17-06-2018, 4:18 PM
ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕದ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯು ಪುತ್ತೂರು ಬಿಲ್ಲವ ಸಂಘದ ಸಭಾಂಗಣದಲ್ಲಿ ದಿನಾಂಕ 17.06.2018 ನೇ ಆದಿತ್ಯವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ಘಟಕದ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ ಮಾತನಾಡಿ ಕಳೆದ ಒಂದು ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಸತ್ಯಜಿತ್ ಅಮ್ಮುಂಜೆ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಚುನಾವಣಾ ಅಧಿಕಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ […]
Read More
17-06-2018, 1:51 PM
ಪುತ್ತೂರು: ಯುವವಾಹಿನಿ (ರಿ) ಪುತ್ತೂರು ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಹರೀಶ್ ಶಾಂತಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು : ಹರೀಶ್ ಶಾಂತಿ ಉಪಾಧ್ಯಕ್ಷರು : ಪ್ರಶಾಂತ್ ಪಲ್ಲತ್ತಡ್ಕ ಕಾರ್ಯದರ್ಶಿ : ಅನೂಪ್ ಜತೆ ಕಾರ್ಯದರ್ಶಿ : ನಾರಾಯಣ್ ಕುರಿಕ್ಕಾರ್ ಕೋಶಾಧಿಕಾರಿ : ರವೀಂದ್ರ ಪೂಜಾರಿ ಸಂಪ್ಯ ಸಂಘಟನಾ ಕಾರ್ಯದರ್ಶಿ : ಅಣ್ಣಿ ಪೂಜಾರಿ, ಗಣೇಶ್ ಬೊಳ್ಳಗುಡ್ಡೆ, ರಕ್ಷಿತ್ ನರಿಮೊಗರು, ಬಾಲಸುಬ್ರಮಣ್ಯ ಬಲ್ನಾಡು, ಹರೀಶ್ ರಾಗೀದಕುಮೇರು ನಿರ್ದೇಶಕರು : ಕ್ರೀಡೆ ಮತ್ತು ಆರೋಗ್ಯ : ಸಂತೋಷ್ ಕೆಯ್ಯೂರು ನಾರಾಯಣಗುರು ತತ್ವ ಪ್ರಚಾರ […]
Read More
06-06-2018, 4:39 PM
ಪುತ್ತೂರು : ಯುವವಾಹಿನಿ (ರಿ) ಪುತ್ತೂರು ಘಟಕದ ಸದಸ್ಯರು ದಿನಾಂಕ 06.06.2018 ರಿಂದ 09.06.2018 ರ ವರೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮ ಸ್ಥಳ ಶಿವಗಿರಿಗೆ ಯಾತ್ರೆ ಕೈಗೊಂಡರು. ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥಸ್ವಾಮೀಜಿ ಮಾರ್ಗದರ್ಶನ ನೀಡಿದರು. ಯುವವಾಹಿನಿ (ರಿ) ಪುತ್ತೂರು ಘಟಕದ ಅಧ್ಯಕ್ಷ ಉದಯ ಕೋಲಾಡಿ ಪ್ರವಾಸದ ನೇತ್ರತ್ವ ವಹಿಸಿದ್ದರು.
Read More
15-04-2018, 7:45 AM
ಪುತ್ತೂರು : ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆಯ ಎಪ್ರಿಲ್ ತಿಂಗಳ ಆವೃತ್ತಿಯನ್ನು ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು. ದಿನಾಂಕ 15.04.2018 ರಂದು ಜರುಗಿದ ಯುವವಾಹಿನಿ (ರಿ) ಪುತ್ತೂರು ಘಟಕದ ಮಾಸಿಕ ಸಭೆಯಲ್ಲಿ ಪುತ್ತೂರು ಘಟಕದ ಸ್ಥಾಪಕ ಅಧ್ಯಕ್ಷರಾದ ಶೀನಪ್ಪ ಪೂಜಾರಿಯವರು ಯುವಸಿಂಚನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವಸಿಂಚನ ಪತ್ರಿಕೆಯ ಗೌರವ ಸಂಪಾದಕರಾದ ಯಶವಂತ ಪೂಜಾರಿ, ಸಂಪಾದಕರಾದ ಶುಭಾ ರಾಜೇಂದ್ರ, ಉಪಸಂಪಾದಕರಾದ ರಾಜೇಶ್ ಸುವರ್ಣ, ಯುವವಾಹಿನಿ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಜಯಂತ ನಡುಬೈಲು, ನಾರಾಯಣಗುರು […]
Read More
25-02-2018, 3:12 PM
ಪುತ್ತೂರು: ವಿಜಯ ಕರ್ನಾಟಕ ದಿನ ಪತ್ರಿಕೆ ಮತ್ತು ಪುತ್ತೂರು ಯುವವಾಹಿನಿ (ರಿ.) ಇವರ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ – ಸಂವಾದ ಕಾರ್ಯಕ್ರಮ ಪುತ್ತೂರು ಸಂತ ಫಿಲೋಮಿನಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ವಿಜಯೀಭವ ಹೆಸರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ರಾಜ್ಯದಾದ್ಯಂತ ಇಂಥ ಕಾರ್ಯಕ್ರಮ ನಡೆಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿತ್ತು. ಯುವವಾಹಿನಿ ಪುತ್ತೂರು ಘಟಕವು ಪೂರ್ಣ ಸಹಯೋಗ ನೀಡುವ ಮೂಲಕ ಕಾರ್ಯುಕ್ರಮದಲ್ಲಿ ಸಂಪೂರ್ಣ ಪಾಲು ಪಡೆಯಿತು. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಯುವವಾಹಿನಿಯ […]
Read More
24-12-2017, 3:02 PM
ಪುತ್ತೂರು: ಹಿಂದಿನ ಕಾಲಘಟ್ಟದ ಸಂಸ್ಕೃತಿ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವವಾಹಿನಿ ಘಟಕವು ಜಿಲ್ಲೆಯ 26 ಘಟಕಗಳ ಯುವಸಮೂಹಕ್ಕೆ ಹಿಂದಿನ ಸಂಸ್ಕೃತಿ ಕಲೆಗಳನ್ನು ನೆನಪಿಸುವ ಅಪೂರ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಹೇಳಿದರು. ಡಿಸೆಂಬರ್ 24 ರಂದು ಆನಡ್ಕ ಕಂಬಳಗದ್ದೆ ಮರಕೂರು ಜನನ ಎಂಬಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಘಟನೆಯಾದ ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಹಾಗೂ […]
Read More
17-11-2017, 5:42 AM
ಪುತ್ತೂರು: ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಡಿಸೆಂಬರ್ ೨೪ ರಂದು ನಡೆಯಲಿರುವ ಕೋಟಿ ಚೆನ್ನಯ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆಯನ್ನು 2017 ನವೆಂಬರ್ 15 ರಂದು ಮರಕ್ಕೂರು ಜನನ ಇಲ್ಲಿ ಬಿಡುಗಡೆ ಮಾಡಲಾಯಿತು. ಮರಕ್ಕುರು ಜನನದ ಯಜಮಾನರಾದ ಮಾಯಿಲಪ್ಪ ಪೂಜಾರಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ್ ನಡುಬೈಲುರವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೋಟಿ ಚೆನ್ನಯ ಕ್ರೀಡಾ ಕೂಟವನ್ನು ಆಯೋಜಿಸಲಾಗಿದ್ದು ಬಿಲ್ಲವ ಬಾಂಧವರು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾ […]
Read More
01-11-2017, 8:58 AM
ಯುವವಾಹಿನಿ ಸಂಸ್ಥೆಯ ಮೂವತ್ತು ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಿಗೆ ಪ್ರದಾನಿಸಿದರು. ಸಮಾಜದಲ್ಲಿ ತೀರಾ ಹಿಂದುಳಿದಿರುವ ೯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಚಿಮಣಿ ಬೆಳಕಿನ ಮನೆಗಳಿಗೆ ವಿದ್ಯುತ್ ಭಾಗ್ಯ, ಗ್ರಾಮಗ್ರಾಮಗಳಲ್ಲಿ ಆರೋಗ್ಯ ಶಿಬಿರ, ನೂರಕ್ಕೂ ಅಧಿಕ […]
Read More
01-10-2017, 12:33 PM
ರಕ್ತದಾನ ಶ್ರೇಷ್ಠ ದಾನಗಳಲ್ಲಿ ಒಂದಾಗಿದೆ . ನಾವು ದಾನ ಮಾಡುವ ರಕ್ತದಿಂದ ಜೀವ ಉಳಿಸಬಹುದಾಗಿದೆ ;ರಕ್ತದಾನದಿಂದ ಆರೋಗ್ಯವೂ ಉಲ್ಲಾಸಮಯವಾಗಿರುತ್ತದೆ . ಯುವವಾಹಿನಿ ಪುತ್ತೂರು ಘಟಕವು ಇಂತಹ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಾ ವರ್ಷ 365 ದಿನಗಳಲ್ಲಿ ಕೂಡ ರಕ್ತದ ಅವಶ್ಯಕತೆ ಇದ್ದವರಿಗೆ ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷರಾದ ಜಯಂತ ನಡುಬೈಲ್ ತಿಳಿಸಿದರು ದಿನಾಂಕ 01.10.2017 ರಂದು ಯುವವಾಹಿನಿ (ರಿ ) ಪುತ್ತೂರು ಘಟಕದ ಆಶ್ರಯದಲ್ಲಿ […]
Read More
30-09-2017, 3:15 AM
ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 21.09.2017 ರಿಂದ 30.09.2017 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಕಂಕನಾಡಿ, ಕುಳೂರು, ಕೊಲ್ಯ,ಸುಳ್ಯ, ಮಾಣಿ ಘಟಕಗಳು ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ […]
Read More