29-11-2024, 2:58 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ಪದಗ್ರಹಣ ಸಮಾರಂಭವು 24-11-2024 ರಂದು ಘಟಕದ ಸಭಾಂಗಣದಲ್ಲಿ ನೆರವೇರಿತು. ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಆದ ಶ್ರೀ ಮಹಾಬಲ ಅಮೀನ್ವಾಚಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್ ಕೆ ಪೂಜಾರಿಯವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ದಯಾನಂದ ಕರ್ಕೇರಾ ಹಾಗೂತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಹೆಚ್ ಹೊಳೆಯಪ್ಪ. ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು, ಉಡುಪಿ, ಇವರು ಶುಭ ಹಾರೈಸಿದರು. ಬಿಲ್ಲವ ಸೇವಾ […]
Read More
16-11-2024, 6:23 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮ ದಿ. 16-11-2024 ರಂದು ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಗುರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಜಯಾನಂದ ಎಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಲ್ಲವ ಸಮಾಜದ ಪ್ರತಿಷ್ಟಿತ ಸಂಘಟನೆಯಾದ ಯುವವಾಹಿನಿ ಉತ್ತಮ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದು, ಮಹಿಳಾ ಘಟಕದ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು. ಶ್ರೀ ಬಪ್ಪನಾಡು ಕ್ಷೇತ್ರ ಮೂಲ್ಕಿಯ ಕಾರ್ಯನಿರ್ವಹಣಾ ಅಧಿಕಾರಿ ಶ್ವೇತಾ ಪಳ್ಳಿ ಮಾತನಾಡಿ, ನಮ್ಮ ಸಮಾಜದ ಹೆಚ್ಚು ಹೆಚ್ಚು […]
Read More
15-11-2024, 11:54 AM
ದಿನಾಂಕ : 16-11-2024 ಸಮಯ : ಸಂಜೆ 4:30ಕ್ಕೆ ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು
Read More
08-09-2024, 5:07 AM
ಮಂಗಳೂರು : ಯುವವಾಹಿನಿ (ರಿ) ಕಂಕನಾಡಿ ಘಟಕದ ಸಹಯೋಗದಲ್ಲಿ ದಿನಾಂಕ 08-09-2024 ಗರೋಡಿ ಸಮೃದ್ಧಿ ಸಭಾಭವನದಲ್ಲಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿದ ಲೋಕೇಶ್ ಪೂಜಾರಿ, ಸಂಘಟನೆಗಳ ಸಮಾಜಮುಖಿ ಕಾರ್ಯಗಳು ಸರ್ವರನ್ನೂ ಒಳಗೊಳ್ಳುವ ಒಲವು ಹೊಂದಿರಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಕಂಕನಾಡಿ ಘಟಕವು ಹಮ್ಮಿಕೊಂಡಿರುವ ಸಮಾಜಮುಖಿ ಹತ್ತು ಹಲವು ಕಾರ್ಯಕ್ರಮವು ಸರ್ವಸ್ಪರ್ಶಿ ಉದ್ದೇಶವನ್ನು ಹೊಂದಿದ್ದು, ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿವೆ ಎಂದು ನುಡಿದರು. ಯುವವಾಹಿನಿ (ರಿ) ಕಂಕನಾಡಿ ಘಟಕ ಅಧ್ಯಕ್ಷ ಲೋಕೇಶ್ ಅಮೀನ್ ಅಧ್ಯಕ್ಷತೆ ವಹಿಸಿ, […]
Read More
20-02-2024, 12:11 PM
ಮಂಗಳೂರು : ಯುವವಾಹಿನಿ ಸಂಸ್ಥೆಯು ಯುವಕರ ಆಕರ್ಷಣೆಯ ಮೂಲಕ ಯುವಜನತೆಯಲ್ಲಿ ಹೊಸ ಸ್ಪೂರ್ತಿ ತುಂಬಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ.ಪೂಜಾರಿ ತಿಳಿಸಿದರು. ಅವರು 2024 ಫೆಬ್ರವರಿ 20 ರಂದು ಮಂಗಳೂರಿನ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ಜರುಗಿದ ಯುವವಾಹಿನಿ ಮಂಗಳೂರು ಘಟಕದ ಪದಗ್ರಹಣ ಸಮಾರಂಭದಲ್ಲಿ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಶ್ರೀನಿವಾಸ್ ಬಲ್ಕ್ ಕ್ಯಾರಿಯರ್ ಇದರ ಮಾಲೀಕರಾದ ಲೋಕೇಶ್ ಆರ್ ಅಮೀನ್ ಇವರು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದರು, ಕೇಂದ್ರ […]
Read More
24-12-2023, 11:20 AM
ಮಂಗಳೂರು :- ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಅಧ್ಯಕ್ಷರಾಗಿ ಹರೀಶ್ ಕೆ ಪೂಜಾರಿ ಆಯ್ಕೆಯಾಗಿದ್ದಾರೆ. ಒಂದನೇ ಉಪಾಧ್ಯಕ್ಷರಾಗಿ ಲೋಕೇಶ್ ಕೋಟ್ಯಾನ್ ಕುಳೂರು, ಎರಡನೇ ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಚಂದ್ರ ಡಿ.ಕೆ, ಕೋಶಾಧಿಕಾರಿಯಾಗಿ ಹರೀಶ್.ವಿ ಪಚ್ಚನಾಡಿ ಜೊತೆ ಕಾರ್ಯದರ್ಶಿಯಾಗಿ ರೇಖಾ ಗೋಪಾಲ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ನಯನಾ ರಮೇಶ್, ಸಾಂಸ್ಕೃತಿಕ ನಿರ್ದೇಶಕರಾಗಿ ಹರೀಶ್ ಸುವರ್ಣ ಬೆಳ್ತಂಗಡಿ, ನಾರಾಯಣಗುರು ತತ್ವ ಪ್ರಚಾರ ನಿರ್ದೇಶಕರಾಗಿ ಮೋಹನ್ ಮಾಡೂರು, ಮಹಿಳಾ ಸಂಘಟನಾ ನಿರ್ದೇಶಕರಾಗಿ […]
Read More
24-12-2023, 9:00 AM
ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಯುವವಾಹಿನಿಯಿಂದ ಆಗುತ್ತಿದೆ ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಹಾದಿಯಲ್ಲಿ ಮುನ್ನಡೆಯಬೇಕಾಗಿದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು. ಅವರು ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿಯ […]
Read More
19-11-2022, 2:42 PM
ಕಡಬ :- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಕಡಬ ಘಟಕದ 2022-23ನೇ ಸಾಲಿನ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದಿನಾಂಕ 19 ನವೆಂಬರ್ 2022 ನೇ ಶನಿವಾರದಂದು ಶ್ರೀ ದುರ್ಗಂಬಿಕಾ ಅಮ್ಮನವರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಬಿ. ಟಿ ಮಹೇಶ್ಚಂದ್ರ ಸಾಲ್ಯಾನ್ ಇವರು ಈ ವರ್ಷದ ಕೆಲಸ ಕಾರ್ಯಗಳನ್ನು ಗಮನಿಸಿ ಅಭಿನಂದಿಸಿ ನೂತನ ತಂಡಕ್ಕೆ ಶುಭ ಹಾರೈಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ […]
Read More
13-11-2022, 5:48 PM
ಕುಪ್ಪೆಪದವು :- ಯುವವಾಹಿನಿಯ ಶಿಸ್ತು ಬದ್ಧ ಕಾರ್ಯಕ್ರಮ, ಪಾರದರ್ಶಕತೆ, ಎಲ್ಲವನ್ನು ಗಮನಿಸಿ ಈ ಬಾರಿ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಈ ಸಂಸ್ಥೆಯು ಬೇರೆ ಸಂಘಟನೆಗಿಂತ ವಿಭಿನ್ನವಾಗಿದೆ. ಸೇವಾ ಮನೋಭಾವ ಹೊಂದಿರುವ ಸಂಸ್ಥೆಯ ಕಾರ್ಯಕ್ರಮಕ್ಕೆ ಬೇರೆ ಯಾವ ಕಾರ್ಯಕ್ರಮದ ಒತ್ತಡವಿದ್ದರೂ ಕೂಡ ಪಾಲ್ಗೊಳ್ಳುವ ಅವಕಾಶ ಬಿಟ್ಟುಕೊಡಲಾರೆ. ಯುವವಾಹಿನಿ ಸಂಸ್ಥೆಗೆ ಯಾವುದೇ ರೀತಿಯ ಸಹಕಾರ ನೀಡಲು ಸದಾ ಸಿದ್ಧ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಮತ್ತು ತತ್ವಾದರ್ಶಗಳು ಸರ್ವರಿಗೂ ಅನ್ವಯವಾಗುವಂತಿವೆ […]
Read More
13-11-2022, 5:26 PM
ಬೆಳ್ತಂಗಡಿ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಪರಿಕಲ್ಪನೆಯೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಯುವವಾಹಿನಿ ಬೆಳ್ತಂಗಡಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ, ಸಾಧಕರಿಗೆ ಸನ್ಮಾನ ಸಾಂತ್ವನನಿಧಿ ಹಸ್ತಾಂತರ ಕಾರ್ಯಕ್ರಮ ನ.13 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು. ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿ೦ಜ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು , ಬೆಳ್ತಂಗಡಿ ಘಟಕ ಅಧ್ಯಕ್ಷೆ ಸುಜಾತ […]
Read More