03-10-2018, 3:26 PM
ಬಜಪೆ : ದಿನಾಂಕ 03.10.2018 ರಿಂಡ್ 05.10.2018 ರವರೆಗೆ ಯುವವಾಹಿನಿ (ರಿ ) ಬಜಪೆ ಘಟಕದ ವತಿಯಿಂದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 48 ಸದಸ್ಯರು ಈ ಒಂದು ಯಾತ್ರೆಯಲ್ಲಿ ಭಾಗವಹಿಸಿದ್ದರು. ಶಿವಗಿರಿ ಮಠದ ಪೂಜ್ಯ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾರಾಯಣ ಗುರುಗಳ ಮಹಾ ಸಮಾಧಿ, ಕೆಲವು ಐತಿಹಾಸಿಕ ಸ್ಥಳಗಳು, ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಮಣ್ಯ ದೇವಸ್ಥಾನ, ಅರವಿಪುರಂ ದೇವಸ್ತಾನ, ಕನ್ಯಾಕುಮಾರಿಯ ದೇವಿ ದರ್ಶನ, ಮಾರುತಮಲೈ ಬೆಟ್ಟ, ಕನ್ಯಾಕುಮಾರಿ, ಅನಂತ ಪದ್ಮನಾಭ ದರ್ಶನದೊಂದಿಗೆ ಯಾತ್ರೆ ಸಮಾಪನಗೊಂಡಿತು […]
Read More
23-09-2018, 3:26 PM
ಪಣಂಬೂರು : ಬ್ರಹ್ಮಶ್ರೀ ನಾರಾಯಣಗುರುವರ್ಯರ ಸಂದೇಶ ಜಗತ್ತಿನ ಕತ್ತಲೆಯನ್ನು ದೂರವಾಗಿಸುವ ಬೆಳಕಾಗಿದೆ. ಆದ್ದರಿಂದ ಅವರ ಸಂದೇಶಗಳನ್ನು ದೇಶದೆಲ್ಲೆಡೆ ಸಾರುವ ಕೆಲಸವಾಗಬೇಕಾಗಿದೆ. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಬೀಜಮಂತ್ರದಿಂದ ಎಲ್ಲಾ ಮತದ ಜನಮನವನ್ನು ಗೆದ್ದು ಆಧ್ಯಾತ್ಮಿಕ ಆಂದೋಲನಕ್ಕೆ ವೇದಿಕೆ ನಿರ್ವಿುಸಿದ ನಾರಾಯಣಗುರುಗಳು ವಿಶ್ವಮಾನವರಾಗಿ ಬೆಳಗುತ್ತಿದ್ದಾರೆ.ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು. ದಿನಾಂಕ 23.09.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ದಿ.ಲಿಂಗಪ್ಪ ಕರ್ಕೇರ ಸುಬ್ಬ ಮನೆ […]
Read More
23-09-2018, 7:40 AM
ಮಂಗಳೂರು : ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು , ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು. ಅವರು ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ […]
Read More
21-09-2018, 3:20 PM
ಮೂಡಬಿದಿರೆ : ಜಗತ್ತಿನ ಎಲ್ಲಾ ಜೀವಿಗಳನ್ನು ತನ್ನ ಆತ್ಮವೆಂದೇ ತಿಳಿ ಎಂಬ ಉಪನಿಷತ್ತಿನ ತತ್ವವನ್ನು ಅಕ್ಷರಶಃ ಪಾಲಿಸಿದವರು ನಾರಾಯಣ ಗುರುಗಳು. ನಾರಾಯಣ ಗುರುಗಳದ್ದು ಎಲ್ಲರನ್ನು ಒಳಗೊಳ್ಳುವ ಚಿಂತನೆ, ನಾರಾಯಣ ಗುರು ನಾಡುಕಂಡ ಅಪೂರ್ವ ದಾರ್ಶನಿಕ.ತನ್ನಲ್ಲೆ ದೇವನನ್ನು ಕಾಣುವ ಅದ್ವೆಯ್ತವಾದ ಅವರದ್ದು. ತನ್ನಲ್ಲೂ .ಇತರರಲ್ಲೂ ದೇವರನ್ನು ಕಾಣುವ ಮಹಾ ಗುಣ ಅವರದ್ದು . ಎಂದು ಲೇಖಕ ಅರವಿಂದ ಚೊಕ್ಕಾಡಿ ನುಡಿದರು. ಯುವವಾಹಿನಿ (ರಿ) ಮೂಡಬಿದಿರೆ ಘಟಕದಿಂದ ದಿನಾಂಕ 21:09:2018ನೇ ಶುಕ್ರವಾರದಂದು ಬೆಳಿಗ್ಗೆ 10:30ಕ್ಕೆ ಸರಿಯಾಗಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ […]
Read More
21-09-2018, 2:24 PM
ಪಡುಬಿದ್ರಿ : ಇಂದಿನ ಯುವಪೀಳಿಗೆಗೆ ನಮ್ಮ ಹಿರಿಯರು ಮೂಲ ನಂಬಿಕೆಗಳನ್ನು ತಿಳಿಸುವ ಅನಿವಾರ್ಯತೆಯಿದೆ. ಮೂಲ ನಂಬಿಕೆಗಳು ಮೂಢನಂಬಿಕೆಗಳಾಗದಂತೆ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ವೈ.ಎನ್. ಶೆಟ್ಟಿ ಹೇಳಿದರು. ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 21.09.2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ 90ನೇ ಪುಣ್ಯತಿಥಿಯ ಅಂಗವಾಗಿ ತುಳುನಾಡಿನ ಆಚರಣೆಯಲ್ಲಿ ನಂಬಿಕೆ- ಮೂಢನಂಬಿಕೆಗಳು ಎಂಬ ವಿಚಾರಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅವರು […]
Read More
16-09-2018, 3:17 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ದಿನಾಂಕ 16.09.2018 ರಂದು ನಡೆದ ಶಿವಗಿರಿಯಾತ್ರೆ ಯಶಸ್ವಿಯಾಗಿ ನಡೆಯಿತು . ಮಂಗಳೂರಿನಿಂದ ರೈಲಿನ ಮೂಲಕ ಹೊರಟ ಯುವವಾಹಿನಿಯ ಯಾತ್ರಾ ತಂಡವನ್ನು ವರ್ಕಳ ರೈಲು ನಿಲ್ದಾನದಲ್ಲಿ ಶಿವಗಿರಿ ಮಠದ ಪೂಜ್ಯ ಸತ್ಯಾನಂದತೀರ್ಥ ಶ್ರೀಗಳು ಸ್ವಾಗತಿಸುವ ಮೂಲಕ ಯಾತ್ರೆಯು ಆರಂಭವಾಯಿತು. ಸ್ವಾಮೀಜಿಯವರ ನೇತೃತ್ವದಲ್ಲಿ ಶಿವಗಿರಿಯಲ್ಲಿ ನ ನಾರಾಯಣಗುರುಗಳ ಮಹಾಸಮಾಧಿ ಮತ್ತು ಕೆಲ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದೆವು. ಆ ಬಳಿಕ ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಹ್ಮಣ್ಯ ದೇವಾಲಯ, ನಾರಾಯಣಗುರುಗಳೇ ತನ್ನ ಕಯ್ಯಾರೆ […]
Read More
16-09-2018, 3:22 AM
ಸುರತ್ಕಲ್ : ಬ್ರಹ್ಮ ಶ್ರೀ ನಾರಾಯಣಗುರುಗಳ ಜನನವಾದ ನಂತರ ನಮ್ಮ ಸಮಾಜ ತಲೆಯೆತ್ತಿ ನಡೆಯುವಂತಾಗಿದೆ ಹಾಗು ಭಜನೆ ಬೇಡ ಭೋಜನ ಬೇಕೆಂಬ ಈ ಸಮಾಜದಲ್ಲಿ ಭಜನಾ ಸ್ಪರ್ಧೆ ಯನ್ನು ಏರ್ಪಡಿಸಿ ಮಕ್ಕಳಿಗೆ ಧಾರ್ಮಿಕತೆ ತಿಳಿಯಪಡಿಸಿ ಸುರತ್ಕಲ್ ಘಟಕ ಉತ್ತಮ ಕಾರ್ಯವನ್ನು ಮಾಡಿರುತ್ತದೆ. ಹಿರಿದಾದುದನ್ನು ಪೂರ್ಣ ಪ್ರಮಾಣದಲ್ಲಿ ಪ್ರೀತಿಸುವುದೇ ಭಕ್ತಿ. ಎಲ್ಲವನ್ನೂ ನಡೆಸುತ್ತಿರುವ ಶಕ್ತಿಯೇ ಬೇರೆ ಇದೆ. ತಾನು ಆ ಶಕ್ತಿಗಿಂತ ಬೇರೆ ಹಾಗೂ ಕಿರಿಯ ಎಂದು ಮಾನವ ಅಂದುಕೊಂಡಾಗ ಆ ಅದ್ಭುತ, ಅಗಮ್ಯ ಚೈತನ್ಯಕ್ಕೆ ನಮ್ಮನ್ನು ತಾವು […]
Read More
09-09-2018, 3:54 PM
ಕಡಬ : ಯುವವಾಹಿನಿ (ರಿ) ಕಡಬ ಘಟಕದ ವತಿಯಿಂದ ದಿನಾಂಕ 09/09/2018 ನೇ ಆದಿತ್ಯವಾರದಂದು ಗ್ರಾಮ ಸಂಘಟನಾ ಸರಣಿ ಕಾರ್ಯಕ್ರಮ ‘ಗುರುಸ್ಪೂರ್ತಿ’ ಘಟಕದ ಸಂಘಟನಾ ಕಾರ್ಯದರ್ಶಿಯಾದ ಜಯಪ್ರಕಾಶ್ ದೋಳ ಇವರ ಮನೆಯಲ್ಲಿ ನಡೆಯಿತು. ಮನೆಯ ಯಜಮಾನಿ ಶ್ರೀಮತಿ ಕುಂಞಕ್ಕ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಮಾಜಿ ಅಧ್ಯಕ್ಷರು ಹಾಗು ಕಡಬ ಘಟಕದ ಸಲಹೆಗಾರರಾದ ಡಾ. ಸದಾನಂದ ಕುಂದರ್ ರವರು,ಬಿಲ್ಲವರು ಸಂಘಟಿತರಾಗಿ ಭಾಗವಹಿಸಿ ಮೊದಲು ಗ್ರಾಮ ಮಟ್ಟದಲ್ಲಿ […]
Read More
27-08-2018, 6:49 PM
ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164ನೇ ಜನ್ಮದಿನೋತ್ಸವವು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ 27-08-2018 ರಂದು ನಡೆಯಿತು. ಶ್ರೀ ನಾರಾಯಣ ಗುರುಮೂರ್ತಿಯ ಶೋಭಾಯಾತ್ರೆಯು ಯುವವಾಹಿನಿ (ರಿ) ಘಟಕದ ಮಾಜಿ ಕಾರ್ಯದರ್ಶಿ ಹಾಗೂ ಪ್ರಸ್ತುತ ಮಹಿಳಾ ಸಂಘಟನಾ ನಿರ್ದೇಶಕರಾದ ಶ್ರೀಮತಿ ಚಿತ್ರಾಕ್ಷಿ ಕೆ ಕೋಟ್ಯಾನ್ ಇವರ ಮನೆಯಿಂದ ಹೊರಡಿತು. ಮಹಾಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪಡುಬಿದ್ರಿ ಘಟಕದ ಸದಸ್ಯೆ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ ಕುಮಾರಿ ಶ್ರಾವ್ಯ ರವಿರಾಜ್ ಇವರನ್ನು ಸನ್ಮಾನಿಸಲಾಯಿತು. ಈ […]
Read More
27-08-2018, 6:45 PM
ಮಾಣಿ : ಯುವವಾಹಿನಿ (ರಿ.)ಮಾಣಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.ಇದರ ಉಧ್ಘಾಟನೆಯನ್ನು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಮತ ಶೆಟ್ಟಿÀ ಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವವಾಹಿನಿ(ರಿ.) ಮಾಣಿ ಘಟಕದ ಅಧ್ಯಕ್ಷರಾದ ರಾಜೇಶ್ ಪೂಜಾರಿ ಬಾಬನಕಟ್ಟೆ ಯವರು ವಹಿಸಿಕೊಂಡು ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು . ಬ್ರಹ್ಮಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ(ರಿ.) ಮಾಣಿ […]
Read More