23-05-2017, 1:13 PM
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಹತ್ತು ವರ್ಷ ಮೊದಲೇ ವಿಶುಕುಮಾರ್ ಹುಟ್ಟಿದ್ದು. ಆಗಿನ ಸಮಾಜದ ವ್ಯವಸ್ಥೆಯನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಾಲೀಕರು, ವರ್ಣದ್ವೇಷದ ಪ್ರಭಾವವಿದ್ದ ಕಾಲ. ದೇಶದ ಸ್ವತಂತ್ರಕ್ಕಾಗಿ ಇಂಗ್ಲೀಷರ ವಿರುದ್ಧ ಹೋರಾಟದ ದಿನಗಳು. ಆದರೆ ವಿಶುಕುಮಾರ್ ಮನೆತನ ಅಂಥ ಸಂದಿಗ್ಧತೆಗೆ ಒಳಪಟ್ಟಿರಲಿಲ್ಲ. ದೋಗ್ರ ಪೂಜಾರಿ ಅವರು ಯಕ್ಷಗಾನ ಕಲಾರಸಿಕರು. ಅವರ ಆಡಳಿತದಲ್ಲಿದ್ದುದು 10 ಮುಡಿ ಗೇಣಿ ಬರುವ ವರ್ಗದಾರರು. ಅವಳಿ ಜಿಲ್ಲೆ( ಉಡುಪಿ- ಮಂಗಳೂರು) ಗಳಲ್ಲಿ ಬಿಲ್ಲವ ಸಮಾಜದವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಕೈ ಬೆರಳೆಣಿಕೆಯಷ್ಟು […]
Read More
23-05-2017, 12:58 PM
ವಿಶುಕುಮಾರ್ – ಯಾವುದೇ ಕೃತಿ ರಚಿಸಲಿ. ಅದು ಸಮಾಜವನ್ನು ಅಲ್ಲೋಲ ಕಲ್ಲೋಲವುಂಟು ಮಾಡುತ್ತದೆ; ಹಾಗೇ ವಿವಾದದ ಸುಳಿಯನ್ನು ಎಬ್ಬಿಸುತ್ತದೆ. ಅವರ ಬರವಣಿಗೆಯ ಶಕ್ತಿಯ ಜತೆಗೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ಒಂದು ಸೂಕ್ಷ್ಮದ ಎಳೆಯನ್ನು ಎತ್ತಿ, ಅದನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತ, ವಿವರಿಸುವ ಧಾಟಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಸುಮಾರು 16 ಕಾದಂಬರಿಗಳನ್ನು ರಚಿಸಿದ್ದಾರೆ. ಎಲ್ಲವೂ ಒಂದಕ್ಕೊಂದು ವಿಭಿನ್ನ. ನಮ್ಮ ಬದುಕಿನ ಸತ್ಯ ಘಟನೆಗಳೇ- “ ಕರಾವಳಿ” ,” ಮದರ್ ” , ” ಪ್ರಜೆಗಳು […]
Read More
20-05-2017, 1:25 PM
ಉದಯವಾಣಿ ಪತ್ರಿಕೆಯ ಪ್ರಾರಂಭದ ದಿನದಿಂದಲೇ ವಿಶುಕುಮಾರ್ ಅವರು ” ಶ್ರೀಸಾಮಾನ್ಯರು ಮಹಾನುಭಾವರು” ಅಂಕಣ ಬರೆಯುತ್ತಿದ್ದರು. ಅದು ತುಂಬಾ ಜನಪ್ರಿಯ ಕಾಲಂ ಆಗಿತ್ತು. ಅವರ ಬರಹ ತೀಕ್ಷಣತೆಯಿಂದ ಕೂಡಿತ್ತು. ಸೂಕ್ಷ್ಮ ಒಳನೋಟ , ಸಮಗ್ರ ಮಾಹಿತಿ ಹಾಗೂ ನಿರ್ಭೀತಿಯಿಂದ ಕೂಡಿತ್ತು. ಅವರು ಯಾರ ಮೂಲಾಜಿಗೂ ಒಲಿಯುತ್ತಿರಲಿಲ್ಲ. ತಮಗೆ ಅನ್ನಿಸಿದನ್ನು ಬರೆಯುತ್ತಿದ್ದರು. ಎಲ್ಲವೂ ನೇರ. ವಿಶುಕುಮಾರ್ ರ ಆಲೋಚನೆಗಳನ್ನು ಟೀಕಿಸುವವರು ಕೂಡ ಅವರ ಅಂಕಣ ಓದುತ್ತಿದ್ದರು. ಇವರ ಬರವಣಿಗೆಯನ್ನು ” ಪೈ ಫ್ಯಾಮಿಲಿ” ಮೆಚ್ಚಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ವಾರಪತ್ರಿಕೆಯ ಆಲೋಚನೆ […]
Read More
20-05-2017, 1:17 PM
ಸಮಯ ಬೆಳಗ್ಗಿನ ಹೊತ್ತು: ಸ್ಥಳ: ಮದರಾಸ್ ನ ಹೋಟೆಲ್ ಪಾಮ್ ಗ್ರೋನ ಸ್ವಾಗತ ಕಚೇರಿ. ವಿಶುಕುಮಾರ್ ಸೋಫಾದ ಮೇಲೆ ಕುಳಿತು ಪೇಪರು ಓದುತ್ತಿದ್ದರು. ಆಗ ತಾನೇ ಮೈಸೂರಿನಿಂದ ಬಂದ ಆಲನಹಳ್ಳಿ ಶ್ರೀಕೃಷ್ಣ ರೂಂ ಬುಕ್ ಮಾಡಲು ರಿಸೆಪ್ಷನ್ ಕೌಂಟರ್ ಕಡೆ ಹೋದರು. ವಿಶುಕುಮಾರ್ ಪೇಪರ್ ನ ಎಡೆಯಲ್ಲೇ ಶ್ರೀಕೃಷ್ಣನನ್ನು ನೋಡಿದರು. ಮುಖದಲ್ಲಿ ಕುಶಿ ಕಂಡಿತು. ಕೃಷ್ಣ ಅವರು ರಿಜಿಸ್ಟರ್ ಬುಕ್ ನಲ್ಲಿ ಹೆಸರನ್ನು ನಮೂದಿಸಿ – ಕೀ ಹಿಡಿದುಕೊಂಡು ಒಂದು ಸುತ್ತು ಕಣ್ಣಾಡಿಸಿದರು. ವಿಶುಕುಮಾರ್ ಕುಳಿತಿರುವುದು ಅವರಿಗೆ […]
Read More
15-05-2017, 2:44 PM
” ನೀವು ಬ್ರಾಹ್ಮಣ ಅಲ್ಲ …!” ” ವಿಶುಕುಮಾರ್ – ಅಷ್ಟು ಸುಲಭವಾಗಿ ನಮ್ಮನ್ನು ಒಪ್ಪಿಕೊಳ್ಳಲು ತಯಾರಿಲ್ಲ” ಎಂದು ಹೇಳಿದ್ದೆ. ಅಗಲ ಫ್ರೇಮಿನ ಕನ್ನಡಕದ ಒಳಗಡೆ ತೀಕ್ಷಣ ಕಣ್ಣುಗಳು ನಮ್ಮನ್ನು ಅಳೆಯುವಂತಿದ್ದವು. ” ರೂಂಗೆ ಬಾ ನಿಮ್ಮೊಡನೆ ಸ್ವಲ್ಪ ಮಾತಾಡಬೇಕು” ಎಂದು ನನ್ನನ್ನು ಅವರ ರೂಂಗೆ ಕರೆದೊಯ್ದರು. ನಾನು ಅವರನ್ನು ಹಿಂಬಾಲಿಸಿದೆ . ಆದರೆ ರೂಂನ ಒಳಗಡೆ ಮತ್ತೊಬ್ಬ ವ್ಯಕ್ತಿ ಕುಳಿತಿದ್ದರು. ಅವರನ್ನು ವಿಶುಕುಮಾರ್ ಪರಿಚಯಿಸಿದರು. ” ಇವರು ಆರ್. ನರಸಿಂಹ. ನಮ್ಮ ಸ್ನೇಹಿತರು. ನಾವು ” […]
Read More
10-04-2017, 4:06 AM
ಮದರಾಸಿನ ’ಚಂದಮಾಮ’ ಪಬ್ಲಿಕೇಶನ್‌ರವರು ಕನ್ನಡದಲ್ಲಿ ’ವಿಜಯಚಿತ್ರ’ ಸಿನೀಮ ಮಾಸಿಕ ಮತ್ತು ವನಿತಾ ಮಹಿಳಾ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು. ರವಿರಾಜ ಅಜ್ರಿಯವರು 1978 ರಲ್ಲಿ ಈ ಪತ್ರಿಕೆಗಳಿಗೆ ಕೆಲಸಕ್ಕೆ ಸೇರಿ 1983 ರ ತನಕ ಅಲ್ಲಿ ಸೇವೆ ಸಲ್ಲಿಸಿದರು. 1983 ರಲ್ಲಿ ಖ್ಯಾತ ಪತ್ರಕರ್ತ ದಿ| ಎಸ್ ವಿಜಯಶೀಲ ರಾವ್ ಅವರ ’ಮುಂಜಾನೆ’ ಕನ್ನಡ ದಿನ ಪತ್ರಿಕೆಗೆ ಸೇರಿದರು. ಇದು ಸಿನೀಮ ಪತ್ರಿಕೆಯಾಗಿದ್ದು ಇಲ್ಲಿ ಸುಮಾರು ಮೂರು ವರ್ಷ ಕೆಲಸ ನಿರ್ವಹಿಸಿದರು. ಚಂದಮಾಮ ಪಬ್ಲಿಕೇಶನ್‌ನ ಮಾಲಕ ವಿಶ್ವನಾಥ ರೆಡ್ಡಿಯವರು ’ವಿಜಯಚಿತ್ರ’ ಪತ್ರಿಕೆಯ ಕಚೇರಿಯನ್ನು ಬೆಂಗಳೂರಿನ […]
Read More
09-08-2015, 4:56 AM
ಸ್ಮರಣೆ ವಿಶುಕುಮಾರ್ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಶ್ರೇಷ್ಠ ಸಾಹಿತಿಗಳು ಆಗಿಹೋಗಿದ್ದಾರೆ. ಅಂಥವರಲ್ಲಿ ಡಾ. ಶಿವರಾಮ ಕಾರಂತರು ಒಬ್ಬರು. ಅವರ ನಂತರದ ಸ್ಥಾನ ಮಂಗಳೂರಿನವರೇ ಆದ ವಿಶುಕುಮಾರ್‌ರಿಗೆ ಸಲ್ಲುತ್ತದೆ ಎಂಬುದು ಅನೇಕರ ಅಭಿಪ್ರಾಯ. ಇವರು ಸಾಹಿತ್ಯಲೋಕದ ಬಹುಮುಖ ಪ್ರತಿಭಾವಂತ, ನೇರನಡೆ-ನುಡಿಯ ನಿರ್ಭೀತ ವ್ಯಕ್ತಿತ್ವದವರು. ಇವರದು ಹೋರಾಟದ ಬದುಕು. ಇವರಿಗೂ ಸಾಹಿತ್ಯಕ್ಕೂ ಬಾಲ್ಯದಿಂದಲೇ ನಂಟು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯ ಶೈಲಿಯ ವೈಶಿಷ್ಟ್ಯವೆಂದರೆ ತುಳು ಮತ್ತು ಕನ್ನಡ […]
Read More
04-11-2012, 6:28 AM
ಕರಾವಳಿ ಕಂಡ ಧೀಮಂತ ಪ್ರತಿಭಾಶಾಲಿಗಳ ಸಾಲಿನ ಮಿನುಗು ನಕ್ಷತ್ರವಾದ ವಿಶುಕುಮಾರ್ ದಂತಕತೆಯಾದ ವ್ಯಕ್ತಿ. ತುಳುವಿನ ಉಸಿರು, ಕನ್ನಡದ ಶಕ್ತಿ, ಸಮಾಜದ ಸ್ಫೂರ್ತಿ, ಚೆಲುವಿನ ಮೂರ್ತಿಯಾಗಿದ್ದ ವಿಶುಕುಮಾರ್ ಒಂದು ಕಾಲದ ಪ್ರತಿಭಾವಂತ ನಟ, ನಿರ್ದೇಶಕ, ಕಾದಂಬರಿಕಾರ, ಪತ್ರಕರ್ತ, ಸಂಘಟಕ, ಸಿನಿಮಾ ನಿರ್ದೇಶಕರಾಗಿ, ಶ್ರೇಷ್ಠ ಸಾಧನೆಗಳನ್ನು ಮಾಡಿದವರು, ಇನ್ನೆಷ್ಟೋ ಉಪಯುಕ್ತ ಕೊಡುಗೆಗಳನ್ನು ನೀಡಲಿರುವ ಭರವಸೆಯ ಅಕಾಲದಲ್ಲೇ ಅಗಲಿ ಹೋದವರು. 1797 ರಲ್ಲಿ ಟಿಪ್ಪುಸುಲ್ತಾನ್ ಸಮರ ಕಾಲದಲ್ಲಿ ಮಂಗಳೂರು ಬೋಳೂರಿನ ಕಡಲತೀರದಲ್ಲಿ ಕಟ್ಟಿಸಿದ ಕೋಟೆ ಸುಲ್ತಾನ್ ಬತ್ತೇರಿ, ಇಂದು ಪ್ರವಾಸಿಗರ ರಮ್ಯ ತಾಣ, […]
Read More
04-11-2012, 6:25 AM
ಅಧ್ಯಯನ ವಿಶುಕುಮಾರ್ ಕಾಲವಾಗಿ (1989) ಇದೀಗ 26 ವರ್ಷಗಳು ಪೂರ್ಣವಾಗುತ್ತಿದೆ. ಆದರೆ ಅವರು ಬಿಟ್ಟು ಹೋದ ಸಾಹಿತ್ಯ ಕೃತಿಗಳು, ನಾಟಕ, ಸಿನೆಮಾಗಳು ಇಂದಿಗೂ ನಮ್ಮನ್ನು ಕಾಡಿಸುತ್ತವೆ; ಯೋಚನೆಗೆ ಹಚ್ಚುತ್ತವೆ. ವಿಶುಕುಮಾರ್ ತಮ್ಮ ಕೃತಿಗಳಲ್ಲಿ ಆಯ್ದುಕೊಂಡ ವಸ್ತುಗಳು, ಸಾಮಾಜಿಕ ಸಮಸ್ಯೆಗಳು, ಸಂಘರ್ಷಗಳು, ಇವತ್ತಿಗೂ ಪ್ರಸ್ತುತವೆನಿಸುತ್ತವೆ. ವಿಶುಕುಮಾರ್ ಭಿನ್ನವಾಗಿ ಆಲೋಚಿಸುವ ಮನೋಧರ್ಮದವರು. ಹಾಗಾಗಿ ಕೆಲವೊಮ್ಮೆ ಅವರು ವಿವಾದಾತ್ಮಕ ವ್ಯಕ್ತಿಯೂ ಆದರು. ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಶಸ್ಸನ್ನು, ಪ್ರಸಿದ್ಧಿಯನ್ನು ಪಡೆಯುವುದನ್ನು ನಾವು ಕಾಣುತ್ತೇವೆ. ಆದರೆ ವಿಶುಕುಮಾರ್ ತಾವು ಪ್ರವೇಶಿಸಿದ ಎಲ್ಲಾ […]
Read More
04-11-2012, 6:23 AM
ಸ್ಥಿತಿ-ಗತಿ – ವಿಶುಕುಮಾರ್ (1979 ರಲ್ಲಿ ಬೆಳ್ತಂಗಡಿ ಬಿಲ್ಲವ ಸಂಘವು ಹೊರತಂದ ’ಕೋಟಿ- ಚೆನ್ನಯ’ ಎಂಬ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡ ಖ್ಯಾತ ಸಾಹಿತಿ ದಿ| ವಿಶುಕುಮಾರ್ ಅವರ ಇಂದಿಗೂ ಪ್ರಸ್ತುತವೆನಿಸುವ ಒಂದು ಲೇಖನ…) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜನಾಂಗಕ್ಕೆ ಬಿಲ್ಲವ, ಪೂಜಾರಿ, ಬೈದ, ಹಳೇಪೈಕ ಇತ್ಯಾದಿ ಹೆಸರುಗಳು. ಉತ್ತರ ಕನ್ನಡದಲ್ಲಿ ನಾಮಧಾರಿಗಳು. ಶಿವಮೊಗ್ಗ, ಸಾಗರ ಕಡೆ ದೀವರು. ಹಳೇ ಮೈಸೂರು ಕಡೆ ಈಡಿಗರು. ಗುಲ್ಬರ್ಗ, ಬೀದರ್ ಕಡೆ ಈಳಿಗರು, ಕೇರಳದಲ್ಲಿ ತೀಯಾ, ತಮಿಳ್‌ನಾಡಿನಲ್ಲಿ ನಾಡಾರ್ ಹೀಗೆ ಬೇರೆ […]
Read More