13-08-2019, 6:34 AM
ಮಂಗಳೂರು : ದಿನಾಂಕ 13.08.2019 ರಂದು ನಡೆದ ಘಟಕದ ಸಾಪ್ತಾಹಿಕ ಸಭೆಯಲ್ಲಿ ಜೆಸಿಐ ಸ್ಮಿತಾ ಪಿ. ಹೊಳ್ಳರವರು ಲಿಂಗ ಸಮಾನತೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಹುಟ್ಟು ಮತ್ತು ಸಾವು ಭಗವಂತನ ನಿರ್ಣಯಗಳು. ಅದರ ನಡುವಿನ ಜೀವನ ನಮ್ಮದು. ಭಗವಂತನು ನಮಗೆ ನೀಡಿರುವ ಅತ್ಯುತ್ತಮವಾದ ಜೀವನವನ್ನು ಯಾವುದೇ ಬೇದ ಭಾವ ತೋರದೆ, ಸಮಚಿತ್ತದಿಂದ, ತಾರತಮ್ಯವಿಲ್ಲದೆ, ಸಹಬಾಳ್ವೆಯನ್ನು ನಡೆಸುವುದೇ ಜೀವನದ ಬಲು ದೊಡ್ಡ ಸಾಧನೆ ಎಂದರು. ಸ್ಮಿತಾರವರನ್ನು ಮಾಜಿ ಅಧ್ಯಕ್ಷರಾದ ಜಯರಾಮ್ ಕಾರಂದೂರುರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು […]
Read More
28-07-2019, 2:20 PM
ವೇಣೂರು: ಮಳೆಗಾಲದಲ್ಲಿ ನಮಗೆ ನೀರಿನ ಮಹತ್ವ ಗೊತ್ತಾಗುವುದಿಲ್ಲ. ಬೇಸಿಗೆಕಾಲ ಬಂತೆಂದರೆ ಹನಿ ನೀರಿಗೆ ಹಾಹಾಕಾರ ಶುರುವಾಗುತ್ತದೆ. ನೀರಿನ ಜಾಗೃತಿ ಮಳೆಗಾಲದಲ್ಲೇ ಶುರುವಾಗಬೇಕು. ಅದಕ್ಕಾಗಿ ಎಲ್ಲೆಡೆ ಜನತೆ ಮಳೆಕೊಯ್ಲು ಹಾಗೂ ಜನಮರುಪೂರಣಕ್ಕೆ ಒತ್ತು ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ವೇಣೂರು ವಲಯ ಮೇಲ್ವಿಚಾರಕ ಯೋಗೀಶ್ ಹೇಳಿದರು. ಬಜಿರೆ ಸ.ಉ.ಪ್ರಾ. ಶಾಲೆಯಲ್ಲಿ ಯುವವಾಹಿನಿ ವೇಣೂರು ಘಟಕ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಜರಗಿದ ಜಲಮರುಪೂರಣ ಹಾಗೂ ಮಳೆಕೊಯ್ಲು ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ […]
Read More
09-07-2019, 1:32 PM
ವೇಣೂರು: ಹುಟ್ಟಿನಿಂದ ಸಾವಿನವರೆಗೂ ಕಾನೂನಿನ ಚೌಕಟ್ಟಿನಲ್ಲಿ ಬದುಕಬೇಕು. ಈಗಾಗಿ ಕಾನೂನಿನ ಸಾಮಾನ್ಯ ಜ್ಞಾನ ಎಲ್ಲರಿಗೂ ಅವಶ್ಯಕವಾಗಿದೆ. ನಿತ್ಯ ಜೀವನದಲ್ಲಿ ಕಾನೂನನ್ನು ಪಾಲಿಸುತ್ತಾ ಪ್ರಜ್ಞಾವಂತ ನಾಗರಿಕರಾಗೋಣ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಕೆ. ನಾಗೇಶ್‌ಮೂರ್ತಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಬೆಳ್ತಂಗಡಿ, ವಕೀಲರ ಸಂಘ ಬೆಳ್ತಂಗಡಿ, ಯುವವಾಹಿನಿ ಘಟಕ ವೇಣೂರು ಹಾಗೂ ವೇಣೂರು ಸ.ಪ.ಪೂ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜು. 09 ರಂದು ವೇಣೂರು ಸ.ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಜರಗಿದ ಕಾನೂನು […]
Read More
16-06-2019, 4:29 PM
ಮೂಡುಬಿದಿರೆ : ಯುವವಾಹಿನಿ .ರಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 16-6-2019ನೇ ಆದಿತ್ಯವಾರದಂದು “ಯುವಸ್ಪಂದನ” ಸೇವಾ ಯೋಜನೆಯ ಉದ್ಘಾಟನೆ ಹಾಗೂ ವಿದ್ಯಾರ್ಥಿ ವೇತನ” ದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು “ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ. ರಿ ಮೂಡುಬಿದಿರೆಯಲ್ಲಿ ಜರಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಬಿದಿರೆ ಯುವವಾಹಿನಿ ಘಟಕದ ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ ವಹಿಸಿದ್ದರು. ಯುವಸ್ಪಂದನ ಸೇವಾಯೋಜನೆಯ ಉದ್ಘಾಟನೆಯನ್ನು ಮುಲ್ಕಿ-ಮೂಡಬಿದಿರೆಯ ಜನಪ್ರಿಯ ಶಾಸಕರಾದ […]
Read More
25-05-2019, 12:32 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ವತಿಯಿಂದ ವಿನೂತನ ವಾಗಿ ಜರಗಿದ ಮಾತೆಯರ ದಿನಾಚರಣೆಯ ಬಗ್ಗೆ ವಿಶೇಷ ಉಪನ್ಯಾಸ ವನ್ನು ಭಗವತಿ ಆರಾಧನೆಯ ಬಗ್ಗೆ ಪಿ.ಎಚ್.ಡಿ. ಮಾಡುತ್ತಿರುವ ಉಪನ್ಯಾಸಕ ಅರುಣ್ ಉಳ್ಳಾಲ್ ನೀಡಿದರು. ಹೆಣ್ಣು ಕ್ರಿಯಾಶೀಲ ಶಕ್ತಿ, ಪ್ರಕೃತಿ ಪುರುಷ ಜೊತೆ ಜೊತೆ ಯಾಗಿರುವ ದ್ರಾವಿಡ ಸಂಸ್ಕೃತಿಯಲ್ಲಿ ಪ್ರಾಚೀನ ಸಿಂಧೂ ಬಯಲಿನ ನಾಗರಿಕತೆಯ ಕಾಲದಿಂದಲೂ ಹೆಣ್ಣಿಗೆ ವಿಶೇಷ ಪ್ರಾಮುಖ್ಯತೆ ಯನ್ನು ನೀಡುತ್ತಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಸಂಧರ್ಭದಲ್ಲಿ ಪ್ರತಿಷ್ಠಾಪಿಸಲ್ಪಡುವ ನವದುರ್ಗೆಯರು ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ […]
Read More
10-05-2019, 12:18 PM
ಬೆಂಗಳೂರು :ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಕಾರ್ಯಾಗಾರ ದಿನಾಂಕ 19-05-2019 ರಂದು ಬೆಂಗಳೂರು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಆರೋಗ್ಯವೇ ಭಾಗ್ಯ -2019 ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ವಹಿಸಿದ್ದರು ಹಾಗೂ ಕಾರ್ಯಕ್ರಮದ ಮುಂದಾಳತ್ವವನ್ನು ಆರೋಗ್ಯ ನಿರ್ದೇಶಕರಾದ ಮಿತೇಶ್ ಪೂಜಾರಿ ನಿರ್ವಹಿಸಿದರು.ಈ ಸಂದರ್ಬದಲ್ಲಿ ಘಟಕದ ಕಾರ್ಯದರ್ಶಿಯವರಾದ ರಾಘವೇಂದ್ರ ಪೂಜಾರಿ , ಉಪಾಧ್ಯಕ್ಷರಾದ ಕಿಶನ್ ಪೂಜಾರಿ, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. […]
Read More
08-05-2019, 4:22 PM
ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಸಮ ಸಮಾಜದ ಸರ್ವ ಸಮಾನತೆಯ ಜ್ಞಾನ ಜ್ಯೋತಿ ಬಸವಣ್ಣ ಜಯಂತಿ ಯುವವಾಹಿನಿಯ ಸಭಾಂಗಣ ದಲ್ಲಿ ಆಚರಿಸಲಾಯಿತು. ಸಾಹಿತಿ ಚಿಂತಕಿ ಶ್ರೀಮತಿ ಜ್ಯೋತಿ ಇರ್ವತ್ತೂರು ಇವರು ಬಸವಣ್ಣ ಜಯಂತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಯುವವಾಹಿನಿಯಂತಹ ಬಿಲ್ಲವ ಸಂಘಟನೆ ಯೊಂದು ಬಸವಣ್ಣ ಜಯಂತಿಯನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಸಮ ಸಮಾಜದ ಸಮಾನತೆಯ ತಳಹದಿಯಲ್ಲಿ ಕೆಲಸಮಾಡಿದ ನಾರಾಯಣ ಗುರು, ಬಸವಣ್ಣ, ಪೆರಿಯಾರ್, ಕಾರ್ಲ್ ಮಾರ್ಕ್ಸ್ ಮುಂತಾದವರು ನಮಗೆಲ್ಲ ಆದರ್ಶ ಎಂದರು. […]
Read More
08-05-2019, 4:01 AM
ಯಡ್ತಾಡಿ : ಯುವವಾಹಿನಿ (ರಿ) ಯಡ್ತಾಡಿ ಘಟಕದ ಬೇಸಿಗೆ ಶಿಬಿರ, ‘ವಿಕಸನ-2019’ ರ ಅಂಗವಾಗಿ ನಾಲ್ಕನೇ ದಿನ ಮಕ್ಕಳಿಗೆ ‘ಅಗ್ನಿ ಸುರಕ್ಷತೆಯ’ ಬಗ್ಗೆ ಅರಿವು ಮೂಡಿಸಲಾಯಿತು. ಅಂಕಿ ಅಂಶಗಳ ಪ್ರಕಾರ ಹಲವಾರು ಬೆಂಕಿ ಅವಘಢಗಳು ಅರಿವಿನ ಕೊರತೆಯಿಂದ ಉಂಟಾಗುವಂತಹದು. ಬಿಸಿಲಿನ ಬೇಗೆಯ ಈ ದಿನಗಳಲ್ಲಿ ಅಗ್ನಿ ಅನಾಹುತಗಳ ಸಾಧ್ಯತೆ ಇನ್ನೂ ಹೆಚ್ಚು. ‘ಅರಿವಿನ ತಂಗಾಳಿ’ ಹೆಸರಿನಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಅಗ್ನಿ ಅನಾಹುತಗಳನ್ನು ಸರಿಯಾದ ಮಾಹಿತಿಯ ಮೂಲಕ ಆದಷ್ಟು ಕಡಿಮೆ ಮಾಡುವ ಮೂಲಕ ಉದ್ದೇಶದಿಂದ ‘ಅಗ್ನಿ ಸುರಕ್ಷತೆ […]
Read More
31-03-2019, 2:41 PM
ಉಡುಪಿ : ಉಡುಪಿ ಯುವವಾಹಿನಿ ಘಟಕದಲ್ಲಿ ದಿನಾಂಕ 31/03/2019 ರಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಭಾರತೀಯ ವಿಕಾಸ ಟ್ರಸ್ಟ್ ವತಿಯಿಂದ ಸ್ವ ಉದ್ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಮಹಿಳೆಯರಿಗೆ – ಸಾಂಬಾರು ಪುಡಿ, ಸಾರಿನ ಪುಡಿ, ಪುಳಿಯೋಗರೆ ಮಿಕ್ಸ್, ಪೇಪರ್ ಬ್ಯಾಗ್ ತಯಾರಿಸುವ ವಿಧಾನ, ಮ್ಯಾಟ್ ತಯಾರಿಸುವ ಬಗ್ಗೆ ತರಬೇತಿ ನೀಡಿದರು. ಸುಮಾರು 20 ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡುರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಮತಿ ಲಕ್ಷ್ಮೀಬಾಯಿ ಹಾಗೂ ಶ್ರೀಮತಿ ಸುಮಂಗಲಾ ರವರು ಭಾಗವಹಿಸಿದ್ದರು.ಶಕುಂತಳ ಎಸ್ […]
Read More
04-11-2018, 3:19 PM
ಬಂಟ್ವಾಳ : ದಿನನಿತ್ಯದ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ವ್ಯವಹರಿಸುವಾಗ ಇತರರನ್ನು ಪ್ರೇರೇಪಿಸುವ ಮನವೊಪ್ಪಿಸುವ ಅಥವಾ ಒತ್ತಾಯಿಸುವ ಸಂದರ್ಭಗಳು ಸಹಜ, ಇಂತಹ ಸಂದರ್ಭಗಳಲ್ಲಿ ಸಂವಹನ ಅತ್ಯಂತ ಪರಿಣಾಮಕಾರಿಯಾಗಿದ್ದು , ಉದ್ದೇಶವನ್ನು ಸಾಧಿಸುವಂತೆ ಇರಬೇಕು. ಆದರೆ ಈ ಕೌಶಲ ಎಲ್ಲರಲ್ಲೂ ಒಂದೇ ಮಟ್ಟದಲ್ಲಿ ಇರುವುದಿಲ್ಲ ಉದಾಹರಣೆಗೆ ಜೀವನದಲ್ಲಿ ಯಾವ ಕೊರತೆ ಇಲ್ಲದಿದ್ದರೂ ಚೈತನ್ಯ ರಹಿತವಾದ ನಿರಾಶವಾದಿಗಳನ್ನು ನೋಡುತ್ತಿರುತ್ತೇವೆ. ಕೆಲವರು ಮಾತನಾಡುವ ಶೈಲಿಯಿಂದ ನಕಾರಾತ್ಮಕ ಅನಿಸಿಕೆ, ಅನುಭವಗಳು ಆಗುತ್ತವೆ. ನಾವು ಅಭಿಪ್ರಾಯವನ್ನು, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಿಂದ ಇತರರಿಗೆ ಬೇಸರ ಕಿರಿಕಿರಿ […]
Read More