03-12-2018, 4:34 PM
ಪಣಂಬೂರು ಕುಳಾಯಿ : ಬಿಲ್ಲವ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಯುವವಾಹಿಯಂತಹ ಸಂಘಟನೆಗಳು ಬಿಲ್ಲವರ ಸ್ವಾಭಿಮಾನ, ಆತ್ಮಸ್ಥೈರ್ಯಗಳಿಗಾಗಿ ಕೋಟಿ ಚೆನ್ನಯ ಕಾಂತಾಬಾರೆ ಬೂದಾಬಾರೆಯಂತಹ ವೀರ ಪುರುಷರ ಸಾಧನೆಯನ್ನು , ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು, ಸಾಹುಕಾರ್ ಕೊರಗಪ್ಪ, ದಾಮೋದರ ಮಾಸ್ತರ್ ರಂತಹ ಸಾಮಾಜಿಕ ಸೇವೆಯನ್ನು, ಬಂಗಾರಪ್ಪ, ದಾಮೋದರ ಮುಲ್ಕಿ ಹಾಗೇ ನಮ್ಮ ನಡುವೆಯೇ ಇರುವ ಜನಾರ್ದನ ಪೂಜಾರಿಯಂತಹ ರಾಜಕೀಯ ಕ್ಷೇತ್ರದ ಸಾಧನೆಯನ್ನು ಆದರ್ಶವಾಗಿ ತೆಗೆದುಕೊಳ್ಳುತ್ತೇವೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ ದಿ.ವಿಶುಕುಮಾರ್ […]
Read More
01-12-2018, 3:05 AM
ಮಾಣಿ : ವ್ಯಕ್ತಿ ತನ್ನ ನಡತೆ ಮತ್ತು ಕಾರ್ಯಗಳಿಂದ ಬದುಕಿರುವಾಗಲೆ ಸಾಯಬಾರದು ಬದಲಾಗಿ ನಮ್ಮ ವ್ಯಕ್ತಿತ್ವ ನಮ್ಮ ಸಾವಿನ ಬಳಿಕವೂ ನಮ್ಮನ್ನು ಜೀವಂತವಾಗಿರಿಸಬೇಕು, ನಮ್ಮ ನಡುವೆ ಇಲ್ಲದೇ ಇದ್ದರೂ ಅವರ ವ್ಯಕ್ತಿತ್ವದಿಂದ ನಮ್ಮ ನಡುವೆ ಇಂದಿಗೂ ಜೀವಂತವಾಗಿರುವವರು ವಿಶುಕುಮಾರ್ ಅವರ ಜೀವನ ಕ್ರಮ ಅನುಕರಣೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ತಿಳಿಸಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ.), ಮಾಣಿ […]
Read More
27-11-2018, 3:21 PM
ಮಂಗಳೂರು : ಸಾಹಿತ್ಯ ಕೃಷಿ ಕ್ಷೇತ್ರದಲ್ಲಿ ಯಾವ ಸಾಹಿತಿಯೂ ಮಾಡದ ಸಾಹಿತ್ಯ ಕೃಷಿಯನ್ನು ತನ್ನ ಅಲ್ಪಾವಧಿಯ ಜೀವನದಲ್ಲಿ ಮಾಡಿದ ಮೇದಾವಿ ಸಾಹಿತಿ ವಿಶು ಕುಮಾರ್, ಬಿಲ್ಲವ ಸಮಾಜದಲ್ಲಿ ಜನಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಹಿತಿಯಾಗಿ, ಪತ್ರಿಕಾ ರಂಗದಲ್ಲಿ ಪತ್ರಿಕೆಗೆ ಅಂಕಣಗಾರನಾಗಿ ನಾಟಕ ಹಾಗು ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ ಹೆಸರು ಪಡೆದ ದೀಮಂತ ಸಾಹಿತಿ ವಿಶುಕುಮರ್ ಸಾಹಿತ್ಯ ಲೋಕದ ವಿನುಗು ತಾರೆಯಾಗಿ ಮಿಂಚಿದವರು ಎಂದು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ವಿಶುಕುಮರ್ ಪ್ರಸಸ್ತಿ ಪ್ರಧಾನ ಸಮಿತಿಯ ಮಾಜಿ […]
Read More
25-11-2018, 5:16 PM
ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕ,ಚುಟುಕು ಸಾಹಿತ್ಯ ಪರಿಷತ್ತುಮಂಗಳೂರು,ರೋಟರಿ ಸಮುದಾಯ ದಳ ಕೊಲ್ಯ ,ಸೋಮೇಶ್ವರ ಇದರ ಜಂಟಿ ಆಶ್ರಯದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರೀಟೇಬಲ್ ಟ್ರಸ್ಟ್ (ರಿ) ಕೊಲ್ಯ ಇದರ ಸಹಯೋಗದೊಂದಿಗೆ “ಮುಂಜಾನೆಯ ಕವಿ ಕಲರವ” ಕನ್ನಡ ,ತುಳು,ಕೊಂಕಣಿ ಭಾಷೆಗಳ “ಕವಿಗೋಷ್ಠಿ ಕಾರ್ಯಕ್ರಮ” ವು ದಿನಾಂಕ 25/11/2018ನೇ ರವಿವಾರದಂದು ಶ್ರೀ ಕ್ಷೇತ್ರ ಕೊಲ್ಯ ಮಠದಲ್ಲಿ ಜರಗಿತು ಶ್ರೀ ಕ್ಷೇತ್ರ ಕೊಲ್ಯ ಮಠದ ಅಧ್ಯಕ್ಷರಾದ ಮಹಾಬಲ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು […]
Read More
14-11-2018, 3:04 PM
ಮುಲ್ಕಿ : ಓದಿನಲ್ಲಿ ಸಿಗುವ ಆನಂದ ಅನುಭವ, ಒಳ್ಳೆಯ ವಿಚಾರ ಬೇರೆ ಯಾವ ತಂತ್ರಾಂಶದಿಂದ ಸಿಗಲು ಸಾಧ್ಯವಿಲ್ಲ. ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು, ಈ ನಿಟ್ಟಿನಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ಪತ್ರಿಕೆಯ ಸಾಧನೆ ಗಮನಾರ್ಹವಾದುದು ಎಂದು ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಹರಿಶ್ಚಂದ್ರ ಪಿ. ಸಾಲ್ಯಾನ್ ಅಭಿಪ್ರಾಯ ಪಟ್ಟರು. ಅವರು ದಿನಾಂಕ 14.11.2018 ರಂದು ಮುಲ್ಕಿ ಸಿ. ಎಸ್. ಐ ಬಾಲಿಕಾಶ್ರಮದಲ್ಲಿ ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ […]
Read More
04-11-2018, 8:32 AM
ಬಂಟ್ವಾಳ : ಕಥೆ, ಕಾದಂಬರಿಕಾರರಾಗಿ, ನಟ ನಿರ್ದೇಶಕರಾಗಿ, ಪತ್ರಕರ್ತರಾಗಿ ರಾಜಕಾರಣಿಯಾಗಿ ತಮ್ಮ ಐದು ದಶಕಗಳ ಬದುಕಿನಲ್ಲಿ ಬಹುಮುಖ ಪ್ರತಿಭೆಯಿಂದ ಕನ್ನಡ ಮತ್ತು ತುಳು ಭಾಷೆಗಳೆರಡರಲ್ಲೂ ಕಲಾಸೇವೆ ಮಾಡಿ ಸಂದುಹೋದ ಸಾಹಿತಿ ವಿಶುಕುಮಾರ್ ರವರ ಬದುಕು ನಮಗೆ ಸದಾ ಅನುಕರಣೀಯ . ಅವರ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಪರಿಚಯಿಸುವ ಕಾರ್ಯ ಆಗಬೇಕಾಗಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಟಿ.ಶಂಕರ ಸುವರ್ಣ ತಿಳಿಸಿದರು. ಅವರು ದಿನಾಂಕ 04.11.2018 ರಂದು ಬಿ.ಸಿ.ರೋಡ್ ಯುವವಾಹಿನಿ ಭವನದಲ್ಲಿ ಜರುಗಿದ ಯುವವಾಹಿನಿ […]
Read More
21-09-2018, 2:24 PM
ಪಡುಬಿದ್ರಿ : ಇಂದಿನ ಯುವಪೀಳಿಗೆಗೆ ನಮ್ಮ ಹಿರಿಯರು ಮೂಲ ನಂಬಿಕೆಗಳನ್ನು ತಿಳಿಸುವ ಅನಿವಾರ್ಯತೆಯಿದೆ. ಮೂಲ ನಂಬಿಕೆಗಳು ಮೂಢನಂಬಿಕೆಗಳಾಗದಂತೆ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ವೈ.ಎನ್. ಶೆಟ್ಟಿ ಹೇಳಿದರು. ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 21.09.2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ 90ನೇ ಪುಣ್ಯತಿಥಿಯ ಅಂಗವಾಗಿ ತುಳುನಾಡಿನ ಆಚರಣೆಯಲ್ಲಿ ನಂಬಿಕೆ- ಮೂಢನಂಬಿಕೆಗಳು ಎಂಬ ವಿಚಾರಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅವರು […]
Read More
05-08-2018, 4:07 PM
ಮಂಗಳೂರು : ಲೇಖನಗಳು, ಮಾಹಿತಿಗಳ ಸಂಗ್ರಹ, ಆಶಯ, ಅವಲೋಕನ, ಸಾಹಿತ್ಯ, ಸಾಂಸ್ಕೃತಿಕ, ಕಥೆ, ಕವನ ಮುಂತಾದ ವೈವಿಧ್ಯಮಯ ಬರಹಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ 2018 ರ ಸಿಂಚನ ವಾರ್ಷಿಕ ವಿಶೇಷಾಂಕವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರಾದ ಡಾ.ಜಯಮಾಲ ಬಿಡುಗಡೆಗೊಳಿಸಿದರು. ದಿನಾಂಕ 05.08.2018 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ನಲ್ಲಿ ಜರುಗಿದ ಯುವವಾಹಿನಿಯ 31 ನೇ ವಾರ್ಷಿಕ ಸಮಾವೇಶದಲ್ಲಿ ಸಿಂಚನ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ […]
Read More
03-06-2018, 8:42 AM
ಮಂಗಳೂರು : ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ದಿನಾಂಕ 03.06.2018 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ವಿಮರ್ಶಕಿ ಬಿ.ಎಮ್.ರೋಹಿಣಿ ಅವರಿಗೆ 2017 ರ ವಿಶುಕುಮಾರ್ ಪ್ರಶಸ್ತಿ ಪ್ರದಾನಿಸಲಾಯಿತು. ಪ್ರಶಸ್ತಿ ಪ್ರದಾನಿಸಿದ ಹಿರಿಯ ಸಂಘಟಕಿ ಕೆ.ಎ.ರೋಹಿಣಿಯವರು ಮಾತನಾಡಿ ಬಿ.ಎಮ್.ರೋಹಿಣಿಯವರ ಸಾಧನೆಗೆ ಅರ್ಹವಾಗಿ ವಿಶುಕುಮಾರ್ ಪ್ರಶಸ್ತಿ ದೊರೆತಿದೆ ಎಂದರು. ಛಲವಾದಿಯಾಗಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. 74 […]
Read More