05-05-2019, 5:06 PM
ಕೂಳೂರು : ಯುವವಾಹಿನಿ ಎಂಬ ಐದು ಅಕ್ಷರದಲ್ಲಿ ಒಂದು ಆಕರ್ಷಣೆ ಇದೆ, ಶಕ್ತಿ ಇದೆ, ಭರವಸೆ ಇದೆ. ಆರೋಗ್ಯಕರವಾದ ಸಂಪರ್ಕವೇ ಸಂಘಟನೆಯ ಸಾಧನ. ವಾಹಿನಿ ಅಂದರೆ ನಿರಂತರವಾದ ಹರಿವು, ಯುವವಾಹಿನಿಯ ನಿಸ್ವಾರ್ಥವಾದ ಸಮಾಜಮುಖಿ ಕಾಳಜಿಯಿಂದ ಕೂಡಿದ ಈ ಹರಿವಿನ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯುವವಾಹಿನಿ ಯುವಜನತೆಯ ಭರವಸೆಯ ಬೆಳಕಾಗಿದೆ ಎಂದು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ತಿಳಿಸಿದರು. ದಿನಾಂಕ 05.05.2019 ರಂದು ಕೂಳೂರು ಚರ್ಚ್ ಹಾಲ್ ನಲ್ಲಿ ಜರುಗಿದ ಯುವವಾಹಿನಿ (ರಿ) […]
Read More
05-05-2019, 4:14 PM
ಕುಪ್ಪೆಪದವು : ಯುವವಾಹಿನಿ(ರಿ) ಕುಪ್ಪೆಪದವು ಘಟಕದ 2018-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 05.05.2019 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ಕುಪ್ಪೆಪದವು ಇಲ್ಲಿ ನಡೆಯಿತು. ಬಿಲ್ಲವ ಸೇವಾ ಸಮಿತಿ ಕುಪ್ಪೆಪದವು ಇದರ ಅಧ್ಯಕ್ಷರಾದ ಹಿರಣಾಕ್ಷ ಕೋಟ್ಯಾನ್ ರವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ದ. ಕ ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಷನ್(ರಿ.) ಇದರ ಅಧ್ಯಕ್ಷರಾದ ಸತೀಶ್ ಬೋಳಾರ ಮಾತನಾಡಿ,” ಶ್ರೀ ನಾರಾಯಣ ಗುರುಗಳ ತತ್ವ ಆದರ್ಶದೊಂದಿಗೆ […]
Read More
27-04-2019, 4:23 PM
ಮುಲ್ಕಿ: ಯುವವಾಹಿನಿ (ರಿ,) ಮುಲ್ಕಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 27-04-2019 ರಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಗ್ರಹದಲ್ಲಿ ನಡೆಯಿತು . ಘಟಾಕಾಧ್ಯಕ್ಷೆ ಕುಶಲ .ಎಸ್ . ಕುಕ್ಯಾನ್ ಎಲ್ಲರನ್ನೂ ಸ್ವಾಗತಿಸಿದರು . ಮಾಜಿ ಅಧ್ಕ್ಯಕ್ಷರಾದ ಮೋಹನ್ ಸುವರ್ಣರವರು ಘಟಕ ನಡೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಕದ ಕಾರ್ಯದರ್ಶಿ ಚರಿಷ್ಮಾ ಶ್ರೀನಿವಾಸ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು, ನಿರ್ಗಮನ ಅಧ್ಯಕ್ಷ ರಾದ ಕುಶಲ .ಎಸ್. ಕುಕ್ಯಾನ್ ರವರು ತನ್ನ […]
Read More
25-04-2019, 4:33 PM
ಯಡ್ತಾಡಿ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಮಾತ್ರ ಅವರ ಜೀವನಕ್ಕೆ ನಿಜವಾದ ಅಡಿಪಾಯ ಸಿಗುತ್ತದೆ. ಯುವವಾಹಿನಿ (ರಿ) ಯಡ್ತಾಡಿ ಘಟಕ ಸಾಮಾಜಿಕ ಚಟುವಟಿಕೆಗಳ ಜೊತೆಗೆ ಮಕ್ಕಳ ಬೌದ್ಧಿಕ ಚಿಂತನೆ ಹೆಚ್ಚಿಸುವ ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಯೋಜಿಸಿರುವುದು ಶ್ಲಾಘನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಜಯಂತ್ ನಡುಬೈಲು ತಿಳಿಸಿದರು. ಅವರು 25.04.2019 ರಂದು ಸಂಜೆ ೬:೦೦ ಘಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡ್ತಾಡಿಯಲ್ಲಿ ಜರುಗಿದ […]
Read More
22-04-2019, 3:24 AM
ಕೂಳೂರು : ದಿನಾಂಕ 22/04/2019 ಸೋಮವಾರ ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ(ರಿ) ಮೂಡಬಿದ್ರಿ ಘಟಕದ ಸದಸ್ಯರಾದ ಅಶ್ವಿನಿ ಇವರ ಪತಿ ರಾಜೇಶ್ ಪೂಜಾರಿ ಇವರ 2 ಕಿಡ್ನಿಗಳು ವಿಫಲವಾಗಿ ಚಿಕಿತ್ಸೆಗಾಗಿ ನೆರವು ಕೋರಿದ್ದ ಸಲುವಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಸದಸ್ಯರು ವೈಯಕ್ತಿವಾಗಿ 15 ಸಾವಿರ ರೂಪಾಯಿ ಮೊತ್ತ ಹಾಗೂ ಕೂಳೂರು ನಾರಾಯಣ ಗುರು ಮoದಿರದ ಸದಸ್ಯರೆಲ್ಲರು ಸೇರಿ ಒಟ್ಟಾಗಿ 40 ಸಾವಿರ ರೂಪಾಯಿಯನ್ನು ಅವರ ತಾಯಿ ಉಮಾವತಿ ಇವರಿಗೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಕೂಳೂರು ಘಟಕದ […]
Read More
21-04-2019, 4:58 PM
ಮೂಡುಬಿದಿರೆ : ಸಾಧನೆ ಮತ್ತು ತೃಪ್ತ ಜೀವನಕ್ಕೆ ರಾಜಕೀಯವೊಂದೆ ದಾರಿಯಲ್ಲ. ಶಿಕ್ಷಣ, ಉದ್ಯಮ, ಕಲೆ, ಕ್ರೀಡೆ, ಕೃಷಿ ಮೊದಲಾದ ನೂರು ದಾರಿಗಳಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೀದಿಯಲ್ಲಿ ಹಾಲು-ಜೇನು ಹರಿಯುವುದು ಸಾಧ್ಯವಿಲ್ಲ. ರಾಜಕೀಯದಿಂದಲೆ ಉದ್ಧಾರ ಎಂಬುದು ಭ್ರಮೆ ಬೇಡ’’ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ನುಡಿದರು. ಅವರು ಮೂಡುಬಿದಿರೆಯ ಯುವವಾಹಿನಿ ಘಟಕದ ಪದಗ್ರಹಣ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಸಮಾಜಕ್ಕೆ ಘೋರ ಸಿಟ್ಟಿಗಿಂತ ಸಾತ್ವಿಕ ಸಿಟ್ಟಿನ ಅಗತ್ಯವಿದೆ. ಬದಲಾವಣೆಗಿಂತ […]
Read More
21-04-2019, 3:49 PM
ಮಾಣಿ : ಹೆಣ್ಣು ಜಗದ ಕಣ್ಣು,ಮಹಿಳೆ ತನ್ನ ಮೌಲ್ಯಯುತ ಸಮಯವನ್ನು ತನ್ನ ಮನೆಗಾಗಿ ಮಾತ್ರ ಮೀಸಲಿರಿಸಿದೆ ಹೊರಜಗತ್ತಿಗೆ ತೆರೆದುಕೊಳ್ಳಬೇಕು.ತನ್ನವರ ಒಳಿತಿನೊಂದಿಗೆ ಸಂಸ್ಕಾರಯುತ ಜೀವನದ ಮಾದರಿಯಾಗಿ ಇತರರ ಬದುಕಿಗೂ ದಾರಿದೀಪವಾಗಬೇಕೆಂದು ವಿಶ್ವ ಮಹಿಳಾ ದಿನಾಚರಣೆಯ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಮಾಣಿ ಇದರ ಮಹಿಳಾ ಸಮಿತಿಯ ಅಧ್ಯಕ್ಷರಾದ ತ್ರಿವೇಣಿ ರಮೇಶ್ ಮುಜಲ ತಿಳಿಸಿದರು. ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಹಿಳಾ ನಿರ್ದೇಶಕರಾದ ಪಾರ್ವತಿ ಅಮಿನ್ ಅವರು ಯುವವಾಹಿನಿ ಸಮಾಜಿಕ ಕಳಕಳಿ ಬಗ್ಗೆ ಪ್ರಾಸ್ತಾವಿಕ […]
Read More
21-04-2019, 3:45 AM
ಉಡುಪಿ : ಯುವವಾಹಿನಿ ಉಡುಪಿ ಘಟಕದಲ್ಲಿ ದಿನಾಂಕ 21/04/2019 ರಂದು ಗ್ರಾಮೀಣ ಕ್ರೀಡಾಕೂಟ ಗೊಬ್ಬುದ ಬಿರ್ದೊಲಿ. ಕಾರ್ಯಕ್ರಮ ನಡೆಯಿತು. ಕೇಂದ್ರಸಮಿತಿಯ ಮಾಜಿ ಅಧ್ಯಕ್ಷ ರಾದ ರವಿರಾಜ್ ರವರು ಬಿರು ಚಲಾಯಿಸಿ ಕಾರ್ಯಕ್ರಮ ವನ್ನು ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿದರು . ಕಾರ್ಯಕ್ರಮವು MCF ಮಂಗಳೂರು ನೊಡನೆ ಸಹಭಾಗಿತ್ವದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ನಡೆಯಿತು. ಸುಮಾರು 90 ಸದಸ್ಯರು ಭಾಗವಹಿಸಿದ್ದರು. ಹಿರಿಯರು ಕಿರಿಯರೆನ್ನದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ, ಏಕಮನಸ್ಕರಾಗಿ ಕುಣಿದು ಕುಪ್ಪಳಿಸಿ ಎಲ್ಲರೂ ವಿಜ್ರಂಭಿಸಿದರು. ಲಗೋರಿ, ಪಿಲಿಚಂಡಿ, ಸೊಪ್ಪಿನ ಆಟ, […]
Read More
21-04-2019, 2:57 AM
ಮಂಗಳೂರು : ತುಳುನಾಡು ಮೂಲತಃ ಮಾತೃಮೂಲ ಸಂಸ್ಕ್ರತಿಯ ನಾಡು. ಇಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಹೆಣ್ಣು ತುಳುನಾಡಿನ ಸಂಸ್ಕ್ರತಿಯ ಗುರಿಕಾರ್ತಿಯಾಗಿದ್ದಾಳೆ ಎಂದರಲ್ಲದೆ, ತುಳು ಹಬ್ಬಗಳನ್ನು ಸಾಮೂಹಿಕ ನೆಲೆಯಲ್ಲಿ ಆಚರಿಸುವ ಅಗತ್ಯವಿದೆ ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಧಾಕರ ಸುವರ್ಣ ಹೇಳಿದರು. ಮಂಗಳೂರು ಉರ್ವಾಸ್ಟೋರ್‍ನಲ್ಲಿರುವ ತುಳು ಭವನದಲ್ಲಿ ದಿನಾಂಕ 21.04.2019 ರಂದು ನಡೆದ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಬಹುಸಂಸ್ಕ್ರತಿಗಳು […]
Read More
16-04-2019, 2:46 PM
ಉಪ್ಪಿನಂಗಡಿ : ಉಪ್ಪಿನಂಗಡಿ ಯುವವಾಹಿನಿ ಘಟಕ ಆರಂಭವಾದ ದಿನಗಳಲ್ಲಿ ಘಟಕದ ಬೆಳವಣಿಗೆಗೆ ಶ್ರಮಿಸಿದ ನೆಲ್ಯಾಡಿಯ ರಾಘವ ಪೂಜಾರಿ ಇವರ ಆರೋಗ್ಯ ಚಿಂತಾಜನಕವಾಗಿದ್ದು ತಿಂಗಳಿಗೆ ಸುಮಾರು 75000 ಗಳಷ್ಟು ಖರ್ಚು ಆಗುವುದರಿಂದ ಆರ್ಥಿಕವಾಗಿ ನಿಭಾಯಿಸುವುದು ಕಷ್ಟಕರವಾಗಿರುತ್ತದೆ.ಆದುದರಿಂದ ದಿನಾಂಕ ೧೬. ೦೪. ೨೦೧೯ ರಂದು ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ 12000 ರೂಪಾಯಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. .ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ.ರಾಜಾರಾಮ ಕೆ.ಬಿ, ಸಲಹೆಗಾರರಾದ ಡಾ.ಸದಾನಂದ ಕುಂದರ್,ಮಾಜಿ ಅಧ್ಯಕ್ಷರಾದ ಶೇಖರ ಗೌಂಡತ್ತಿಗೆ , ಅಧ್ಯಕ್ಷರಾದ ಅಜಿತ್ […]
Read More