01-04-2018, 8:23 AM
ಕಂಕನಾಡಿ: ಯುವವಾಹಿನಿ ಸ್ವಾಭಿಮಾನದ ಸ್ಪೂರ್ತಿ, ಸಮಾಜದಲ್ಲಿ ಸಂಘಟನೆಯ ಅರಿವು ಮೂಡಿಸಿದೆ, ಆತ್ಮವಿಶ್ವಾಸವನ್ನು ಬಿಟ್ಟು ಮಿಕ್ಕೆಲ್ಲವನ್ನೂ ಕಳಕೊಂಡರೂ ಚಿಂತೆ ಇಲ್ಲ ಎಂಬ ಗುರುವರ್ಯರ ಸಂದೇಶದಂತೆ ನಾವು ಕೀಳರಿಮೆ ಬಿಟ್ಟು ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ಮುನ್ನಡೆಯೋಣ , ಯುವವಾಹಿನಿಯ ನಡೆ ಜಾಗೃತ ಸಮಾಜದ ಕಡೆ ಮುಖ ಮಾಡಿದೆ ಇದು ನಿರಂತರ ಪ್ರಕ್ರಿಯೆಯಾಗಲಿ ಹಾಗೂ ಯುವವಾಹಿನಿ ಕಂಕನಾಡಿ ಘಟಕವು ಶ್ರೇಷ್ಠ ಘಟಕವಾಗಿ ಹೊರಹೊಮ್ಮಲಿ ಎಂದು ಮೆಸ್ಕಾಮ್ ಕಾರ್ಯಪಾಲಕ ಇಂಜಿನಿಯರ್ ಜಯಾನಂದ ಎಮ್ ತಿಳಿಸಿದರು ಅವರು ದಿನಾಂಕ 01.04.2018 ರಂದು ಉಜ್ಜೋಡಿ ಶ್ರೀ […]
Read More
01-04-2018, 7:55 AM
ಕುಪ್ಪೆಪದವು : ಸತ್ ಚಿಂತನೆಯನ್ನು ರೂಪಿಸಿಕೊಳ್ಳುವ ಮೂಲಕ ಯುವ ಸಮುದಾಯದ ಶಕ್ತಿ ಸಾರ್ಥಕತೆಯನ್ನು ಪಡೆಯುತ್ತದೆ, ಸಮಾಜಮುಖಿ ಕಾರ್ಯಗಳ ಮೂಲಕ ಶೋಷಿತ ಜನಾಂಗವನ್ನು ಮುಖ್ಯ ವಾಹಿನಿಗೆ ತರುವಂತಹ ಯುವವಾಹಿನಿ ಸಮಾಜದ ಆಶ್ರಯ ವಾಹಿನಿಯಾಗಿದೆ, ಬಿಲ್ಲವ ಸಮಾಜದ ಆದರ್ಶದ ದಾರಿದೀಪವಾಗಿದೆ ಎಂದು ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ತಿಳಿಸಿದರು ಅವರು ದಿನಾಂಕ 01.04.2018 ರಂದು ಯುವವಾಹಿನಿಯ 30 ನೇ ನೂತನ ಘಟಕ ಯುವವಾಹಿನಿ (ರಿ) ಕುಪ್ಪೆಪದವು ಘಟಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶಗಳನ್ನು ಅಕ್ಷರಶಃ ಪಾಲಿಸುತ್ತಿರುವ […]
Read More
27-03-2018, 3:53 PM
ಕಥೆಗಾರ,ಕಾದಂಬರಿಗಾರ,ನಾಟಕಗಾರ ದಿ.ವಿಶುಕುಮಾರ್ ಅವರ ಕೋಟಿ ಚೆನ್ನಯ ನಾಟಕಕ್ಕೆ ಮರ ಜೀವ ತುಂಬಿದ ಯುವವಾಹಿನಿ ಕಲಾವಿದರು ಇಂದು ತುಳು ನಾಟಕರಂಗದಲ್ಲಿ ಹೊಸ ಛಾಪು ಮೂಡಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯಅಕಾಡೆಮಿ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ನಡೆಸಿದ ಎಂಟು ದಿನಗಳ ನಾಟಕ ಪರ್ಬದಲ್ಲಿ ಯುವವಾಹಿನಿನಿಯ ೫೧ ಮಂದಿ ಕಲಾವಿದರು ವಿಶುಕುಮಾರ್ ಅವರ ಕೋಟಿಚೆನ್ನಯ ನಾಟಕ ಅಭಿನಯಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.ಐದು ದಶಕದ ಹಿಂದೆ ತುಳು ರಂಗಭೂಮಿಯಲ್ಲಿ ಸಂಚಲನ ಸೃಷ್ಟಿಸಿದ್ದ, ಬಳಿಕ ಸಿನಿಮವಾಗಿ ಪ್ರೇಕ್ಷಕರ ಮನ ಗೆದ್ದ […]
Read More
18-03-2018, 2:58 PM
ಬಜ್ಪೆ ಯುವವಾಹಿನಿ ಘಟಕದ ವತಿಯಿಂದ ತಾ. 18.03.2018 ಭಾನುವಾರದಂದು ಬಜ್ಪೆ ಬಿಲ್ಲವ ಸಂಘದ ಸಭಾ ಭವನದಲ್ಲಿ ರಂಗ ಕ್ರಿಯೆ – ರಂಗ ಪ್ರಜ್ಞೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಘಟಕದ ಸದಸ್ಯರುಗಳಿಗೆ, ಅವರ ಮಕ್ಕಳಿಗೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ರಂಗ ತಜ್ಞ ಜಗನ್ಪವಾರ್ ಬೇಕಲ್ ಇವರು ಸಂಗೀತ ನಾಟಕ, ದೃಶ್ಯ, ಬೀದಿ ನಾಟಕ ಮುಂತಾದ ಪ್ರಕಾರಗಳ ವಿಶಿಷ್ಟ ಹೊಲ ಹೊರ ಹೂರಣಗಳನ್ನು ಪ್ರಯೋಗಿಕವಾಗಿ ಉಣಬಡಿಸಿ, ಫಲಾನುಭವಿಗಳನ್ನು ಜೀತೋಹಾರಿಯಾಗಿಸಿದರು. ಸದಸ್ಯರುಗಳಿಗೆ ನಟನಾ ಕೌಶಲ್ಯದ ಸೂಕ್ಷ್ಮತೆಯನ್ನು ತಿಳಿಹೇಳಿ […]
Read More
17-03-2018, 5:00 PM
ಮಾಣಿ : ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಪಾಟ್ರಕೇೂಡಿ ಕೆದಿಲದಲ್ಲಿ ದಿನಾಂಕ 17.03.2018 ರಂದು ಉಚಿತ ಆಯುಷ್ ಚಿಕಿತ್ಸಾ ಶಿಬಿರವು ಯುವವಾಹಿನಿ (ರಿ)ಮಾಣಿ ಘಟಕದ ಆಶ್ರಯದಲ್ಲಿ ದ.ಕ.ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆಯ ವತಿಯಿಂದ ನಡೆಯಿತು. ಶಿಬಿರವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ಹಿಂದಿನ ಕಾಲದಲ್ಲಿ ಜನರಿಗೆ ಯಾವುದೇ ರೇೂಗಗಳು ಕಂಡು ಬಂದಲ್ಲಿ ಗಿಡಮೂಲಿಕೆಗಳಿಂದ ಮನೆ ಮದ್ದು ತಯಾರಿಸಿ ಉಪಯೇೂಗಿಸುತ್ತಿದ್ದರು. ಈಗ ಅದಕ್ಕೆಂದೆ ಸರ್ಕಾರ […]
Read More
14-03-2018, 3:56 PM
ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ ಮತ್ತು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಉಚಿತ ಮಕ್ಕಳ ದಂತ ಚಿಕಿತ್ಸೆ ಮತ್ತು ತಪಾಸಣಾ ಶಿಬಿರವು ಯೆನಪೊಯ ಮೆಡಿಕಲ್ ಮತ್ತು ದಂತ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಇಲ್ಲಿಯ ತಜ್ಞ ವೈದ್ಯರ ತಂಡದೊಂದಿಗೆ ದಿ.14.03.2018 ರಂದು ಇಳಂತಿಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಸುಬುರವರು ದೀಪ ಬೆಳಗಿಸಿ ನೆರವೇರಿಸಿ ಮಾತನಾಡಿ ಸಮಾಜದ ಜನರಲ್ಲಿ ಉತ್ತಮ ಆರೋಗ್ಯವಿದ್ದಾಗ ಬಲಿಷ್ಠ ಸಮಾಜ ನಿರ್ಮಾಣ ಆಗುತ್ತದೆ ಈ ನಿಟ್ಟಿನಲ್ಲಿ […]
Read More
11-03-2018, 4:04 PM
ಕೊಲ್ಯ : ನಿರ್ದಿಷ್ಟ ಗುರಿಯೊಂದಿಗೆ , ಸಂಘಟಿತ ಸಾಧನೆಯೆಡೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಡವಾಗಲು ಯುವವಾಹಿನಿ ವೇದಿಕೆ ನಿರ್ಮಿಸಿದೆ, ಸಮಾಜದ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಸಮಾಜಮುಖಿ ಕಾರ್ಯವನ್ನು ನಡೆಸುತ್ತಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದು ಹೈಕೋರ್ಟ್ ನ್ಯಾಯವಾದಿ ನವನೀತ ಡಿ.ಹಿಂಗಾಣಿ ತಿಳಿಸಿದರು. ಅವರು ದಿನಾಂಕ 11.03.2018 ರಂದು ಕೊಲ್ಯ ನಾರಾಯಣಗುರು ಮಂದಿರದಲ್ಲಿ ಯುವವಾಹಿನಿ (ರಿ) ಕೊಲ್ಯ ಘಟಕದ 2018-19 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಮಾಡೂರು ಶ್ರೀ ಶಿರಡಿ […]
Read More
11-03-2018, 2:50 PM
ಮಂಗಳೂರು : ಮಹಿಳೆಯರು ಪುರುಷರಿಗೆ ಸಮಾನವಾಗಿ ಸಮಾಜದಲ್ಲಿ ಸಾಧನೆ ಮಾಡುತ್ತಿದ್ದಾರೆ, ಕರಾವಳಿಯ ಹೆಚ್ಚಿನ ಮಹಿಳೆಯರು ಕ್ರೀಡಾ ಚಟುವಟಿಕೆಗಳ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ, ಒಂದೇ ಸಮನಾದ ತರಬೇತಿ ಮತ್ತು ಶಿಕ್ಷಣ ನೀಡಿದರೆ ಹೆಣ್ಣು ಗಂಡಿಗೆ ಎಲ್ಲಾ ರೀತಿಯಲ್ಲಿ ಸರಿಸಮಾನರು ಎಂದು ಕೆನರಾ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಯು.ಮಾಧವ ಸುವರ್ಣ ತಿಳಿಸಿದರು. ಅವರು ದಿನಾಂಕ 11.03.2018 ರಂದು ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಮಂಗಳೂರಿನ […]
Read More
11-03-2018, 1:53 PM
ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಕೂಳೂರು ಇದರ ಸಹಯೋಗದಲ್ಲಿ ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಜರ್ ಲಿಮಿಟೆಡ್ ಮಂಗಳೂರು ಇದರ ಸಹಕಾರದೊಂದಿಗೆ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇಲ್ಲಿಯ ತಜ್ಞ ವೈದ್ಯರ ತಂಡದೊಂದಿಗೆ ದಿನಾಂಕ 11-03-2018 ರಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ದಿ! ಶ್ರೀಮತಿ ಜಾನಮ್ಮ ಸೂಡಪ್ಪ ಪೂಜಾರಿ ಸಭಾಭವನದಲ್ಲಿ “ಉಚಿತ ನೇತ್ರ ತಪಾಸಣಾ ಶಿಬಿರ” ಏರ್ಪಡಿಸಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ […]
Read More
10-03-2018, 2:48 PM
ಹಕ್ಕು ಮತ್ತು ಸ್ವಾತಂತ್ರ್ಯ ವನ್ನು ಕಾಯ್ದುಕೊಳ್ಳುವಲ್ಲಿ ಬದುಕಿನ ಅನಿವಾರ್ಯ ಪರಿಸ್ಥಿತಿಗಳಲ್ಲಿ ಕುಟುಂಬದ ಪ್ರೀತಿ ಮತ್ತು ಜವಾಬ್ದಾರಿಯಿಂದ ಮಹಿಳೆ ವಂಚಿತಳಾಗುತ್ತಿದ್ದಾಳೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸಂದ್ಯಾ ಕೋಟ್ಯಾನ್ ತಿಳಿಸಿದರು ಅವರು ದಿನಾಂಕ 10.03.2018 ರಂದು ಯುವವಾಹಿನಿ (ರಿ) ಮುಲ್ಕಿ ಘಟಕದ ಆಶ್ರಯದಲ್ಲಿ , ಮುಲ್ಕಿ ಬಿಲ್ಲವ ಸಂಘದಲ್ಲಿ ಜರುಗಿದ ಭೂಮಿಕಾ – ಮಾರ್ಗದರ್ಶನದೊಂದಿಗೆ ಸ್ತ್ರೀ ಸಂವೇದನೆ , ಸಾಂಸ್ಕೃತಿಕದೊಂದಿಗೆ ಸನ್ಮಾನ ಗೌರವ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ ಮುಲ್ಕಿ ಘಟಕದ ಅಧ್ಯಕ್ಷರಾದ ರಕ್ಷಿತಾ […]
Read More