2017 : ವಿಶುಕುಮಾರ್ ಪ್ರಶಸ್ತಿ ಪುರಸ್ಕೃತರು
01-11-2017, 7:55 AM
15-10-2017, 2:35 PM
ಸುಮಾರು 450 ವರ್ಷಗಳ ಹಿಂದೆ ನಡೆದ ಐತಿಹಾಸಿಕ ‘ ಕೋಟಿ- ಚೆನ್ನಯ‘ ಅವಳಿ ವೀರ ಪುರುಷರ ಸ್ವಾಭಿಮಾನದ ಬದುಕಿನ ನೈಜ ಕಥೆ- ವಿಶುಕುಮಾರ್ ಅವರಿಗೆ ಆ ವೀರ ಪುರುಷರು ತುಂಬಾ ಪ್ರಭಾವ ಬೀರಿದ್ದರು. ಅವರ ವ್ಯಕ್ತಿತ್ವ, ನಡೆ-ನುಡಿ ,ಅವರು ಅನ್ಯಾಯದ ವಿರುದ್ಧ ಹೋರಾಡುವುದು ಇತ್ಯಾದಿ. ಇದನ್ನು ವಿಶುಕುಮಾರ್ ಅವರು ತಮ್ಮ ಜೀವನುದ್ದಕ್ಕೂ ಪಾಲಿಸಿಕೊಂಡು ಬಂದಿದ್ದರು. ಆ ವೀರಪುರುಷರನ್ನು ‘ ಮಾದರಿ’ಯಾಗಿಟ್ಟುಕೊಂಡರು.ಆ ಕಥೆ ಹಿಡಿಸಿದ್ದರಿಂದಲೇ ಮೊದಲು ಅವರು ನಾಟಕ ಬರೆದು, ನಿರ್ದೇಶನ ಮಾಡಿದರು. ಅದರಲ್ಲಿ ಯಶಸ್ವಿ ಕೂಡ ಪಡೆದರು. […]
15-10-2017, 1:51 PM
ಕಳೆದ ಸಂಚಿಕೆಗಳಲ್ಲಿ ವಿಶುಕುಮಾರ್ ಅವರು ತನ್ನ 30 ರ ಹರೆಯದ ಒಳಗಿನ ಅಂದರೆ 1965 ರ ಮೊದಲು ಬರೆದ ಲೇಖನ, ಕಾದಂಬರಿ, ನಾಟಕಗಳ ಬಗ್ಗೆ ಬರೆದಿದ್ದೇವು. ಮುಂದಿನ ಸಂಚಿಕೆಗಳಲ್ಲಿ 1975 ರ ಒಳಗೆ ಅವರ ಬರವಣಿಗೆ, ಯೋಚನಾ ಮಟ್ಟ, ಸಾಧನೆಗಳ ಕುರಿತು ಬರೆಯುತ್ತೇವೆ. 1965 ರಲ್ಲಿ ವಿಶುಕುಮಾರ್ ಅವರು ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಅಧಿಕಾರಿಯಾಗಿ ನೇಮಕಗೊಂಡರು. ಅವರು ಕುಂದಾಪುರದಲ್ಲಿ ಕೆಲಸ ಮಾಡತೊಡಗಿದರು. ‘ ಎಂಡೋಮೆಂಟ್ ‘ ಆಗಿರುವ ದೇವಾಲಯಗಳ ಲೆಕ್ಕ ಪರಿಶೋಧನೆ ಮಾಡುವುದೇ ಇವರ ಕೆಲಸ. […]
14-10-2017, 3:01 PM
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಶುಕುಮಾರ ಅವರ ಹೆಸರನ್ನು ಸ್ಥಿರವಾಗಿ ನಿಲ್ಲುವಂತೆ ಮಾಡಿದ ಕಾದಂಬರಿ ‘ ಕರಾವಳಿ’. ಕನ್ನಡನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸಂಚಲನೆ ಮೂಡಿಸಿದ ಕಾದಂಬರಿ. ಕರಾವಳಿ ಬೆಸ್ತರ( ಮೊಗವೀರರ) ಜನಜೀವನವನ್ನು ಅನಾವರಣಗೊಳಿಸಿದ ಕಾದಂಬರಿಯದು. 1966 ರಲ್ಲಿ ವಿಶುಕುಮಾರ ಅವರು ಕಾದಂಬರಿಯನ್ನು ಬರೆದಿದ್ದಾರೆ. ಮೊಗವೀರ ಹೆಣ್ಣು ಮಗಳೊಬ್ಬಳು ಅನ್ಯಕೋಮಿನ ( ಮುಸ್ಲಿಂ) ಯುವಕನನ್ನು ಪ್ರೇಮಿಸಿ, ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದುವ ಕತಾಹಂದರ. ಈ ಘಟನೆಯನ್ನು ಆಧರಿಸಿ ವಿಶುಕುಮಾರ ಕಾದಂಬರಿ ಹೆಣೆದಿದ್ದಾರೆ. ವಿಶುಕುಮಾರ ಅವರು ಕಾದಂಬರಿ ಬರೆದ ಹಿನ್ನಲೆ […]
08-10-2017, 4:53 PM
ವಿಶುಕುಮಾರ್ ಸಾಯುವಾಗ 6 ತಿಂಗಳ ಹಸುಕೂಸು… ಶ್ರವಣಕುಮಾರ್ ಈಗ ಬಿ. ಇ. ಪದವೀಧರ. ಸ್ವಂತ ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಅವರು ವಕಲಾತು ನಡೆಸುತ್ತಿದ್ದಾರೆ. ಅಲ್ಲೋಲಕಲ್ಲೋಲವಾಗಿದ್ದ ಸಂಸಾರ ಒಂದು ಹಿಡಿತಕ್ಕೆ ಬಂದಿದೆ. ಕನ್ನಡ ಸಾಹಿತ್ಯರಂಗದಲ್ಲಿ ಏನೇನೊ ಬದಲಾವಣೆಗಳಾಗಿವೆ. ಚಿತ್ರರಂಗದಲ್ಲೂ ಹಾಗೇ- ನಾಟಕರಂಗ- ರಾಜಕೀಯರಂಗದಲ್ಲೂ ಕೂಡ- ಈ ನಾಲ್ಕೂ ರಂಗದಲ್ಲೂ ವಿಶುಕುಮಾರ್ ತನ್ನದೇ ಛಾಪವನ್ನು ಒತ್ತಿದವರು. ಮುಂದಿನ ಕಂತುಗಳಲ್ಲಿ ಅದರ ಅವಲೋಕನ ನಡೆಯಲಿದೆ. ಕನ್ನಡ ಜನತೆ- ಅದರಲ್ಲೂ ಕರಾವಳಿ ಅವಳಿ ಜಿಲ್ಲೆ ( ಉಡುಪಿ- ಮಂಗಳೂರು) […]
21-09-2017, 5:02 PM
ಆಧುನೀಕರಣ ಪ್ರಭಾವದಿಂದ ತಂತ್ರಜ್ಞಾನದ ಒಳಿತುಗಳಂತೆ ಕೆಡುಕುಗಳು ಉಂಟಾಗಿ ಯುವ ಸಮುದಾಯದ ಮೇಲೆ ಅದರ ಪರಿಣಾಮ ಪ್ರಖರವಾಗಿದೆ. ಹೆತ್ತವರು ಉತ್ತಮವಾಗಿ ಶಿಶು ಆರೈಕೆಯೊಂದಿಗೆ ಮಕ್ಕಳ ಮೇಲೆ ಯಾವುದೇ ಕೆಟ್ಟ ಪ್ರಭಾವ ಆಗದಂತೆ ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ನಾರಾಯಣಗುರುವರ್ಯರಂತ ಮಹನೀಯರ ತತ್ವಾದರ್ಶಗಳನ್ನು ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇಂಜ, ಕುತ್ಯಾರು ಬ್ರಹ್ಮಬೈದರ್ಕಳ ಗರಡಿಯ ಗಡಿ ಪ್ರಧಾನರಾದ ಬಗ್ಗ ಪೂಜಾರಿ ಉಮೇಶ್ ಕೋಟ್ಯಾನ್ ತಿಳಿಸಿದರು. ಅವರು ಪಡುಬಿದ್ರಿ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ […]
13-09-2017, 12:37 PM
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸ್ಥಾಪಕ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಳಾ ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಬಿ.ತಮ್ಮಯ ಸಂಪಾದಕೀಯದ ತುಳು ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ದಿನಾಂಕ 13.09.2017 ರಂದು ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ, ಬಿ.ತಮ್ಮಯ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ […]
10-09-2017, 1:16 PM
ವಿಶಿಷ್ಟ ವಿನ್ಯಾಸದೊಂದಿಗೆ ವರ್ಣರಂಜಿತ ಪುಟಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಎಲ್ಲರ ಮನಸ್ಸು ಗೆಲ್ಲಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ತಿಳಿಸಿದರು ಅವರು ದಿನಾಂಕ 10.09.2017 ರಂದು ಯುವವಾಹಿನಿ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸಸಿಹಿತ್ಲು ವೈಶಾಲಿ ರೆಸಾರ್ಟ್ ಇಲ್ಲಿ ಜರುಗಿದ ಯುವವಾಹಿನಿಯ 26 ಘಟಕಗಳ ಸಮನ್ವಯತೆ ಸ್ನೇಹಾನುಬಂಧ ಕಾರ್ಯಕ್ರಮದಲ್ಲಿ ಯುವಸಿಂಚನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ ಹಾಗೂ ಸಹಕಾರದಿಂದ ಹೊಸ ವಿನ್ಯಾಸದಲ್ಲಿ ಯುವಸಿಂಚನ […]
06-08-2017, 5:53 PM
ಮಳೆರಾಯಗೆ ಅಡ್ಡ ಹಿಡಿಯಬೇಕಿದ್ದ ಬಣ್ಣಬಣ್ಣದ ಛತ್ರಿಯ ತುಂಬೆಲ್ಲಾ… ಕುಂಟಲ ಹಣ್ಣುಗಳದ್ದೇ ಕಾರುಬಾರು… ನಾ ನೆನದರೂ ಹಣ್ಣು ನೆನೆಯಬಾರದೆಂಬ ಕಕ್ಕುಲತೆ… ಅಮ್ಮ ಬೈಯುವಳೆಂದು ಹಸಿರೆಲೆಗಳ ತಿಂದು ಕುಂಟಲ ಬಣ್ಣವ ಮಾಸಿಸಿ… ನಾಲಗೆ ಬಿಳಿ ಮಾಡಿದ ನೆನೆದರೆ ಕನವರಿಸದೇ…ಬಾಲ್ಯ..ಇನ್ನೊಮ್ಮೆ…? ಗೆಳತಿಯರೊಡನೆ ಓಡೋಡಿ ಜೊತೆಗೂಡಿ ಗುಡ್ಡ ತೋಡು ದಾಟಿ ಪ್ರೀತಿಯ ಶಾಲೆಗೆಂದು ಪ್ರೀತಿಯಿಂದ ಬರುತ್ತಿದ್ದ ಅಂದಿನ ಮನಸ್ಸು ಇಂದಿನ ಮಕ್ಕಳಿಗಿಹುದೇ…! ಶಾಲೆಗಿಹುದು ಕಲ್ಲು ಮುಳ್ಳ …ಗುಡ್ಡದ ಹಾದಿ… ಆದರೆ… ಈ ದಿನಗಳಲ್ಲಿ… ಎಂದೂ ಅನ್ನಿಸಲಿಲ್ಲ… ಕಲ್ಲು ಮುಳ್ಳೆಂದು…. ಅದರೀಗ ಮನೆಯ ಮೆಟ್ಟಲಿಳಿಯಬೇಕೆಂದರೆ […]