಹೋದರೆ, ಈಗಿನ ಕೆಲ ರಾಜಕಾರಣಿಗಳು ಅವನ್ನೇ ಮಾಡುತ್ತಿರುವುದು ವಿಪರ್ಯಾಸ. ಸ್ವಾತಂತ್ರೋತ್ತರ ಭಾರತದ ನಮ್ಮ ಹಲವು ನಾಯಕರು ಭಾರತದ ಪ್ರಗತಿಗಿಂತ ತಮ್ಮ ಕುಟುಂಬಸ್ಥರ ಪ್ರಗತಿಯ ಬಗ್ಗೆ ಚಿಂತಿತರಾಗಿದ್ದಾರೆ. ಇತ್ತೀಚೆಗೆ ಭಾರತ ಎತ್ತ ಸಾಗುತ್ತಿದೆ, ಎಂಬ ಭಯ ನಮ್ಮನ್ನು ಕಾಡುತ್ತಿದೆ. ಕೋಟಿಗಟ್ಟಲೆ ಹಗರಣದಲ್ಲಿ […]

Read More

ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ

ಬ್ರಹ್ಮಶ್ರೀ ನಾರಾಯಣಗುರುಗಳು ಹತ್ತೊಂಭತ್ತನೇಯ ಶತಮಾನದ ಕೇರಳದ ಮಹಾನ್ ಸಂತ ಹಾಗೂ ಸಮಾಜ ಸುಧಾರಕರು. ಅದ್ವೈತ ಪ್ರತಿಪಾದನೆ, ‘ಮಾನವರೆಲ್ಲ ಒಂದೇ ಜಾತಿ, ಒಂದೇ ಮತ, ಎಲ್ಲರಿಗೂ ದೇವರೊಬ್ಬನೇ’ ಎನ್ನುವ ಸರಳ ಸಂದೇಶಗಳೊಂದಿಗೆ ಕೇರಳ, ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ ಕರಾವಳಿ ಜಿಲ್ಲೆಗಳನ್ನೂ ಪ್ರಭಾವಿಸಿ ಸಾಮಾಜಿಕ ಪರಿವರ್ತನೆ ಸಾಧಿಸಿದವರು. ದಾರ್ಶನಿಕತೆ, ಪ್ರಖರ ಚಿಂತನೆ, ಪಾಂಡಿತ್ಯದ ಅವರ ಸರಳ ಉದ್ಭೋದಕ ಕೃತಿಗಳು ಸಮಾಜ ಸುಧಾರಣಾ ಕಾರ್ಯಗಳು ಹಿಂದುಳಿದ ಸಮಾಜದ ಆತ್ಮಸ್ಥೈರ್ಯ ಮತ್ತು ಸಂಘರ್ಷರಹಿತ ಸಮಾಜ ನಿರ್ಮಾಣಕ್ಕಾಗಿ ಸಮಕಾಲೀನವಾಗಿಯೂ ಅತ್ಯಂತ ಪ್ರಸ್ತುತವಾಗಿವೆ. ಇಂತಹ ಮಹೋನ್ನತ […]

Read More

ತ್ರಿಕಾಲಾನ್ವಯ ಸಂದೇಶಗಳು

ಸುಮಾರು 1918-20ರ ಸಮಯ. ಕೇರಳದಲ್ಲಿನ ಈಳವ ಮತ್ತು ತೀಯ ಜನಾಂಗದವರು, ಸಾಮೂಹಿಕವಾಗಿ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದ ಸಾಮಾಜಿಕ ದುರಂತ ಕಾಲವಾಗಿತ್ತು. ಇದರಿಂದ ಬೇಸತ್ತ ಬ್ರಹ್ಮಶ್ರೀ ನಾರಾಯಣಗುರುಗಳ ಶಿಷ್ಯರುಗಳಾದ ಸ್ವಾಮಿ ಬೋಧಾನಂದ, ನ್ಯಾಯವಾದಿ ಪರಮೇಶ್ವರ ಮೆನನ್ (ಮುಂದೆ ಗುರುಗಳಿಂದ ದೀಕ್ಷೆ ಪಡೆದ ಸ್ವಾಮಿ ಧರ್ಮತೀರ್ಥರ್) ಸಿ. ಕೃಷ್ಣ ವಕೀಲ, ನ್ಯಾಯಮೂರ್ತಿ ಅಯ್ಯಾ ಕುಟ್ಟಿ, ಸಹೋದರನ್ ಅಯ್ಯಪ್ಪನ್, ರಾಮವರ್ಮ ತಂಪುರಾನ್ ಮುಂತಾದವರು ಈ ಸಾಮೂಹಿಕ ಮತಾಂತರವನ್ನು ತಪ್ಪಿಸಲು ಶ್ರೀ ನಾರಾಯಣ ಧರ್ಮವೆಂಬ ಹೊಸ ಧರ್ಮವನ್ನು ಸ್ಥಾಪಿಸಿ, ಹಿಂದೂ […]

Read More

ಮತ್ತೆ CET…ಯ ಸುತ್ತ

ಮೇ-ಜೂನ್ ತಿಂಗಳುಗಳು ಅಬ್ಬರದ ಮುಂಗಾರು ಮಳೆಯನ್ನು ತರುವುದರ ಜೊತೆ ವಿದ್ಯಾರ್ಥಿ ಸಮುದಾಯದಲ್ಲಿ ಅತ್ಯಂತ ತಳಮಳದ, ಅಲ್ಲೋಲ ಕಲ್ಲೋಲದ ಆತಂಕದ ಕಾಲವನ್ನೂ ತರುತ್ತವೆ. ವಿದ್ಯಾರ್ಥಿಗಡಣ CET ಎಂಬ ಸುನಾಮಿಯ ಸುತ್ತ ದಿಕ್ಕು ತಪ್ಪಿದವರಂತೆ, ಸುತ್ತ ತೊಡಗುತ್ತದೆ. CET ಒಂದೆರಡು ವರ್ಷಗಳ ಮೊದಲೇ ಪ್ರಾರಂಭವಾಗುವ ಈ ಸುನಾಮಿ ಕೇವಲ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಅವರ ಹೆತ್ತವರನ್ನೂ, ಕುಟುಂಬವನ್ನೂ ಒಟ್ಟಿಗೆ ಬಾಧಿಸುತ್ತದೆ. ಈ ಚಂಡಮಾರುತಕ್ಕೆ ಒಂದು ಕರಾಳ ಮುಖವೂ ಇದೆ. ಇದಕ್ಕೆ ಅನೇಕ ವಿದ್ಯಾರ್ಥಿಗಳು ಸುಖಾಸುಮ್ಮನೆ ಬಲಿಯಾಗುತ್ತಿದ್ದಾರೆ. ಇನ್ನೊಂದಷ್ಟು ಜನ ಮಾನಸಿಕ ತುಮುಲಕ್ಕೊಳಗಾಗಿ […]

Read More

ತುಳುವೆರೆ ತುತ್ತೈತದ ಪೊರ್ಲು : ಗುಣವತಿ ರಮೇಶ್

ತುಳುನಾಡ್ ತುಳುಭಾಷೆಗ್ ಭಾರೀ ಪಿರಾಕ್‌ದ ಇತಿಹಾಸೊ ಉಂಡು. ಕರ್ನಾಟಕದ ಅಂಚನೆ ಭಾರತೊದ ಸಂಸ್ಕೃತಿಗ್ ತುಳುನಾಡ್‌ದ ಕೊಡುಗೆ ಮಸ್ತ್ ಉಂಡು. ಭಾರಿ ವಿಶಿಷ್ಟತೆನ್ ಪಡೆಯಿನ ಈ ಪೊರ್ಲು ತುಳುನಾಡ್, ಈ ನಡುಟ್ಟು ಬೇತೆ ಭಾಷೆಲೆನ ಬಿರುಗಾಳಿ ಏತ ಜೋರುಡು ಬೀಜಿಂಡಲಾ ೨೦೦೯ನೇ ಇಸವಿಡ್ ಉಜಿರೆಡ್ ನಡೆತಿನ ವಿಶ್ವ ತುಳು ಸಮ್ಮೇಳನೊಡ್ದು ಬೊಕ್ಕ ತುಳುಭಾಷೆ, ತುಳುವೆರೆನ ಆಚಾರ-ವಿಚಾರ, ತುಳುವ ಸಂಸ್ಕೃತಿ, ಸಂಪ್ರದಾಯೊಳೆಗ್ ಒಂಜಿ ಪೊಸ ದೇಕಿ ಬತ್ತಂಡ್. ಒಂಜಿ ರೀತಿಡ್ ಆನೆ ಬಲ ಬತ್ತಿಲೆಕ್ಕ ಆಂಡ್. ನಮ್ಮ ತುಳುವ ಸಂಸ್ಕೃತಿದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!