ಇತರೆ

ಪುತ್ತೂರು ಘಟಕದಿಂದ ಶಿವಗಿರಿ ಯಾತ್ರೆ

ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕದ ಸದಸ್ಯರು ದಿನಾಂಕ‌ 06.06.2018 ರಿಂದ 09.06.2018 ರ ವರೆಗೆ ಬ್ರಹ್ಮಶ್ರೀ ನಾರಾಯಣಗುರುಗಳ‌ ಜನ್ಮ ಸ್ಥಳ ಶಿವಗಿರಿಗೆ ಯಾತ್ರೆ ಕೈಗೊಂಡರು. ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ‌ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಯುವವಾಹಿನಿ (ರಿ) ಪುತ್ತೂರು ಘಟಕದ ಅಧ್ಯಕ್ಷ ಉದಯ ಕೋಲಾಡಿ ಪ್ರವಾಸದ ನೇತ್ರತ್ವ ವಹಿಸಿದ್ದರು.

Read More

ಯುವಕರು ನಾಯಕತ್ವ ಗುಣ ಬೆಳೆಸಬೇಕು : ಯಶವಂತ ಪೂಜಾರಿ

ಹಳೆಯಂಗಡಿ : ಯುವ ಸಮುದಾಯ ಉತ್ತಮ‌ ನಾಯಕತ್ವ ಗುಣವನ್ನು ಬೆಳೆಸಬೇಕು ಎಂಬ ಸದುದ್ದೇಶದೊಂದಿಗೆ ಯುವವಾಹಿನಿ ಸಂಸ್ಥೆಯು ಯುವ ಸಮುದಾಯದ ಸಂಘಟನೆಯೊಂದಿಗೆ ಸಮಾಜ ಸೇವೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಹಳೆಯಂಗಡಿ ಹರಿ ಓಂ ಸಭಾಂಗಣದಲ್ಲಿ ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2018-19 ನೇ ಸಾಲಿನ ನೂತನ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಸಭೆಯ […]

Read More

ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ – ಯಶವಂತ ಪೂಜಾರಿ.

ಅಡ್ವೆ : ಒಗ್ಗಟ್ಟಿನಿಂದ ದುಡಿದರೆ ಸಾದನೆಗೆ ಅಸಾಧ್ಯವಾದುದು ಏನಿಲ್ಲ, ನಮ್ಮ ಯುವಕರಲ್ಲಿ ಉತ್ಸಾಹ ಹೆಚ್ಚಿಸಬೇಕು. ಆ ಮೂಲಕ ಆತ್ಮವಿಶ್ವಾಸ ಬೆಳೆಸಬೇಕು ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದು ಇಲ್ಲ. ಹಾಗೆಯೇ ಯುವವಾಹಿನಿ ಸಂಘಟನೆಯ ಮೂಲಕ ನಾವೆಲ್ಲರೂ ಒಗ್ಗಾಟ್ಟಾದರೆ ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸಲು ಸಾಧ್ಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 03-06-2018 ನೇ ಭಾನುವಾರ ಅಡ್ವೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ […]

Read More

ತಾಯಿ ಮನುಕುಲದ ಶಾಲೆಗೆ ಗುರು : ಕೇಶವ ಎಚ್

ಮಂಗಳೂರು : ತಾಯಿ ಮನುಕುಲದ ಶಾಲೆಗೆ ಗುರುವಾಗಿದ್ದಾಳೆ, ಮನೆ ಎಂಬ ಪಾಠಶಾಲೆ ಹಾಗೂ ಪಾಕಶಾಲೆಗೆ ಶೋಧನೆ, ಸಂಶೋಧನೆಯ ಜ್ಞಾನಿ ವಿಜ್ಞಾನಿಯಾಗಿರುತ್ತಾಳೆ, ಪ್ರೀತಿಯ ಮುತ್ತಿಟ್ಟು, ಅನ್ನದ ತುತ್ತಿಟ್ಟು ಉಣಿಸಿ ತಣಿಸುವ ಅನ್ನಪೂರ್ಣೆ, ನಿದ್ದೆಗೆ ಲಾಲಿ ಜೋಗುಳ ಹಾಡಿ ಮಲಗಿಸುವ ಸಂಗೀತಗಾರ್ತಿ ಅಮ್ಮ, ಹೀಗೆ ಸಮಗ್ರ ಶಕ್ತಿಗೆ ಚೇತನದ ಅಮೃತದ ಸೆಲೆಯಾಗಿ ಸರ್ವರ ಹೃದಯದ ಆರಾಧನಾ ಮೂರ್ತಿಯಾಗಿರುತ್ತಾಳೆ ಎಂದು ಮುಲ್ಕಿ ನಾರಾಯಣಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಎಚ್ ತಿಳಿಸಿದರು. ಅವರು ದಿನಾಂಕ‌ 27.05.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ […]

Read More

ಸಂಘಟನೆ ಮತ್ತು ಸಮಾನತೆಯಿಂದ ಯುವ ಜನತೆಯ‌ ಯಶಸ್ಸು ಸಾಧ್ಯ : ನರೇಶ್ ಕುಮಾರ್

ಕೂಳೂರು : ನಮ್ಮ ದೃಷ್ಟಿ ಎತ್ತರಕ್ಕೆ ಇದ್ದಾಗ ಮತ್ತು ಧೃಡ ಚಿತ್ತ ಇದ್ದಾಗ ತಲುಪುವ ಗುರಿ ಹತ್ತಿರವಾಗುತ್ತದೆ ಸಂಘಟನೆಯ ಶಕ್ತಿ ಯುವಸಮುದಾಯದಲ್ಲಿದೆ ಮತ್ತು ಸಮಾನತೆಯಲ್ಲಿದೆ ಹಾಗಾದಾಗ ಯಶಸು ಲಭಿಸುತ್ತದೆ . ನಾಯಕತ್ವಕ್ಕೆ ಅಡಿಪಾಯ ಮುಖ್ಯ ಈ ದಿಶೆಯಲ್ಲಿ ಕೂಳೂರು ಘಟಕದ ಪರಿಶ್ರಮ ಅಭಿನಂದನೀಯ ಮಹಿಳೆಯರಿಗೆ ಅವಕಾಶ ಹೆಚ್ಚಾಗಬೇಕು ಎನ್ನುವ ಕೂಗು ಎಲ್ಲ ಕಡೆ ಇದೆ ಕೂಳೂರು ಘಟಕ ಅದನ್ನು ಅನುಸರಿಸಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ‌ತಿಳಿಸಿದರು. ಅವರು ದಿನಾಂಕ […]

Read More

ದೇಗುಲ ದರ್ಶನ

ಕೊಲ್ಯ : ಯುವವಾಹಿನಿ (ರಿ)ಕೊಲ್ಯ ಘಟಕದ ಸದಸ್ಯರು ತಾ 27-05-2018ನೇ ಆದಿತ್ಯವಾರದಂದು “ದೇಗುಲ ದರ್ಶನ” ಎಂಬ ಒಂದು ದಿನದ ಪುಣ್ಯ ಕ್ಷೇತ್ರ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಬೆಳಿಗ್ಗೆ 6ಗಂಟೆಗೆ ಕೊಲ್ಯ ಬ್ರಹ್ಮ ಶ್ರೀ ನಾರಾಯಣಗುರು ಮಂದಿರದಲ್ಲಿ ಗುರುವರ್ಯರಿಗೆ ಪೂಜೆ ಸಲ್ಲಿಸಿ ಹೊರಟ 54 ಪ್ರವಾಸಿಗರನ್ನೊಳಗೊಂಡ ತಂಡವು ಉಡುಪಿ ಶ್ರೀ ಕೃಷ್ಣ ಮಠ,ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಗಳಿಗೆ ಭೇಟಿ ನೀಡಿ ಶ್ರೀ ದೇವರ ದರ್ಶನ […]

Read More

ಯುವವಾಹಿನಿ ಉಡುಪಿ ಘಟಕದ ಸಭಾಂಗಣ, ಕಛೇರಿ ಉದ್ಘಾಟನೆ

ಉಡುಪಿ : ಯುವವಾಹಿನಿ ಸಂಘಟನೆಯ ಪ್ರತಿಷ್ಠಿತ ಘಟಕ ‌ಯುವವಾಹಿನಿ(ರಿ) ಉಡುಪಿ ಘಟಕದ ಯುವವಾಹಿನಿ ಸಭಾಂಗಣ ಮತ್ತು ಕಛೇರಿಯ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಉದ್ಯಾವರ ಬಲಾಯಿಪಾದೆಯ ನಾಗಪ್ಪ ಕಾಂಪ್ಲೆಕ್ಸ್ ನಲ್ಲಿ ಮಾಲಕ ಅಶೋಕ್ ಎನ್.ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಯುವವಾಹಿನಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಉಡುಪಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡು ಯುವವಾಹಿನಿ ಬೆಳವಣಿಗೆಗೆ ಉಡುಪಿ ಘಟಕದ ಸಭಾಂಗಣ ಸಹಕಾರಿಯಾಗಿದೆ. ಇದುವರೆಗೆ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಕಾರ್ಯ ನಡೆಸುತ್ತಾ […]

Read More

ಎಲ್ಲಾ ಬಾಂಧವ್ಯ , ಸಂಬಂಧಗಳನ್ನು ಮೀರಿದವಳು ತಾಯಿ : ಯಶವಂತ ಪೂಜಾರಿ

ಕೂಳೂರು : ಎಲ್ಲಾ ಬಾಂಧವ್ಯ ಸಂಬಂಧಗಳನ್ನು ಮೀರಿದವಳು ತಾಯಿ‌, ತಾನು ಎಲ್ಲಾ ಕಡೆ ಇರಲಾರೆ ಎಂಬ ಕಾರಣಕ್ಕಾಗಿ ದೇವರು ತಾಯಿಯನ್ನು ಸೃಷ್ಟಿಸಿದ ಎಂಬ ಮಾತನ್ನು ಅಕ್ಷರಶಃ ರುಜುವಾತು ಮಾಡಿಕೊಟ್ಟವಳು. ಹೆಜ್ಜೆಯಿಡಲು ಕಲಿಸಿದವಳು, ಕೈ ತುತ್ತು ನೀಡಿದವಳು, ಕರುಳಕುಡಿಯ ಜೀವನಕ್ಕಾಗಿ‌ ತನ್ನ ಜೀವವನ್ನು ಸವೆಸಿದವಳು, ಕಂದನ ಪ್ರತಿ ಯಶಸ್ಸಿನಲ್ಲೂ ಆಕೆಯ ಪಾಲಿದೆ ಪ್ರತಿ ಕಷ್ಟದಲ್ಲೂ ಆಕೆಯ ಸಾಂತ್ವನವಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ‌ 10.05.2018 ರಂದು ಯುವವಾಹಿನಿ (ರಿ) […]

Read More

ಕೌಟುಂಬಿಕ ವಲಯದಲ್ಲಿ ಹೆಣ್ಣಿನ ಪಾತ್ರ ಅದ್ಭುತ , ವರ್ಣನಾತೀತ : ಶಹನಾಜ್

ಮಂಗಳೂರು : ಕೌಟುಂಬಿಕ ವಲಯದಲ್ಲಿರುವ ವ್ಯಕ್ತಿಗಳಿಗೆ ಹೆಣ್ಣು ಆಸಕ್ತಿಯ, ಆತ್ಮ ಸಂಗಾತದ ವಿಷಯ. ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಹೆಂಡತಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಗೆಳತಿಯಾಗಿ, ಪ್ರೇಮಿಯಾಗಿ ಆಕೆ ನಿರ್ವಹಿಸುವ ಪಾತ್ರಗಳು ಅದ್ಬುತ, ವರ್ಣನಾತೀತ. ಏಕೆಂದರೆ ಸ್ತ್ರೀ ಒಂದು ಸಮುದಾಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಸಾಮರ್ಥ್ಯ ಹೊಂದಿರುವಂತಹವಳು. ಕೌಟುಂಬಿಕ ವಲಯದ ಸ್ತ್ರೀ ಕುಟುಂಬದ ಕಟ್ಟುಪಾಡುಗಳಿಗೆ ಒಳಗಾಗಿ ಜೀವನ ನಡೆಸುತ್ತಿದ್ದಾಳೆ ಹಾಗೂ ಆಕೆ ತನ್ನ ಕುಟುಂಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ದಳಾಗಿರುತ್ತಾಳೆ ಎಂದು ಅನುಪಮಾ ಮಹಿಳಾ ಮಾಸಿಕ ಪತ್ರಿಕೆಯ ಸಂಪಾದಕರು, ಹಾಗೂ ಸಾಹಿತಿ […]

Read More

ವೀಲ್ ಚೇರ್ ವಿತರಣೆ

ದಿನಾಂಕ : 02/05/2018 ರಂದು ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿಂದ ಕಿಲೆಂಜಾರು ಗ್ರಾಮದ ನಿವಾಸಿಯಾದ,ನಡೆದಾಡಲು ಅಸಾಧ್ಯವಾಗಿ ಹಾಸಿಗೆ ಹಿಡಿದಿರುವ ರವೀಂದ್ರ ಇವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ಅಂಬೆಲೋಟ್ಟು , ಉಪಾಧ್ಯಕ್ಶರಾದ ಅಜೇಯ್ ಅಮೀನ್ ನಾಗಂದದಿ, ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ಲ್ , ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!