28-07-2019, 2:20 PM
ವೇಣೂರು: ಮಳೆಗಾಲದಲ್ಲಿ ನಮಗೆ ನೀರಿನ ಮಹತ್ವ ಗೊತ್ತಾಗುವುದಿಲ್ಲ. ಬೇಸಿಗೆಕಾಲ ಬಂತೆಂದರೆ ಹನಿ ನೀರಿಗೆ ಹಾಹಾಕಾರ ಶುರುವಾಗುತ್ತದೆ. ನೀರಿನ ಜಾಗೃತಿ ಮಳೆಗಾಲದಲ್ಲೇ ಶುರುವಾಗಬೇಕು. ಅದಕ್ಕಾಗಿ ಎಲ್ಲೆಡೆ ಜನತೆ ಮಳೆಕೊಯ್ಲು ಹಾಗೂ ಜನಮರುಪೂರಣಕ್ಕೆ ಒತ್ತು ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ವೇಣೂರು ವಲಯ ಮೇಲ್ವಿಚಾರಕ ಯೋಗೀಶ್ ಹೇಳಿದರು. ಬಜಿರೆ ಸ.ಉ.ಪ್ರಾ. ಶಾಲೆಯಲ್ಲಿ ಯುವವಾಹಿನಿ ವೇಣೂರು ಘಟಕ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಜರಗಿದ ಜಲಮರುಪೂರಣ ಹಾಗೂ ಮಳೆಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ […]
Read More
28-07-2019, 1:47 PM
ಉಪ್ಪಿನಂಗಡಿ : ಜನಸೇವೆಯೇ ಭಗವಂತನ ಸೇವೆ ಎಂಬುದನ್ನು ಮನಗಂಡು ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಕಷ್ಟದಲ್ಲಿರುವವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ನಿವಾಸಿ, ಘಟಕದ ವತಿಯಿಂದ ಕುದ್ರೋಳಿ ದಸರಾ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಪೂಜಾರಿಯವರಿಗೆ ರೂ. 10,000 ವನ್ನು ದಿನಾಂಕ 28.07.19 ರ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಗೌರವ ಸಲಹೆಗಾರರಾದ ವರದರಾಜ್.ಎಂ, ಡಾ.ಸದಾನಂದ ಕುಂದರ್, ಅಧ್ಯಕ್ಷರಾದ […]
Read More
28-07-2019, 5:46 AM
ಮಾಣಿ : “ಮನುಷ್ಯನ ಬದುಕನ್ನು ಪ್ರಕೃತಿಯೇ ರೂಪಿಸುತ್ತದೆ.ಆದರೆ ಇಂದು ನಾವು ವಿಕೃತಿಯೆಡೆಗೆ ಸಾಗಿ ಪ್ರಕೃತಿ ರೂಪಿತ ಸಹಜ ಬದುಕನ್ನು ಅದಃ ಪತನಗೊಳಿಸುತ್ತಿದ್ದೇವೆ.ನಮ್ಮಲ್ಲಿ ಇಂದು ಮಣ್ಣನ್ನು ಮಣ್ಣಾಗಿ ನೋಡುವ ದೃಷ್ಟಿ ಇಲ್ಲದಾಗಿದೆ.ಆದರಲ್ಲಿಯೂ ದುರಾಸೆಯ ಪ್ರತಿರೂಪವನ್ನು ರೂಪಿಸುತ್ತಿದ್ದೇವೆ. ಬದುಕಿನ ಪ್ರಕ್ರಿಯೆಯಲ್ಲಿ ಪ್ರಕೃತಿಯು ರೂಪಿಸಿರುವ ವಿವಿಧ ಕಾಲಮಾನಗಳ ಅರಿವು ನಮ್ಮಲ್ಲಿ ಅಗತ್ಯವಾಗಿರಬೇಕು ಎಂದು ತುಳು ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಧ್ಯಾಪಕ ರಮೇಶ್ ಉಳಯ ನುಡಿದರು.ಅವರು ಯುವವಾಹಿನಿ (ರಿ.)ಮಾಣಿ ಘಟಕದ ವತಿಯಿಂದ ದಿನಾಂಕ:28-07-19ರ ಆದಿತ್ಯವಾರದಂದು ಮಾಣಿ ನಾರಾಯಣ ಗುರು ಸಭಾ ಭವನದಲ್ಲಿ […]
Read More
28-07-2019, 4:58 AM
ಶಕ್ತಿನಗರ : ಯುವವಾಹಿನಿ ಶಕ್ತಿನಗರ ಘಟಕದ ವತಿಯಿಂದ ದಿನಾಂಕ 28-7-2019 ರಂದು ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಯಪದವು ಇದರ ಸಭಾಂಗಣದಲ್ಲಿ ಆಟಿಡೊಂಜಿ ದಿನ ಹಳೆಯ ನೆನಪುಗಳ ದಿನಗಳನ್ನು ಸರಮಾಲೆಯನ್ನು ಹಾಗೂ ಹಳೆ ಬೇರು ಹೊಸ ಚಿಗುರು ಎಂಬ ಆಟಿದ ಸುಂದರವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆಯಾದ ಭಾರತಿ ಜಿ. ಅಮಿನ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾವತಿ ಜಯಂತ್ ನಡುಬೈಲು ವಹಿಸಿದ್ದರು. ಉದ್ಘಾಟನೆಯು ವಿನೂತನವಾಗಿ ನಾಟಿ ಮಾಡುವ ಮೂಲಕ ನಡೆಯಿತು.ಮುಖ್ಯ ಅತಿಥಿಗಳಾಗಿ ಡಾ. ಗಣೇಶ್ […]
Read More
28-07-2019, 4:44 AM
ಕುಪ್ಪೆಪದವು : ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 28/07/2019 ರಂದು ಹಮ್ಮಿಕೊಳ್ಳಲಾಯಿತು. ಈ ಪ್ರವಾಸಕ್ಕೆ ಸುಮಾರು 52 ಕ್ಕಿಂತ ಹೆಚ್ಚು ಸದಸ್ಯರು ಪಾಲ್ಗೊಂಡಿದ್ದರು. ಎಲ್ಲಾ ಸದಸ್ಯರು ಮುಂಜಾನೆ 5.00 ಘಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಸೇರಿದರು. ಅಲ್ಲಿಂದ ನಮ್ಮ ಪ್ರಯಾಣ ಸಾಗಿದ ಹಾದಿ……ಸಿಗಂದೂರು ಚೌಡೇಶ್ವರಿ ದೇವಾಲಯ .ಜೋಗು ಜಲಪಾತ ಹೀಗೆ ಶಿವಮೊಗ್ಗ ಜಿಲ್ಲೆಯ ಪ್ರಕೃತಿಯ ಸೊಬಗನ್ನು ಸವಿಯುತ್ತಾ, ಬೇಡಿದ್ದನ್ನು ಕರುಣಿಸುವ ತಾಯಿಯ ದೇಗುಲ ದರ್ಶನ ಮತ್ತು ಜೀವನದಲ್ಲಿ ಒಮ್ಮೆ ನೋಡಲೇ ಬೇಕಾದ ಜೋಗುಜಲಪಾತದ ರಮಣೀಯ ದೃಶ್ಯ […]
Read More
23-07-2019, 3:40 PM
ಮಂಗಳೂರು : ಯುವವಾಹಿನಿ ಸಭಾಂಗಣ ಮಂಗಳೂರು ಘಟಕದಲ್ಲಿ ದಿನಾಂಕ 23.07.2019ರಂದು ಸಂಜೆ ಆಟಿದ ತಮ್ಮನ ಕಾರ್ಯಕ್ರಮ ನಡೆಸಲಾಯಿತು. ಘಟಕದ ಎಲ್ಲಾ ಸದಸ್ಯರು ಮತ್ತು ಮಂಗಳೂರು ಮಹಿಳಾ ಘಟಕದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮೊದಲು ಏರ್ಪಡಿಸಿರುವ ಭಜನೆಯಲ್ಲಿ ಎಲ್ಲಾ ಸದಸ್ಯರು ಪಾಲ್ಗೊಂಡರು. ಅಧ್ಯಕ್ಷರಾದ ಕೆ. ಆರ್. ಲಕ್ಷ್ಮೀ ನಾರಾಯಣರವರು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಗಣೇಶ್ ವಿ. ಕೋಡಿಕಲ್ ರವರು ಗತಸಭೆಯ ವರದಿಯನ್ನು ವಾಚಿಸಿದರು. ದಿನಾಂಕ 28.07.2019ರಂದು ಭಾನುವಾರ ನಡೆಯಲಿರುವ ಬ್ರಹತ್ ವ್ಯೆದ್ಯಕೀಯ ಶಿಬಿರ ದ ಆಮಂತ್ರಣ […]
Read More
21-07-2019, 8:37 AM
ಕೂಳೂರು : ನಮ್ಮ ಪೂರ್ವಜರು ಆಟಿ ತಿಂಗಳಲ್ಲಿ ಬರುವ ರೋಗ ರುಜಿನಗಳನ್ನು ತಡೆಗಟ್ಟಲು ಹಲವಾರು ಆಚರಣೆಗಳನ್ನು ಕಾರ್ಯ ರೂಪಕ್ಕೆ ತಂದು ಅದನ್ನು ಆಚರಿಸುತ್ತಿದ್ದರು. ನಿಜವಾಗಿಯೂ ಆಟಿ ಆಚರಣೆಯು ಮೂಢನಂಬಿಕೆಯಲ್ಲ ಅದು ತುಳುವರ ಮೂಲನಂಬಿಕೆ ಎಂದು ಬೆಸೆಂಟ್ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ತಿಳಿಸಿದರು. ಅವರು ದಿನಾಂಕ 21.07.19 ರಂದು ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ನಡೆದ ಆಟಿದ ಪೊರ್ಲು-2019 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವವಾಹಿನಿಯ ಮುಖ್ಯ ಧ್ಯೇಯ ಸಂಪರ್ಕದ ನೆಲೆಯಲ್ಲಿ ಕಾರ್ಯಕ್ರಮವು ಘಟಕದ ಸದಸ್ಯರಾದ […]
Read More
21-07-2019, 8:30 AM
ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ದಿನಾಂಕ 20.07.2019ನೇ ಶನಿವಾರ ಶಿರ್ಡಿ ಸಾಯಿ ಡಿಗ್ರಿ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಟಿ.ಎ.ಯವರು ನೆರವೇರಿಸಿದರು.ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ಸುಧಾಕರ ಪೂಜಾರಿ ಇವರು ವೇದಿಕೆಯಲ್ಲಿ ಕಾರ್ಯಕ್ರಮದ ಬಗ್ಗೆ ಶುಭಹಾರೈಸಿ ರಕ್ತದಾನ ಮಾಡುವ ಮೂಲಕ 3 ಅಮೂಲ್ಯ ಜೀವಗಳನ್ನು ಉಳಿಸಬಹುದು. ಎಲ್ಲರೂ ಸ್ವಯಂಪ್ರೇರಣೆಯಿಂದ ರಕ್ತದಾನವನ್ನು ಮಾಡಿ ಎಂದು […]
Read More
21-07-2019, 8:20 AM
ಕುಪ್ಪೆಪದವು : ದಿನಾಂಕ 21/07/2019 ರಂದು ಯುವವಾಹಿನಿ ಕುಪ್ಪೆಪದವು ಘಟಕದ ವತಿಯಿಂದ ನಡೆದ ಬೇಸಾಯದ ಕಡೆಗೆ ನಮ್ಮ ನಡೆ ಎಂಬ ಪರಿಕಲ್ಪನೆಯಲ್ಲಿ ಭತ್ತದ ಸಸಿ ನೆಡುವ ಕಾರ್ಯಕ್ರಮ ಮತ್ತು ಕೆಸರಲ್ಲಿ ಒಂದು ದಿನದ ಎನ್ನುವ ಕಾರ್ಯಕ್ರಮದ ಉದ್ಘಾಟನೆಯನ್ನು ವಾಲಿಬಾಲ್ ಚೆಂಡಿನ ರಿಬ್ಬನ್ ಕಟ್ಟ್ ಮಾಡಿ ಚೆಂಡನ್ನು ಎಸೆಯುವ ಮೂಲಕ ಅಧ್ಯಕ್ಷರು/ಕಾರ್ಯದರ್ಶಿ/ನಿಕಟಪೂರ್ವ ಅಧ್ಯಕ್ಷರ ಸಮ್ಮುಖದಲ್ಲಿ ಕ್ರೀಡಾ ನಿರ್ದೇಶಕ ಮೂಲಕ ನೆರವೇರಿತು. ತದನಂತರ ಮಕ್ಕಳಿಗೆ/ಮಹಿಳೆಯರಿಗೆ/ಪುರುಷರಿಗೆ ವಿವಿಧ ಆಟೋಟ ಸ್ವರ್ಧೆಗಳು ನಡೆಸಲಾಯಿತು. ಅಲ್ಲದೆ ಈ ಸಂದರ್ಭದಲ್ಲಿ .ಭತ್ತದ ಸಸಿ ನೆಡುವ ಕಾರ್ಯ […]
Read More
21-07-2019, 8:18 AM
ಮುಲ್ಕಿ : ಯುವವಾಹಿನಿ (ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ 17 ನೇ ವರ್ಷದ “ಆಟಿಡೊಂಜಿದಿನ ” ಕಾರ್ಯಕ್ರಮ ದಿನಾಂಕ 21.7.2019 ಆದಿತ್ಯವಾರ ಮುಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಸತೀಶ್ ಕಿಲ್ಪಾಡಿಯವರ ಆಧ್ಯಕ್ಷತೆಯಲ್ಲಿ ಜರಗಿತು, ಕಾರ್ಯಕ್ರಮದ ಪ್ರಾರಂಭದಲ್ಲಿ ವೇದಿಕೆಯ ಮೇಲೆ ಬಲ ಬದಿಯಲ್ಲಿ ನಿರ್ಮಿಸಿರುವ ಹಂಚಿನ ಮನೆಯಿಂದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು, ತೆಗೆದುಕೊಂಡು ಬದಿಯಲ್ಲಿ ನಿರ್ಮಿಸಿರುವ ಹುಲ್ಲು ಛಾವಣಿಯ ಮನೆಯಿಂದ ಕಾರ್ಯಕ್ರಮ ನಿರ್ದೇಶಕರಾದ ರಿತೇಶ್ ಅಂಚನ್ ಹಾಗೂ ಚರಿಷ್ಮಾ ಶ್ರೀನಿವಾಸ್ ರವರು ಬಾಗಿಲು ತೆರೆದು ಕೊಂಡು ಹೊರ ಬಂದು […]
Read More