31-07-2016, 12:39 PM
ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ| ಉಮ್ಮಪ್ಪ ಪೂಜಾರಿ ಹಾಗೂ LIC ಉದ್ಯೋಗಿ ಶ್ರೀಮತಿ ರೇಖಾ ದಂಪತಿಗಳ ಪುತ್ರ ಕ್ಷಿಪ್ರಜ್ ಯು CBSE ಹತ್ತನೆಯ ತರಗತಿಯಲ್ಲಿ ಹತ್ತರಲ್ಲಿ ಹತ್ತು ಗ್ರೇಡ್ ಪಾಯಿಂಟ್ ಗಳಿಸಿರುತ್ತಾನೆ. ಪ್ರತಿಭಾವಂತ ವಿದ್ಯಾರ್ಥಿಯಾದ ಈತ ಕೇಂದ್ರಿಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 21 ನೇ ಸ್ಥಾನ ಪಡೆದಿದ್ದು ದಕ್ಷಿಣ ಭಾರತ ಹಿಂದಿ ಪ್ರಚಾರ್ ಸಭಾ ಇವರು ನಡೆಸಿದ ರಾಷ್ಟ್ರ ಭಾಷಾ ಪ್ರವೀಣ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಿದ್ದಾನೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್ […]
Read More
31-07-2016, 12:20 PM
ಭಾರತ ಸರಕಾರದ CBSE 10ನೆಯ ತರಗತಿಯಲ್ಲಿ ಈಕೆ 10 ಕ್ಕೆ 10 ಅಂಕ ಗಳಿಸಿ ತನ್ನ ಕಲಿಕಾ ಸಾಮರ್ಥ್ಯ ಯಾರಿಗೇನೂ ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾಳೆ! ಶಹಬ್ಬಾಸ್! ಎನ್ನಬೇಕಲ್ಲ ನಾವು ನೀವೆಲ್ಲ? ತಂದೆ ಸತೀಶ್ ಮತ್ತು ತಾಯಿ ಅಮಿತಾ-ಪುತ್ರಿ ಶಮಿತಾ-ವಾಹ್! ದೈಹಿಕ ಕ್ಷಮತೆಯ ಪುರಾತನ ಆತ್ಮ ರಕ್ಷಣಾ ಕಲೆ ಕರಾಟೆಯಲ್ಲಿ ಹಲವು ಹತ್ತು ಪ್ರಶಸ್ತಿ ಗಳಿಸಿದ ಶಮಿತಾ ಬಿಲ್ಲವ ಸಮಾಜದ ಕರಾಟೆ ಕಿಡ್ ಎನಿಸುವುದು ನಿಸ್ಸಂಶಯ. ಕರಾಟೆ ಕಲೆಯಲ್ಲಿ ತನ್ನನ್ನು ಪರಿಪೂರ್ಣವಾಗಿ ಪಳಗಿಸಿಕೊಂಡು ಪಡೆದ ಯಶಸ್ಸಿನ ಸಾಕ್ಷಿ ಯುವವಾಹಿನಿ ಸಂಸ್ಥೆಗೆ […]
Read More
31-07-2016, 12:00 PM
BGS Institute Kavoor ಇಲ್ಲಿ C.B.S.E. ಪಠ್ಯಕ್ರಮದಲ್ಲಿ 10 ನೇಯ ತರಗತಿ ಕಲಿತು ಅತ್ಯುನ್ನತ CPGA Grade Point 10 ಅಂಕ ಗಳಿಸಿದ ಕು| ಶ್ರಾವ್ಯ ಕೆ. ಪಂಜಿಮೊಗರು ನಿವಾಸಿ ಶ್ರೀ ಶ್ರೀಧರ ಪೂಜಾರಿ- ಡಾ| ವಿದ್ಯಾ ಶ್ರೀಧರ್ ದಂಪತಿಗಳ ಸುಪುತ್ರಿ. ಸಾಮಾನ್ಯವಾಗಿ ಮಕ್ಕಳು ಕಲಿಕೆಯಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೆತ್ತವರಿಗೆ ಸಹಜ. ಆದರೆ ಬೋಧನೇತರ ಚಟುವಟಿಕೆಗಳಲ್ಲಿ ಸಾಧಿಸುವುದೂ ಅಷ್ಟೇ ಮುಖ್ಯ ಎಂಬ ತಿಳಿವಳಿಕೆಯುಳ್ಳ ಪೋಷಕರು ಈಗ ಹೆಚ್ಚಾಗಿದ್ದಾರೆ ಅದೇನೇ ಇರಲಿ. ಶ್ರಾವ್ಯ ಕೆ. ಕಲಿಕೆ ಹೊರತು ಪಡಿಸಿ […]
Read More
31-07-2016, 11:54 AM
IAS ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು, IISC ಬೆಂಗಳೂರಿನಲ್ಲಿ ಕಲಿಯುವುದು ಇದು ಹೆಚ್ಚಿನ ಜನರಿಗೆ ನನಸಾಗದ ಕನಸು. ಯುವ ಜನರಿಗಂತೂ ಇದು ಕನಸಿನ ಲೋಕದ ಸಾಧನೆ. ಸುಲಭದಲ್ಲಿ ನಿಲುಕುವಂಥದಲ್ಲ. ಆದರೆ ಇಂದು ಬಿಲ್ಲವ ಸಮುದಾಯ ಇಡೀ ಅಭಿಮಾನಪಡತಕ್ಕ ಸಾಧನೆಯ ಹಾದಿಯಲ್ಲಿದೆ. ಬಿಲ್ಲವ ಕುವರಿ ಪುತ್ತೂರಿನ ಏಳ್ಮುಡಿ ಮನೆ ಶ್ರೀ ರಮೇಶ್ ಪೂಜಾರಿ ಶ್ರೀಮತಿ ಯಶೋಧ ದಂಪತಿಗಳ ಸುಪುತ್ರಿ ಕು| ವರ್ಷಾ ಪಿ. ಪಿ.ಯು.ಸಿಯಲ್ಲಿ ಎಲ್ಲ 4 ಐಚ್ಚಿಕ ವಿಷಯಗಳಲ್ಲಿ 100% (ಒಟ್ಟು 600/591) ಅಂಕ ಗಳಿಸಿ ಕರ್ನಾಟಕದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ […]
Read More
31-07-2016, 11:43 AM
ಬದುಕಿನಲ್ಲಿ ಸುನಿಶ್ಚಿತ ಗುರಿಯುಳ್ಳ ಇತ್ಯಾತ್ಮಕ ಸಾಧನೆಯ ಮುಂಚೂಣಿ ಮತ್ತು ಮುನ್ನಗ್ಗುವ ಎದೆಗಾರಿಕೆಯುಳ್ಳ ಯುವಜನರಲ್ಲಿ ಕೆಲವೇ ಕೆಲವರು ವಿದ್ಯಾರ್ಥಿ ಜೀವನದಲ್ಲಿ ಸ್ವಯಂಪ್ರೇರಿತವಾಗಿ ಉತ್ತಮ ನಾಯಕತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡು ಯಶಸ್ವೀ ನಾಯಕರಾಗುತ್ತಾರೆ. ಇಂತಹದ್ದೇ ಒಂದು ಮನೋಧರ್ಮದವರಾಗಿದ್ದು ರಾಷ್ಟ್ರ ಚಿಂತನೆಯ ಹಾದಿಯಲ್ಲಿ ಸಾಗುತ್ತಾ ಕರ್ನಾಟಕ ರಾಜ್ಯಪಾಲರಿಂದ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ (2014-15 ರಲ್ಲಿ) ಬಾಚಿಕೊಂಡ ಓರ್ವ ವಿದ್ಯಾರ್ಥಿಯ ಯಶೋಗಾಥೆ ಇದು. ಆತ ಬೇರಾರೂ ಅಲ್ಲ; ಪುತ್ತೂರಿನ ಶ್ರೀ N. ಶೀನಪ್ಪ ಪೂಜಾರಿ- ರೇಖಾ ದಂಪತಿಗಳ ಹೆಮ್ಮೆಯ […]
Read More
31-07-2016, 11:39 AM
ಸಮುದಾಯ ಸೇವೆಗೆ ಗೈಡ್ ಸಂಸ್ಥೆ ಹೆಸರುವಾಸಿಯಾಗಿದ್ದು ಅತ್ಯಂತ ಉತ್ಕೃಷ್ಠ ರಾಷ್ಟ್ರಪತಿಗೈಡ್ಸ್ ಪುರಸ್ಕಾರ ಪಡೆಯುವ ಅರ್ಹತೆ ಲಕ್ಷದಲ್ಲೊಬ್ಬರಿಗೆ ಬರಬಹುದು. ರಾಷ್ಟ್ರಮಟ್ಟದಲ್ಲಿ ಇಂತಹ ಮಹೋನ್ನತ ಗೈಡ್ಸ್ ಪುರಸ್ಕಾರ ಪಡೆದು ಬಿಲ್ಲವ ಸಮುದಾಯಕ್ಕೆ ಕಿರೀಟ ಸದೃಶ ಕೀರ್ತಿ ತಂದ ಕು. ತೃಪ್ತಿ ಆನಂದ್ ಮಂಗಳೂರಿನ K.S Hegde ವೈದ್ಯಕೀಯ ಕಾಲೇಜಿನ ಪೊಫೆಸರ್ ಡಾ. ಆನಂದ ಬಂಗೇರ ಹಾಗೂ ಅಲ್ಲೇ ಪ್ರೊಫೆಸರ್ ಆಗಿರುವ ಡಾ. ವಸಂತಿ ಕೋಟ್ಯಾನ್‌ರವರ ಸುಪುತ್ರಿ St. ತೆರೆಸಾ ಶಾಲೆ, ಬೆಂದೂರಿನಲ್ಲಿ 10ನೇ ತರಗತಿವರೆಗೆ ಓದಿ ಮೌಲ್ಯ ಶಿಕ್ಷಣ (Value […]
Read More
31-07-2016, 11:34 AM
ಪುತ್ತೂರಿನ ಶ್ರೀ ಸಂತೋಷ್ ಹಾಗೂ ಶ್ರೀಮತಿ ದಿವ್ಯಾ ಎಸ್ ಇವರ ಸುಪುತ್ರಿ ಕು. ದಿಶಾ ಎಸ್ ಈ ಬಾರಿ SSLCಯಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆಯನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಪುತ್ತೂರಿನ ಸಂತ ವಿಕ್ಟರ್‍ಸ್ ಹೈಸ್ಕುಲಿನ ವಿದ್ಯಾರ್ಥಿನಿಯಾದ ಈಕೆ ಕನ್ನಡ, ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಶೇಕಡಾ 100 ಅಂಕಗಳಿಸಿದ್ದು ಒಟ್ಟಿನಲ್ಲಿ 625 ಕ್ಕೆ 616 ಅಂಕಗಳಿಸಿ(98.56%) ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಶಾಲೆಯ ಅಧ್ಯಾಪಕರು, ಹೆತ್ತವರು ಬಿಲ್ಲವ ಸಮಾಜ ಮತ್ತು ಜಿಲ್ಲೆಗೆ ಕೀರ್ತಿ ತಂದ ಇವರ ಪರಿಶ್ರಮವನ್ನು ಮೆಚ್ಚಲೇಬೇಕು. ಪ್ರಾಯ ಸಹಜವಾದ ಯಾವುದೇ […]
Read More
31-07-2016, 11:16 AM
ಸಾಧಕಿ ಸಾಧಿಸುವ ಛಲ, ನಿರಂತರ ಪರಿಶ್ರಮ, ನಿರ್ದಿಷ್ಟ ಗುರಿ, ಆತ್ಮ ವಿಶ್ವಾಸದೊಂದಿಗೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಬಿಲ್ಲವ ಕುವರಿ ಸುಪ್ರೀತಾ ಪೂಜಾರಿ ಒಂದು ನಿದರ್ಶನ. ಪವರ್ ಲಿಫ್ಟಿಂಗ್‌ನಂತಹ ಕಠಿಣ ತರಬೇತಿ ಬೇಡುವ ಕ್ರೀಡೆಯಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ ನಮ್ಮ ಹೆಮ್ಮೆಯ ಸುಪ್ರೀತಾ ಪೂಜಾರಿ. ಒಂದೆಡೆ ಚಿಕ್ಕಂದಿನಿಂದಲೇ ಅಂಟಿಕೊಂಡು ಬಂದ ಬಡತನ, ಇನ್ನೊಂದೆಡೆ ಕ್ರೀಡೆಯ ಬಗ್ಗೆ ಆಸಕ್ತಿ, ಇವೆರಡನ್ನೂ ಜೊತೆ ಜೊತೆಯಾಗಿಯೇ ಅನುಭವಿಸಿ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹಾದಿಯಲ್ಲಿದ್ದಾರೆ ಈ ನಮ್ಮ ವಿಶಿಷ್ಟ ಸಾಧಕಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ […]
Read More
31-07-2016, 10:51 AM
ಕರಾಟೆ – ಆತ್ಮರಕ್ಷಣೆಯ ಕಲೆ. ವಿದ್ಯಾರ್ಥಿ ಜೀನದಲ್ಲಿ ಕಲಿಕೆಯೊಂದಿಗೆ ಈ ಕ್ರೀಡೆಯಲ್ಲಿ ತನ್ನನ್ನು ಪರಿಪೂರ್ಣವಾಗಿ ಸಮರ್ಪಿಸಿ ಮಾರ್ಗದರ್ಶಕ ಶ್ರೀ ಸತೀಶ್ ಪೂಜಾರಿ ಬೆಳ್ಮಣ್ ಇವರ ಗರಡಿಯಲ್ಲಿ ಪಳಗಿ ಉನ್ನತ ಕಪ್ಪು ಪಟ್ಟಿ ಪದವಿಗಳಸಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡು ತಂದೆ ತಾಯಿ, ಸಮಾಜ ಮಾತ್ರವಲ್ಲ ಜಿಲ್ಲೆಗೇ ಹೆಸರು ತಂದ ಕು| ಚೈತ್ರಾ ಸಾಲಿಯಾನ್ ಓರ್ವ ಉದಯೋನ್ಮುಖ ಪ್ರತಿಭೆ. ತಂದೆ ಶ್ರೀ ಅಶೋಕ್ ಸಾಲ್ಯಾನ್ -ತಾಯಿ ಶ್ರೀಮತಿ ಸಾಲ್ಯಾನ್ ದಂಪತಿಗಳಿಗೆ ಗೌರವ ಹೆಮ್ಮೆ […]
Read More
31-07-2016, 7:27 AM
ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕತೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಲನಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನಡೆ ನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿಯ ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯು ಕಳೆದ 14 ವರ್ಷಗಳಿಂದ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ದುಡಿದ, ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ವಿಶುಕುಮಾರ್ ಪ್ರಶಸ್ತಿ ನೀಡುತ್ತಾ ಬಂದಿರುತ್ತದೆ. 2016ರ ಸಾಲಿನ ವಿಶುಕುಮಾರ್ ಪ್ರಶಸ್ತಿಯು ದ್ವಿಭಾಷಾ ಕವಿ, […]
Read More