23-09-2018, 2:01 PM
ಬಜ್ಪೆ : ಕೇಂದ್ರ ಸರಕಾರದ ಸಲಹೆಯ ಪ್ರಕಾರ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ಕೈಗೊಂಡಿರುವ “ಸ್ವಚ್ಚತಾ ಸೇವಾ” ಕಾರ್ಯಕ್ರಮದನ್ವಯ MRPL, ರೋಟರಿ ಕ್ಲಬ್ ಬಜ್ಪೆ ಮತ್ತು ಯುವವಾಹಿನಿ(ರಿ.) ಬಜ್ಪೆ ಘಟಕದ ಆಶ್ರಯದಲ್ಲಿ ದಿನಾಂಕ 23/09/2018ರಂದು ಬಜ್ಪೆ ಪೇಟೆಯ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸೇರಿ ನಡೆಸಿದ ಈ ಕಾರ್ಯಕ್ರಮದಲ್ಲಿ 350 ಹೆಚ್ಚು ಜನರು ಸಕ್ರೀಯವಾಗಿ ಭಾಗವಹಿಸಿದರು. MRPL ಸಂಸ್ಥೆ ಭಾಗವಹಿಸಿದ ಎಲ್ಲರಿಗೂ ಟೀ-ಶರ್ಟ್ ಹಾಗೂ ಉಪಹಾರದ […]
Read More
23-09-2018, 8:51 AM
ಮಾಣಿ : ನಾರಾಯಣಗುರುಗಳು ಈ ಜಗತ್ತು ಕಂಡ ಶ್ರೇಷ್ಠ ದಾರ್ಶನಿಕರು. ತಮ್ಮ ಸಂಘರ್ಷ ರಹಿತವಾದ ಕ್ರಾಂತಿ ತತ್ವದ ಮೂಲಕ ಸಮಾಜದ ಉದ್ಧರಕ್ಕಾಗಿ ದುಡಿದವರು. ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿ ಧನಾತ್ಮಕವಾದ ಬದಲಾವಣೆಗೆ ಕಾರಣರಾದರು ಎಂದು ಶಶಿಧರ್ ಕೆ. ಅಂಡಿಂಜೆ ಹೇಳಿದರು. ಅವರು ಯುವವಾಹಿನಿ(ರಿ) ಮಾಣಿ ಘಟಕದ 2018-19ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ನಡೆದ ಗುರುಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು. […]
Read More
23-09-2018, 7:40 AM
ಮಂಗಳೂರು : ಭಜನೆಯಿಂದ ಪ್ರಗತಿ, ಕ್ಷಮತೆ, ಶಿಸ್ತು, ಕ್ರಿಯಾಶೀಲತೆ, ಕೌಶಲ, ಸಾಧನೆ ಹೆಚ್ಚಾಗುತ್ತದೆ. ಭಕ್ತಿಯ ಅಂತರಗಂಗೆ ಭಜನೆ ಮೂಲಕ ಜಲಪಾತವಾಗಿ ಧುಮುಕುತ್ತದೆ. ನಿಷ್ಕಲ್ಮಶ ಪ್ರೀತಿಯಿಂದ, ಮುಗ್ದ ಭಕ್ತಿಯಿಂದ ಭಜನೆ ಹಾಡಿದರೆ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ. ಭಜನಾ ಸಂಸ್ಕೃತಿಯ ಪುನರುತ್ಥಾನದೊಂದಿಗೆ ಭಜಕರು ನವಭಾರತ ನಿರ್ಮಾಣದ ಶಿಲ್ಪಿಗಳಾಗಬೇಕು , ಭಜನೆ ಆತ್ಮ ಶುದ್ಧೀಕರಣದ ಸನ್ಮಾರ್ಗ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು. ಅವರು ದಿನಾಂಕ 23.09.2018 ರಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ […]
Read More
23-09-2018, 2:45 AM
ಬೆಳುವಾಯಿ : ಬೆಳುವಾಯಿ ಪೇಟೆಯಲ್ಲಿ ಮಳೆಗಾಲದಲ್ಲಿ ನೀರು ರಸ್ತೆಗೆ ಹರಿದು ರಸ್ತೆಯ ಬದಿಯಲ್ಲಿ ಕೆಲವು ಕಡೆ ಎರಡು ಅಡಿಯಷ್ಟು ದೊಡ್ಡ ಹೊಂಡ ಸೃಷ್ಟಿಯಾಗಿತ್ತು. ಇದರಿಂದ ಸಾರ್ವಜನಿಕರು., ವಾಹನ ಚಾಲಕರು ತೀರಾ ತೊಂದರೆ ಅನುಭವಿಸುತ್ತಿದ್ದರು. ಯುವವಾಹಿನಿ (ರಿ) ಬೆಳುವಾಯಿ ಘಟಕದ ವತಿಯಿಂದ ಜೆಸಿಬಿ ಮೂಲಕ ಈ ಹೊಂಡಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಬೆಳುವಾಯಿ ಘಟಕದ ಈ ಸಮಾಜಮುಖಿ ಕಾಳಜಿಗೆ ಸಾರ್ವಜನಿಕರಿಂದ ಮುಕ್ತ ಕಂಠದ ಶ್ಲಾಘನೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಬೆಳುವಾಯಿ ಘಟಕದ […]
Read More
23-09-2018, 2:42 AM
ಕಂಕನಾಡಿ : ಇತ್ತೀಚೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ಮರ ಬಿದ್ದು ಗಾಯಗೊಂಡ ಸುರೇಖಾ ಕೋಟ್ಯಾನ್ ಆರೋಗ್ಯವನ್ನು ವಿಚಾರಿಸಿ ₹.10000/- ವೈದ್ಯಕೀಯ ನೆರವು ನೀಡಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ) ಕಂಕನಾಡಿ ಘಟಕದ ಅಧ್ಯಕ್ಷ ಭವಿತ್ ರಾಜ್ ಕಾರ್ಯದರ್ಶಿ ಸುಮಾ ವಸಂತ್ , ಮಾಜಿ ಅಧ್ಯಕ್ಷ ಹರೀಶ್. ಕೆ. ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
Read More
22-09-2018, 4:23 PM
. ಪುತ್ತೂರು : ಯುವವಾಹಿನಿ (ರಿ.) ಪುತ್ತೂರು ಘಟಕ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೊ ಬ್ಲಡ್ ಬ್ಯಾಂಕ್ ಪುತ್ತೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇದರ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಕಾಲೇಜ್ ಅಭಿವೃದ್ಧಿ ಸಮಿತಿ ಇದರ ಸಹಭಾಗಿತ್ವದಲ್ಲಿ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ ” ದಿನಾಂಕ 22/9/2018ನೇ ಶನಿವಾರ ಬೆಳಿಗ್ಗೆ ಗಂಟೆ 9.30ಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ(ರಿ.)ಪುತ್ತೂರು ಘಟಕದ ಅಧ್ಯಕ್ಷರಾದ […]
Read More
21-09-2018, 3:46 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕ ಹಾಗೂ ಲಯನ್ಸ್ ಕ್ಲಬ್ ಮಂಗಳಾದೇವಿ ಇದರ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಅರ್ಹತಾ ಪರೀಕ್ಷೆಗಳ ಬಗ್ಗೆ ಕಾರ್ಯಗಾರವು ದಿನಾಂಕ ೨೧. ೦೯. ೨೦೧೮ ರಂದು ಇತ್ತೀಚೆಗೆ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಗಾರವನ್ನು ಉಧ್ಘಾಟಿಸಿದ ಲಕ್ಷ್ಮಣ ಕೋಟ್ಯಾನ್ ಪೂಜಾ ಕನ್‍ಸ್ಟ್ರಕ್ಷನ್ ಮೇರಿಹಿಲ್ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಲಯನ್ ಯಶವಂತ್ ಪೂಜಾರಿ ಕಾರ್ಯಾಗಾರಕ್ಕೆ ಶುಭಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ […]
Read More
21-09-2018, 3:20 PM
ಮೂಡಬಿದಿರೆ : ಜಗತ್ತಿನ ಎಲ್ಲಾ ಜೀವಿಗಳನ್ನು ತನ್ನ ಆತ್ಮವೆಂದೇ ತಿಳಿ ಎಂಬ ಉಪನಿಷತ್ತಿನ ತತ್ವವನ್ನು ಅಕ್ಷರಶಃ ಪಾಲಿಸಿದವರು ನಾರಾಯಣ ಗುರುಗಳು. ನಾರಾಯಣ ಗುರುಗಳದ್ದು ಎಲ್ಲರನ್ನು ಒಳಗೊಳ್ಳುವ ಚಿಂತನೆ, ನಾರಾಯಣ ಗುರು ನಾಡುಕಂಡ ಅಪೂರ್ವ ದಾರ್ಶನಿಕ.ತನ್ನಲ್ಲೆ ದೇವನನ್ನು ಕಾಣುವ ಅದ್ವೆಯ್ತವಾದ ಅವರದ್ದು. ತನ್ನಲ್ಲೂ .ಇತರರಲ್ಲೂ ದೇವರನ್ನು ಕಾಣುವ ಮಹಾ ಗುಣ ಅವರದ್ದು . ಎಂದು ಲೇಖಕ ಅರವಿಂದ ಚೊಕ್ಕಾಡಿ ನುಡಿದರು. ಯುವವಾಹಿನಿ (ರಿ) ಮೂಡಬಿದಿರೆ ಘಟಕದಿಂದ ದಿನಾಂಕ 21:09:2018ನೇ ಶುಕ್ರವಾರದಂದು ಬೆಳಿಗ್ಗೆ 10:30ಕ್ಕೆ ಸರಿಯಾಗಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ […]
Read More
21-09-2018, 2:24 PM
ಪಡುಬಿದ್ರಿ : ಇಂದಿನ ಯುವಪೀಳಿಗೆಗೆ ನಮ್ಮ ಹಿರಿಯರು ಮೂಲ ನಂಬಿಕೆಗಳನ್ನು ತಿಳಿಸುವ ಅನಿವಾರ್ಯತೆಯಿದೆ. ಮೂಲ ನಂಬಿಕೆಗಳು ಮೂಢನಂಬಿಕೆಗಳಾಗದಂತೆ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ| ವೈ.ಎನ್. ಶೆಟ್ಟಿ ಹೇಳಿದರು. ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ದಿನಾಂಕ 21.09.2018 ರಂದು ಬ್ರಹ್ಮಶ್ರೀ ನಾರಾಯಣಗುರುಗಳ 90ನೇ ಪುಣ್ಯತಿಥಿಯ ಅಂಗವಾಗಿ ತುಳುನಾಡಿನ ಆಚರಣೆಯಲ್ಲಿ ನಂಬಿಕೆ- ಮೂಢನಂಬಿಕೆಗಳು ಎಂಬ ವಿಚಾರಗೋಷ್ಠಿಯಲ್ಲಿ ಸಮನ್ವಯಕಾರರಾಗಿ ಅವರು […]
Read More
16-09-2018, 4:36 PM
ಪೆರ್ಮುದೆ -ಎಕ್ಕಾರು ; ದಿನಾಂಕ 16 .09 .18 ರಂದು ಭಾನುವಾರ ಪೆರ್ಮುದೆ -ಎಕ್ಕಾರು ಇಲ್ಲಿ ಯುವವಾಹಿನಿಯ ನೂತನ ಘಟಕ ರಚಿಸುವ ನಿಟ್ಟಿನಲ್ಲಿ ಸಮಲೋಚನಾ ಸಭೆಯು ಬ್ರಹ್ಮಶ್ರೀ ನಾರಾಯಣಗುರು ಸಂಘ ಎಕ್ಕಾರು -ಪೆರ್ಮುದೆ ಇಲ್ಲಿ ನಡೆಯಿತು. ಯುವವಾಹಿನಿ (ರಿ) ಕೆಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಸುನಿಲ್ ಅಂಚನ್, ಉಪಾದ್ಯಕ್ಷರಾದ ನರೇಶ್ ಸಸಿಹಿತ್ಲು, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ ಪೂಜಾರಿ ,ಯುವಸಿಂಚನ ಸಂಪಾದಕ ರಾಜೇಶ ಸುವರ್ಣ , ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಮಧು […]
Read More