ಇತರೆ

ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ

ಕಂಕನಾಡಿ : ಯುವವಾಹಿನಿ(ರಿ‌.) ಕಂಕನಾಡಿ ಘಟಕದ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿ ಮತ್ತು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಂಯುಕ್ತ ಸಹಯೋಗದೊಂದಿಗೆ ದಿನಾಂಕ 16-9-2018 ರಂದು    ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಪ್ರಾಥಮಿಕ ಶಾಲೆಯಲ್ಲಿ ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ  ಜರುಗಿತು. ಸುಮಾರು 100ಕ್ಕೂ ಅಧಿಕ ಮಂದಿ ಈ  ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು […]

Read More

ಹಳೆಯಂಗಡಿ ಗಣೇಶೋತ್ಸವದಲ್ಲಿ ಜನಮನ ಸೆಳೆದ ಯುವವಾಹಿನಿ ತಂಡಕ್ಕೆ ಜೈ ಹೋ

ಹಳೆಯಂಗಡಿ : ಕಟ್ಟೋಣ ನಾವು ಹೊಸ ನಾಡೊಂದನು…ಶಾಂತಿ ಸಹಬಾಳ್ವೆಯ ಬೀಡೊಂದನು… ಹೆಜ್ಜೆ ಮೇಲೆ ಹೆಜ್ಜೆ ಇಡುತ ಕುಣಿವ ಯುವಜನರ ದಂಡು, ಜೊತೆಗೆ ಹುಚ್ಚೆಬ್ಬಿಸೋ ನಾಸಿಕ್ ಬ್ಯಾಂಡು… ಹಳೆಯಂಗಡಿ ಗಣೇಶೋತ್ಸವದಲ್ಲಿ ಜನಮನ ಸೆಳೆದ ಯುವವಾಹಿನಿ ತಂಡಕ್ಕೆ ಜೈ ಹೋ . ದಿನಾಂಕ 15-09-2018 ರಂದು ನಡೆದ ಹಳೆಯಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಯಾತ್ರೆಯಲ್ಲಿ ಯುವವಾಹಿನಿ (ರಿ) ಹಳೆಯಂಗಡಿ ಘಟಕದ ಸದಸ್ಯರಿಂದ “ನಾಸಿಕ್ ಬ್ಯಾಂಡ್ ” ಕಾರ್ಯಕ್ರಮ ಏರ್ಪಡಿಸಲಾಯಿತು. 60 ಸದಸ್ಯರ ದಂಡು ,ಹಳದಿ ಬಣ್ಣದ ಜರ್ಸಿ ಟಿ-ಶರ್ಟ್ ಸಮವಸ್ತ್ರದಲ್ಲಿ […]

Read More

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬಜಪೆ : ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್, ಕಾಲೇಜು ಅಭಿವೃದ್ಧಿ ಸಮಿತಿ, ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಸುಂಕದಕಟ್ಟೆ ಬಜ್ಪೆ, ಶ್ರೀ ನಿರಂಜನ ಸ್ವಾಮಿ ಅನಿದಾನಿತ ತಾಂತ್ರಿಕ ವಿದ್ಯಾಲಯ ಸುಂಕದಕಟ್ಟೆ ಹಾಗೂ ರೋಟರಿ ಕ್ಲಬ್ ಬಜ್ಪೆ ಇವರೆಲ್ಲರ ಸಹಭಾಗಿತ್ವದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕ ಇವರ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ […]

Read More

ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ : ಮಧುಮಾಲ

ಮಂಗಳೂರು : ಜಾಗತೀಕರಣದ ಪ್ರಭಾವ ಇಂದು ಎಲ್ಲೆಡೆ ವ್ಯಾಪಿಸುತ್ತಿದೆ. ಬದಲಾವಣೆ ಎಂಬುದು ಜೀವಂತ ಸಮಾಜದ ಲಕ್ಷಣ ಎಂಬುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕು ಆದರೆ ಈ ಬದಲಾವಣೆಯ ಗತಿ ನಮ್ಮ ದೇಸಿ ನುಡಿ-ಸಂಸ್ಕೃತಿಯ ಬುಡ ಅಲುಗಾಡಿಸುವಂತಾಗಬಾರದು ಹೊಸತನ್ನು ಸ್ವೀಕರಿಸುತ್ತಲೇ ಈ ನೆಲದ ಜೀವನಮೌಲ್ಯ-ಕಲಾಮೌಲ್ಯಗಳು ಉಳಿಯುವಂತಾಗಬೇಕು. ತುಳುನಾಡಿನ ಹಬ್ಬ, ಆಚರಣೆ ಆರಾಧನೆಗಳಲ್ಲಿ ಮನುಷ್ಯ ಸಂಬಂಧವನ್ನು ಕಾಪಾಡುವ, ನಿಸರ್ಗವನ್ನು ಗೌರವಿಸುವ ಜೀವನಾದರ್ಶಗಳಿವೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಮಧುಮಾಲ ತಿಳಿಸಿದರು. ಅವರು ದಿನಾಂಕ 15.09.2018 ರಂದು ಯುವವಾಹಿನಿ (ರಿ) ಮಂಗಳೂರು ಮಹಿಳಾ […]

Read More

ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ವೈದ್ಯಕೀಯ ನೆರವು

ಕುಪ್ಪೆಪದವು :ಯುವವಾಹಿನಿ (ರಿ) ಕುಪ್ಪೆಪದವು ಘಟಕದಿಂದ ಇಲ್ಲಿನ ಸ್ಥಳೀಯ ನಿವಾಸಿ ಬಡ ಕುಟುಂಬದ ಶೇಖರ್ ಪೂಜಾರಿ ದುರ್ಗಕೊಡಿ ಇವರ ಮಗುವಿನ ಅನಾರೋಗ್ಯದ ನಿಮಿತ್ತ ದಿನಾಂಕ 13/09/2018 ರಂದು ವೈದ್ಯಕೀಯ ನೆರವು ನೀಡಲಾಯಿತು . ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ,ಉಪಾಧ್ಯಕ್ಷರಾದ ಅಜಯ್ ಅಮೀನ್.ಕಾರ್ಯದರ್ಶಿ ರಿತೇಶ್ ನೆಲ್ಲಚಿಲ್ ಹಾಗೂ ಘಟಕದ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು

Read More

ಯುವವಾಹಿನಿ (ರಿ.) ಅಡ್ವೆ ಘಟಕದ ವತಿಯಿಂದ ಆಟೋಟ ಸ್ಪರ್ಧೆ

ಅಡ್ವೆ: ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ದಿನಾಂಕ13-09-2018 ರಂದು ಯುವವಾಹಿನಿ ಅಡ್ವೆ ಘಟಕದ ವತಿಯಿಂದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ನಡೆದ ಸರಳ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜಿತೇಶ್‌ ಜೆ. ಕರ್ಕೇರ ವಹಿಸಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಇದರ ಕಾರ್ಯದರ್ಶಿ ನವೀನ್ ಚಂದ್ರ ಸುವರ್ಣ, ಅರ್ಚಕರಾದ ರಾಮ ಪೂಜಾರಿ, ಹಿರಿಯರಾದ ಶೇಖರ ಪೂಜಾರಿ, ಮನೋಜ್ ಜಾನು […]

Read More

ಯುವವಾಹಿನಿ ಭವಿಷ್ಯದ ಭರವಸೆಯ ನಂದಾದೀಪ : ಗೋಪಾಲಕೃಷ್ಣ

ಬೆಂಗಳೂರು : ಯುವವಾಹಿನಿ ಸಮಾಜದ ಭೂತ, ವರ್ತಮಾನ ಹಾಗೂ ಭವಿಷ್ಯದ ನಂದಾದೀಪವಾಗಲಿದೆ. ಯುವವಾಹಿನಿ ಶಬ್ದದಲ್ಲಿ ಒಂದು ಆಕರ್ಷಣೆ ಇದೆ, ಶಕ್ತಿ ಇದೆ, ಭರವಸೆ ಇದೆ. ಆರೋಗ್ಯಕರವಾದ ಸಂಪರ್ಕವೇ ಸಂಘಟನೆಯ ಸಾಧನ , ವಾಹಿನಿ ಅಂದರೆ ನಿರಂತರವಾದ ಹರಿವು, ಯುವವಾಹಿನಿಯ ನಿಸ್ವಾರ್ಥವಾದ ಸಾಮಾಜಿಕ ಕಾಳಜಿಯಿಂದ ಈ ಹರಿವಿನ ಶಕ್ತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ನೆಕ್ಕಿತಪುಣಿ ಗೋಪಾಲಕೃಷ್ಣ ಅಭಿಪ್ರಾಯ ಪಟ್ಟರು. ಅವರು ದಿನಾಂಕ 09.09.2018 ರಂದು ಬೆಂಗಳೂರು ಮಲ್ಲೇಶ್ವರಂ ಸೇವಾ ಸದನ ಆಡಿಟೋರಿಯಂ ನಲ್ಲಿ ಯುವವಾಹಿನಿಯ […]

Read More

ಯುವವಾಹಿನಿ (ರಿ) ಬಂಟ್ವಾಳ ಘಟಕದ ಸದಸ್ಯರಿಂದ ಸಾಂಸ್ಕೃತಿಕ ವೈವಿಧ್ಯ

ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 164 ನೇ ಜನ್ಮದಿನಾಚರಣೆ ಪ್ರಯುಕ್ತ ದಿನಾಂಕ 09.09.2018 ರಂದು ನಾರಾಯಣರು ಸಭಾಭವನ ಗಾಣದಪಡ್ಪು ಬಿ.ಸಿ.ರೋಡ್ ಇಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪ್ರಥಮ ಪ್ರಶಸ್ತಿ ವಿಜೇತ CPL ಖ್ಯಾತಿಯ ವೈಷ್ಣವಿ ಕಲಾವಿದೆರ್ ಕೊಯಿಲ ಇವರಿಂದ “ಕುಸಲ್ದ ಗೌಜಿ” ಎಲ್ಲರನ್ನೂ ನಗೆಕಡಲಲ್ಲಿ ಮುಳುಗಿಸಿತು. ಸಂಚಾಲಕರಾದ ಸುಂದರ ಪೂಜಾರಿ ಬೋಳಂಗಡಿ ಮತ್ತು ಮಲ್ಲಿಕಾ ಪಚ್ಚಿನಡ್ಕ ಕಾರ್ಯಕ್ರಮದ […]

Read More

ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕದ ವತಿಯಿಂದ ಕ್ಷೇತ್ರ ದರ್ಶನ

ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕದ ವತಿಯಿಂದ ದಿನಾಂಕ 09/09/2018 ರಂದು ಕ್ಷೇತ್ರ ದರ್ಶನ ವನ್ನು ಹಮ್ಮಿಕೊಳ್ಳಲಾಗಿತ್ತು. ಘಟಕದ ಅಧ್ಯಕ್ಷ ಗಣೇಶ್ ಅರ್ಬಿ ಪ್ರವಾಸಕ್ಕೆ ಚಾಲನೆ ನೀಡಿದರು.60 ಜನ ಸದಸ್ಯ ರನ್ನು ಒಳಗೊಂಡ ತಂಡವು ಬೆಳಿಗ್ಗೆ 6 ಗಂಟೆಗೆ ಗುರುಸ್ಮರಣೆ ಯೊಂದಿಗೆ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇಲ್ಲಿಂದ ಹೊರಟಿತು.6:45 ಕ್ಕೆ ಮುಲ್ಕಿ ತಲುಪಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದು, ಬೆಳಿಗ್ಗಿನ ಉಪಹಾರವನ್ನು ಮುಗಿಸಿ 8:45 ಕ್ಕೆ ಉಡುಪಿ ತಲುಪಿದೆವು. […]

Read More

ನಾಸಿಕ್ ಬ್ಯಾಂಡ್ ತರಬೇತಿ ಶಿಬಿರ

ಹಳೆಯಂಗಡಿ : ಯುವವಾಹಿನಿ(ರಿ) ಹಳೆಯಂಗಡಿ ಘಟಕದ ಸದಸ್ಯರಿಗೆ 15 ದಿನಗಳ ಉಚಿತ ನಾಸಿಕ್ ಬ್ಯಾಂಡ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 02.09.2018 ರಂದು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು. ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನಾಣಿಲ್ ರವರು ನಾಸಿಕ್ ಬ್ಯಾಂಡ್ ಬಾರಿಸುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಹೇಮನಾಥ ಬಿ ಕರ್ಕೆರ, ಕಾರ್ಯದರ್ಶಿ ಚಂದ್ರಿಕಾ ಪ್ರವೀಣ್ ಕೋಟ್ಯಾನ್, ಭಾಸ್ಕರ್ ಸಾಲಿಯಾನ, ಮೋಹನ್ ಎಸ್ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!