29-10-2019, 2:28 AM
ದಿನಾಂಕ 29/10/2019 ರಂದು ಪೂರ್ವಾಹ್ನ 9.00 ಘಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ ನಮ್ಮ ಘಟಕದ ವತಿಯಿಂದ ಧಾನ್ಯಲಕ್ಮಿ ಮತ್ತು ಗೋವಿನ ಪೂಜೆಯನ್ನು ಫಲ ಪುಷ್ಪಗಳಿಂದ ಅಲಂಕರಿಸಿ,ಫಲವಸ್ತು ಮತ್ತು ಮಂತ್ರಾಕ್ಷೆಗಳನ್ನು ಸಮರ್ಪಿಸಿ ಹಾಗೂ ಹಣತೆ ಹಚ್ಚಿ, ದೀಪ ಪ್ರಜ್ವಲಿಸಿ ಷೊಡೋಪಚಾರಿ ವಿಧಿ ವಿಧಾನಗಳಿಂದ ಮಹಿಳಾ ಸದಸ್ಯರು ಸಾಮೂಹಿಕವಾಗಿ ಮಂತ್ರ ಪಠಿಸಿ, ಆರತಿ ಎತ್ತಿದೆವು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದೆವು. ಈ ಮೂಲಕ ನಮ್ಮ ಸದಸ್ಯರೆಲ್ಲರೂ ದೀಪಾವಳಿ ಹಬ್ಬದ ಆಚರಣೆ ಮತ್ತು ಮಹತ್ವದ ಸ್ವ ಅನುಭವ ಪಡೆದೆವು. ಈ […]
Read More
29-10-2019, 2:05 AM
ಯುವವಾಹಿನಿ ಉಪ್ಪಿನಂಗಡಿ ಘಟಕ ಮತ್ತು ಮುಗ್ಗಗುತ್ತು ಕಟುಂಬಸ್ಥರ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ತುಳುನಾಡ ತುಡರ್ ಪರ್ಬ ಮುಗ್ಗಗುತ್ತು ತರವಾಡು ಮನೆಯಲ್ಲಿ ನಡೆಯಿತು. ಬಲೀಂದ್ರ ಪೂಜೆಯನ್ನು ನೆರವೇರಿಸಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಬಲೀಂದ್ರ ಪೂಜೆಯ ಹಿನ್ನಲೆ ಮತ್ತು ಮಹತ್ವವನ್ನು ಶೇಖರ್ ಪೂಜಾರಿ ಶಿಬಾರ್ಲ ತಿಳಿಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಶ್ರೀ ಕೆ. ಜಿ ಬಂಗೇರ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಆಶಿತ್ ಎಂ. ವಿ ವಹಿಸಿದ್ದರು.. […]
Read More
28-10-2019, 2:26 AM
ಬೆಳಕಿನ ಹಬ್ಬ ದೀಪಾವಳಿಯನ್ನು ಯುವವಾಹಿನಿ ಕಾಪು ಘಟಕದ ನೇತೃತ್ವದಲ್ಲಿ ಕಾಪು ಕೊರಗಜ್ಜ ದೈವಸ್ಥಾನದ ಬಳಿ ಕೊರಗರ ಕಾಲೋನಿಯಲ್ಲಿ ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ಮಹಿಳೆಯರಿಗೆ ಸೀರೆ, ಗಂಡಸರಿಗೆ ಶಾಲು, ಲುಂಗಿ ಡ್ರೆಸ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಕಾಲೋನಿಯ ಕುಟುಂಬಗಳ ಸದಸ್ಯರು ಈ ವಿಶಿಷ್ಟ ದೀಪಾವಳಿಯಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿ ಮಾತನಾಡಿ, ಹಿಂದೂಗಳ ದೊಡ್ಡ ಹಬ್ಬ ಆಗಿರುವ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಆಚರಣೆಗೆ ಯಾವುದೇ ಜಾತಿ, ಮತಗಳ ಭೇದ ಭಾವ […]
Read More
27-10-2019, 2:39 AM
ಯುವವಾಹಿನಿ (ರಿ.) ಮುಲ್ಕಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮ ವಾಗಿರುವ ” ತುಳುವೆರೆ ತುಡರ ಪರ್ಬ” ಕಾರ್ಯಕ್ರಮ ದಿನಾಂಕ 26.10 .2019 ರಂದು ಸಂಜೆ 6 .30ಕ್ಕೆ ಸರಿಯಾಗಿ ನಮ್ಮ ಘಟಕದ ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ಜರಗಿತು. ಸಭಾಕಾರ್ಯಕ್ರಮದ ಪ್ರಾರಂಭದಲ್ಲಿ ವರುಣ್ ಪೂಜಾರಿ ಯವರು ಪ್ರಾರ್ಥನೆ ಗೈದರು. ಅಧ್ಯಕ್ಷ ರಾದ ಸತೀಶ್ ಕಿಲ್ಪಾಡಿಯವರು ಬಂದ ಅತಿಥಿ ಗಣ್ಯ ರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತ ಕೋರಿ ಅತಿಥಿ ವರ್ಯರನ್ನು ಶಾಲು […]
Read More
22-10-2019, 7:11 AM
ವು ದಿ 20/10/2019 ರಂದು 2 ದಿನದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಂಡಿದ್ದು ವರ್ಕುಲ,ಚೆoಬಳಂತಿ, ಅರವಿಪುರ,ಮರುತಮಲೇ, ಕನ್ಯಾಕುಮಾರಿ, ಅನಂತ ಪದ್ಮನಾಭ ಮುಂತಾದ ಪುಣ್ಯಕ್ಷೇತ್ರಕ್ಕೆ ಭೇಟಿಕೊಡಲಾಯಿತು. ಒಟ್ಟು 50 ಮಂದಿ ಯಾತ್ರಿಗಳು ಪಾಲ್ಗೊಂಡಿದ್ದರು.
Read More
22-10-2019, 4:28 AM
ಯುವವಾಹಿನಿ ಕೂಳೂರು ಘಟಕದ ವತಿಯಿಂದ ದಿನಾಂಕ 18 ರಿಂದ 21 ರವರೆಗೆ ಕಮಲಶಿಲೆ, ಹಂಪಿ, ಮಂತ್ರಾಲಯ ಪ್ರವಾಸ ಹಮ್ಮಿಕೊಂಡಿತು. ಘಟಕದ ಉಪಾಧ್ಯಕ್ಷರಾದ ಪವಿತ್ರ ಅಮೀನ್ ರವರ ಸಂಚಾಲಕತ್ವದಲ್ಲಿ 40 ಜನರ ತಂಡ ದಿನಾಂಕ 18.10.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಹೊರಟು ಕಮಲಶಿಲೆ ದೇವರ ದರ್ಶನ ಪಡೆದು, ಪ್ರಯಾಣ ಮುಂದುವರೆಸಿ 19.10.19 ರ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಹೊಸಪೇಟೆ ತಲುಪಿ ಅಲ್ಲಿ ಉಪಹಾರದ ನಂತರ ಹಂಪಿ ತಲುಪಿದೆವು. […]
Read More
21-10-2019, 4:21 AM
ದಿನಾಂಕ 05.09.2019 ರಿಂದ 12.09.2019 ರವರೆಗೆ ಮಂಗಳೂರು ಘಟಕದ 36 ಜನರ ತಂಡವು ತಮ್ಮ ಬಂಧುಗಳೊಂದಿಗೆ ಗುಜರಾತ್ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಿಂದ ಪ್ರೇರೆಪಿತಗೊಂಡ ನಮ್ಮ ಘಟಕದ ಎರಡನೇ ತಂಡವು 43 ಜನರ ಬಂಧುಗಳೊಂದಿಗೆ ದಿನಾಂಕ 10.10.2019 ರಿಂದ 17.10.2019 ರವರೆಗೆ ಗುಜರಾತ್ ಪ್ರವಾಸ ವನ್ನು ಹಮ್ಮಿಕೊಂಡಿತ್ತು. ಈ ಎರಡು ತಂಡಗಳು ಗುಜರಾತಿನಲ್ಲಿರುವ ದ್ವಾರಕ ಮಂದಿರ, ಬೆಟ್ ದ್ವಾರಕ, ರುಕ್ಕ್ಮಿನಿ ಮಾತಾ ಮಂದಿರ, ನಾಗೇಶ್ವರ ಜೋತರ್ಲಿಂಗ, ಗೋಪಿತಲಾಬ್, ಕೃಷ್ಣ ಸುಧಾಮ ದೇವಸ್ಥಾನ, ಸೋಮಾನಾಥ ಜೋತಿರ್‍ಲಿಂಗ, ಅಹಮದಾಬಾಧ್ ನಗರ, […]
Read More
20-10-2019, 4:35 AM
“ಯುವವಾಹಿನಿವೆಂಬುದು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಯುವಮನಸ್ಸುಗಳನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ಉತ್ತಮ ರೀತಿಯಲ್ಲಿ ತೊಡಗಿಕೊಳ್ಳುವ ಒಂದು ಅದ್ಭುತ ಸಂಘಟನೆ, ಚಂಚಲತೆಯ ಯುವಮನಸ್ಸುಗಳನ್ನು ಧನಾತ್ಮಕವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯುವವಾಹಿನಿಯ ಬದ್ಧತೆ ಅಭಿನಂದನೀಯವಾದುದು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಮುದ್ದು ಮೂಡುಬೆಳ್ಳೆ ಹೇಳಿದರು. ಅವರು ದಿನಾಂಕ 20-10- 2019ರ ರವಿವಾರದಂದು ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ(ರಿ.) ಮಾಣಿ ಘಟಕದ 2019-20 ನೇ ಸಾಲಿನ ನೂತನ […]
Read More
19-10-2019, 4:57 AM
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯುವವಾಹಿನಿ (ರಿ.)ಬಜಪೆ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ “ಜೀವನ ಕೌಶಲ್ಯ ತರಬೇತಿ” ಕಾರ್ಯಗಾರವು ತಾರೀಕು 19.10.19ನೇ ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಿಯಾಗಿ ಅನ್ಸಾರ್ ಪ್ರೌಢಶಾಲೆ ಬಜಪೆ ಇಲ್ಲಿ ನಡೆಯಿತು. ಅನ್ಸಾರ್ ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಜ್ಯೋತಿ ನಾರಾಯಣ ಪೂಜಾರಿ(ಸಂಚಾಲಕರು,ಎಸ್,ಎನ್,ಎಸ್ ಶಿಕ್ಷಣ ಪ್ರತಿಷ್ಠಾನ ಸುಂಕದಕಟ್ಟೆ) ಇವರು ನೆರವೇರಿಸಿ ಉದ್ಘಾಟನ ಭಾಷಣ ಮಾಡಿದರು. ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಉಷಾ ಸುವರ್ಣ ಹಾಗೂ […]
Read More
19-10-2019, 4:39 AM
ಯುವವಾಹಿನಿ (ರಿ) ಕೊಲ್ಯ ಘಟಕ ವತಿಯಿಂದ ದಿನಾಂಕ 19.10.19 ರಂದು ಶನಿವಾರ ಸಂಜೆ 7.30 ಕ್ಕೆ ಕಾರ್ಯಕ್ರಮ ನಿರೂಪಣಾ ನಿಯಮಗಳ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಅಧ್ಯಕ್ಷರಾದ ಆನಂದ ಮಲಯಾಳ ಕೋಡಿ ಅವರ ನಿವಾಸ (ಒಲವು) ದಲ್ಲಿ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಯುವವಾಹಿನಿಯ ಸ್ವರ ಮಾಣಿಕ್ಯ ಶ್ರೀ ಯುತ. ದಿನೇಶ್ ಸುವರ್ಣ ರಾಯಿ ಅವರನ್ನು ನಮ್ಮ ಘಟಕದ ಅಧ್ಯಕ್ಷರು ಹೂ ಕೊಟ್ಟು ಸ್ವಾಗತಿಸಿದರು. ಹಾಗೂ ತರಬೇತಿಗೆ ಬಂದ ಸರ್ವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಯುತ. ದಿನೇಶ್ ಸುವರ್ಣ […]
Read More