06-09-2016, 5:31 AM
(ಬ್ರಹ್ಮಶ್ರೀ ನಾರಾಯಣ ಗುರುವರ್ಯರ 162ನೇ ಜಯಂತಿಯ ಸಂದರ್ಭದಲ್ಲಿ ಸಕಾಲಿಕವಾಗಿ ಈ ಲೇಖನ) ಮನುಕುಲದ ಉದ್ಧಾರಕ್ಕಾಗಿ ಜಗತ್ತಿನಲ್ಲಿ ಅನೇಕ ಸಂತರು, ಮಹಾಂತರು, ಶರಣರು, ದಾರ್ಶನಿಕರು, ತತ್ವಜ್ಞಾನಿಗಳು ಅವತರಿಸಿ ತಮ್ಮ ತಪಸ್ಸು, ಚಿಂತನೆ, ಸಾಧನೆಗಳ ಪ್ರಭಾವದಿಂದ ಜನರಲ್ಲಿ ಜಡ್ಡುಗಟ್ಟಿದ್ದ ಮೂಢನಂಬಿಕೆಗಳನ್ನು ನಿವಾರಣೆ ಮಾಡಿದರು. ವೇದ ಉಪನಿಷತ್ತುಗಳ ತವರೂರಾದ ನಮ್ಮ ಭಾರತ ದೇಶದಲ್ಲಿಯೂ ಬುದ್ಧ, ಶಂಕರ, ಚೈತನ್ಯ, ಮಾಧವ, ರಾಮಾನುಜ, ಜಿನ, ಬಸವಣ್ಣ ಮೊದಲಾದ ಮತ ಸ್ಥಾಪಕರೂ ನಾಮದೇವ, ಜ್ಞಾನದೇವ, ತುಕಾರಾಮ, ಕಬೀರ, ಪುರಂದರದಾಸ, ಕನಕದಾಸ ಮೊದಲಾದ ಸಾಧುಸಂತರೂ ಅವರವರ ಕಾಲದಲ್ಲಿ […]
Read More
31-07-2016, 11:09 AM
ಕನ್ನಡ ಮತ್ತು ತುಳು ಭಾಷೆಗಳೆರಡರಲ್ಲೂ ಕೃತಿಗಳನ್ನು ರಚಿಸಿ ಸಾಹಿತ್ಯಾಭಿಮಾನಿಗಳಿಂದ ಮತ್ತು ವಿಮರ್ಶಕರಿಂದ ಸೈ ಎನಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದವರು ಎಂ. ಜಾನಕಿ ಬ್ರಹ್ಮಾವರರವರು. ಹುಟ್ಟೂರು ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಬಳಿಯ ಮೂಡುಕುದುರು. ೧೯೫೦ರ ಜೂನ್ ೨೦ರಂದು ಜನಿಸಿದ ಇವರ ತಂದೆ ಗುಂಡಿಬೈಲ್ ದಾರ ಪಾಲನ್, ತಾಯಿ ಮುತ್ತಕ್ಕ ಮೂಡುಕುದುರು. ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಮಿಲಾಗ್ರಿಸ್ ಹೈಸ್ಕೂಲು, ಕಲ್ಯಾಣಪುರದಲ್ಲಿ ಮುಗಿಸಿ ಪದವಿ ಶಿಕ್ಷಣವನ್ನು ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರದಲ್ಲಿ (ಪ್ರಥಮ ಬ್ಯಾಚಿನ ವಿದ್ಯಾರ್ಥಿನಿ) […]
Read More
31-07-2016, 7:27 AM
ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಲನಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನಡೆ ನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿಯ ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯು ಕಳೆದ 14 ವರ್ಷಗಳಿಂದ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ದುಡಿದ, ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ವಿಶುಕುಮಾರ್ ಪ್ರಶಸ್ತಿ ನೀಡುತ್ತಾ ಬಂದಿರುತ್ತದೆ. 2016ರ ಸಾಲಿನ ವಿಶುಕುಮಾರ್ ಪ್ರಶಸ್ತಿಯು ದ್ವಿಭಾಷಾ ಕವಿ, […]
Read More
31-07-2016, 6:15 AM
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರು ದೈಯಡ್ಕ ಮನೆ, ತಿಮ್ಮಪ್ಪ ಪೂಜಾರಿ ಹಾಗೂ ಶ್ರೀಮತಿ ಪುಷ್ಪಾರವರ ಸುಪುತ್ರಿಯಾದ ರಮ್ಯ ಸುಜೀರ್‌ರವರು ತನ್ನ ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ತುಳು ಅಧ್ಯಯನ ವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎ. ಬಿ.ಎಡ್. ಪದವಿಯನ್ನು ಪಡೆದಿರುತ್ತಾರೆ. ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜು ಗಂಡಸಿ ಹಾಸನ ಇಲ್ಲಿ 1 ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಸೈಂಟ್ ಆನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ […]
Read More
31-07-2016, 6:13 AM
ದಿಕ್ಸೂಚಿ ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಕಾಣಿಸಲಾದ ತಲೆಮಾರುಗಳ ಅಂತರ ವಿಶ್ಲೇಷಣೆ: ’ಹಿಂದೆ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ತಲೆಮಾರುಗಳ ಭಿನ್ನತೆ-ವ್ಯತ್ಯಾಸ. ಆದರೆ ಈಗ? ಕೇವಲ ಒಂದು ವರ್ಷದ ಅಂತರದವರೊಳಗೂ ಜನರೇಶನ್ ಗ್ಯಾಪ್-ತಲೆಮಾರು ಅಂತರದ ಮಿಂಚು ಕಾಣಿಸುತ್ತಿದೆ ಎಂಬ ವಿಚಾರ. ಇದು ವಾಸ್ತವವೇ, ಅಸ್ವಾಭಾವಿಕವೇ ಎನ್ನುವುದು ತರ್ಕದ ಪ್ರಶ್ನೆ. ಇಂದಿನ ತಲೆಮಾರಿಗೂ ಹಿಂದಿನ ತಲೆಮಾರಿಗೂ ಸವಾಲುಗಳೇನು, ಇಂದಿನ ಸಾಮರ್ಥ್ಯಗಳೇನು? ನಮ್ಮ ಒಟ್ಟು ಬದುಕೇ ಆಧುನಿಕತೆಯ ಸ್ಥಿತ್ಯಂತರದೊಂದಿಗೆ ಸಾಗಿದೆ. ಬದುಕು ಸದಾ ಚಲಿಸುತ್ತಿರುವುದು ಸಹಜ ಪ್ರಕ್ರಿಯೆ. ಆದರೆ […]
Read More
31-07-2016, 5:49 AM
ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕಥೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನೇರ ನಡೆನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಮೂಲಕ ಕಳೆದ ಹದಿನಾಲ್ಕು ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ. 2015-16 ನೇ ಸಾಲಿನ ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸಂತೋಷ್ […]
Read More
31-07-2016, 5:47 AM
ಚಿಂತನ ಗುಣವತಿ ರಮೇಶ್, ಸುರತ್ಕಲ್ ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿರುವ ಎಲ್ಲರೂ ತಮ್ಮ ಜೀವನ ಸುಖಮಯವಾಗಿರಬೇಕೆಂದು ಹರಸಾಹಸ ಮಾಡುತ್ತಾರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಗಾದೆ ಮಾತಿತ್ತು. ಆದರೆ ಇಂದು ಹುಟ್ಟು ಸಾವಿನ ನಡುವಿನ ಜೀವನದ ಸುಖಕ್ಕಾಗಿ ಪ್ರಪಂಚದಾದ್ಯಂತ ಎಂತೆಂತಹ ಘನಕಾರ್‍ಯಗಳು ನಡೆಯುತ್ತವೆ ಎಂದು ಆಲೋಚಿಸಿದರೆ ಅಬ್ಬಾ ಎಂಥಾ ಕಾಲವಪ್ಪ, ಎಂದೆನಿಸುತ್ತದೆ. ಆದರೆ ನಮ್ಮ ಪೂರ್ವಿಕರು ಹೊಲ, ಗದ್ದೆ, ಗುಡ್ಡ, ತೋಟ ಹೀಗೆ ಬೆವರು ಸುರಿಸಿ ದುಡಿದು, ಇದ್ದದ್ದನ್ನು ತುಂಬು ಕುಟುಂಬದಲ್ಲಿದ್ದ ಎಲ್ಲರೂ ಹಂಚಿಕೊಂಡರು […]
Read More
31-07-2016, 5:45 AM
ವೈಚಾರಿಕ – ಅಮಿತಾಂಜಲಿ ಕೆ., ಉಡುಪಿ ಬಾಲ್ಯವೆಲ್ಲಾ ಕ್ರಿಶ್ಚಿಯನ್ ಒಡನಾಡಿಗಳೊಂದಿಗೇ ಆಡಿ ಬೆಳೆದವಳು ನಾನು. ಮುಸ್ಲಿಂ ಬಾಂಧವರ ಜೊತೆ ಬಾಂಧವ್ಯದ ಸುಖವನ್ನು ಕಂಡವಳು ನಾನು. ಅಪ್ಪ ಸ್ವಂತ ಮನೆ ಕಟ್ಟುವವರೆಗೂ ಕ್ರಿಶ್ಚಿಯನ್ನರ ಒಕ್ಕಲು ಮನೆಗಳಲ್ಲೇ ಬಾಡಿಗೆಗಿದ್ದೆವು. ಅಜ್ಜಿ ಮನೆಗೆ ಹೋದಾಗಲೆಲ್ಲ ಅಜ್ಜಿಯ ಒಡಹುಟ್ಟಿದಂತಿದ್ದ ನೆರೆಮನೆಯ ನಮ್ಮ ’ಸಣ್ಣಜ್ಜಿ’ ಜಾಕಿಯಾಬಿ ನಮ್ಮ ಮೇಲೆ ಪ್ರೀತಿಯ ಮಳೆಯನ್ನೇ ಹರಿಸುತ್ತಿದ್ದರು. ಯಾವತ್ತೂ ಅವರಲ್ಲಿ ಯಾರೂ ನಮ್ಮನ್ನು ಹಿಂದೂಗಳೆಂದು ಹಂಗಿಸಿದ್ದಿಲ್ಲ. ಅವರು ಬೇರೆ ಧರ್ಮೀಯರೆಂಬ ಕಾರಣಕ್ಕೆ ನಾವವರನ್ನು ದ್ವೇಷಿಸಿದ್ದಿಲ್ಲ. ಆತ್ಮೀಯ ಬಾಂಧವ್ಯ ನಮ್ಮೊಳಗಿತ್ತು. […]
Read More
31-07-2016, 5:42 AM
ಆಶಯ ಕೆ. ರಾಜೀವ ಪೂಜಾರಿ ಈ ಸೃಷ್ಟಿಯ ಸೌಂದರ್ಯವೇ ಬದುಕಿನ ಆಂತರ್ಯ. ತೇಲುವ ಮೋಡಗಳಲ್ಲಿ, ಹರಿಯುವ ನದಿಯ ಜಲದಲ್ಲಿ. ಹಸುರಿನ ಸಿರಿಯಲ್ಲಿ, ಹೂಗಳ ವರ್ಣದಲ್ಲಿ…ಮಂದಹಾಸದಲ್ಲಿರುವುದು ಅನಂತ ಚೈತನ್ಯದ ಒಂದು ರೂಪವೇ ಎನ್ನುವುದು ಸನಾತನೀಯ ಸಚ್ಚಿಂತನೆ. ನಮ್ಮದು ಸನಾತನ ಚಿಂತನೆಯನ್ನು ಗೌರವಿಸುವ ದೇಶ. ಮಾನವೀಯ ಮೌಲ್ಯಗಳನ್ನು ಮಾನ್ಯ ಮಾಡುವ ಮಹನೀಯರುಗಳು ಈಗಲೂ ಈ ನೆಲದಲ್ಲಿರುವರು. ಇಲ್ಲಿನ ಮಣ್ಣಿನ ಗುಣವೇ ದೈವಿಕ ಭಾವದಿಂದ ಕೂಡಿರುವುದು. ಅನೇಕ ಸಂತ ಮಹಂತರುಗಳು ಈ ನೆಲದಲ್ಲಿ ಬಾಳಿ ಹೋಗಿದ್ದಾರೆ. ಅವರ ನುಡಿಗಳು ಮನುಕುಲಕ್ಕೆ ದಾರಿದೀಪಗಳಾಗಿವೆ. […]
Read More