06-11-2018, 5:05 PM
ಮೂಲ್ಕಿ: ನಾರಾಯಣಗುರುಗಳ ತತ್ವ ಆದರ್ಶದಂತೆ ಇಂದು ಬಿಲ್ಲವ ಸಮಾಜವು ಸಂಘಟನತ್ಮಕವಾಗಿ ಬೆಳೆಯುವುದರೊಂದಿಗೆ ಸಮಾಜದಲ್ಲಿ ಕರಾವಳಿಯ ಸಂಪ್ರದಾಯವನ್ನು ಸಂಸ್ಥೆಯ ಮೂಲಕ ಉಳಿಸುವ ಪ್ರಯತ್ನ ಶ್ಲಾಘನೀಯವಾಗಿದೆ. ಯುವ ಸಮಾಜವನ್ನು ಕಟ್ಟಿ ಬೆಳೆಸುವ ಜವಬ್ದಾರಿಯನ್ನು ನಾರಾಯಣಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ ಎಂದು ಉಡುಪಿಯ ಕಿರಿಯ ಕಾನೂನು ಅಧಿಕಾರಿ ಮುಮ್ತಾಜ್ ಹೇಳಿದರು. ಅವರು ಮೂಲ್ಕಿ ಯುವವಾಹಿನಿ ಘಟಕದ ವತಿಯಿಂದ ದಿನಾಂಕ 06.11.2018 ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ 16ನೇ ವರ್ಷದ ತುಳುವೆರೆ ತುಡಾರ ಪರ್ಬವನ್ನು ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಕೊಸೆಸಾಂ […]
Read More
06-11-2018, 3:36 PM
ಕೂಳೂರು : ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ‘ಕತ್ತಲಿನಿಂದ ಬೆಳಕಿನೆಡೆಗೆ- ನಮ್ಮ ಮನೆ ಹಬ್ಬ ದೀಪಾವಳಿ’ ಯನ್ನು ದಿನಾಂಕ 06/11/2018 ರಂದು ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಘಟಕದ ಕುಟುಂಬ ಸಂಪರ್ಕ ನಿರ್ದೇಶಕರಾದ ರೇಣುಕಾ ತಾರನಾಥ್ ಅವರ ಸಂಚಾಲಕತ್ವದಲ್ಲಿ ಅವರ ಮನೆಯಲ್ಲಿ 90 ಮಂದಿ ಸದಸ್ಯರ ಉಪಸ್ಥಿತಿಯೊಂದಿಗೆ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ) ಕೇಂದ್ರ […]
Read More
05-11-2018, 3:29 PM
ಕೂಳೂರು : ಬೆಳಕಿನ ಒಂದು ಸೆಲೆ ಸಾಕು ಬದುಕಿನಲ್ಲಿ ಜೀವನೋತ್ಸಾಹ ತುಂಬಲು .ಹಣತೆಯ ಬೆಳಕಿನಲ್ಲಿ ಒಬ್ಬರ ಕಷ್ಟ, ನೋವು,ನಲಿವನ್ನು ಕ್ಷಣಕಾಲ ಕಂಡು ಅರ್ಥೈಸಿಕೊಳ್ಳಲು ಇದೊಂದು ಸದಾವಕಾಶ ಎನ್ನುವಂತೆ ಶ್ರೀ ಗುರುವರ್ಯರ ಆಶೀರ್ವಾದದೊಂದಿಗೆ, ಕೂಳೂರು ಘಟಕದ ಆಶಯದಂತೆ ದೀಪಾವಳಿ ಹಬ್ಬದಂದು ಇಡೀ ಜಗತ್ತೇ ಬೆಳಕಿನಲ್ಲಿ ಜಗಮಗಿಸುವಾಗ ಕೆಲವೊಂದು ಮನೆಯಲ್ಲಿ ಹಣತೆ ಹಚ್ಚಲು ಸಾಧ್ಯವೇ ಇಲ್ಲ ಎನ್ನುವ ದಯನೀಯ ಕುಟುಂಬಗಳು ನಮ್ಮ ಸಮಾಜದಲ್ಲಿ ಇರುವುದನ್ನು ಗುರುತಿಸಿ ಅವರಿಗೆ ಒಂದು ತಿಂಗಳ ದಿನಬಳಕೆಯ ಎಲ್ಲ ಸಾಮಗ್ರಿಗಳನ್ನು ಒದಗಿಸಿಕೊಟ್ಟು ದೀಪಾವಳಿಯ ಅರ್ಥಪೂರ್ಣ ಆಚರಣೆಯಲ್ಲಿ […]
Read More
04-11-2018, 4:43 PM
ಎಕ್ಕಾರು ಪೆರ್ಮುದೆ : ಯುವವಾಹಿನಿಯ 33 ನೇ ನೂತನ ಘಟಕ ಎಕ್ಕಾರು ಪೆರ್ಮುದೆ ಘಟಕವು ದಿನಾಂಕ 04.11.2018 ರಂದು ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಪೆರ್ಮುದೆ ಎಕ್ಕಾರು ಇಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷ ಯಾದವ ಕೋಟ್ಯಾನ್ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯು ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯಗಳೊಂದಿನ ಯುವಜನರ ದ್ವನಿಯಾಗಿ ರೂಪುಗೊಂಡಿದೆ, ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಯುವವಾಹಿನಿ (ರಿ) […]
Read More
04-11-2018, 4:27 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ದಿನಾಂಕ 04/11/2018 ರಂದು ದೀಪಾವಳಿ ಪ್ರಯುಕ್ತ ” ದೀಪಾವಳಿ ಒರ್ಲ ಪೊರ್ಲು ” ಕಾರ್ಯಕ್ರಮ ಆಚರಿಸಲಾಯಿತು. ನಳಿನಿ ಟೀಚರ್ ರವರು ಕಾರ್ಯಕ್ರಮ ಉದ್ಘಾಟಿಸಿ ದೀಪಾವಳಿ ಆಚರಣೆ ಬಗ್ಗೆ ಮಾತನಾಡಿದರು. ನರಕಚತುರ್ದಶಿ, ಎಣ್ಣೆ ಸ್ನಾನ, ತುಳಸೀ ಪೂಜೆ, ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಗೋಪೂಜೆ , ಗೂಡುದೀಪ, ಮುಂತಾದ ಎಲ್ಲಾ ವಿಷಯಗಳ ಬಗ್ಗೆ ತಿಳಿಸಿದರು. ಘಟಕದ ಸಲಹೆಗಾರರಾದ ಹಾಗೂ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರು ದೀಪಾವಳಿಯ […]
Read More
04-11-2018, 3:19 PM
ಬಂಟ್ವಾಳ : ದಿನನಿತ್ಯದ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ಪ್ರೇರೇಪಿಸುವ ಮನವೊಪ್ಪಿಸುವ ಅಥವಾ ಒತ್ತಾಯಿಸುವ ಸಂದರ್ಭಗಳು ಸಹಜ, ಇಂತಹ ಸಂದರ್ಭಗಳಲ್ಲಿ ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು , ಉದ್ದೇಶವನ್ನು ಸಾಧಿಸುವಂತೆ ಇರಬೇಕು. ಆದರೆ ಈ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ಇರುವುದಿಲ್ಲ ಉದಾಹರಣೆಗೆ ಜೀವನದಲ್ಲಿ ಯಾವ ಕೊರತೆ ಇಲ್ಲದಿದ್ದರೂ ಚೈತನ್ಯ ರಹಿತವಾದ ನಿರಾಶವಾದಿಗಳನ್ನು ನೋಡುತ್ತಿರುತ್ತೇವೆ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯವನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ ಕಿರಿಕಿರಿ […]
Read More
28-10-2018, 3:06 PM
ಮೂಡಬಿದಿರೆ : ತುಳುನಾಡಿನ ಕೌಟುಂಬಿಕ ಭಾಂದವ್ಯ ಅತ್ಯಂತ ಶಕ್ತಿಯುತ ಆದರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಕೌಟುಂಬಿಕ ಭಾಂದವ್ಯವಾಗಲಿ, ನೆರೆ ಮನೆಯ ಸಂಬಂಧಗಳಲ್ಲಿ ದಿನೇ ದಿನೇ ಕುಸಿಯುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ. ಯಂತ್ರ ಮತ್ತು ವಾಣಿಜ್ಯ ಪರತೆ ಮನುಷ್ಯನ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುತ್ತಿವೆ, ಇದು ಅನೇಕ ಅತೃಪ್ತಿ ಮತ್ತು ಅತಂಕಕ್ಕೆ ಕಾರಣವಾಗುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲ ತಿಳಿಸಿದರು. ಅವರು ಸಿದ್ದಕಟ್ಟೆ ಸಮೀಪದ ಪಡು ಪಾಲ್ಜಲ್ ಗುತ್ತು […]
Read More
21-10-2018, 3:37 PM
ಯಡ್ತಾಡಿ : ಸಂಘಟನೆಯನ್ನು ಬಲಪಡಿಸುವ ಸಲುವಾಗಿ ಒಂದಿಷ್ಟು ಮನರಂಜನೆಗೆ, ಒಂದಿಷ್ಟು ಸಂಘಟನೆಗೆ ಎಂಬ ಉದ್ದೇಶವನ್ನು ಮುಂದಿರಿಸಿಕೊಂಡು ಯುವವಾಹಿನಿ (ರಿ) ಯಡ್ತಾಡಿ ಘಟಕ ಆರಂಭಿಸಿದ ನಮ್ಮ ನಡೆಯ ಎರಡನೇ ಕಾರ್ಯಕ್ರಮ ನಮ್ಮ ನಡೆ, ಕಂಬಳಕಟ್ಟು ಕಡೆ, ಅಧ್ಯಕ್ಷರಾದ ಸತೀಶ ಪೂಜಾರಿಯವರ ಮನೆಯಲ್ಲಿ ದಿನಾಂಕ 21-10-2018 ರಂದು ನಡೆಸಲಾಯಿತು. ಸ್ವಯಂ ಪ್ರೇರಣೆಯಿಂದ ಸದಸ್ಯರು ಭಾಗವಹಿಸದೇ ಇದ್ದರೆ ಯಾವುದೇ ಸಂಘಟನೆಯನ್ನು ಮುನ್ನಡೆಸುವುದು ಕಷ್ಟ ಸಾಧ್ಯ. ಅದೂ ಅಲ್ಲದೆ ಅದು ವ್ಯರ್ಥ ಕೂಡ. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದಿಗೆ ಯುವವಾಹಿನಿ ಪ್ರಾರಂಭಿಸಿದ ಕಾರ್ಯಕ್ರಮ […]
Read More
10-10-2018, 4:30 PM
ಯುವವಾಹಿನಿ ಪುತ್ತೂರು ಘಟಕ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಮಂಗಳೂರು ದಸರಾ ಪ್ರಯುಕ್ತ ದಿನಾಂಕ 15.10.2018 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರವಿಚಂದ್ರ ಕನ್ನಡಿಕಟ್ಟೆ ಇವರ ಸಾರಥ್ಯದಲ್ಲಿ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಿತು. ಕ್ಷೇತ್ರಾಡಳಿತದ ಕೋಶಾಧಿಕಾರಿ ಪದ್ಮರಾಜ್, ದೇವೆಂದ್ರ ಪೂಜಾರಿ ಶ್ರೀ ಕ್ಷೇತ್ರ ಕಂಕನಾಡಿ ಗರಡಿಯ ಚಿತ್ತರಂಜನ್, ಯುವವಾಹಿನಿ ( ರಿ ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲ್, ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ ಇವರುಗಳು ಪ್ರಧಾನ ಭಾಗವತರಾದ […]
Read More
07-10-2018, 4:14 PM
ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 07/10/2018 ರವಿವಾರ ಸoಜೆ 4 ಗoಟೆಗೆ ಮಹಿಳೆ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಭವನದಲ್ಲಿ ಘಟಕದ ಮಹಿಳಾ ಸದಸ್ಯರಿಗಾಗಿ ಹಮ್ಮಿಕೊಳ್ಳಲಾಯಿತು . ಸಂಪನ್ಮೂಲ ವ್ಯಕ್ತಿಯಾಗಿ ಸ್ತ್ರೀರೋಗ ತಜ್ಞೆ ಹಾಗೂ ಪ್ರಸೂತಿ ಶಾಸ್ತ್ರಜ್ಞರಾದ ಡಾ.ಲತಾ ಶರ್ಮಾ ಇವರು ಆಗಮಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಇವರು ವಹಿಸಿದ್ದರು .ಮುಖ್ಯ ಅತಿಥಿಯಾಗಿ ಘಟಕದ ಸಲಹೆಗಾರರಾದ ನೇಮಿರಾಜ್, ಕೂಳೂರು ಬ್ರಹ್ಮಶ್ರೀ ನಾರಾಯಣಗುರು […]
Read More