03-04-2022, 4:10 PM
ಯುವವಾಹಿನಿ (ರಿ.) ವಿಟ್ಲ ಘಟಕದ ಆಶ್ರಯದಲ್ಲಿ ಬ್ಲಡ್ ಬ್ಯಾಂಕ್ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ದಿನಾಂಕ 03-04-2022 ರಂದು ವಿಟ್ಲದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ಯಶವಂತ್ ಎನ್. ರವರು ವಹಿಸಿದ್ದರು. ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ಡಾ.ಗೀತಪ್ರಕಾಶ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ […]
Read More
03-04-2022, 3:12 PM
ಮಂಗಳೂರು : ದಿನಾಂಕ 03.04.2022 ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಸಾರಥ್ಯದಲ್ಲಿ ಯುವವಾಹಿನಿ(ರಿ.) ಕಂಕನಾಡಿ ಹಾಗೂ ಮಂಗಳೂರು ಮಹಿಳಾ ಘಟಕದ ಆತಿಥ್ಯದಲ್ಲಿ ಮಂಗಳೂರು ವುಡ್ ಲ್ಯಾಂಡ್ ಹೊಟೇಲ್ ಸಭಾಂಗಣದಲ್ಲಿ “ಹೊಂಬೆಳಕು – 2022″ಮಹಿಳಾ ಆರ್ಥಿಕ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಎಂಬ ಧ್ಯೇಯ ವಾಕ್ಯದೊಂದಿಗೆ (ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ) ಕಾರ್ಯಕ್ರಮ ಜರಗಿತು. ಲಯನ್ಸ್ ಜಿಲ್ಲಾ ಗವರ್ನರ್ ರವರ ಜಿಲ್ಲಾ ಸಂಯೋಜಕಿ ಲಯನ್ ಭಾರತಿ ಬಿ .ಎಮ್ . ಮಹಿಳಾ ದಿನಾಚರಣೆ ಪ್ರಯುಕ್ತ […]
Read More
26-03-2022, 3:09 PM
ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಮಂದಿರದ 16ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಅತಿಕಾಯ ಕಾಳಗ ತಾಳಮದ್ದಲೆ ಕಾರ್ಯಕ್ರಮವು ದಿನಾಂಕ 26/03/ 2022 ರಂದು ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸಭಾಭವನ ಪುತ್ತೂರು ಇಲ್ಲಿ ನಡೆಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಬಾಬು ಪೂಜಾರಿ ಇದ್ಪಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ(ರಿ.) ಪುತ್ತೂರು ಘಟಕದ ಅಧ್ಯಕ್ಷ ಅನುಪ್ ಕುಮಾರ್ ಎಸ್ ತಾಳಮದ್ದಲೆಯ ಕಲಾವಿದರನ್ನು ಶಾಲು ಹಾಕಿ ಗೌರವಿಸಿದರು.
Read More
20-03-2022, 4:53 PM
ಯುವವಾಹಿನಿ (ರಿ.) ಕಡಬ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಕಡಬ, ಮರ್ದಾಳ ವಲಯದ ವತಿಯಿಂದ ಕಡಬ ದುರ್ಗಾಂಬಿಕಾ ಸಭಾ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮವು ದಿನಾಂಕ 20.03.2022ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ಹರೀಶ್ ಕೆ ಪೂಜಾರಿ ನೆರವೇರಿಸಿ ಮಾತನಾಡಿ ಮಹಿಳೆಯರು ಕೂಡಾ ಸಂಘಟನಾತ್ಮಕವಾಗಿ ಸಮಾಜಮುಖಿ ಕಾರ್ಯದಲ್ಲಿಯ ತೊಡಗಿಸಿಕೊಂಡಾಗ ನಾಯಕತ್ವವನ್ನು ಬೆಳೆಸಿಕೊಳ್ಳಲು ಸಾಧ್ಯ ಹಾಗೂ ಈ ದಿನ ಗೌರವ ಅಭಿನಂದನೆಗೆ ಭಾಜನರಾದ […]
Read More
20-03-2022, 10:00 AM
” ಕ್ರೀಡೆ ನಮ್ಮ ನಡುವಿನ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಸಂಘಟನೆಯನ್ನು ಬಲಗೊಳಿಸುತ್ತವೆ. ಒಂದು ತಂಡವಾಗಿ ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಳ್ಳುವ ಸದಸ್ಯರ ನಡುವೆ ಪರಸ್ಪರ ಅರಿತುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಯುವವಾಹಿನಿ (ರಿ.) ಮಾಣಿ ಘಟಕವು ಈ ಪಂದ್ಯಾಟದ ಮೂಲಕ ವಿದ್ಯಾನಿಧಿ ಹಾಗೂ ಸ್ಪಂದನ ಯೋಜನೆಗಳನ್ನು ಸತತವಾಗಿ ಬಲವರ್ಧನೆಗೊಳಿಸುತ್ತಿರುವುದು ಶ್ಲಾಘನೀಯ ” ಎಂದು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ರವರು ನುಡಿದರು. ಅವರು ದಿನಾಂಕ 20-03-2022 ರ ಆದಿತ್ಯವಾರದಂದು ಅನಂತಾಡಿ ಗ್ರಾಮದ ಬಂಟ್ರಿಂಜ ಕ್ರೀಡಾಂಗಣದಲ್ಲಿ ವಿಧ್ಯಾನಿಧಿ ಮತ್ತು […]
Read More
20-03-2022, 5:41 AM
ಯುವವಾಹಿನಿ ಸಂಸ್ಥೆಯು ಯುವ ಸಮುದಾಯವನ್ನು ಕಟ್ಟಿ ಬೆಳೆಸುವ ಧ್ಯೇಯದೊಂದಿಗೆ ಇಂದು ಮಾದರಿಯಾಗಿ ಬೆಳೆದಿದೆ. ಸಮಾಜಮುಖಿ ಚಿಂತನೆಯಿಂದ ತಮ್ಮ ಸೇವೆಯನ್ನು ಎಲ್ಲಾ ಸಮಾಜಕ್ಕೂ ನೀಡುತ್ತಿರುವುದು ಶ್ಲಾಘನೀಯ ಇಂತಹ ಸೇವಾ ಸಂಸ್ಥೆಗೆ ಉತ್ತಮ ಭವಿಷ್ಯವಿದೆ ಎಂದು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ಹೇಳಿದರು. ಅವರು ದಿನಾಂಕ 20.03.2022 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಘಟಕದ ನಿರ್ಗಮನ ಅಧ್ಯಕ್ಷರಾದ ಹರೀಶ್ ಆರ್ […]
Read More
19-03-2022, 4:13 PM
ಮೂಲ್ಕಿ:- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಮಹಿಳಾ ಸಂಭ್ರಮ – 2022″ ಕಾರ್ಯಕ್ರಮವು ದಿನಾಂಕ 19.3.2022ರ ಶನಿವಾರ ಮುಲ್ಕಿ ಬಿಲ್ಲವ ಸಂಘದ ಸಭಾಗೃಹದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭರತೇಶ್ ಅಮೀನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಕೊಲ್ಲೂರು ಇದರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಶೋಭಾರಾಣಿ ಎನ್.ಎಸ್.ನಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ ನಾವು ದೈಹಿಕ ,ಮಾನಸಿಕ ಆರೋಗ್ಯವನ್ನು ಕಾಯ್ದು ಕೊಳ್ಳುವುದರ ಜೊತೆಗೆ ಸಾಮಾಜಿಕ ಆರೋಗ್ಯ […]
Read More
16-03-2022, 2:39 PM
ಕೂಳೂರು :- ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 16-03-2022 ಬುಧವಾರದಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರ ಕೂಳೂರು ಇಲ್ಲಿ 7.00 ಗಂಟೆಗೆ ಸರಿಯಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಉಪಮೇಯರ್ ಸುಮಂಗಲಾ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿ ಹೆಣ್ಣು ಅಬಲೆಯಲ್ಲ ಸಬಲೆ ಮಹಿಳೆ ಕೇವಲ ಮನೆ ಕೆಲಸಕ್ಕೆ ಸೀಮಿತವಲ್ಲ ಆಕೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಸರಿಸಮಾನವಾಗಿ ನೋಡಬೇಕು ಎಂದು […]
Read More
13-03-2022, 11:48 AM
ಬೆಳ್ತಂಗಡಿ: ”ಮಹಿಳೆ ಇನ್ನೊಬ್ಬರ ಮುಂದೆ ಕೈ ಚಾಚಿ ಬದುಕುವುದಕ್ಕಿಂತ ತಾನೇ ಹಣ ಗಳಿಸಿಕೊಳ್ಳಬೇಕು. ಆಕೆ ಅರ್ಥಿಕವಾಗಿ ಸದೃಢವಾದಾಗ ಸಮಸ್ಯೆ ದೂರವಾಗುವುದರ ಜೊತೆಗೆ ಸಮಾಜದಲ್ಲಿ ಗೌರವ, ಸ್ಥಾನಮಾನ ಸಿಗುವುದು’ ಎಂದು ಮಂಗಳೂರು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ರೇಖಾ ಗೋಪಾಲ್ ಹೇಳಿದರು. ಅವರು ದಿನಾಂಕ 13.03.2022 ರಂದು ಬೆಳ್ತಂಗಡಿಯ ಸುವರ್ಣ ಆರ್ಕೆಡ್,ಇದರ ಸಭಾಂಗಣದಲ್ಲಿ ಬೆಳ್ತಂಗಡಿ ಯುವವಾಹಿನಿ ಘಟಕ, ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ, ಬೆಳ್ತಂಗಡಿ ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ […]
Read More
13-03-2022, 11:00 AM
ಸಮಾಜಮುಖಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆಯನ್ನು ಪಡೆದ ಯುವವಾಹಿನಿ ಬೇರೆ ಸಂಸ್ಥೆಗಳಿಗೆ ಕೈಗನ್ನಡಿಯಾಗಿದೆ, ಸಮಾಜದ ವಿವಿಧ ಅಯಾಮಗಳಲ್ಲಿ ನೊಂದವರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಮುಂದೆ ಹೊಸ ತಂಡದೊಂದಿಗೆ ಇನ್ನಷ್ಟು ಕಾರ್ಯಗಳು ಮೂಡಿಬರಲಿ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ತಿಳಿಸಿ ಶುಭ ಹಾರೈಸಿದರು. ಅವರು ದಿನಾಂಕ 13.03.2022 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆದ ಯುವವಾಹಿನಿ ಬಜ್ಪೆ ಘಟಕದ ನೂತನ ತಂಡದ ಪದಗ್ರಹಣ ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಸಮಾರಂಭದ […]
Read More