18-02-2024, 12:05 PM
ವಿಟ್ಲ: ಯುವವಾಹಿನಿ (ರಿ.) ವಿಟ್ಲ ಘಟಕ ಇದರ ನೇತೃತ್ವದಲ್ಲಿ ಶ್ರೀ ಮಲರಾಯ -ಮೂವರ್ ದೈವಂಗಳ ದೈವಸ್ಥಾನ ಮಾಡತಡ್ಕ ಇದರ ಕಾಲಾವದಿ ನೇಮೋತ್ಸವದ ಪ್ರಯುಕ್ತ ದಿನಾಂಕ 18-02-2024 ಆದಿತ್ಯವಾರ ಬೆಳಿಗ್ಗೆ 8 ರಿಂದ ಮದ್ಯಾಹ್ನ 1ರ ವರೆಗೆ ವಿಟ್ಲ ಘಟಕದ ಸದಸ್ಯರಿಂದ ಶ್ರಮದಾನ ನಡೆಯಿತು.ಈ ಸಂದರ್ಭದಲ್ಲಿ ಯುವವಾಹಿನಿ ವಿಟ್ಲ ಘಟಕದ ಕಾರ್ಯದರ್ಶಿ ಶೋಭಾ, ಕೋಶಾಧಿಕಾರಿ ನಿರ್ಮಲ, ಪ್ರಚಾರ ನಿರ್ದೇಶಕರಾದ ಶ್ರೇಯಸ್ ಪೂಜಾರಿ ಹಾಗೂ ಸದಸ್ಯರು ಉಪಸ್ಥಿತರಿದರು.
Read More
21-01-2024, 10:00 AM
ವಿಟ್ಲ : ಶ್ರೀಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ದಿನಾಂಕ 2024ನೇ ಜನವರಿ 21 ರಂದು ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ಯುವವಾಹಿನಿ (ರಿ ) ವಿಟ್ಲ ಘಟಕದ ಸುಮಾರು 20ಕ್ಕೂ ಹೆಚ್ಚು ಸದಸ್ಯರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
Read More
03-04-2022, 4:10 PM
ಯುವವಾಹಿನಿ (ರಿ.) ವಿಟ್ಲ ಘಟಕದ ಆಶ್ರಯದಲ್ಲಿ ಬ್ಲಡ್ ಬ್ಯಾಂಕ್ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ದಿನಾಂಕ 03-04-2022 ರಂದು ವಿಟ್ಲದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ಯಶವಂತ್ ಎನ್. ರವರು ವಹಿಸಿದ್ದರು. ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರಾದ ಡಾ.ಗೀತಪ್ರಕಾಶ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿ ಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ […]
Read More
28-11-2021, 8:06 AM
ವಿಟ್ಲ :- ಇಂದು ಬಿಲ್ಲವ ಸಮಾಜವು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದೆ ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮುಂದುವರೆದಾಗ ಲಭಿಸುವ ಆರ್ಥಿಕ ಶಕ್ತಿ, ಸಾಮರ್ಥ್ಯವನ್ನು ನಮಗಿಂತ ದುರ್ಬಲರಾಗಿರುವ, ಆಸಕ್ತರ ಕೈಹಿಡಿದೆತ್ತಲು ಬಳಸಿದಾಗ ಬಿಲ್ಲವರು ಬಲ್ಲವರಾಗುತ್ತಾರೆ, ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಸಮಾಜದಲ್ಲಿ ಪ್ರಬುದ್ಧರಾಗಲು ಸಾಧ್ಯ, ಇಂದು ನಮ್ಮ ಯುವಶಕ್ತಿಯನ್ನು ದೇಶದ ಅತ್ಯುತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸಬೇಕೆಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ಹೇಳಿದರು. ಅವರು ವಿಟ್ಲ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ದೇಯಿ ಬೈದೆತಿ […]
Read More