31-05-2019, 4:03 PM
ವೇಣೂರು : ಯುವವಾಹಿನಿ ವೇಣೂರು ಘಟಕಕ್ಕೆ ಕಲಾಕಾರ್ ಕಲೋತ್ಸವ ಸಮಾರಂಭದಲ್ಲಿ ಯುವಕೀರ್ತಿ ಬಿರುದು ಪ್ರದಾನ ಮಾಡಲಾಯಿತು. ಯುವವಾಹಿನಿ ವೇಣೂರು ಘಟಕದ ಸಮಾಜಮುಖಿ ಸೇವಾ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ನವೀನ್ ಪುಚ್ಚೇರಿ, ನಿಕಟಪೂರ್ವ ಅಧ್ಯಕ್ಷ ನಿತೀಶ್ ಎಚ್, ಸತೀಶ್ ಪಿ.ಎನ್ ಮತ್ತಿತರರು ಉಪಸ್ಥಿತರಿದ್ದರು
Read More
31-05-2019, 2:12 PM
ಕೂಳೂರು : ಸದಸ್ಯರ ಮನೆ ಮನದಲ್ಲಿ ದೇವರ ಮೇಲಿನ ಭಕ್ತಿ ಪಸರಿಸಲಿ ಎಂಬ ಉದ್ದೇಶದೊಂದಿಗೆ ಯುವವಾಹಿನಿ ಕೂಳೂರು ಘಟಕವು ಮನೆ ಮನೆ ಭಜನೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ತಿಂಗಳ ಒಂದು ಶುಕ್ರವಾರ ಒಬ್ಬ ಸದಸ್ಯರ ಮನೆಯಲ್ಲಿ ಭಜನೆ ಮಾಡಲಾಗುವುದು. ಈ ತಿಂಗಳ ಮೊದಲ ಭಜನೆಯನ್ನು ದಿನಾಂಕ 31-05-19 ನೇ ಶುಕ್ರವಾರದಂದು ಘಟಕದ ಕಾರ್ಯದರ್ಶಿ ಮಧುಶ್ರೀ ಪ್ರಶಾಂತ್ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಭಜನೆಯನ್ನು 7.15 ಕ್ಕೆ ಸರಿಯಾಗಿ ಪ್ರಾರಂಭಿಸಿ 8.30 ಗೆ ಮಂಗಳಗೊಳಿಸಲಾಯಿತು. […]
Read More
30-05-2019, 8:03 AM
ಮಂಗಳೂರು : ಯುವವಾಹಿನಿ ( ರಿ ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ, ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ 2 ದಿನಗಳ ಸ್ವಉದ್ಯೋಗ ತರಬೇತಿ ಶಿಬಿರ .ತರಬೇತಿ ಶಿಬಿರವನ್ನು ಸಲಹೆಗಾರರಾದ ಜಿತ್ಹೇಂದ್ರ ಸುವರ್ಣ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯ ಶಿಕ್ಷಣಾಧಿಕಾರಿ ಶಿವಬೋರಯ್ಯ ಹಾಗೂ ಕರ್ನಾಟಕ ಉದ್ಯಮ ಶೀಲಾ ತ ಅಭಿವೃದ್ಧಿ ಕೇಂದ್ರದ ಸತೀಶ್ ಮಾಬೆನ್ ಮಹಿಳೆಯರಿಗೆ ಸರಕಾರದಿಂದ ಸಿಗುವ ಸಾಲಸೌಲಭ್ಯದ ಹಾಗೂ ವಿವಿಧ ಸ್ಕೀಮ್ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಸಂಪನ್ಮೂಲ […]
Read More
26-05-2019, 3:54 PM
ಮಂಗಳೂರು : ಬಿರುವೆರ್ ಕುಡ್ಲ ಸಹಯೋಗದೊಂದಿಗೆ ಎನ್ ಬಿ ಗ್ರೂಪ್ ಮತ್ತು ಎಚ್ ಎಫ್ ಕೆ ಸಹಕಾರದೊಂದಿಗೆ ಸುದೀಕ್ಷಾ ಕಿರಣ್ ಸುವರ್ಣ ನೇತ್ರತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಯುವವಾಹಿನಿ ಬೆಂಗಳೂರು ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ಅಕ್ಷತಾ ಸುಧೀರ್ ಪೂಜಾರಿ ಮಿಸ್ಸೆಸ್ ಬಿಲ್ಲವ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನಗರದ ಖಾಸಗಿ ಹೋಟೇಲಿನಲ್ಲಿ ದಿನಾಂಕ 26.05.2019 ರಂದು ನಡೆದ ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸುಮಾರು 36 ಸ್ಪರ್ಧಿಗಳಿದ್ದರು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ […]
Read More
25-05-2019, 12:32 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ವತಿಯಿಂದ ವಿನೂತನ ವಾಗಿ ಜರಗಿದ ಮಾತೆಯರ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ವನ್ನು ಭಗವತಿ ಆರಾಧನೆಯ ಬಗ್ಗೆ ಪಿ.ಎಚ್.ಡಿ. ಮಾಡುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ್ ನೀಡಿದರು. ಹೆಣ್ಣು ಕ್ರಿಯಾಶೀಲ ಶಕ್ತಿ, ಪ್ರಕೃತಿ ಪುರುಷ ಜೊತೆ ಜೊತೆ ಯಾಗಿರುವ ದ್ರಾವಿಡ ಸಂಸ್ಕೃತಿಯಲ್ಲಿ ಪ್ರಾಚೀನ ಸಿಂಧೂ ಬಯಲಿನ ನಾಗರಿಕತೆಯ ಕಾಲದಿಂದಲೂ ಹೆಣ್ಣಿಗೆ ವಿಶೇಷ ಪ್ರಾಮುಖ್ಯತೆ ಯನ್ನು ನೀಡುತ್ತಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಸಂಧರ್ಭದಲ್ಲಿ ಪ್ರತಿಷ್ಠಾಪಿಸಲ್ಪಡುವ ನವದುರ್ಗೆಯರು ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ […]
Read More
12-05-2019, 3:05 PM
ಪಣಂಬೂರು : ನಾಳಿನ ಸುಂದರ ಭವಿಷ್ಯಕ್ಕಾಗಿ ವಿದ್ಯೆಗೆ ಪ್ರೊತ್ಸಾಹ ಅಗತ್ಯ. ಈ ಮೂಲಕ ಯುವವಾಹಿನಿ ಬ್ರಹತ್ ಶಕ್ತಿಯಾಗಿ ರೂಪುಗೊಂಡಿದೆ. ಯುವವಾಹಿನಿ (ರಿ) ಪಣಂಬೂರು- ಕುಳಾಯಿ ಘಟಕವು ಈ ನಿಟ್ಟಿನಲ್ಲಿ ಚೆನ್ನಾಗಿ ಕೆಲಸ ಮಾಡಿದೆ ಎಂದು ಮಂಗಳೂರು ವಿಶ್ವವಿಧ್ಯಾನಿಲಯದ ನಿವೃತ್ತ ಉಪಕುಲಸಚಿವ ಪ್ರಭಾಕರ ನೀರುಮಾರ್ಗ ಹೇಳಿದರು. ದಿನಾಂಕ 12.05.2019ರಂದು ನವ ಮಂಗಳೂರು ಬಂದರು ಮಂಡಳಿ, ಪಣಂಬೂರು ಇದರ ಸಭಾಂಗಣದಲ್ಲಿ ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ […]
Read More
12-05-2019, 7:53 AM
ಉಡುಪಿ : ಯುವವಾಹಿನಿ ಉಡುಪಿ ಘಟಕ ಪದಗ್ರಹಣ ಸಮಾರಂಭವು ದಿನಾಂಕ 12/05/2019 ರಂದು ಘಟಕದ ಸಭಾಂಗಣದಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಮುಖ್ಯ ಅತಿಥಿಯಾಗಿ ಸಂಜೀವ ಟಿ ಕರ್ಕೇರಾ ( ನಿವ್ರೃತ್ತ ಮಹಾಪ್ರಬಂಧಕರು ಮತ್ತು ಸಲಹೆಗಾರರು , ಮಂಗಳೂರು ವಿಶೇಷ ಆರ್ಥಿಕ ವಲಯ, ಮಂಗಳೂರು ). ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು , ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರೂ , ಘಟಕದ ಸಲಹೆಗಾರರೂ ಅದ ರವಿರಾಜ್ ಹಾಗೂ ಸಂತೋಷ್ […]
Read More
10-05-2019, 12:18 PM
ಬೆಂಗಳೂರು :ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಕಾರ್ಯಾಗಾರ ದಿನಾಂಕ 19-05-2019 ರಂದು ಬೆಂಗಳೂರು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಆರೋಗ್ಯವೇ ಭಾಗ್ಯ -2019 ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ವಹಿಸಿದ್ದರು ಹಾಗೂ ಕಾರ್ಯಕ್ರಮದ ಮುಂದಾಳತ್ವವನ್ನು ಆರೋಗ್ಯ ನಿರ್ದೇಶಕರಾದ ಮಿತೇಶ್ ಪೂಜಾರಿ ನಿರ್ವಹಿಸಿದರು.ಈ ಸಂದರ್ಬದಲ್ಲಿ ಘಟಕದ ಕಾರ್ಯದರ್ಶಿಯವರಾದ ರಾಘವೇಂದ್ರ ಪೂಜಾರಿ , ಉಪಾಧ್ಯಕ್ಷರಾದ ಕಿಶನ್ ಪೂಜಾರಿ, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. […]
Read More
08-05-2019, 4:22 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಸಮ ಸಮಾಜದ ಸರ್ವ ಸಮಾನತೆಯ ಜ್ಞಾನ ಜ್ಯೋತಿ ಬಸವಣ್ಣ ಜಯಂತಿ ಯುವವಾಹಿನಿಯ ಸಭಾಂಗಣ ದಲ್ಲಿ ಆಚರಿಸಲಾಯಿತು. ಸಾಹಿತಿ ಚಿಂತಕಿ ಶ್ರೀಮತಿ ಜ್ಯೋತಿ ಇರ್ವತ್ತೂರು ಇವರು ಬಸವಣ್ಣ ಜಯಂತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಯುವವಾಹಿನಿಯಂತಹ ಬಿಲ್ಲವ ಸಂಘಟನೆ ಯೊಂದು ಬಸವಣ್ಣ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಸಮ ಸಮಾಜದ ಸಮಾನತೆಯ ತಳಹದಿಯಲ್ಲಿ ಕೆಲಸಮಾಡಿದ ನಾರಾಯಣ ಗುರು, ಬಸವಣ್ಣ, ಪೆರಿಯಾರ್, ಕಾರ್ಲ್ ಮಾರ್ಕ್ಸ್ ಮುಂತಾದವರು ನಮಗೆಲ್ಲ ಆದರ್ಶ ಎಂದರು. […]
Read More
08-05-2019, 4:01 AM
ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ ಬೇಸಿಗೆ ಶಿಬಿರ, ‘ವಿಕಸನ-2019’ ರ ಅಂಗವಾಗಿ ನಾಲ್ಕನೇ ದಿನ ಮಕ್ಕಳಿಗೆ ‘ಅಗ್ನಿ ಸುರಕ್ಷತೆಯ’ ಬಗ್ಗೆ ಅರಿವು ಮೂಡಿಸಲಾಯಿತು. ಅಂಕಿ ಅಂಶಗಳ ಪ್ರಕಾರ ಹಲವಾರು ಬೆಂಕಿ ಅವಘಢಗಳು ಅರಿವಿನ ಕೊರತೆಯಿಂದ ಉಂಟಾಗುವಂತಹದು. ಬಿಸಿಲಿನ ಬೇಗೆಯ ಈ ದಿನಗಳಲ್ಲಿ ಅಗ್ನಿ ಅನಾಹುತಗಳ ಸಾಧ್ಯತೆ ಇನ್ನೂ ಹೆಚ್ಚು. ‘ಅರಿವಿನ ತಂಗಾಳಿ’ ಹೆಸರಿನಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಅಗ್ನಿ ಅನಾಹುತಗಳನ್ನು ಸರಿಯಾದ ಮಾಹಿತಿಯ ಮೂಲಕ ಆದಷ್ಟು ಕಡಿಮೆ ಮಾಡುವ ಮೂಲಕ ಉದ್ದೇಶದಿಂದ ‘ಅಗ್ನಿ ಸುರಕ್ಷತೆ […]
Read More