16-06-2019, 2:37 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದಿಂದ ದಿನಾಂಕ 16.06.2019 ರ ಭಾನುವಾರ ಶ್ರೃಂಗೇರಿ, ಹೊರನಾಡು, ಕಲಶ ಮತ್ತು ಕುದುರೆಮುಖ ಬೆಟ್ಟಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಸುಮಾರು 100 ಜನರನ್ನು ಒಳಗೊಂಡ ಪ್ರವಾಸಿ ತಂಡವು ಎರಡು ಬಸ್ಸುಗಳಲ್ಲಿ ಬೆಳಿಗ್ಗೆ 6.00 ಗಂಟೆಗೆ ಸರಿಯಾಗಿ ಯುವವಾಹಿನಿ ಸಭಾಂಗಣದಿಂದ ಹೊರಟ್ಟಿತ್ತು. ಬಜಗೋಳಿಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿದ ನಂತರ ಕಳಸ, ಹೊರನಾಡು, ಶೃಂಗೇರಿ ಮತ್ತು ಕುದುರೆ ಮುಖ ಬೆಟ್ಟಗಳ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ರಾತ್ರಿ 8.00 ಗಂಟೆಗೆ ವಾಪಸು ಬಂದಿದ್ದೇವೆ. ದಿನವಿಡೀ ಹಾಡು, […]
Read More
10-04-2019, 3:13 AM
ಕೂಳೂರು : ಯುವವಾಹಿನಿ( ರಿ) ಕೂಳೂರು ಘಟಕದ ವತಿಯಿಂದ 52 ಸದಸ್ಯರ ತಂಡವು ಶಿವಗಿರಿ ಪ್ರವಾಸವನ್ನು ದಿನಾಂಕ 10-04-2019 ರಿಂದ 12-04-2019 ವರೆಗೆ ಕೈಗೊಂಡಿದ್ದು ಇದರ ಸಂಚಾಲಕತ್ವವನ್ನು ವಿದ್ಯಾರ್ಥಿ ಸಂಘಟನೆಯ ವಿನೀತ್ ಕುಮಾರ್ ಇವರು ವಹಿಸಿದ್ದರು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ತಾರೀಖು 10-04-2019 ಬುಧವಾರ ಸಂಜೆ 5.30ಕ್ಕೆ ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣನಿಂದ ಹೊರಡುವ ಮಾವೇಲಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಿವಗಿರಿಗೆ ಪ್ರಯಾಣ ಆರಂಭ ಮಾಡಿ ಮರುದಿನ ಬೆಳಿಗ್ಗೆ 6 ಗಂಟೆಗೆ […]
Read More
17-03-2019, 3:48 PM
ಕಂಕನಾಡಿ : ಯುವವಾಹಿನಿ ಎಂಬುದು ನಮ್ಮ ಕುಟುಂಬ. ನಾವು ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸಮಾಜ ಸೇವೆ ಸಲ್ಲಿಸಿದಾಗ ಅದರ ಉತ್ತಮ ಫಲ ನಮಗೆ ಖಂಡಿತವಾಗಿಯೂ ದೊರೆಯುತ್ತದೆ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲುರವರು ಹೇಳಿದರು. ದಿನಾಂಕ 17-3-2019ನೇ ಆದಿತ್ಯವಾರದಂದು ತಣ್ಣೀರುಬಾವಿ ಟ್ರೀ ಪಾರ್ಕಲ್ಲಿ ಜರುಗಿದ ಯುವವಾಹಿನಿ (ರಿ.) ಕಂಕನಾಡಿ ಘಟಕದ ಹಳೆ ಬೇರು ಹೊಸ ಚಿಗುರು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿ ಉದ್ಘಾಟಿಸಿ ಸದಸ್ಯರು ಯುವವಾಹಿನಿಯಲ್ಲಿ […]
Read More
03-03-2019, 3:32 PM
ಮಾಣಿ : ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಅನುಭವ ವಿಸ್ತಾರ ಹಾಗೂ ಯುವವಾಹಿನಿ ಕುಟುಂಬದ ಸದಸ್ಯರೊಳಗಿನ ಸ್ನೇಹ, ವಾತ್ಸಲ್ಯದ ಗಟ್ಟಿತನಕ್ಕಾಗಿ ಯುವವಾಹಿನಿ (ರಿ.) ಮಾಣಿ ಘಟಕವು ಹಮ್ಮಿಕೊಂಡ ಸುಂದರ ಕಾರ್ಯಕ್ರಮವೇ “ಸ್ನೇಹ ಸಿಂಚನ- ಯುವವಾಹಿನಿ ಕುಟುಂಬದ ವಾತ್ಸಲ್ಯ ಪಯಣ” ಸ್ನೇಹ ಸಿಂಚನ ಪಯಣ ಸಾಗಿದ್ದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ದ್ವೀಪಕ್ಕೆ.ದಿನಾಂಕ 03-03-19 ಅದಿತ್ಯವಾರದಂದು ಬೆಳಿಗ್ಗೆ 63ಮಂದಿ ಯುವವಾಹಿನಿ ಸದಸ್ಯರೊಂದಿಗೆ ತಂಡವು ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ ಇವರ ನೇತೃತ್ವದೊಂದಿಗೆ […]
Read More
20-01-2019, 3:47 PM
ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ ಸದಸ್ಯರ ಬಾಂಧವ್ಯಗಳ ಕೊಂಡಿ ಮತ್ತಷ್ಟು ಭದ್ರವಾಗಲಿ ಎಂಬ ಆಶಯದೊಂದಿಗೆ ಬಾಂಧವ್ಯ ಬೆಸುಗೆ-2019 ಯುವವಾಹಿನಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ದಿನಾಂಕ 20/01/2019 ರವಿವಾರದಂದು ಮುಂಜಾನೆಯಿಂದ ಮುಸ್ಸಂಜೆವರೆಗೆ ‘ಕೆರೆಬಿಯನ್ ರೆಸಾರ್ಟ್ ‘ಮೂಲ್ಕಿ ಇಲ್ಲಿ ನಡೆಯಿತು .ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು .ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ,ಸಂಚಾಲಕರಾದ ವಿಮಲಾ ರಾಜೇಶ್ , ಘಟಕದ ಮಾರ್ಗದರ್ಶಕರಾದ ಗಿರಿಧರ್ ಸನಿಲ್ ಉಪಸ್ಥಿತರಿದ್ದರು .ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು .ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ […]
Read More
18-11-2018, 12:30 PM
ಕೂಳೂರು: ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ಶಿರಡಿ ಪ್ರವಾಸ ದಿನಾಂಕ 18/11/2018 ರಿಂದ ದಿನಾಂಕ 22/11/2018ರ ತನಕ ಏರ್ಪಡಿಸಲಾಗಿದ್ದು 45 ಮಂದಿ ಸದಸ್ಯರನ್ನೊಳಗೊಂಡ ತಂಡಕ್ಕೆ ಯುವವಾಹಿನಿ(ರಿ) ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಅವರು ಚಾಲನೆ ನೀಡಿದರು. ದಿನಾಂಕ 18/11/2018 ರವಿವಾರ ರಾತ್ರಿ 9.45 ಕ್ಕೆ ಮಂಗಳೂರಿನಿಂದ ಹೊರಟು 19/11/18 ಸೋಮವಾರ ಸಂಜೆ 6 ಗಂಟೆಗೆ ಸರಿಯಾಗಿ ನಾಸಿಕ್ ತಲುಪಿದೆವು. ಅದೇ ದಿನ ರಾತ್ರಿ ಮೊದಲನೆಯದಾಗಿ ಬಿಲ್ಲವರ ಗುರುವಾದ ಗಿರ್ನಾರ್‍ದಲ್ಲಿರುವ ನಾರಾಯಣಗುರು ಸ್ವಾಮಿಯವರ ಮಂದಿರಕ್ಕೆ ಭೇಟಿ ನೀಡಿದೆವು. […]
Read More
07-10-2018, 4:11 PM
ಬೆಂಗಳೂರು : ಯುವವಾಹಿನಿ (ರಿ) ಬೆಂಗಳೂರು ಘಟಕದಿಂದ ದಿನಾಂಕ 07-10-1018 ರಂದು ಒಂದು ದಿನದ ಪ್ರವಾಸ ಅನ್ವಯ ಕೋಟಿಲಿಂಗೇಶ್ವರ ಮತ್ತು ಅಂತರಗಂಗೆಗೆ ಹಮ್ಮಿಕೊಳ್ಳಲಾಗಿತ್ತು, ಒಟ್ಟು 43 ಬೆಂಗಳೂರಿನ ಯುವವಾಹಿನಿ ಬಂಧುಗಳು ಈ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಪ್ರವಾಸ ಬೆಳಿಗ್ಗೆ 7.15 ಗೆ ಹೊರಟು ಹೊಸಕೋಟೆಯಲ್ಲಿ ಬೆಳಗ್ಗಿನ ಉಪಾಹಾರ ಮುಗಿಸಿ 12 ಗಂಟೆಗೆ ಮದ್ಯಾಹ್ನ ಕೋಟಿಲಿಂಗೇಶ್ವರ ಗೆ ತಲುಪಿ 2 ಗಂಟೆ ಹೊತ್ತಿಗೆ ಊಟ ಮುಗಿಸಿ ಅಂತರಗಂಗೆ ಗೆ ಪಯಣ ನಡೆಸಿ 3.30 ಗಂಟೆಗೆ ತಲುಪಿದ್ದೇವೆ, ಅಲ್ಲಿಯ ದರ್ಶನ ಮುಗಿಸಿ […]
Read More
16-09-2018, 3:17 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ದಿನಾಂಕ 16.09.2018 ರಂದು ನಡೆದ ಶಿವಗಿರಿಯಾತ್ರೆ ಯಶಸ್ವಿಯಾಗಿ ನಡೆಯಿತು . ಮಂಗಳೂರಿನಿಂದ ರೈಲಿನ ಮೂಲಕ ಹೊರಟ ಯುವವಾಹಿನಿಯ ಯಾತ್ರಾ ತಂಡವನ್ನು ವರ್ಕಳ ರೈಲು ನಿಲ್ದಾನದಲ್ಲಿ ಶಿವಗಿರಿ ಮಠದ ಪೂಜ್ಯ ಸತ್ಯಾನಂದತೀರ್ಥ ಶ್ರೀಗಳು ಸ್ವಾಗತಿಸುವ ಮೂಲಕ ಯಾತ್ರೆಯು ಆರಂಭವಾಯಿತು. ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಗಿರಿಯಲ್ಲಿ ನ ನಾರಾಯಣಗುರುಗಳ ಮಹಾಸಮಾಧಿ ಮತ್ತು ಕೆಲ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದೆವು. ಆ ಬಳಿಕ ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಹ್ಮಣ್ಯ ದೇವಾಲಯ, ನಾರಾಯಣಗುರುಗಳೇ ತನ್ನ ಕಯ್ಯಾರೆ […]
Read More
09-09-2018, 2:36 AM
ಕೆಂಜಾರು- ಕರಂಬಾರು : ಯುವವಾಹಿನಿ(ರಿ.) ಕೆಂಜಾರು- ಕರಂಬಾರು ಘಟಕದ ವತಿಯಿಂದ ದಿನಾಂಕ 09/09/2018 ರಂದು ಕ್ಷೇತ್ರ ದರ್ಶನ ವನ್ನು ಹಮ್ಮಿಕೊಳ್ಳಲಾಗಿತ್ತು. ಘಟಕದ ಅಧ್ಯಕ್ಷ ಗಣೇಶ್ ಅರ್ಬಿ ಪ್ರವಾಸಕ್ಕೆ ಚಾಲನೆ ನೀಡಿದರು.60 ಜನ ಸದಸ್ಯ ರನ್ನು ಒಳಗೊಂಡ ತಂಡವು ಬೆಳಿಗ್ಗೆ 6 ಗಂಟೆಗೆ ಗುರುಸ್ಮರಣೆ ಯೊಂದಿಗೆ ಶ್ರೀ ದೇವಿ ಭಜನಾ ಮಂದಿರ ಕೆಂಜಾರು-ಕರಂಬಾರು ಇಲ್ಲಿಂದ ಹೊರಟಿತು.6:45 ಕ್ಕೆ ಮುಲ್ಕಿ ತಲುಪಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದು, ಬೆಳಿಗ್ಗಿನ ಉಪಹಾರವನ್ನು ಮುಗಿಸಿ 8:45 ಕ್ಕೆ ಉಡುಪಿ ತಲುಪಿದೆವು. […]
Read More
29-07-2018, 3:32 AM
ಮಂಗಳೂರು : ಯುವವಾಹಿನಿಯ ಉಪನಿಬಂಧನೆಗ ಹಾಗೂ ಉಪನಿಯಮಗಳನ್ನು ಒಳಗೊಂಡ ಮಾರ್ಗದರ್ಶಿ ಪುಸ್ತಕವನ್ನು ಯುವವಾಹಿನಿಯ ಸಲಹೆಗಾರರಾದ ಬಿ.ತಮ್ಮಯ ಬಿಡುಗಡೆಗೊಳಿಸಿದರು. ದಿನಾಂಕ 29.07.2018 ರಂದು ನಡೆದ ಯುವವಾಹಿನಿ ಕೇಂದ್ರ ಸಮಿತಿಯ ಮಾಸಿಕ ಸಭೆಯಲ್ಲಿ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ನಿಯೋಜಿತ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷ ನರೆಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಮರೋಳಿ, ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ವಿಶ್ವನಾಥ್ ಕೆ. ಮತ್ತಿತರರು […]
Read More