19-02-2017, 11:25 AM
ದೇಯಿ ಬೈದ್ಯೆತಿ ಕೋಟಿ ಚಿನ್ನಯ್ಯ ಮೂಲ ಸ್ಥಾನ ಗೆಜ್ಜೆಗಿರಿ ನನ್ನ ಬಿತ್ತಿಲ್ನಲ್ಲಿ 2017 ರ ಫೆಬ್ರವರಿ 19 ರಂದು ಶಿಲಾನ್ಯಾಸ ಕಾರ್ಯಕ್ರಮ ಪೂರ್ವಭಾವಿಯಾಗಿ ಅಂದು ಬೆಳಿಗ್ಗೆ ಪುತ್ತೂರಿನಿಂದ ಆರಂಭಗೊಂಡ ವಾಹನ ಜಾಥಾವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಮರೋಳಿ ಉದ್ಘಾಟಿಸಿದರು. ಉಡುಪಿ, ದಕ್ಷಿಣ ಕನ್ನಡ, ಹಾಗೂ ಕಾಸರಗೋಡು ಭಾಗಗಳಿಂದ ಬಂದಿದ್ದ ವಾಹನ ಜಾಥಾ ಪುತ್ತೂರು ದರ್ಬೆ ಬೈಪಾಸ್ ಜಂಕ್ಷನ್ ಇಲ್ಲಿ ಸಮಾವೇಶಗೊಂಡಿತು. ಅಲ್ಲಿಂದ ಒಟ್ಟಾಗಿ ಗೆಜ್ಜೆಗಿರಿಗೆ ತೆರಳುವ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು. ಐದು ಶತಮಾನಗಳ ಇತಿಹಾಸದ […]
Read More
22-01-2017, 12:38 PM
ದಿನಾಂಕ 22-1-2017 ರಂದು ಯುವವಾಹಿನಿ (ರಿ) ಪುತ್ತೂರು ಘಟಕದ ನೇತೃತ್ವದಲ್ಲಿ ಕೇಂದ್ರ ಸಮಿತಿಯ ಸಹಯೋಗದಲ್ಲಿ ನರಿಮೊಗರು ಗ್ರಾಮ ಸಮಿತಿ ಉದ್ಘಾಟನಾ ಸಮಾರಂಭ ಮತ್ತು ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಪುತ್ತೂರಿನ ಯುವಕರನ್ನೊಳಗೊಂಡ ಯುವವಾಹಿನಿಯು ಇಂದು ಮನೆ ಮಾತಾಗಿದ್ದರೆ ಅದು ಯುವವಾಹಿನಿ ಸದಸ್ಯರಲ್ಲಿನ ಸ್ವಾರ್ಥ ರಹಿತ ಸ್ವಾಭಿಮಾನಿ ಬದುಕಿನಿಂದ ಮಾತ್ರ ಸಾಧ್ಯವಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ನರಿಮೊಗರು ಗ್ರಾಮ […]
Read More
16-11-2016, 11:29 AM
ಪುತ್ತೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯ 161 ನೇ ಜನ್ಮದಿನಾಚರಣೆಯ ಪ್ರಯುಕ್ತ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಉಚಿತವಾಗಿ 6 ಫ್ಯಾನ್‌ಗಳನ್ನು 16-09-2016 ರಂದು ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು. ದಿನಾಂಕ 3-11-2016 ರಂದು ಪುತ್ತೂರು ಘಟಕದ ವತಿಯಿಂದ ಅಪಘಾತದಲ್ಲಿ ಕಾಲು ಮುರಿತಕ್ಕೊಳಗಾದ ಯಕ್ಷಿತ್‌ನ ಮನೆಗೆ ತೆರಳಿ ರೂ. 5,000/-ದ ಮೊತ್ತದ ಚೆಕ್ಕನ್ನು ವಿತರಿಸುತ್ತಿರುವುದು. ಈ ಸಂದರ್ಭದಲ್ಲಿ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ನಿಕಟಪೂರ್ವ ಅಧ್ಯಕ್ಷ ಶಶಿಧರ ಕಿನ್ನಿಮಜಲು, ಕಾರ್ಯದರ್ಶಿ ಉದಯ ಕೋಲಾಡಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, […]
Read More
01-11-2016, 5:50 AM
ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಕೋಲಾಡಿ ಬಟನ್ಸ್ ಮಾಲಕ ಉದಯ ಕುಮಾರ್‌ರವರು ಕೊಡುಗೆಯಾಗಿ ನೀಡಿದ ಸುಮಾರು 18,000 ರೂ. ವೆಚ್ಚದ ಟೆಬಲ್‌ಗಳನ್ನು ಪುತ್ತೂರು ಬಿಲ್ಲವ ಸಂಘಕ್ಕೆ ಹಸ್ತಾಂತರಿಸಲಾಯಿತು.
Read More
24-07-2016, 9:18 AM
ವಿದ್ಯೆ, ಉದ್ಯೋಗ ಮತ್ತು ಸಂಪರ್ಕವೆಂಬ ನಾರಾಯಣ ಗುರುಗಳ ತತ್ವದಂತೆ ಯುವವಾಹಿನಿ ಸದಸ್ಯರು ಕೆಲಸ ಮಾಡುತ್ತಿದ್ದು ಜನರ ಅನಿಸಿಕೆ ಹಾಗೂ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಯುವವಾಹಿನಿ ಯಂತೆ ಪ್ರತಿಯೊಂದು ಸಂಘಟನೆಗಳು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಂಘಟನೆಗಳಿಗೆ ನಿಜವಾದ ಅರ್ಥ ಹಾಗೂ ಬೆಲೆ ಸಿಗುತ್ತದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಸಂತೋಷ್ ಕುಮಾರ್‌ರವರು ಹೇಳಿದರು. ಅವರು ಜು. 24 ರಂದು ಬಪ್ಪಳಿಗೆ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ 2016-17 ನೇ ಸಾಲಿನ ಯುವವಾಹಿನಿ ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ […]
Read More