11-01-2018, 5:07 PM
ಯುವವಾಹಿನಿಯ ಸಮಾಜಮುಖಿ ಕಾರ್ಯ ಹೆತ್ತ ತಾಯಿಯ ಸೇವೆಗೆ ಸಮಾನವಾದುದು ,ಭಕ್ತಿ , ತ್ಯಾಗ , ಕರ್ತವ್ಯ ಪ್ರಜ್ಞೆ ಮೂಲಕ ಯುವವಾಹಿನಿ ಯುವಕರ ಮೂಲ ಪ್ರೇರಣೆ ,ಯುವವಾಹಿನಿ ಎಂಬ ದೇವಸ್ಥಾನದಲ್ಲಿ ಭಕ್ತರಂತಿರುವ ಸದಸ್ಯರು ಗುರುವರ್ಯರ ಆದರ್ಶದ ಬೆಳಕಿನಲ್ಲಿ ಮತ್ತಷ್ಟು ಪ್ರಕಾಶಮಾನರಾಗಿ ಕಂಗೊಳಿಸುತ್ತಿದ್ದಾರೆ , ಎಂದು ಜಯಾನಂದ್ ತಿಳಿಸಿದರು . ಹಿಂದುಳಿದ ಸಮಾಜದಲ್ಲಿ ತೀರಾ ಬಡತನದ ಬೇಗೆಯಲ್ಲಿ ಕೆಂಗಟ್ಟು ಮುಂದೆ ಸಾಗಲು ಪರದಾಟ ನಡೆಸುವ ಮಂದಿಗೆ ಇದೇ ಸಮಾಜದ ಸ್ಥಿತಿವರಿತರು ಮತ್ತಷ್ಟು ಸಕ್ರೀಯತೆಯಿಂದ ತೊಡಗಿಸಿಕೊಂಡು ತಮ್ಮ ಹೃದಯ ಶ್ರೀಮಂತಿಕೆಯನ್ನು ವ್ಯಕ್ತಪಡಿಸಿ […]
Read More
07-01-2018, 1:06 PM
ಮಂಗಳೂರು: ಅಭಿವೃದ್ಧಿ ಆಗಿದ್ದೇವೆ ಪರಿವರ್ತನೆ ಆಗಿದೆ ಎಂದು ನಾವೆಷ್ಟೇ ಅಂದುಕೊಂಡರೂ ಸಮಾಜದಲ್ಲಿ ಇಂದಿಗೂ ಸಮಸ್ಯೆಗಳು ಇವೆ, ಜನರ ಈ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಿದಾಗ ಜನ ಸಂಘಟನೆಗೆ ಹತ್ತಿರವಾಗುತ್ತಾರೆ ಮತ್ತು ಗೌರವಿಸುತ್ತಾರೆ, ಯುವವಾಹಿನಿಯ ಈ ಸಾರ್ಥಕ ಕೆಲಸಗಳಿಂದಲೇ ಅದು ಜನ ಮಾನಸದಲ್ಲಿ ನೆಲೆ ಕಂಡುಕೊಂಡಿದೆ ಎಂದು ಉದ್ಯಮಿ ಸಂತೋಷ್ ಕುಮಾರ್ ಉಗ್ಗೆಲ್‍ಬೆಟ್ಟು ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಹಕಾರದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಬಿಲ್ಲವ ವಧುವರರ ಅನ್ವೇಷಣಾ ಕಾರ್ಯಕ್ರಮದಲ್ಲಿ ಮುಖ್ಯ […]
Read More
25-12-2017, 3:08 PM
ವಿದ್ಯೆಯು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಪೂರಕವಾದುದು. ಶಿಕ್ಷಣ ದ ಬಗೆಗಿನ ಕಾಳಜಿಯು ಅಗತ್ಯವಾದುದು. ಯಾವುದೇ ಪ್ರತಿಷ್ಠೆ, ಸ್ಥಾನಮಾನಕ್ಕಾಗಿ ನಮ್ಮ ಕೆಲಸ ಕಾರ್ಯಗಳು ಇರಕೂಡದು. ನಿಸ್ವಾರ್ಥ ವಾದ ಮನಸ್ಸಿನ ಸೇವೆಯನ್ನು ಸಮಾಜ ಗುರುತಿಸುತ್ತದೆ. ಸಾಮಾಜಿಕ ಸೇವೆಯಿಂದ ದೊರೆಯುವ ತೃಪ್ತಿ ಎಲ್ಲಾ ಬಗೆಯ ಸನ್ಮಾನ ಪ್ರಶಂಸೆಗಳನ್ನು ಮೀರಿದುದು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಕೂಡದು ಎನ್ನುವ ಮಹತ್ವಾಕಾಂಕ್ಷೆ ಯಿಂದ ಎಲ್ ಸಿ ಆರ್ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದೆ. ಅನೇಕ ಮಂದಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣವನ್ನು ಈ ವಿದ್ಯಾಸಂಸ್ಥೆಯಲ್ಲಿ ಪಡೆಯುತ್ತಿದ್ದಾರೆ. ಇದು […]
Read More
24-12-2017, 3:02 PM
ಪುತ್ತೂರು: ಹಿಂದಿನ ಕಾಲಘಟ್ಟದ ಸಂಸ್ಕೃತಿ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವವಾಹಿನಿ ಘಟಕವು ಜಿಲ್ಲೆಯ 26 ಘಟಕಗಳ ಯುವಸಮೂಹಕ್ಕೆ ಹಿಂದಿನ ಸಂಸ್ಕೃತಿ ಕಲೆಗಳನ್ನು ನೆನಪಿಸುವ ಅಪೂರ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಹೇಳಿದರು. ಡಿಸೆಂಬರ್ 24 ರಂದು ಆನಡ್ಕ ಕಂಬಳಗದ್ದೆ ಮರಕೂರು ಜನನ ಎಂಬಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಘಟನೆಯಾದ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಹಾಗೂ […]
Read More
17-12-2017, 3:14 PM
ಬೆಳ್ತಂಗಡಿ : ಸಮಾಜದ ಅಭಿವೃಧ್ಧಿಗೆ ಯುವವಾಹಿನಿಯ ಪೂರಕ ಕೆಲಸ ಶ್ಲಾಘನೀಯ, ಯುವವಾಹಿನಿಯು ಯುವಜನತೆಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಶಾಸಕ ಕೆ ವಸಂತ ಬಂಗೇರ ಹೇಳಿದರು . ಅವರು ದಿನಾಂಕ 17.12.2017 ರಂದು ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ 2017-18 ನೆೇ ಸಾಲಿನ ಪದಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾನಂದ ಉಂಗಿಲಬೈಲು ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ […]
Read More
10-12-2017, 4:56 PM
ಮೂಡಬಿದಿರೆ: ಹಳ್ಳಿಯ ಅಭಿವೃಧ್ಧಿಯಲ್ಲಿ ಯುವಜನತೆಯ ಪಾತ್ರ ಬಲು ಮಹತ್ವಪೂರ್ಣವಾಗಿದೆ. ಹಳ್ಳಿಯ ಜನರಿಗೆ ಉದ್ಯೋಗ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಹಾಗೂ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಕೆಲಸ ಯುವವಾಹಿನಿಯಂತಹ ಘಟಕಗಳಿಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಉಪಾಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೆರಾಜೆ ಹೇಳಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ 26 ನೇ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ದಿನಾಂಕ 10.12.2017 ರಂದು ಮೂಡಬಿದಿರೆಯ […]
Read More
03-12-2017, 9:22 AM
ಸಸಿಹಿತ್ಲು : ಸದಸ್ಯರ ಸಂಖ್ಯೆಯನ್ನು ಅವಲಂಭಿಸಿಕೊಂಡು ನಮ್ಮ ಕೆಲಸಗಳು ಯಶಸು ಕಾಣುವುದಿಲ್ಲ ಬದಲಾಗಿ ನಾವು ಮಾಡುವ ಕೆಲಸದಲ್ಲಿನ ಬದ್ಧತೆ, ಮತ್ತು ಕಾರ್ಯದಕ್ಷತೆಯಿಂದ ನಿಜವಾದ ಕಾರ್ಯಸಾಧನೆ ಸಾಧ್ಯವಾಗುತ್ತದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ಯುವವಾಹಿನಿ (ರಿ) ಸಸಿಹಿತ್ಲು ಘಟಕದ ಪದಗ್ರಹಣ ಸಮಾರಂಭದಲ್ಲಿ ನೂತನ ತಂಡಕ್ಕೆ ಪ್ರಮಾಣವಚನ ಭೋಧಿಸಿ ಮಾತನಾಡಿದರು. ಯುವವಾಹಿನಿ ಸಸಿಹಿತ್ಲು ಘಟಕ ಒಂದು ಗ್ರಾಮ ವ್ಯಾಪ್ತಿಯನ್ನು ಹೊಂದಿದೆ, ಹೀಗಿದ್ದರೂ ಹತ್ತಾರು ಸಮಾಜಮುಖಿ ಕಾರ್ಯವನ್ನು ನಡೆಸಿದೆ, ಸಾಂಸ್ಕೃತಿಕವಾಗಿ ಉತ್ತಮ ಹೆಸರನ್ನು […]
Read More
01-12-2017, 5:52 AM
ವೇಣೂರು: ಯುವವಾಹಿನಿ ಯುವಕರ ಘಟಕ ಯುವಶಕ್ತಿಯನ್ನು ಬಳಸಿಕೊಳ್ಳುತ್ತಿರುವ ಯುವವಾಹಿನಿ ಘಟಕಗಳು ಸಮಾಜದಲ್ಲಿ ಉತ್ತಮ ಕಾರ್ಯಸಾಧನೆ ಮಾಡುತ್ತಿದೆ. ಶಿಕ್ಷಣ, ಆರೋಗ್ಯದ ಜತೆಗೆ ಬಡವರಿಗೆ ಸಹಾಯ ಹಸ್ತ ನೀಡುವ ಮೂಲಕ ಸಮಾಜದಲ್ಲಿ ಯುವವಾಹಿನಿ ವಿಶಿಷ್ಟ ಸಂಚಲನ ಮೂಡಿಸಿದೆ ಎಂದು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ಹೇಳಿದರು.ವೇಣೂರು ಗಾರ್ಡನ್ ವ್ಯೂ ಸಭಾಂಗಣದಲ್ಲಿ ದಿನಾಂಕ 01.12.2017 ರಂದು ಶುಕ್ರವಾರ ಜರಗಿದ ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ 25ನೇ ವೇಣೂರು ನೂತನ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಯುವವಾಹಿನಿ ಸಮಾಜ ಸೇವೆಯ ಜತೆಗೆ […]
Read More
19-11-2017, 3:14 AM
ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಅವರ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕೃತಿಕ ವೇದಿಕೆಗಳು ಅನಿವಾರ್ಯ. ಇಂತಹ ವೇದಿಕೆಗಳ ಮೂಲಕ ಪ್ರತಿಭೆಯ ಜೊತೆಗೆ, ಆತ್ಮವಿಶ್ವಾಸ ಮೂಡಲು ಸಹಕಾರಿಯಾಗಿದೆ. ಇಂದು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆತ್ತವರು ಮತ್ತು ಶಿಕ್ಷಕರು ಗಮನಹರಿಸುತ್ತಿರುವುದು ಅನಿವಾರ್ಯವಾಗಿದೆ ಎಂದು ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಪುರ್ಟಾಡೋ ಹೇಳಿದರು. ಅವರು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 19.11.2017 ರಂದು ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ […]
Read More
12-11-2017, 4:51 AM
ಯುವವಾಹಿನಿ (ರಿ) ಉಡುಪಿ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೆಮ್ತೂರು,ಸಾಧನಾ ಯುವಕ ಮಂಡಲ ಹಾಗೂ ಸಾಧನಾ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ, ದಿನಾಂಕ 12.11.2017 ರಂದು ಸೂಪರ್ ಸ್ಪೆಷ್ಯಾಲಿಟಿ ಆರೋಗ್ಯ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಕೆಮ್ತೂರು, ಉಡುಪಿ ಇಲ್ಲಿ ಜರುಗಿತು . ಯುವವಾಹಿನಿ(ರಿ) ಉಡುಪಿ ಘಟಕವು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಿಬಿರವನ್ನು ದೀಪ ಬೆಳಗುವುದರ ಮೂಲಕ […]
Read More