08-04-2018, 4:56 PM
ಸಖ್ಯ ಸುಖಕೆ ಪರಿಧಿ ಇದೆಯೇ? ಅಂತರಂಗದಲಿ ತಣ್ಣಗೆ ಹರಿದಾಡಿ ಮುದಗೊಳಿಸಿ,ಹಿತಾನುಭವ ಜೊತೆಜೊತೆಗೆ ಭದ್ರತೆಯ ಭಾವ ಉಣಿಸಿ ಸಮೃದ್ಧಗೊಳಿಸುವುದು.ಅಂತೇ ಸಖಿ- ಸಖ ಪದಗಳು ಪಂಚೇಂದ್ರಿಯಗಳ ಮುಟ್ಟಿದರೆ ಉಲ್ಲಾಸ. ತಂಗಾಳಿ ಸ್ಪರ್ಶಿಸಿದಂತೆ. ಈ ಭಾವ ನೆನಕೆಗೆ ದಿನಾಂಕ08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ನೆನಪಿನಲ್ಲಿ ” ಸಖೀ ಸಂವಾದ” ಅರಳಿಸುವ ಜವಾಬ್ದಾರಿಯನ್ನ ನಿಭಾಯಿಸಿತ್ತು. ಹೆಸರಿನಲ್ಲೇ ಹೂವಿನಲಿ ಅಡಗಿಹ ಗಂಧದ ಸೆಳೆತ […]
Read More
08-04-2018, 2:20 AM
ಉಡುಪಿ : ಬದುಕಿನ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ ಹಾಗೂ ತನ್ನ ಸಾಧನೆಯ ಹಿಂದೆ ಕಷ್ಟದ ದಿನಗಳಿದ್ದವು ಅವೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವೀಯಾಗಿದ್ದೇನೆ ಎಂದು ಶಾಲಾ ಮಕ್ಕಳ ಮಹಿಳಾ ವಾಹನ ಚಾಲಕಿ ಸುಮತಿ ತಿಳಿಸಿದರು. ಅವರು ದಿನಾಂಕ 08.04.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ಜರುಗಿದ ತೊಟ್ಟಿಲು ತೂಗಿದ ಕೈ ಎಲ್ಲದಕ್ಕೂ ಸೈ ಎಂದು ತೋರಿಸಿಕೊಟ್ಟ ಸಾಧಕಿಯರೊಂದಿಗೆ ಸಖೀ […]
Read More
18-02-2018, 2:17 PM
ಉಡುಪಿ: ಪ್ರಸ್ತುತ ಇರುವ ಸ್ಥಿತಿಯಿಂದ ಉತ್ತಮ ಸ್ಥಿತಿಯತ್ತ ಕೊಂಡೋಯ್ಯುವುದೇ ಸಂಸ್ಕಾರ, ಮಾನವ ಅರಿಷಡ್ವರ್ಗಗಳನ್ನು ತ್ಯಜಿಸಿದಾಗ ಮಾಧವನಾಗುತ್ತಾನೆ, ಇದಕ್ಕೆ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಇಂತಹ ಕಾರ್ಯಾಗಾರವನ್ನು ನಿರಂತರ ನಡೆಸುತ್ತಿದೆ ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ತಿಳಿಸಿದರು. ಅವರು ದಿನಾಂಕ 18.02.2018 ನೇ ಆದಿತ್ಯವಾರ ಉಡುಪಿ ಬಲೈಪಾದೆ ನಿತ್ಯಾನಂದ ಆರ್ಕೆಡ್ ನಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಬಹು […]
Read More
12-11-2017, 4:51 AM
ಯುವವಾಹಿನಿ (ರಿ) ಉಡುಪಿ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೆಮ್ತೂರು,ಸಾಧನಾ ಯುವಕ ಮಂಡಲ ಹಾಗೂ ಸಾಧನಾ ಯುವತಿ ಮಂಡಲ ಇದರ ಜಂಟಿ ಆಶ್ರಯದಲ್ಲಿ, ದಿನಾಂಕ 12.11.2017 ರಂದು ಸೂಪರ್ ಸ್ಪೆಷ್ಯಾಲಿಟಿ ಆರೋಗ್ಯ ಶಿಬಿರವು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಕೆಮ್ತೂರು, ಉಡುಪಿ ಇಲ್ಲಿ ಜರುಗಿತು . ಯುವವಾಹಿನಿ(ರಿ) ಉಡುಪಿ ಘಟಕವು ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಿಬಿರವನ್ನು ದೀಪ ಬೆಳಗುವುದರ ಮೂಲಕ […]
Read More
01-11-2017, 8:58 AM
ಯುವವಾಹಿನಿ ಸಂಸ್ಥೆಯ ಮೂವತ್ತು ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಪ್ರದಾನಿಸಿದರು. ಸಮಾಜದಲ್ಲಿ ತೀರಾ ಹಿಂದುಳಿದಿರುವ ೯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಚಿಮಣಿ ಬೆಳಕಿನ ಮನೆಗಳಿಗೆ ವಿದ್ಯುತ್ ಭಾಗ್ಯ, ಗ್ರಾಮಗ್ರಾಮಗಳಲ್ಲಿ ಆರೋಗ್ಯ ಶಿಬಿರ, ನೂರಕ್ಕೂ ಅಧಿಕ […]
Read More
03-10-2017, 8:31 AM
ಯುವವಾಹಿನಿ (ರಿ) ಉಡುಪಿ ಘಟಕದ ಸದಸ್ಯರ ಹಾಗೂ ಕುಟುಂಬಸ್ಥರ ಉತ್ತರ ಕರ್ನಾಟಕದ ಜಗತ್ಪ್ರಸಿದ್ಧ ಐತಿಹಾಸಿಕ ಸ್ಥಳಗಳಿಗೆ ದಿನಾಂಕ 30.09.2017 ರಿಂದ 03.10.2017 ರ ವರಗೆ ಪ್ರವಾಸ ಜರುಗಿತು. ಬಿಜಾಪುರದ ಗೊಲ್ ಗುಂಬಜ಼್ , ಆಲಮಟ್ಟಿ ಅಣೆಕಟ್ಟು, , ಕೂಡಲ ಸಂಗಮ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮುಂತಾದ ಐತಿಹಾಸಿಕ ಸ್ಥಳಗಳಿಗೆ 49 ಯುವವಾಹಿನಿ ಕುಟುಂಬಸ್ಥರ ಪ್ರವಾಸವು ಯಶಸ್ವಿಯಾಗಿ ಸಂಪನ್ನಗೊಂಡಿತು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ರಮೇಶ್ ಕುಮಾರ್, ಉಪಾಧ್ಯಕ್ಷರಾದ ಅಶೋಕ್ ಕೋಟ್ಯಾನ್, ಸಂಚಾಲಕರಾದ ಜಗದೀಶ್ ಕೋಟ್ಯಾನ್ ಪ್ರವಾಸದ ನೇತ್ರತ್ವ […]
Read More
02-07-2017, 5:13 AM
IAS, IPS ಮುಂತಾದ ಉನ್ನತ ಹುದ್ದೆಗಳ ಬಗ್ಗೆ ಆಸಕ್ತಿ ತೋರಿಸಿ, ಕೇವಲ ಡಾಕ್ಟರ್ ,ಇಂಜಿನಿಯರಿಂಗ್ ನಂತಹ ಹುದ್ದೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ, ಈ ದೇಶದ ಉನ್ನತ ಅಧಿಕಾರಿಗಳಾಗಿ ಸಮಾಜದ ಋಣ ತೀರಿಸಿ ಎಂದು ಉದ್ಯಮಿ, ಬಿಲ್ಲವ ಸಮಾಜದ ಮುಖಂಡರಾದ ಶ್ರೀ ಬಿ.ಎನ್.ಶಂಕರ ಪೂಜಾರಿ ತಿಳಿಸಿದರು. ಅವರು ದಿನಾಂಕ 02.07.2017 ನೇ ಆದಿತ್ಯವಾರ ಉಡುಪಿಯ ಕುತ್ಪಾಡಿ ,ಬಲಾಯಿಪಾದೆ ನಿತ್ಯಾನಂದ ಆರ್ಕೆಡ್ ಇಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆಶ್ರಯದಲ್ಲಿ ಜರುಗಿದ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. SSLC […]
Read More
07-05-2017, 5:18 AM
ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಅಂತರ್ ಘಟಕ ಹಗ್ಗಜಗ್ಗಾಟ ಸ್ಪರ್ಧೆ ಜರುಗಿತು. ಈ ಕ್ರೀಡಾಕೂಟದಲ್ಲಿ ಒಟ್ಟು 16 ಯುವವಾಹಿನಿ ತಂಡಗಳು ಭಾಗವಹಿಸಿದ್ದವು ಪುರುಷರ ವಿಭಾಗದಲ್ಲಿ ಯುವವಾಹಿನಿ ಕಟಪಾಡಿ ಪ್ರಥಮ, ಬಂಟ್ವಾಳ ದ್ವಿತೀಯ, ಪುತ್ತೂರು ತೃತೀಯ ಹಾಗೂ ಮಹಿಳಾ ವಿಭಾಗದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಪ್ರಥಮ, ಉಡುಪಿ ದ್ವಿತೀಯ, ಬಂಟ್ವಾಳ ತೃತೀಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಬಹುಮಾನ ವಿಜೇತ ತಂಡಗಳು […]
Read More
07-05-2017, 5:08 AM
ಯುವವಾಹಿನಿಯು ಬಿಲ್ಲವ ಸಮಾಜದ ಕಣ್ಣುಗಳು, ವಜ್ರದಂತೆ ಬಲಿಷ್ಠವಾಗಿರುವ ಬಿಲ್ಲವ ಸಮಾಜವನ್ನು ಪರಸ್ಪರ ಪ್ರೀತಿ, ವಿಶ್ವಾಸ, ಸಂಪರ್ಕದ ಮೂಲಕ ಹೊಳಪು ನೀಡುವ ಕಾರ್ಯವನ್ನು ಯುವವಾಹಿನಿ ಮಾಡುತ್ತಿದೆ ಎಂದು ರಾಜ್ಯಪ್ರಶಸ್ತಿ ಪುರಸ್ಕ್ರತ ಚಲನಚಿತ್ರ ನಟ,ನಿರ್ಮಾಪಕ ರಾಜಶೇಖರ ಕೋಟ್ಯಾನ್ ತಿಳಿಸಿದರು. ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ಯುವಕ್ರೀಡಾ ಸಂಗಮ 2017 […]
Read More
07-05-2017, 5:00 AM
ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ,ನೆಮ್ಮದಿಯನ್ನು ಬಲಪಡಿಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು, ಈ ನಿಟ್ಟಿನಲ್ಲಿ ಯುವಕರನ್ನು ಕ್ರೀಡೆಯ ಮೂಲಕ ಸಂಘಟಿಸುವ ಯುವವಾಹಿನಿಯ ಕಾರ್ಯ ಶ್ಲಾಘನೀಯವಾದುದು ಎಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅದ್ಯಕ್ಷರಾದ ಶ್ರೀ ಅಶೋಕ್ ಎಂ.ಸುವರ್ಣ ತಿಳಿಸಿದರು. ಅವರು ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ […]
Read More