31-07-2016, 6:00 AM
ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಕೂಡಾ ತನ್ನ ಆಸಕ್ತಿಯ ಕ್ಷೇತ್ರ ಛಾಯಾಗ್ರಹಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ 4 ಚಿನ್ನದ ಪದಕ ಸಹಿತ 7 ಪ್ರಶಸ್ತಿಗಳನ್ನು ಗಳಿಸಿ ಸಾಧನೆಗೆ ಇದಿರಿಲ್ಲ ಎಂಬಂತಹ ವಿಶೇಷ ಸ್ಥಾನಮಾನ ಗಳಿಸಿದ ಖ್ಯಾತ ಸಾಮಾಜಿಕ ಧುರೀಣ ಶ್ರೀ ಹರಿಕೃಷ್ಣ ಬಂಟ್ವಾಳ್, ಶಶಿಕಲಾ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ನಿತ್ಯಪ್ರಕಾಶ್ ಎಚ್. ಎಸ್. ಬಂಟ್ವಾಳ್‌ರವರನ್ನು ಯುವ ಸಾಧನಾ ಪುರಸ್ಕಾರಕ್ಕೆ ಆಯ್ಕೆ ಮಾಡಲು ಯುವವಾಹಿನಿ ಸಂಸ್ಥೆ ಅತ್ಯಂತ ಹೆಮ್ಮೆ ಪಡುತ್ತದೆ. ಓರ್ವ ಹವ್ಯಾಸಿ ವಿಶೇಷ ಛಾಯಾಗ್ರಹಣ ಕ್ಷೇತ್ರದಲ್ಲಿ […]
Read More
31-07-2016, 5:56 AM
ಬಿಲ್ಲವ ಸಮಾಜದ ಶೈಕ್ಷಣಿಕ ಪ್ರಗತಿಗೆ ಯುವವಾಹಿನಿಯು ಶ್ರಮಿಸುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಪ್ರತಿಭೆಯೊಂದು ಕಿರಿ ವಯಸ್ಸಿನಲ್ಲಿ ಹಿರಿಯರು ಮಾಡಲಾಗದ ಸಾಧನೆಗೈದಿದ್ದಾರೆ. ಸಮಾಜ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರು ಬೇರಾರೂ ಅಲ್ಲ. ಪಿ.ಬಾಲಕೃಷ್ಣ ಪೂಜಾರಿ-ಮಲ್ಲಿಕಾ ಬಿ. ಪೂಜಾರಿ ದಂಪತಿಗಳ ಸುಪುತ್ರಿ ಮನಿಷಾ ಬಿ. ಪೂಜಾರಿ. ಕಾಲೇಜು ವಿದ್ಯಾಭ್ಯಾಸ ಹಂತದಿಂದ ಕಲಿಕೆಯ ಮುಂಚೂಣಿಯಲ್ಲಿದ್ದು ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜಿಗೆ ದ್ವಿತೀಯ ಶ್ರೇಷ್ಠರಾಗಿ ಸಾಧನೆಗೈದ ಇವರು ತನ್ನ ಕಲಿಕೆಯಾದ್ಯಂತ ಅತ್ಯುನ್ನತ ಶ್ರೇಣಿಯ ಗಳಿಕೆ ಸಾಧಿಸಿರುವುದು ಉಲ್ಲೇಖನೀಯ. ಬಿ.ಕಾಂ ಪದವಿಯಲ್ಲಿ MGM College ಉಡುಪಿಯ […]
Read More
31-07-2016, 5:52 AM
ಕಟಪಾಡಿ ಶ್ರೀ ರಮೇಶ್ ಕೋಟ್ಯಾನ್ ಹಾಗೂ ಇಂದಿರಾ ಆರ್. ಕೋಟ್ಯಾನ್ ದಂಪತಿಗಳ ಹೆಮ್ಮೆಯ ಸುಪುತ್ರ ಶ್ರೀ ರಕ್ಷಿತ್ ಆರ್. ಕೋಟ್ಯಾನ್ ಓರ್ವ ಸತತ ಪರಿಶ್ರಮದ ಮೂಲಕ ದೇಹದಾರ್ಡ್ಯತೆಯ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಯುವಕ. ಶಿರ್ವದ ಸೈಂಟ್ ಮೇರಿಸ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಪ್ರಸ್ತುತ ಜಿಲ್ಲೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜು, ಮೂಡಬಿದ್ರಿಯಲ್ಲಿ ತಮ್ಮ ಪದವಿ ಶಿಕ್ಷಣವನ್ನು ಮುಂದುವರಿಸುತ್ತಿರುವ ರಕ್ಷಿತ್ ಶಿಕ್ಷಣದೊಂದಿಗೆ ಕ್ರೀಡಾ ಸಾಧನೆಯ ಮೇರು ಶಿಖರದತ್ತ ಧಾವಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. […]
Read More
31-07-2016, 5:47 AM
ಪ್ರತಿಭೆಗೆ ಸರಹದ್ದುಗಳಿಲ್ಲ-ಕಾರ್ಯಕ್ಷೇತ್ರಗಳೆಂಬ ಇತಿಮಿತಿ ಇರುವುದಿಲ್ಲ ಎಂಬ ಮಾತಿಗೆ ಸ್ಪಷ್ಟ ನಿದರ್ಶನ-ಬಜಪೆಯ ಶ್ರೀ ಪಿ.ಮೋಹನ್ ಕುಮಾರ್ ಹಾಗೂ ಕನಕಾ ಎಂ ದಂಪತಿಗಳ ಸುಪುತ್ರಿ ಕು| ಅಕ್ಷತಾ. ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ವಾಣಿಜ್ಯ ಕ್ಷೇತ್ರದತ್ತ ಮುಖ ಮಾಡಿದ ಈಕೆ ಬಿ.ಕಾಂ ಪದವಿಯನ್ನು ಮುಗಿಸಿ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ (ಮಾನವ ಸಂಪನ್ಮೂಲ) ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕಲೆಯಲ್ಲಿ ದಿ| ವಿ.ಪಿ.ಕಾರಂತ, ಶ್ರೀ ಪಿ. ಮೋಹನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವೈವಿಧ್ಯಮಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕರ್ನಾಟಕ ಸಂಗೀತದತ್ತ ಒಲವು […]
Read More
31-07-2016, 3:59 AM
ಬಂಟ್ವಾಳ ಕಸ್ಬಾ ಗ್ರಾಮದ ಭೋಜ ಪೂಜಾರಿ ಮತ್ತು ವನಿತಾ ದಂಪತಿಗಳ ಸುಪುತ್ರ ಶಶಾಂತ್ ಬಿ. ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಗಣಿತ ಮತ್ತು ಸಂಸ್ಕೃತದಲ್ಲಿ 100 ಅಂಕಗಳನ್ನು ಪಡೆದು 625 ಕ್ಕೆ 614 (98.24%) ಅಂಕ ಗಳಿಸಿರುವುದು ಶ್ಲಾಘನೀಯ. ಬಿಡುವಿನ ವೇಳೆಯಲ್ಲಿ ತಾನೇ ದುಡಿದು ಶಾಲಾ ಶುಲ್ಕವನ್ನು ಭರಿಸಿ ಹೆತ್ತವರಿಗೆ ಹೊರೆಯಾಗದೆ ಎಲ್ಲರ ಪ್ರೀತಿ ಸಂಪಾದಿಸಿದ್ದಾರೆ. ತಾನೇ ನಾಟಕ ರಚಿಸಿ, ಅಭಿನಯಿಸಿದ ಉತ್ತಮ ರಂಗ ಕಲಾವಿದ. ಶಾಲಾ ದಿನಗಳಲ್ಲೇ ನಾಯಕತ್ವ ಗುಣ […]
Read More
31-07-2016, 3:55 AM
ಶ್ರೀಮತಿ ಭಾರತಿ ಹಾಗೂ ಶ್ರೀ ಉಮಾನಾಥ ದಂಪತಿಗಳಿಗೆ ಉತ್ತಮ ಹೆಮ್ಮೆ ಪಡತಕ್ಕೆ ಸಾಧನೆಯ ಕುವರಿ ನಿಧಿಶ್ರೀಯ ಬಗ್ಗೆ ಮತ್ತು ಅವಳ ಸಾಧನೆಯ ಬಗ್ಗೆ ಅರಿವಿರಲಿಕ್ಕಿಲ್ಲ ತಮ್ಮ ಜೀವನದ ಹಾದಿಯಲ್ಲಿ ತಮ್ಮ ಮಗಳು ಒಂದುದಿನ ಸ್ವಪ್ರತಿಭೆಯಿಂದ ಜನ ಮನ್ನಣೆಯನ್ನು ಗಳಿಸಿ ಕೊಡಲಿದ್ದಾಳೆ ಎಂಬ ಅರಿವಿರಲಿಕ್ಕಿಲ್ಲ. ಕಾರಣ ಅವರಿದ್ದದ್ದು 62 ತೋಕೂರು ಜೋಕಟ್ಟೆ ಎಂಬ ಸಣ್ಣ ಊರಿನಲ್ಲಿ. ಸಾಮಾನ್ಯವಾಗಿ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಬದುಕಿನ ಸೂಕ್ಷತೆಗಳ ಅರಿವಿರುತ್ತದೆ. ಜೀವನದ ಕಷ್ಟ ಕಾರ್ಪಣ್ಯಗಳ ಸರಿಯಾದ ದೃಷ್ಟಿಕೋನ ಇರುತ್ತದೆ ಇವರ ಬಾಳಿನಲ್ಲೂ ನಡೆದದ್ದು […]
Read More
17-07-2016, 8:26 AM
ಯುವವಾಹಿನಿ (ರಿ) ಉಡುಪಿ ಘಟಕದ ಇದರ ನೇತೃತ್ವದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ತಾ. 17-7-2016 ರಂದು ಶ್ರೀ ಜಗನ್ನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜೇಂದ್ರ ಕುಮಾರ್ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಉಡುಪಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಯುವವಾಹಿನಿ(ರಿ) ಮಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್, ಯುವ ಉದ್ಯಮಿಗಳಾದ ಜಗನ್ನಾಥ ಪೂಜಾರಿ ಮತ್ತು ಲ|ಶಾಲಿನಿ ಡಿ.ಬಂಗೇರ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 19 ಮಕ್ಕಳಿಗೆ ರೂ. 65000 ದಷ್ಟು ವಿದ್ಯಾನಿಧಿಯನ್ನು ವಿತರಿಸಲಾಯಿತು. ವಿದ್ಯಾನಿಧಿ ಸಂಚಾಲಕರಾದ ರಘುನಾಥ್ […]
Read More