13-09-2019, 8:54 AM
ಬ್ರಹ್ಮಶ್ರೀ ನಾರಾಯಣ ಗುರುಗಳ 165 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಕೂಳೂರು ಘಟಕದ ವತಿಯಿಂದ *ಚಿರಂತನ ವೃದ್ಧಾಶ್ರಮ* ಸುರತ್ಕಲ್ ಇಲ್ಲಿಗೆ ಭೇಟಿ ನೀಡಿ, ಅಲ್ಲಿನ ಹಿರಿಯ ಚೇತನರಿಗೆ ಸಂಜೆಯ ಉಪಹಾರದ ವ್ಯವಸ್ಥೆಯನ್ನು ಮಾಡಿದೆವು. ನಂತರ ಹಿರಿಯ ಚೇತನರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ಸದಸ್ಯರೆಲ್ಲರೂ ಸುಮಾರು 2 ಗಂಟೆಗಳ ಕಾಲ ಅವರೊಂದಿಗೆ ಬೆರೆತು, ಕುಣಿದಾಡಿ ಸಂತಸಪಟ್ಟೆವು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಪವಿತ್ರ ಅಮೀನ್,ಕಾರ್ಯದರ್ಶಿ ಮಧುಶ್ರೀ […]
Read More
07-06-2019, 1:20 PM
ಉಪ್ಪಿನಂಗಡಿ : ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿಯವರು ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶವನ್ನು ಎಲ್ಲಾ ಬಿಲ್ಲವ ಸಮಾಜದ ಬಂಧುಗಳು ತಿಳಿದುಕೊಂಡು ಅದನ್ನು ಅನುಸರಿಸಬೇಕಾಗಿ ಹೇಳಿದರು ಅವರು ಯುವವಾಹಿನಿ ಉಪ್ಪಿನಂಗಡಿ ಘಟಕ ದಿನಾಂಕ 07.06.2019 ರಂದು ಇಳಂತಿಲದಲ್ಲಿ ಆಯೋಜಿಸಿದ ಗುರುಸಂದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ, ಸಲಹೆಗಾರರಾದ ಡಾ. ಸದಾನಂದ ಕುಂದರ್, ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಪಡ್ಪು,ಕಾರ್ಯದರ್ಶಿ ಅನಿಲ್ ದಡ್ದು ಸೇರಿದಂತೆ ಮಾಜಿ ಅಧ್ಯಕ್ಷರುಗಳು, ಎಲ್ಲಾ […]
Read More
06-06-2019, 7:52 AM
ಬೆಳ್ತಂಗಡಿ:ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮಿಜಿ ಹೇಳಿದರು ಅವರು ಜೂ 6 ರಂದು ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಸುವರ್ಣ ಆರ್ಕೆಡ್ ನಲ್ಲಿ ನಡೆದ ಗುರು ಸಂದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು . ಕೇರಳದ ತೀಯಾ ಸಮಾಜ ದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ಜನಿಸಿದ […]
Read More
05-06-2019, 7:45 AM
ಉಜಿರೆ: ಸಮಾಜದ ಉದ್ಧಾರಕ್ಕಾಗಿ ಜನ್ಮತಾಳಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಹಿಂದುಳಿದ ಮತ್ತು ಶೋಷಿತ ವರ್ಗದವರಿಗೆ ಮಾನವ ರೂಪದಲ್ಲಿ ಬಂದ ದೇವರು ಇವರು ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಹೇಳಿದರು. ಅವರು ಜೂ.5 ರಂದು ಯುವವಾಹಿನಿ ಬೆಳ್ತಂಗಡಿ ಘಟಕದ ಉಜಿರೆ ಸಂಚಲನ ಸಮಿತಿ ಆಶ್ರಯದಲ್ಲಿ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಗುರುಪೂಜೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ತತ್ವ ಪ್ರಚಾರದ ಮೂಲಕ ಆಶೀರ್ವಚನ ನೀಡಿದರು. […]
Read More
14-02-2019, 1:54 PM
ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್ ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಹಾಗೂ ಯುವವಾಹಿನಿ(ರಿ) ಕೇಂದ್ರ ಸಮಿತಿ ಮತ್ತು ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರು ಪುರಭವನದಲ್ಲಿ ದಿನಾಂಕ 14. 2.2019 ರಂದು ಮಂಗಳೂರು ವಿ.ವಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜೀವನ […]
Read More
16-12-2018, 2:46 PM
ಕಡಬ : ಯುವವಾಹಿನಿ (ರಿ) ಕಡಬ ಘಟಕದ ವತಿಯಿಂದ ಹಳೆನೇರಂಕಿ ಗ್ರಾಮದ ನಾರಾಯಣ ಸಾಂತ್ಯ ಇವರ ಮನೆಯಲ್ಲಿ ದಿನಾಂಕ 16.12.2018 ರಂದು ನಡೆದ “ಗುರುಸ್ಪೂರ್ತಿ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಯೋಗೀಶ್ ಕುಮಾರ್ ಅಗತ್ತಾಡಿಯವರು, ಗ್ರಾಮ ಮಟ್ಟದಿಂದಲೆ ನಮ್ಮ ಸಮಾಜ ಬಾಂಧವರನ್ನು ನಾಯಕರಾಗಿಸುವಲ್ಲಿ ಪ್ರೋತ್ಸಾಹ ನೀಡೋಣ ಎಂದು ತಿಳಿಸಿದರು. ಮನೆಯ ಹಿರಿಯರಾದ ಬಾಳಪ್ಪ ಪೂಜಾರಿ ಸಾಂತ್ಯ ಕಾರ್ಯಕ್ರಮ ಉಧ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಆಲಂಕಾರು – ನಾರಾಯಣ ಗುರುಗಳ […]
Read More
18-11-2018, 3:24 PM
ಪಣಂಬೂರು:- ಹಿಂದುಳಿದ ವರ್ಗಗಳಿಗೆ ದೈರ್ಯ ತುಂಬಿ ಅವರ ಬದುಕಿನಲ್ಲಿ ಭರವಸೆ ಬೆಳಕು ಕಾಣಲು ಕಾರಣರಾಗಿದ್ದ ಬ್ರಹ್ಮಶ್ರೀನಾರಾಯಣಗುರುಗಳ ತತ್ವ ಸಂದೇಶ ಸಾರ್ವಕಾಲಿಕ ಮತ್ತು ಅಜರಾಮರವಾಗಿದ್ದು, ಇಂದಿನ ದಿನಗಳಲ್ಲಿ ತತ್ವ ಸಂದೇಶಗಳನ್ನು ಮನೆ ಮನೆಗೆ ತಲುಪಿಸಿ, ಯುವಕರಲ್ಲಿ ಜಾಗ್ರತಿಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ತತ್ವ ಸಂದೇಶಗಳನ್ನು ತಿಳಿಸಿ ಹೇಳುವ ಕಾರ್ಯಕ್ರಮಗಳನ್ನು ಸಂಯೋಜಿಸಿದ ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಹೇಳಿದರು. ದಿನಾಂಕ 18.11.2018ನೇ ರವಿವಾರದಂದು ಯುವವಾಹಿನಿ (ರಿ) […]
Read More
21-10-2018, 5:00 PM
ಕಂಕನಾಡಿ : 2018ರ ಅಕ್ಟೋಬರ್ 21ರಿಂದ24 ರವರೆಗೆ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಶಿವಗಿರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ ನಾರಾಯಣ ಗುರುಗಳ ತತ್ವಾದರ್ಶದಂತೆ ಜಾತಿ, ಮತ ಭೇದವಿಲ್ಲದೆ ಕಂಕನಾಡಿ ಘಟಕದ ಸದಸ್ಯರು ಹಾಗೂ ಇತರರು ಸೇರಿ ಒಟ್ಟು 53 ಸದಸ್ಯರು ಈ ಒಂದು ಯಾತ್ರೆಯಲ್ಲಿ ಭಾಗವಹಿಸಿದ್ದರು. ಶಿವಗಿರಿ ಮಠದ ಪೂಜ್ಯ ಸತ್ಯಾನಂದ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾರಾಯಣ ಗುರುಗಳ ಮಹಾ ಸಮಾಧಿ, ಕೆಲವು ಐತಿಹಾಸಿಕ ಸ್ಥಳಗಳು, ಗುರುಗಳ ಪೂರ್ವಾಶ್ರಮದ ಮನೆ, ಸುಬ್ರಮಣ್ಯ ದೇವಸ್ಥಾನ , ಅರವಿಪುರಂ ದೇವಸ್ಥಾನ […]
Read More
10-10-2018, 3:45 PM
ಪಣಂಬೂರು : ದೇವಸ್ಥಾನವನ್ನು ನಿರ್ಮಿಸಿ, ದೇವರನ್ನು ಪ್ರತಿಷ್ಟೆ ಮಾಡಿ ಶೋಷಿತ ಸಮಾಜಕ್ಕೆ ದೇವರನ್ನು ಕಾಣುವ ಭಾಗ್ಯವನ್ನು ಕರುಣಿಸಿ, ತಾನು ಗಳಿಸಿದ ಜ್ಞಾನದಿಂದ ಸಮಾಜ ಪರಿವರ್ತನೆಯನ್ನು ಮಾಡಿದ ಸಮಾಜ ಸುದಾರಕ, ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳು. ಅವರ ತತ್ವಾದರ್ಶಗಳು ಅಂದಿಗೂ, ಇಂದಿಗೂ, ಮುಂದೆಯೂ ಅಳಿಯದ ಸಂದೇಶವಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು. ದಿನಾಂಕ 21.10.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ಕುಳಾಯಿ ಮೂಡುಬೆಟ್ಟು ತುಕಾರಾಮ ಕರ್ಕೇರರವರ ಮನೆಯಲ್ಲಿ ಜರಗಿದ ಬಿಲ್ಲವ ಸಮಾಜ […]
Read More
07-10-2018, 3:41 PM
ಪಣಂಬೂರು : ಬ್ರಹ್ಮಶ್ರೀ ನಾರಾಯಣಗುರುಗಳು ಸನಾತನ ಪರಂಪರೆ, ಧ್ಯಾನ, ತಪಸ್ಸನ್ನು ಪ್ರತಿಪಾದಿಸಿದ್ದರು. ಈ ಮೂಲಕ ಸಮಾಜದಲ್ಲಿ ಆ ಕಾಲದಲ್ಲಿದ್ದ ಅಸ್ಪ್ರಶ್ಯತೆ, ಅಂಧಶ್ರದ್ಧೆ ಮೊದಲಾದ ಸಮಸ್ಯೆಗಳ ಬಗ್ಗೆ ಕ್ರಾಂತಿಕಾರಿ ಬದಲಾವಣೆ ತರಲು ಯತ್ನಿಸಿದ್ದರು. ತಪಸ್ಸನ್ನು ಆಚರಿಸಿ ಭಗವತ್ ಸಾಕ್ಷಾತ್ಕಾರವನ್ನು ಪಡೆದು ಸಮಾಜ ಪರಿವರ್ತನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದರು ಎಂದು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ ತಿಳಿಸಿದರು. ದಿನಾಂಕ 07.10.2018 ರಂದು ಯುವವಾಹಿನಿ (ರಿ) ಪಣಂಬೂರು ಘಟಕದ ಆಶ್ರಯದಲ್ಲಿ ಎಂ ಟಿ ಸಾಲ್ಯಾನ್ […]
Read More