11-09-2016, 5:14 AM
ಯುವವಾಹಿನಿ ಬೆಳ್ತಂಗಡಿ ಘಟಕದ 2016-17 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿ. 11-9-2016 ರಂದು ಜರಗಿತು. ಕಾರ್ಯಕ್ರಮವನ್ನು ಶಾಸಕ ಕೆ. ವಸಂತ ಬಂಗೇರರವರು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿತಾಂಬರ ಹೇರಾಜೆ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರ ಬಿ. ತಮ್ಮಯ ಭಾಗವಹಿಸಿದ್ದರು. ಈ ಶುಭ ಸಂದರ್ಭದಲ್ಲಿ ಶ್ರೀ ಬಿ. ತಮ್ಮಯರವರು ಬರೆದ ತುಲುವೆ ಅನ್ನುವ ತುಳು ಲಿಪಿ […]
Read More
11-09-2016, 5:01 AM
ದಿ. 11-09-2016 ರಂದು ಕೂಳೂರು ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಮಂದಿರದ ಸಭಾಂಗಣದಲ್ಲಿ ಯುವವಾಹಿನಿ ಕೂಳೂರು ಘಟಕದ ಉದ್ಘಾಟನಾ ಸಮಾರಂಭ ಹಾಗೂ ಪದಗ್ರಹಣ ಕಾರ್ಯಕ್ರಮ ಜರಗಿತು. ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರದ ಗೌರವಾಧ್ಯಕ್ಷ ರಾಘವೇಂದ್ರ ಕೂಳೂರು ನೂತನ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಘಟಕದ ಸರ್ವರಿಗೂ ಶುಭ ಹಾರೈಸಿದರು. ನೂತನ ಪದಾಧಿಕಾರಿಗಳ ಘೋಷಣೆಯನ್ನು ಮಂಗಳೂರು ತಾಲೂಕು ಸಂಘಟನಾ ಕಾರ್ಯದರ್ಶಿ ಹರೀಶ್ ಕೆ. ಪೂಜಾರಿ ಇವರು ನೆರವೇರಿಸಿಕೊಟ್ಟರು. ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿಯವರು ನೂತನ […]
Read More
24-07-2016, 9:18 AM
ವಿದ್ಯೆ, ಉದ್ಯೋಗ ಮತ್ತು ಸಂಪರ್ಕವೆಂಬ ನಾರಾಯಣ ಗುರುಗಳ ತತ್ವದಂತೆ ಯುವವಾಹಿನಿ ಸದಸ್ಯರು ಕೆಲಸ ಮಾಡುತ್ತಿದ್ದು ಜನರ ಅನಿಸಿಕೆ ಹಾಗೂ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಯುವವಾಹಿನಿ ಯಂತೆ ಪ್ರತಿಯೊಂದು ಸಂಘಟನೆಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಂಘಟನೆಗಳಿಗೆ ನಿಜವಾದ ಅರ್ಥ ಹಾಗೂ ಬೆಲೆ ಸಿಗುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಸಂತೋಷ್ ಕುಮಾರ್‌ರವರು ಹೇಳಿದರು. ಅವರು ಜು. 24 ರಂದು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ 2016-17 ನೇ ಸಾಲಿನ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ […]
Read More
10-07-2016, 7:36 AM
ಯುವವಾಹಿನಿ (ರಿ) ಅಡ್ವೆ ಘಟಕದ ಪದಗ್ರಹಣ ಕಾರ್ಯಕ್ರಮವು ದಿನಾಂಕ 10-7-2016 ರಂದು ಅಡ್ವೆ ಆನಂದಿ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ವಹಿಸಿದ್ದರು. ಡಾ. ಎನ್.ಟಿ. ಅಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 2016-17 ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್, ಕಾರ್ಯದರ್ಶಿಯಾಗಿ ಶಶಿಧರ್ ಟಿ. ಪೂಜಾರಿ ಆಯ್ಕೆಗೊಂಡರು. ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಕೇಂದ್ರ ಸಮಿತಿ ಉಪಾಧ್ಯಕ್ಷ ಪದ್ಮನಾಭ ಮರೋಳಿ ಭೋದಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಅಲ್ಲದೇ ಅಂದು ಪರಿಸರದ ಸುತ್ತಮುತ್ತಲಿನ ಶಾಲಾ ಕಾಲೇಜುಗಳಲ್ಲಿ […]
Read More
09-08-2015, 7:35 AM
ಯುವವಾಹಿನಿ ಕೇಂದ್ರ ಸಮಿತಿಯ 2015-16 ನೇ ಸಾಲಿನ ಪದಗ್ರಹಣ ಸಮಾರಂಭವು ಬಂಟ್ವಾಳ ಮೆಲ್ಕಾರಿನ ಬಿರ್ವ ಆಡಿಟೋರಿಯಂ ಇಲ್ಲಿ 09.08.2015 ರಂದು ಜರಗಿತು. ಚುನಾವಣಾಧಿಕಾರಿ ರವಿಚಂದ್ರ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿದರು. ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಉಡುಪಿ ನೇತೃತ್ವದ ತಂಡವು ಪ್ರಮಾಣ ವಚನ ಸ್ವೀಕರಿಸಿತು.
Read More